For Quick Alerts
ALLOW NOTIFICATIONS  
For Daily Alerts

ಹೃದಯಾಘಾತವನ್ನು ತಡೆಗಟ್ಟಲು ಕೆಲವೊಂದು ಸಲಹೆಗಳು

|

ಇತ್ತೀಚೆಗೆ ಹೃದಯಾಘಾತವು ವಯಸ್ಸಾದವರನ್ನು ಮಾತ್ರ ಕಾಡದೇ ಎಳೆಯ ಪ್ರಾಯದವರನ್ನೂ ಆವರಿಸುತ್ತಿದೆ. ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿಕೊಂಡು ಇದನ್ನು ನಾವು ದೂರವಿರಿಸಬಹುದು. ನಿಮ್ಮ ಶಿಸ್ತಿನ ಕ್ರಮಬದ್ಧ ಜೀವನ ಶೈಲಿಯು ನಿಮ್ಮ ದೇಹವನ್ನು ಶಿಸ್ತುಬದ್ಧವಾಗಿ ನಡೆಸುತ್ತದೆ.

ಕೆಟ್ಟ ಚಟಗಳಾದ ಧೂಪಮಾನ ಮತ್ತು ಮದ್ಯಪಾನ ಮಾಡುವುದರಿಂದ ದೇಹವು ಕೃಶಗೊಂಡು ನಿಷ್ಫಲವಾಗುತ್ತದೆ ಇದರಿಂದ ನಿಮ್ಮ ಶರೀರದ ಅಂಗಾಂಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆರೋಗ್ಯಕರ ಜೀವನದೊಂದಿಗೆ ಹೆಚ್ಚು ಕಾಲ ಬುದಕಬೇಕೆಂಬ ಆಸೆ ನಿಮಗಿದ್ದರೆ ಕೆಲವೊಂದು ವಿಧಾನಗಳನ್ನು ದೈನಂದಿನ ಬದುಕಿನಲ್ಲಿ ನೀವು ಅಳವಡಿಸಬೇಕು.

ವ್ಯಾಯಾಮ, ಈಜುವುದು, ನಡೆಯುವುದು ಮತ್ತು ಜಿಮ್‌ನಲ್ಲಿ ಬೆವರು ಹರಿಸುವುದು ಇವೇ ಮೊದಲಾದ ಶಿಸ್ತುಬದ್ಧ ದೈಹಿಕ ಚಟುವಟಿಕೆಗಳು ನಿಮ್ಮ ಆರೋಗ್ಯವನ್ನೂ ನಿಮ್ಮನ್ನು ಸುಸ್ಥಿತಿಯಲ್ಲಿಡುತ್ತವೆ.

ಹೃದಯಾಘಾತವನ್ನು ತಡೆಯುವುದೆಂದರೆ ನಿಮ್ಮ ಶರೀರವನ್ನು ಆರೋಗ್ಯಕರವಾಗಿ ನೋಡಿಕೊಳ್ಳುವುದಾಗಿದೆ. ನಿಮ್ಮ ದೇಹವನ್ನು ನೀವು ಹೆಚ್ಚು ಆರೈಕೆ ಮಾಡಿದಂತೆ ನಿಮಗುಂಟಾಗುವ ಹೃದಯಾಘಾತದ ಸಂಭವನೀಯತೆ ಕಡಿಮೆ ಇರುತ್ತದೆ.

ಹೃದಯಾಘಾತವನ್ನು ತಡೆಯುವಂತಹ ಕೆಲವೊಂದು ವಿಧಾವನ್ನು ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದೆ. ಈ ವಿಧಾನವನ್ನು ಅನುಸರಿಸಿ ಆರೋಗ್ಯಯುತ ಜೀವನ ನಿಮ್ಮದಾಗಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತ ಬರದಂತೆ ತಡೆಯಬೇಕೆ?

