For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

By Hemanth P
|

ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಮೊದಲ ಆದ್ಯತೆ. ಕೆಲವೊಂದು ಕಾರಣಗಳಾದ ಸಮಯದ ಅಭಾವ, ವ್ಯಸ್ತ ಜೀವನ ಶೈಲಿ ಇತ್ಯಾದಿ...ನಮ್ಮ ಕಾಳಜಿಯನ್ನು ತಿಂದು ಹಾಕಿ ಆರೋಗ್ಯದ ಸ್ಥಿತಿಯನ್ನು ಚಿಕಿತ್ಸೆ ಮಾಡಲಾರದಷ್ಟು ಕೆಡಿಸಿರುತ್ತದೆ.

ಶ್ವಾಸಕೋಶ ಕ್ಯಾನ್ಸರ್ ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲ. ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ನಮ್ಮ ನಿಯಂತ್ರಣದ ಹೊರಗೆ ಹೋಗುವ ಮೊದಲೇ ಅದಕ್ಕೆ ಚಿಕಿತ್ಸೆ ನೀಡಬಹುದು. ಶ್ವಾಸಕೋಶದ ಕ್ಯಾನ್ಸರ್ ನ ಕೆಲವೊಂದು ಆರಂಭಿಕ ಲಕ್ಷಣಗಳು ನಮಗೆ ತುಂಬಾ ಸರಳವಾಗಿ ಕಾಣಿಸಬಹುದು. ಆದರೆ ಇದು ಆರೋಗ್ಯದ ಪರಿಸ್ಥಿತಿಯ ಫಲಿತಾಂಶವಾಗಿದೆ.

Early Signs of Lung Cancer

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಧೂಮಪಾನದಿಂದ ಉಂಟಾಗುವ ದುಷ್ಟರಿಣಾಮಗಳೇನು?

ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದುಕೊಂಡರೆ ನೀವು, ನಿಮಗೆ ಪ್ರೀತಿಪಾತ್ರರಾಗಿರುವವರನ್ನು ರಕ್ಷಿಸಿ ಅವರು ಆರೋಗ್ಯಕಾರಿ ಮತ್ತು ಸುರಕ್ಷಿತವಾಗಿರುವಂತೆ ಮಾಡಬಹುದು. ನೀವು ಧೂಮಪಾನ ಮಾಡುತ್ತಿರಲಿ ಅಥವಾ ಮಾಡದೆ ಇರಲಿ, ಧೂಮಪಾನದಿಂದ ಬರುವಂತಹ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ ಅದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು. ಇದರ ಹೆಚ್ಚಿನ ಗುಣಲಕ್ಷಣಗಳು ತುಂಬಾ ಸಾಮಾನ್ಯವಾಗಿರುವ ಕಾರಣ ಹೆಚ್ಚಿನವರು ಇದನ್ನು ಕಡೆಗಣಿಸುತ್ತಾರೆ. ಶ್ವಾಸಕೋಶದ ಕ್ಯಾನ್ಸರ್ ನ್ನು ಹೇಗೆ ಪತ್ತೆ ಹಚ್ಚಬಹುದು ಎಂದು ತಿಳಿಯಲು ಈ ಲೇಖನ ಓದಿ.

ಕೆಮ್ಮನ್ನು ಕಡೆಗಣಿಸಬೇಡಿ
ವರ್ಷದ ಯಾವುದೇ ಸಮಯದಲ್ಲಿ ಪ್ರತಿಯೊಬ್ಬರಿಗೂ ಕೆಮ್ಮು ಕಾಡುತ್ತದೆ. ಆದರೆ ಕೆಲವೇ ದಿನಗಳಲ್ಲಿ ಇದು ಗುಣವಾಗುತ್ತದೆ. ಆದ್ಯಾಗೂ ಇದು ಒಂದು ವಾರದಿಂದ ಹೆಚ್ಚು ಸಮಯ ಇದ್ದರೆ ಮತ್ತು ಅತಿಯಾದ ಚಳಿಯಿರುವ ಚಳಿಗಾಲದಂತೆ ನಿಮಗೆ ಶೀತವಾದರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು.

ಉಸಿರಾಟದ ಸಮಸ್ಯೆ
ವಿವಿಧ ಕಾರಣಗಳಿಂದ ಉಸಿರಾಟ ಸಮಸ್ಯೆಯಾಗಬಹುದು. ಆದರೆ ಇದು ಪ್ರಾಪಂಚಿಕ ಚಟುವಟಿಕೆಯಾದರೆ ಇದು ಸಮಸ್ಯೆಗೆ ಕಾರಣವಾಗಬಹುದು. ಇದು ಧೂಮಪಾನದಿಂದ ಬರುವಂತಹ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು ಮತ್ತು ಇದರ ಬಗ್ಗೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.

