For Quick Alerts
ALLOW NOTIFICATIONS  
For Daily Alerts

ಧೂಮಪಾನದಿಂದ ಉಂಟಾಗುವ ದುಷ್ಟರಿಣಾಮಗಳೇನು?

|

ಮಾರಕ ವ್ಯಸನಗಳು ಜೀವಕ್ಕೆ ಹಾನಿಕಾರಕ ಆದರೂ ಮನುಷ್ಯ ಈ ವ್ಯಸನಿಗಳಿಗೆ ದಾಸನಾಗಿ ಜೀವನವನ್ನು ನರಕವನ್ನಾಗಿಸುತ್ತಾನೆ. ಈ ವ್ಯಸನಗಳು ಅವರ ಜೀವನದ ಒಂದು ಅಂಗವಾಗಿಬಿಟ್ಟಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ.

ಒತ್ತಡದ ಜೀವನ, ಬಿಡುವಿಲ್ಲದ ದುಡಿಮೆ ಈ ವ್ಯಸನಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ ನಾನು ವ್ಯಸನಗಳನ್ನು ತ್ಯಜಿಸುತ್ತೇನೆ ಎಂದು ಎಷ್ಟೇ ಪ್ರತಿಜ್ಞೆ ಮಾಡಿದರೂ ಅದನ್ನು ತ್ಯಜಿಸಲು ಸಾಧ್ಯವಾಗುತ್ತಿಲ್ಲ ಎಂಬುದೇ ಎಲ್ಲರ ಅಂಬೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಂಗಳೂರಿನ ಧೂಮಪಾನಿಗಳೆ ನಿಮಗಿದು ನೆನಪಿರಲಿ

STOP SMOKING START REPAIRING

ಅದರಲ್ಲೂ ಧೂಮಪಾನ ತನ್ನ ಛಾಪನ್ನು ಬಲವಾಗಿಯೇ ಒತ್ತಿದೆ ಎಂದೇ ಹೇಳಬಹುದು. ಆಧುನಿಕ ಯುಗದಲ್ಲಿ ಬೀಡಿ ಸಿಗರೇಟು ಸೇವನೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಬ್ಯುಸಿನೆಸ್ ವಲಯದಲ್ಲಿ ಇದಿಲ್ಲದೆ ಮಾತೇ ನಡೆಯುವುದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿಬಿಟ್ಟಿದೆ.

ಆರೋಗ್ಯಕ್ಕೆ ಇದು ಹಾನಿಕಾರಕ ಎಂಬ ಅರಿವಿದ್ದರೂ ಅದನ್ನು ಎಳೆಯುವ ಉಮೇದು ಇನ್ನೂ ಹೆಚ್ಚಾಗಿದೆ. ನೀವು ಧೂಮಪಾನವನ್ನು ಹೆಚ್ಚು ಹೆಚ್ಚು ಅಂಟಿಕೊಂಡಷ್ಟು ಅದು ನಿಮ್ಮನ್ನು ಆವರಿಸುವುದು ಜಾಸ್ತಿಯಾಗುತ್ತದೆ. ಈ ವ್ಯಸನವನ್ನು ತ್ಯಜಿಸಲೇಬೇಕೆಂಬ ನಿರ್ಧಾರ ನಿಮ್ಮಲ್ಲಿರಬೇಕು ಹಾಗೂ ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಧೂಮಪಾನವನ್ನು ತ್ಯಜಿಸಿದರೆ ಉಂಟಾಗುವ ಪ್ರಯೋಜನಗಳನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ. ಈ ಪರಿಣಾಮದಿಂದ ನಿಮ್ಮ ಧೂಮಪಾನ ವ್ಯಸನ ನಿಮ್ಮಿಂದ ದೂರಾಗಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತವನ್ನು ತಡೆಗಟ್ಟಲು ಕೆಲವೊಂದು ಸಲಹೆಗಳು

1. ನಮ್ಮ ದೇಹ ಮಗುವಿನಂತೆ ನಾವು ಮಗುವನ್ನು ಮಕ್ಕಳನ್ನು ಪ್ರೀತಿಸಿದಂತೆ ನಮ್ಮ ದೇಹವನ್ನು ಪ್ರೀತಿಸಬೇಕು ನೀವು ಧೂಮಪಾನವನ್ನು ತ್ಯಜಿಸಿದರೆ ನಿಮ್ಮ ದೇಹ ಮಗುವಿನ ದೇಹದಂತೆ ಮೃದು ಮಧುರವಾಗಿಬಿಡುತ್ತದೆ ಅಂದರೆ ಆರೋಗ್ಯಕರ ಶರೀರ ನಿಮ್ಮದಾಗುತ್ತದೆ. ಧೂಮಪಾನವನ್ನು ತ್ಯಜಿಸಿ ಮಗುವಿನಂತಾಗಿ. ನೀವು ಧೂಮಪಾನವನ್ನು ಒಮ್ಮೆ ತ್ಯಜಿಸಿದಿರಿ ಅಂದರೆ ನೀವು ಹಿಂದಿನ ಸ್ಥಿತಿಗೆ ಮರಳಿದಂತೆ, ನಿಮ್ಮ ರಕ್ತದೊತ್ತಡ ನಿಮ್ಮ ಪಲ್ಸ್ ರೇಟ್, ನಿಮ್ಮ ಕೈ ಗಳ ಹಾಗೂ ಪಾದಗಳ ತಾಪಮಾನ ಎಲ್ಲವೂ ಮುಂಚಿನ ಸ್ಥಿತಿಗೆ ತಲುಪುತ್ತದೆ.