ಧೂಮಪಾನ ನಿಲ್ಲಿಸಿ

ಧೂಮಪಾನ ನಿಲ್ಲಿಸಿ

ಹೃದಯಾಘಾತವನ್ನು ತಡೆಯುವ ಉತ್ತಮ ವಿಧಾನವೆಂದರೆ ಧೂಮಪಾನವನ್ನು ತ್ಯಜಿಸುವುದಾಗಿದೆ. ಈ ಕೆಟ್ಟ ಅಭ್ಯಾಸವನ್ನು ನೀವು ತ್ಯಜಿಸಿದ ಕೂಡಲೇ ನಿಮ್ಮ ದೇಹ ಸುದೃಢವಾಗುತ್ತದೆ ಮತ್ತು ಆರೋಗ್ಯಯುತ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತದೆ.

ಮದ್ಯಪಾನ:

ಮದ್ಯಪಾನ:

ಹೆಚ್ಚಿನ ಜನರು ಹೃದಯಾಘಾತದಿಂದ ಬಳಲುವುದಕ್ಕೆ ಮದ್ಯಪಾನ ಮುಖ್ಯ ಕಾರಣವಾಗಿದೆ. ಹೆಚ್ಚು ಕಾಲದಿಂದ ಮದ್ಯ ಸೇವಿಸುವುದು ಹೃದಯದ ಸ್ನಾಯುಗಳನ್ನು ಬಲಹೀನಗೊಳಿಸುತ್ತದೆ. ಆದ್ದರಿಂದ ನಿಮ್ಮ ಹೃದಯವನ್ನು ನೋಡಿಕೊಳ್ಳಬೇಕೆಂಬ ಆಸೆ ನಿಮಗಿದ್ದರೆ ಮದ್ಯ ಸೇವನೆ ನಿಲ್ಲಿಸಿ.

ವ್ಯಾಯಾಮ:

ವ್ಯಾಯಾಮ:

ವ್ಯಾಯಾಮವು ನಿಮ್ಮ ಹೃದಯವನ್ನು ಆರೋಗ್ಯವಂತವಾಗಿಸಿ ಹೃದಯಾಘಾತವನ್ನು ತಪ್ಪಿಸುತ್ತದೆ. ಏರೋಬಿಕ್ಸ್ ವ್ಯಾಯಾಮದ ಒಂದು ವಿಧವಾಗಿದ್ದು ಹೃದಯಕ್ಕೆ ತುಂಬಾ ಒಳ್ಳೆಯದು.

ನಿದ್ದೆ

ನಿದ್ದೆ

ನಿದ್ದೆಯ ಕೊರೆತಯ ಕೂಡ ನಿಮ್ಮ ದೇಹವನ್ನು ಬಲಹೀನಗೊಳಿಸುತ್ತದೆ ಆದ್ದರಿಂದ, ಹೃದಯಾಘಾತವನ್ನು ತಡೆಗಟ್ಟುವ ಸುಲಭ ವಿಧಾನವೆಂದರೆ ಚೆನ್ನಾಗಿ ನಿದ್ದೆ ಮಾಡಿ ಚೈತನ್ಯಕರವಾಗಿರಿ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಕೂಡ ಹೃದಯಾಘಾತನ್ನು ತಡೆಗಟ್ಟುತ್ತದೆ. ದೇಹದಲ್ಲಿ ಹೆಚ್ಚು ಪ್ರಮಾಣದ ಕೊಲೆಸ್ಟ್ರಾಲ್ ಇದ್ದಂತೆ ಆರೋಗ್ಯ ಸಮಸ್ಯೆಗೆ ದಾರಿಯಾಗುತ್ತದೆ.

ರಕ್ತದೊತ್ತಡ:

ರಕ್ತದೊತ್ತಡ:

ಹೆಚ್ಚಿನ ರಕ್ತದೊತ್ತಡದಿಂದ, ಹೃದಯಾಘಾತದ ಸಂಭವನೀಯತೆ ಹೆಚ್ಚುತ್ತದೆ. ಆದ್ದರಿಂದ, ನಿಮ್ಮ ಕೋಪ ಮತ್ತು ಚಿಂತೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ರಕ್ತದೊತ್ತಡವನ್ನು ಕಡಿಮೆಗೊಳಿಸಿ ಇದರಿಂದ ಹೃದಯಾಘಾತ ಕಡಿಮೆಯಾಗುತ್ತದೆ.