ದೇಹದ ಅಂಗಾಂಗಗಳು ನೋಯುವುದು
ದೇಹದ ಕೆಲವೊಂದು ಭಾಗಗಳು ನೋಯುವುದು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು. ಎದೆ, ಭುಜಗಳು, ಬೆನ್ನು ಮತ್ತು ಕೈಗಳಲ್ಲಿ ನೋವು ಇದರಲ್ಲಿ ಪ್ರಮುಖವಾಗಿದೆ. ದೇಹದಲ್ಲಿ ಉಸಿರಾಟದ ಸಮಸ್ಯೆ ಉಂಟಾಗುವ ಕಾರಣ ಈ ರೀತಿಯಾಗುತ್ತದೆ. ಇದರಿಂದಾಗಿ ದೇಹದಲ್ಲಿನ ನರಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾನ್ಸರ್, ಮಧುಮೇಹ ರೋಗಗಳಿಗೆ ಇನ್ನು ಗುಡ್ ಬೈ ಹೇಳಿ!

ಆಗಾಗ ಆರೋಗ್ಯ ಕೆಡುವುದು
ಆಗಾಗ ಆರೋಗ್ಯ ಹದಗೆಡುವುದು ಧೂಮಪಾನದಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಾಗಿರಬಹುದು. ನೀವು ನಿಯಮಿತವಾಗಿ ಧೂಮಪಾನ ಮಾಡುತ್ತಿರುವವರಾದರೆ ಬಳಲಿಕೆ, ಖಿನ್ನತೆ, ಹಠಾತ್ ತೂಕ ಕಳಕೊಳ್ಳುವುದು, ಗಂಟುನೋವು ಕಾಣಿಸಿಕೊಳ್ಳುತ್ತಿದ್ದರೆ ಆಗ ತಕ್ಷಣ ವೈದ್ಯರನ್ನು ಭೇಟಿಯಾಗಿ.

ನ್ಯುಮೋನಿಯ / ಬ್ರಾಂಕೈಟಿಸ್
ಧೂಮಪಾನದಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಲ್ಲಿ ಈ ಒಂದು ಲಕ್ಷಣ ಅಸಾಮಾನ್ಯವೇನಲ್ಲ. ಒಳ್ಳೆಯ ರೀತಿ ಚಿಕಿತ್ಸೆ ಪಡೆಯುತ್ತಿದ್ದರೂ ನೀವು ಈ ರೋಗದಿಂದ ಆಗಾಗ ತೊಂದರೆಗೊಳಗಾಗುತ್ತಿದ್ದರೆ ಇದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತವನ್ನು ತಡೆಗಟ್ಟಲು ಕೆಲವೊಂದು ಸಲಹೆಗಳು

ಉಬ್ಬಸ
ನಿದ್ದೆಯ ವೇಳೆ ವಿಸಿಲ್ ಹಾಕುವುದೆಂದು ಕರೆಯಲ್ಪಡುವ ಇದು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಇದನ್ನು ನಿದ್ರೆಯ ಸಮಸ್ಯೆಯೆಂದು ಸುಲಭವಾಗಿ ತಪ್ಪುತಿಳಿದುಕೊಂಡಿಬಹುದು. ಆದಾಗ್ಯೂ ಈ ಪರಿಸ್ಥಿತಿಗೆ ಚಿಕಿತ್ಸೆ ಸಾಧ್ಯವಾಗದಿದ್ದರೆ ಮತ್ತು ಚಿಕಿತ್ಸೆ ನೀಡಿದ ಬಳಿಕವೂ ಮತ್ತೆ ಕಾಡಿದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಸ್ವರ ಬದಲಾವಣೆ
ನಿರಂತರ ಶೀತದಿಂದಾಗಿ ನಿಮ್ಮ ಸ್ವರ ಒರಟೊರಟು ಮತ್ತು ಅಹಿತಕರವಾಗಬಹುದು. ಇದು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಚಿಹ್ನೆಯಾಗಿರಬಹುದು. ಇದು ದೇಹದಲ್ಲಿನ ಧ್ವನಿಪೆಟ್ಟಿಗೆ ಮೇಲೆ ಪರಿಣಾಮ ಬೀರಬಹುದು. ದೇಹದಲ್ಲಿನ ನರಗಳ ಮೇಲೆ ಶ್ವಾಸಕೋಶದ ಕ್ಯಾನ್ಸರ್ ಪ್ರಭಾವ ಬೀರಲು ಆರಂಭಿಸಿದಾಗ ಈ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ.

English summary

Early Signs of Lung Cancer

Taking care of our health is our top priority. However, there are reasons such as lack of time, busy lifestyle, etc., that are eating away our concerns and leaving behind health conditions that are hard to treat.
X
Desktop Bottom Promotion