2: ನೀವು ಧೂಮಪಾನವನ್ನು ತ್ಯಜಿಸಿದರೆ ನಿಮ್ಮ ಕೆಮ್ಮು ದೂರವಾಗುತ್ತದೆ. ನಿಮ್ಮ ಶ್ವಾಸಕೋಶ ಎಂದಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುವುದರಿಂದ ಉಸಿರಾಟದ ಅಭಾವ ಮತ್ತು ದೀರ್ಘ ಉಸಿರಾಟ ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಶ್ವಾಸಕೋಶವನ್ನು ಸ್ವಚ್ಛಗೊಳಿಸಿ ಹಲವಾರು ಸೋಂಕುಗಳಿಂದ ನಿಮ್ಮ ಶ್ವಾಸಕೋಶವನ್ನು ರಕ್ಷಿಸುತ್ತದೆ.

3: ನಿಮ್ಮ ಪ್ರತೀ ರಾತ್ರಿಯೂ ಹನಿಮೂನ್ ರಾತ್ರಿಯಂತಾಗುತ್ತದೆ " ಹೌದು, ನೀವು ಧೂಮಪಾನವನ್ನು ತ್ಯಜಿಸಿದರೆ ನಿಮ್ಮ ಸೆಕ್ಸ್ ಜೀವನ ಸುಧಾರಣೆಯಾಗುತ್ತದೆ," ಎಂದು ಹೇಳುತ್ತಾರೆ ಡಾ. ವಿಹಾಂಗ್. ಸಿಗರೇಟ್ ಅನ್ನು ವರ್ಜಿಸುವುದು ಎರಡೂ ಲಿಂಗಗಳಿಗೂ ಪ್ರಯೋಜನಕಾರಿಯಾಗಿದೆ. ಪುರುಷ ಉತ್ತಮ ಉದ್ರೇಕವನ್ನು ಹೊಂದಿದರೆ ಮಹಿಳೆ ಸುಲಭವಾಗಿ ಪ್ರಚೋದನೆಗೆ ಒಳಪಡುತ್ತಾಳೆ. ಇದಲ್ಲದೆ ಪರಸ್ಪರ ಆಕರ್ಷಣೆ ಉಂಟಾಗುವಂತೆ ಧೂಮಪಾನ ವರ್ಜನೆ ಮಾಡುತ್ತದೆ.

4: ಧೂಮಪಾನವನ್ನು ನಿಲ್ಲಿಸಿದರೆ ಇದರ ಗಬ್ಬು ವಾಸನೆ ಅದೃಶ್ಯವಾಗುತ್ತದೆ, ನಿಮ್ಮ ದೇಹದಲ್ಲಿರುವ ಧೂಮಪಾನದ ಗಬ್ಬು ವಾಸನೆ ನಿಮ್ಮಿಂದ ದೂರವಾಗುತ್ತದೆ. ನಿಮ್ಮ ಸುತ್ತಲಿರುವ ಜನರು ನಿಮ್ಮತ್ತ ಆಕರ್ಷಣೆಗೆ ಒಳಗಾಗುವಂತೆ ಇದು ಮಾಡುತ್ತದೆ, ಏಕೆಂದರೆ ಬೀಡಿ, ಸಿಗರೇಟಿನ ಸೇವನೆ ಮಾಡುವವರ ಗಬ್ಬು ವಾಸನೆ ಸುತ್ತಲಿನವರಲ್ಲಿ ಬೇಸರಿಕೆಯನ್ನು ಉಂಟು ಮಾಡುತ್ತದೆ. ನೀವಿರುವ ಸ್ಥಳ ತಾಜಾ ಹಾಗೂ ಸ್ವಚ್ಛವಾಗಿರುತ್ತದೆ.

5: ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿ ನಿಮ್ಮ ಜೀವನವನ್ನು ಹೂಹಾಸನ್ನಾಗಿಸುತ್ತದೆ. ನಿಮ್ಮ ಪ್ರತಿಯೊಂದು ದಿನವೂ ರೋಗದಿಂದ ತುಂಬಿದ್ದರೆ, ಜೀವನ ನರಕಸದೃಶವಾಗುತ್ತದೆ. ಧೂಮಪಾನವನ್ನು ತ್ಯಜಿಸಿದರೆ ಶಕ್ತಿಹೀನರಾಗುವುದು, ಫಲವತ್ತತೆ ಸಮಸ್ಯೆಗಳು, ಕಣ್ಣಿನ ಅಕ್ಷಿಪಟಲದ ಅವನತಿ, ವಸಡಿನ ತೊಂದರೆ, ಹಲ್ಲಿನ ಸಮಸ್ಯೆ ಹಾಗೂ ಆಸ್ಟಿಯೊಪೊರೊಸಿಸ್ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಪುಟ್ಟ ಹೃದಯ ಜೋಪಾನ