ನಿಮ್ಮ ಆಹಾರಪದ್ಧತಿಯ ಮೇಲೆ ಕಣ್ಣಿಡಿ

ನಿಮ್ಮ ಆಹಾರಪದ್ಧತಿಯ ಮೇಲೆ ಕಣ್ಣಿಡಿ

ನೀವು ಆರೋಗ್ಯಕರವಾದ ಮತ್ತು ಯಥೇಚ್ಛ ಪೋಷಕಾಂಶವುಳ್ಳ ಆಹಾರಪದ್ಧತಿಯನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೃದಯಾಘಾತವನ್ನು ತಡೆಗಟ್ಟಲು, ಎಲೆಯುಳ್ಳ ತರಕಾರಿಗಳು, ಕಬ್ಬಿಣ ಅಂಶವುಳ್ಳ ಆಹಾರಗಳನ್ನು ಸೇವಿಸಿ.

ಒತ್ತಡವನ್ನು ದೂರವಿರಿಸಿ:

ಒತ್ತಡವನ್ನು ದೂರವಿರಿಸಿ:

ಒತ್ತಡವು ಹಲವಾರು ಆರೋಗ್ಯ ಸಮಸ್ಯೆಗಳನ್ನು ದೇಹದಲ್ಲಿ ಉಂಟು ಮಾಡುತ್ತವೆ. ನಿಮ್ಮ ದೇಹಕ್ಕೆ ಹೆಚ್ಚು ಒತ್ತಡವನ್ನು ನೀವು ಹಾಕಿದಂತೆ, ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತದೆ.

ಅಪರ್ಯಾಪ್ತ ಕೊಬ್ಬನ್ನು ತ್ಯಜಿಸಿ:

ಅಪರ್ಯಾಪ್ತ ಕೊಬ್ಬನ್ನು ತ್ಯಜಿಸಿ:

ಅಪರ್ಯಾಪ್ತ ಕೊಬ್ಬನ್ನು ದೂರವಿರಿಸಲೇಬೇಕು. ಇಂತಹ ಕೊಬ್ಬುಗಳು ಕರಗದೇ ಇರುವುದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಅಪರ್ಯಾಪ್ತ ಕೊಬ್ಬಿರುವ ಆಹಾರವನ್ನು ತ್ಯಜಿಸುವುದು ಇದಕ್ಕೆ ಪರಿಹಾರವಾಗಿದೆ.

ನೈಸರ್ಗಿಕ ವಿಟಮಿನ್‌ಗಳು:

ನೈಸರ್ಗಿಕ ವಿಟಮಿನ್‌ಗಳು:

ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ನಿತ್ಯವೂ ತೆಗೆದುಕೊಳ್ಳಬಹುದಾದ ಹಲವಾರು ಹಣ್ಣುಗಳು ಮತ್ತು ತರಕಾರಿಗಳು ನಮ್ಮಲ್ಲಿವೆ. ಇವುಗಳಲ್ಲಿ ವಿಟಮಿನ್ ಹಾಗೂ ಪ್ರೋಟೀನ್‌ಗಳು ಹೇರಳವಾಗಿದ್ದು ನಮ್ಮ ದೇಹವನ್ನು ಯೋಜನಾ ಬದ್ಧವಾಗಿ ರೂಪಿಸುತ್ತವೆ. ವಿಟಮಿನ್ ಎ, ಸಿ, ಮತ್ತು ಇ ಅನ್ನು ನಿತ್ಯವೂ ನಾವು ತೆಗೆದುಕೊಳ್ಳಬೇಕು.

Read more about: health ಆರೋಗ್ಯ
English summary

How To Prevent Heart Attack: Tips

It is not only the older generation of people who are at a risk of getting a heart attack. Today, people of all ages are prone to getting heart diseases and heart attacks too. So, the best way to prevent a heart attack is by adopting a healthy lifestyle.
X
Desktop Bottom Promotion