For Quick Alerts
ALLOW NOTIFICATIONS  
For Daily Alerts

ಹೃದಯಾಘಾತ ಬರದಂತೆ ತಡೆಯಬೇಕೆ?

|

ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿ ಒಂದು ಪ್ರಮುಖವಾದ ಕಾರಣವಾಗಿದೆ. ಧೂಮಪಾನ, ದೈಹಿಕ ವ್ಯಾಯಾಮ ಮಾಡದಿರುವುದು, ಅಧಿಕ ದೇಹದ ತೂಕ, ಮಾನಸಿಕ ಒತ್ತಡ ಇವೆಲ್ಲಾ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ.

ಹೃದಯಕ್ಕೆ ರಕ್ತ, ಆಮ್ಲಜನಕ ಮತ್ತು ಪೋಷಕಾಂಶ ಸರಿಯಾದ ರೀತಿಯಲ್ಲಿ ದೊರೆಯದಿದ್ದರೆ ಹೃದಯಾಘಾತ ಉಂಟಾಗುವುದು. ನೀವು ಮನಸ್ಸು ಮಾಡಿದರೆ ಹೃದಯಾಘಾತ ಉಂಟಾಗದಂತೆ ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದ ಕಾರ್ಯಗಳೇನು ಎಂದು ನೋಡೋಣ ಬನ್ನಿ:

ಧೂಮಪಾನಕ್ಕೆ ಗುಡ್ ಬೈ

ಧೂಮಪಾನಕ್ಕೆ ಗುಡ್ ಬೈ

ದಮ್ ಎಳೆಯುವುದನ್ನು ತಮಾಷೆಗೆ ಅಂತ ಪ್ರಾರಂಭಿಸಿ ನಂತರ ಅದು ಚಟವಾಗಿ ಬಿಡುತ್ತದೆ. ತಂಬಾಕು ಸೇವನೆ, ಧೂಮಪಾನ ಇವೆಲ್ಲಾ ಹೃದಯದ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತಂಬಾಕಿನಲ್ಲಿರುವ ರಾಸಾಯನಿಕ ಅಂಶ ನರಗಳಲ್ಲಿ ಸಂಗ್ರಹವಾಗಿ ಕ್ಯಾನ್ಸರ್, ಹೃದಯಾಘಾತ ಈ ರೀತಿಯ ಕಾಯಿಲೆಗಳನ್ನು ತರುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಕೊಲೆಸ್ಟ್ರಾಲ್ ಇರುವವರು ಯಾವುದೇ ಕೊಲೆಸ್ಟ್ರಾಲ್ ಇರುವ ಪದಾರ್ಥಗಳನ್ನು ಮುಟ್ಟಬಾರದು. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವ ಆಹಾರದ ಕಡೆಗೆ ಹೆಚ್ಚು ಗಮನ ಕೊಡಬೇಕು. ಕೊಲೆಸ್ಟ್ರಾಲ್ ಹೆಚ್ಚಾದರೆ ಹೈದಯಲ್ಲಿ ರಕ್ತ ಸಂಚಾರಕ್ಕೆ ತೊಂದರೆ ಉಂಟಾಗಿ ಹೃದಯಾಘಾತ ಉಂಟಾಗುವುದು.

ಆರೋಗ್ಯಕರ ತೂಕ

ಆರೋಗ್ಯಕರ ತೂಕ

ಇತ್ತೀಚಿಗೆ ಒಬೆಸಿಟಿ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದಕ್ಕೆ ನಾವು ನಡೆಸುತ್ತಿರುವ ಜೀವನಶೈಲಿ ಪ್ರಮುಖ ಕಾರಣವಾಗಿದೆ. ದೇಹದ ತೂಕ ಹೆಚ್ಚಾದರೆ ಹೃದಯಾಘಾತ ಮಾತ್ರವಲ್ಲ ಇತರ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಸಮತೂಕವನ್ನು ಕಾಪಾಡಿಕೊಳ್ಳುವುದು ನಿಮ್ಮ ಪ್ರಮುಖ ಗುರಿಯಾಗಿರಲಿ.

ವ್ಯಾಯಾಮ

ವ್ಯಾಯಾಮ

ಎಷ್ಟೇ ಬ್ಯುಸಿಯಿದ್ದರೂ ದಿನದಲ್ಲಿ ಅರ್ಧಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಇದು ನಿಮ್ಮ ಶರೀರದಲ್ಲಿ ಲವಲವಿಕೆ ತುಂಬಿ, ಸಮತೂಕದಿಂದ ಇರಲು ಸಹಾಯಮಾಡುತ್ತದೆ, ಕಾಯಿಲೆಗಳನ್ನು ದೂರವಿಡುತ್ತದೆ.

ನಾರಿನಂಶವಿರುವ ಆಹಾರ

ನಾರಿನಂಶವಿರುವ ಆಹಾರ

ಕೊಬ್ಬಿನಂಶವನ್ನು ಮಿತವಾಗಿ ತಿನ್ನಿ, ನಿಮ್ಮ ಆಹಾರದಲ್ಲಿ ನಾರಿನಂಶವಿರುವ ಆಹಾರಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ನುಂಗಬಹುದಾದ ನಾರಿನ ಆಹಾರ ವಸ್ತುಗಳು ಹೃದಯಕ್ಕೆ ತುಂಬಾ ಒಳ್ಳೆಯದು. ಟ್ರಾನ್ಸ್ ಫ್ಯಾಟ್ ದೂರವಿಡಿ. ಒಮೆಗಾ 3 ಕೊಬ್ಬಿನಂಶ ಒಳ್ಳೆಯದು.

ವಿಟಮಿನ್ಸ್

ವಿಟಮಿನ್ಸ್

ದೇಹದಲ್ಲಿ ವಿಟಮಿನ್ ಗಳ ಕೊರತೆ ಉಂಟಾಗದಿರಲು ಎಲ್ಲಾ ಬಗೆಯ ಹಣ್ಣು , ಹಂಪಲುಗಳನ್ನು ತಿನ್ನಿ. ಸೀಸನ್ ಫುಡ್ ತಿನ್ನುವುದು ತುಂಬಾ ಒಳ್ಳೆಯದು.

ಮಾನಸಿಕ ಒತ್ತಡ

ಮಾನಸಿಕ ಒತ್ತಡ

ಒತ್ತಡ ಕೆಲಸ, ಜವಬ್ದಾರಿ ಇವುಗಳಿಂದ ಮಾನಸಿಕ ಒತ್ತಡ ಉಂಟಾಗುವುದು ಸಹಜ. ಆದರೆ ಆ ಮಾನಸಿಕ ಒತ್ತಡವನ್ನು ಹೊರದೂಡುವ ಪ್ರಯತ್ನವನ್ನು ನೀವು ಮಾಡಬೇಕು. ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.

English summary

Ways To Prevent Heart Attack | Tips For Health | ಹೃದಯಾಘಾತವನ್ನು ತಡೆಯಲು ಮಾರ್ಗಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Major risk factors for cardiovascular disease include cigarette smoking, high blood pressure, high cholesterol and/or triglycerides, diabetes mellitus, obesity, sedentary lifestyle, and poor nutrition.
X
Desktop Bottom Promotion