6: ನೀವು ನಿಮ್ಮ ಮೊಮ್ಮಕ್ಕಳನ್ನು ನೋಡಬೇಕೆನ್ನುವ ಆಸೆ ನಿಮಗಿದ್ದರೆ ಧೂಮಪಾನವನ್ನು ತ್ಯಜಿಸಿ. ಧೂಮಪಾನದಿಂದ ಉಂಟಾಗುವ ಹಲವಾರು ಜೀವಹಾನಿಕಾರಕ ಸಮಸ್ಯೆಗಳಿಂದ ನಿಮ್ಮ ಜೀವನ ಬೇಗನೇ ಕೊನೆಗೊಳ್ಳಬಹುದು.

7: ಹೆಚ್ಚು ವಯಸ್ಸಾದವರಂತೆ ಧೂಮಪಾನ ನಿಮ್ಮನ್ನು ಮಾಡುತ್ತದೆ. ನಿಮ್ಮ ವಯಸ್ಸಿಗಿಂತ ದುಪ್ಪಟ್ಟು ವಯಸ್ಸಾದವರಂತೆ ನೀವು ಕಾಣುವಿರಿ. ನೀವು ಧೂಮಪಾನವನ್ನು ತ್ಯಜಿಸಿದರೆ, ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ನೋಟ ಹಾಗೂ ಗೋಚರತೆ ಕೂಡ ಉತ್ತಮವಾಗುತ್ತದೆ. ಧೂಮಪಾನವು ನೆರಿಗೆಗಳನ್ನು ಉಂಟುಮಾಡುತ್ತದೆ ನಿಮ್ಮನ್ನು ಮಂಕು ಹಾಗೂ ನಿಧಾನಗೊಳಿಸುತ್ತದೆ.

8: ನಿಮ್ಮ ಕುಟುಂಬ ಸುರಕ್ಷಿತವಾಗುತ್ತದೆ ಧೂಮಪಾನಿಗಳು ತಮ್ಮ ದೇಹ ಜೀವನವನ್ನು ಹಾಳುಮಾಡಿಕೊಳ್ಳುವುದಲ್ಲದೆ ಕುಟುಂಬದವರನ್ನೂ ತೊಂದರೆಗೆ ಒಳಪಡಿಸುತ್ತಾರೆ. ಧೂಮಪಾನಿಗಳು ಬಿಟ್ಟ ಹೊಗೆಯನ್ನು ಆಘ್ರಾಣಿಸುವವರು ಧೂಮಪಾನ ಮಾಡುವವರಿಗಿಂತ ಅಪಾಯಕ್ಕೆ ಹತ್ತಿರದಲ್ಲಿರುತ್ತಾರೆ.

10: ನೀವು ಧೂಮಪಾನವನ್ನು ತ್ಯಜಿಸಿದರೆ ನಿಮ್ಮ ಜ್ಞಾನೇಂದ್ರಿಯಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ ನಿಮ್ಮ ಸ್ಪರ್ಶ ಹಾಗೂ ಭಾವನೆಯ ಪ್ರಜ್ಞೆ ನಿಮಗೆ ಮರಳುತ್ತದೆ. ಹಾನಿಗೊಂಡ ನರಗಳು ಹಿಂದಿನಂತೆ ಬೆಳೆದು ನಿಮ್ಮ ಸ್ಪರ್ಶ, ರುಚಿ ಹಾಗೂ ಪರಿಮಳ ಉತ್ತಮಗೊಳ್ಳುತ್ತದೆ.

ಆದ್ದರಿಂದ ನೀವು ದೀರ್ಘಕಾಲ ಆರೋಗ್ಯವಂತರಾಗಿ ಬದುಕಿ ನರಕಸದೃಶ ಸಾವಾಗುವುದು ತಪ್ಪುತ್ತದೆ. ನೀವು ಉತ್ತಮ ಬಾಯಿಯ ಆರೋಗ್ಯವನ್ನು ಹೊಂದುವರಿ. ಸಂಪೂರ್ಣ ಆರೋಗ್ಯಕ್ಕೆ ಬಾಯಿಯ ಆರೋಗ್ಯ ಆವಶ್ಯಕ. ಧೂಮಪಾನದಿಂದ ನಿಮಗೆ ಬಾಯಿಯ ಸ್ವಾಸ್ಥ್ಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ರುಚಿ, ಒತ್ತಡದ ಸಾಮರ್ಥ್ಯವನ್ನು ಇದು ಕಡಿಮೆ ಮಾಡುತ್ತದೆ ಹಾಗೂ ಹಲ್ಲಿನ ನಾಶವಾಗುವಿಕೆ ಮುಂತಾದ ದಂತ ಸಮಸ್ಯೆಗಳನ್ನು ಇದು ದೂರಮಾಡುತ್ತದೆ.

English summary

STOP SMOKING START REPAIRING

Smoking’s bad for your health, but exactly how does quitting make life better? Here are 20 ways your health will improve when you stop smoking.
X
Desktop Bottom Promotion