For Quick Alerts
ALLOW NOTIFICATIONS  
For Daily Alerts

ಟಾಪ್ ಸೀಕ್ರೆಟ್- ನಮ್ಮ ಹಾರ್ಟ್ ನಾವೇ ಕಾಪಾಡಬೇಕು!

|

ಹೃದಯದ ಸಮಸ್ಯೆಗಳು ಹೊಲ, ಗದ್ದೆಗಳಲ್ಲಿ ಮೈ ಮುರಿದು ದುಡಿಯುವವರಿಗೆ ಬರುವುದು ತುಂಬಾ ವಿರಳ. ಆಫೀಸ್ ನಲ್ಲಿ ಒಂದೇ ಕಡೆ ಕುಳಿತು 9-10 ಗಂಟೆ ಕೆಲಸ ಮಾಡುವವರು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುವುದು ಹೆಚ್ಚು.

ಅದಕ್ಕೆ ಕಾರಣ ನಮ್ಮ ಜೀವನ ಶೈಲಿ, ದಿನಾ ಪೂರ್ತಿ ಮಾನಸಿಕ ಒತ್ತಡದಲ್ಲಿಯೇ ಕಳೆಯುತ್ತೇವೆ. ಟಾರ್ಗೆಟ್, ಡೆಡ್ ಲೈನ್ ನೆನೆಸಿಕೊಂಡು ಎಷ್ಟೋ ಬಾರಿ ರಾತ್ರಿ ನಿದ್ದೆಯಿಲ್ಲದೆ ಕಾಲ ಕಳೆಯುತ್ತೇವೆ. ಇನ್ನು ನಮ್ಮ ಆಹಾರಕ್ರಮ ಕೂಡ ಹೃದಯದ ಆರೋಗ್ಯಕ್ಕೆ ಪೂರಕವಾಗಿಲ್ಲ.

ಇಲ್ಲಿ ನಾವು ಪುಟ್ಟ ಹೃದಯದ ಆರೋಗ್ಯಕ್ಕೆ ಕೆಲ ಸರಳ ಟಿಪ್ಸ್ ನೀಡಿದ್ದೇವೆ ನೋಡಿ:

ಕೊಬ್ಬಿನಂಶ ಆಹಾರಗಳು ಓಕೆ, but ಮಿತಿಯಲ್ಲಿರಲಿ

ಕೊಬ್ಬಿನಂಶ ಆಹಾರಗಳು ಓಕೆ, but ಮಿತಿಯಲ್ಲಿರಲಿ

ಅಪರೂಪಕ್ಕೆ ಕೊಬ್ಬಿನಂಶವಿರುವ ಆಹಾರಗಳು ಓಕೆ, ಆದರೆ ಅದನ್ನು ವಾರದಲ್ಲಿ 2-3 ಬಾರಿ ಅಥವಾ ಅಧಿಕ ಬಾರಿ ತಿನ್ನುವುದು ಒಳ್ಳೆಯದಲ್ಲ.

ಕೆಟ್ಟ ಕೊಲೆಸ್ಟ್ರಾಲ್ ಅದಾಗಿಯೇ ಹೆಚ್ಚಲ್ಲ

ಕೆಟ್ಟ ಕೊಲೆಸ್ಟ್ರಾಲ್ ಅದಾಗಿಯೇ ಹೆಚ್ಚಲ್ಲ

ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಾನಾಗಿಯೇ ಹೆಚ್ಚುವುದಿಲ್ಲ. ನಮ್ಮ ಆಹಾರಕ್ರಮದಿಂದ ಹೆಚ್ಚುತ್ತದೆ ಅಷ್ಟೇ.

ಈ ರೀತಿ ಬೇಕಾ?

ಈ ರೀತಿ ಬೇಕಾ?

ಅತೀಯಾದ ತೂಕ ನಿಮ್ಮ ಲುಕ್, ನಿಮ್ಮ ಆರೋಗ್ಯ ಎರಡನ್ನೂ ಹಾಳು ಮಾಡುತ್ತದೆ ಅಂದ ಮೇಲೆ ಅಧಿಕ ತೂಕವನ್ನು ಕಮ್ಮಿ ಮಾಡಿಕೊಳ್ಳುವುದೇ ಒಳ್ಳೆಯದು ಅಲ್ವಾ?

 ಸೈಕಲ್ ಮೇಲೆ ಜಾಲಿ ರೈಡ್ ಹೋಗಿ

ಸೈಕಲ್ ಮೇಲೆ ಜಾಲಿ ರೈಡ್ ಹೋಗಿ

ಒಬ್ಬರೇ ವ್ಯಾಯಾಮ ಮಾಡಲು ಬೋರಾದರೆ it's ok, ಜಾಲಿಯಾಗಿ ಸೈಕಲ್ ಮೇಲೆ ಹೋಗಿ, ಮನಸ್ಸಿಗೂ ಮುದ, ಸ್ಲಿಮ್ ಅಂದ ಫಿಟ್ ಆಗಿರಬಹುದು ಏನಂತೀರಿ?

ಸಿಗರೇಟ್?

ಸಿಗರೇಟ್?

ದುಡ್ಡು ಕೊಟ್ಟು ಸಿಗರೇಟ್ ಕೊಂಡು ಅದರಿಂದ ಆರೋಗ್ಯ ಹಾಳಾಗಿ ಚಿಕಿತ್ಸೆಗೆ ಮತ್ತಷ್ಟು ದುಡ್ಡು ಖರ್ಚು ಇವೆಲ್ಲಾ ಬೇಕೆ?

 ರೆಡ್ ವೈನ್ ಗೆ ಚಿಯರ್ಸ್

ರೆಡ್ ವೈನ್ ಗೆ ಚಿಯರ್ಸ್

ಪ್ರತೀ ದಿನ 1 ಪೆಗ್ ರೆಡ್ ವೈನ್ ಕುಡಿದರೆ ಹೃದಯಕ್ಕೆ ತುಂಬಾ ಒಳ್ಳೆಯದು, ಆದರೆ ಒಂದು ಕಿವಿಮಾತು ಮಿತಿಯಲ್ಲಿರಲಿ ಪ್ಲೀಸ್.

ಉಪ್ಪು

ಉಪ್ಪು

ಉಪ್ಪನ್ನು ಮಿತಿಯಲ್ಲಿ ತಿಂದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ, ಇದರಿಂದ ಹೃದಯಕ್ಕೂ ಒಳ್ಳೆಯದು.

English summary

Ways To Improve Your Heart Health

Following few heart healthy tips can be of great help. It keeps your heart pumping and protects it from diseases and blockages.
X
Desktop Bottom Promotion