For Quick Alerts
ALLOW NOTIFICATIONS  
For Daily Alerts

ಬ್ರೆಡ್ ಗಳಲ್ಲಿ ಯಾವ ಬ್ರೆಡ್ ಹೃದಯಕ್ಕೆ ಒಳ್ಳೆಯದು?

|

ಆಫೀಸ್ ಬೇಗ ಹೊರಡಬೇಕು, ಅಡುಗೆ ಮಾಡಲು ಪುರುಸೊತ್ತು ಇಲ್ಲದಿದ್ದಾಗ ಸ್ಯಾಂಡ್ ವಿಚ್ ಮಾಡಿ ತಿಂದು, ಟಿಫನ್ ಗೂ ಅದನ್ನು ತುಂಬಿ ಹೊರಡುವುದನ್ನು ನಮ್ಮಲ್ಲಿ ಹೆಚ್ಚಿನವರು ಮಾಡುತ್ತೇವೆ. ಅದರಲ್ಲೂ ಬ್ಯಾಚುರಲ್ ಗಳು ತುಂಬಾ ಇಷ್ಟಪಡುವವರು ಇದನ್ನು ತುಂಬಾ ಇಷ್ಟಪಡುತ್ತಾರೆ ( ಸುಲಭವಾಗಿ ಮಾಡಬಹುದಲ್ಲಾ).

ಬ್ರೆಡ್ ಅನ್ನು ಸ್ಯಾಂಡ್ ವಿಚ್ ಬ್ರೆಡ್ ಜಾಮ್, ಚೀಸ್ ಬ್ರೆಡ್ ಹೀಗೆ ಅನೇಕ ರುಚಿಯಲ್ಲಿ ತಿನ್ನಬಹುದು. ಬಿಳಿ ಬ್ರೆಡ್ ತಿನ್ನಲು ರುಚಿಕರವಾಗಿದ್ದರೂ ದೇಹದ ತೂಕವನ್ನು ಹೆಚ್ಚಿಸುತ್ತದೆ. ಇಲ್ಲಿ ನಾವು ಕೆಲವು ಬ್ರೆಡ್ ಗಳ ಬಗ್ಗೆ ಹೇಳಲಾಗಿದೆ. ಈ ಬ್ರೆಡ್ ಗಳನ್ನು ತಿಂದರೆ ಆರೋಗ್ಯಕ್ಕೆ, ಅದರಲ್ಲೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗೋಧಿ ಬ್ರೆಡ್

ಗೋಧಿ ಬ್ರೆಡ್

ಗೋಧಿ ಬ್ರೆಡ್ ಅನ್ನು ಪಾಲಿಷ್ ಮಾಡದ ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ತುಂಬಾ ನಾರಿನಂಶವಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಬ್ರೌನ್ ಬ್ರೆಡ್

ಬ್ರೌನ್ ಬ್ರೆಡ್

ಬ್ರೌನ್ ಬ್ರೆಡ್ ಅನ್ನು ಗೋಧಿ ಹಾಗೂ ಸೋಯಾದಿಂದ ತಯಾರಿಸಲಾಗುವುದು, ಆದ್ದರಿಂದಲೇ ಇದು ನೋಡಲು ಕಂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಕೊಬ್ಬಿನಂಶ ಕಡಿಮೆಯಿದ್ದು, ಪ್ರೊಟೀನ್ ಅಧಿಕವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ದವಸ ಧಾನ್ಯಗಳ ಬ್ರೆಡ್

ದವಸ ಧಾನ್ಯಗಳ ಬ್ರೆಡ್

ಮಲ್ಟಿ ಗ್ರೈನ್ ಬ್ರೆಡ್ ಇದನ್ನು ಗೋಧಿ, ನವಣೆ, ಚಿಕ್ಕ ಗೋಧಿ ಇವುಗಳಿಂದ ತಯಾರಿಸಲಾಗುವುದು.

 ಚಿಕ್ಕ ಗೋಧಿಯಿಂದ ಮಾಡಿದ ಬ್ರೆಡ್

ಚಿಕ್ಕ ಗೋಧಿಯಿಂದ ಮಾಡಿದ ಬ್ರೆಡ್

ಈ ಬ್ರೆಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬ್ರೆಡ್ ನಲ್ಲಿ ಚಿಕ್ಕ-ಚಿಕ್ಕ ಗೋಧಿಯ ತುಂಡುಗಳು ಕಾಣಿಸುವಂತೆ ಇರುತ್ತದೆ.

 ಓಟ್ಸ್ ಬ್ರೆಡ್

ಓಟ್ಸ್ ಬ್ರೆಡ್

ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆಯೂ ಬೇಗನೆ ತುಂಬುತ್ತದೆ.

ವಾಲ್ ನಟ್ ಬ್ರೆಡ್

ವಾಲ್ ನಟ್ ಬ್ರೆಡ್

ವಾಲ್ ನಟ್ ನಲ್ಲಿ ಒಮೆಗಾ 3 ಅಂಶವಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಪಂಪರ್ ನಿಕೆಲ್ ಬ್ರೆಡ್ (pumpernickel bread)

ಪಂಪರ್ ನಿಕೆಲ್ ಬ್ರೆಡ್ (pumpernickel bread)

ಇದು ಕೂಡ ಚಿಕ್ಕ ಗೋಧಿಯಿಂದ ಮಾಡುವಂತಹ ಬ್ರೆಡ್, ಇದರಲ್ಲಿ ಸೋಯಾ ಹಾಗೂ ಇತರ ದವಸ ಧಾನ್ಯಗಳನ್ನು ಹಾಕಿ ತಯಾರಿಸಲಾಗುವುದು.

ಅಗಸದ ಬೀಜದ ಬ್ರೆಡ್(flaxseed bread)

ಅಗಸದ ಬೀಜದ ಬ್ರೆಡ್(flaxseed bread)

ಅಗಸದೆ ಬೀಜದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಧಿಕವಿದೆ. ನಾನ್ ವೆಜ್ ತಿನ್ನುವವರಿಗೆ ಮೀನು, ಮಾಂಸಗಳಲ್ಲಿ ನಾನ್ ವೆಜ್ ಅಂಶವಿರುತ್ತದೆ. ಆದರೆ ವೆಜ್ ಮಾತ್ರ ತಿನ್ನುವವರು ಒಮೆಗಾ 3 ಇರುವ ಅಗಸದ ಬೀಜದ ಪದಾರ್ಥಗಳನ್ನು ತಿನ್ನುವುದರಿಂದ ಒಮೆಗಾ 3 ಕಮ್ಮಿಯಾಗಿ ಉಂಟಾಗುವ ಅನಾರೋಗ್ಯವನ್ನು ತಪ್ಪಿಸಬಹುದು.

English summary

8 Types Of Bread That Are Heart Healthy | Tips For Health | ಹೃದಯದ ಆರೋಗ್ಯ ಹೆಚ್ಚಿಸುವ 8 ರೀತಿಯ ಬ್ರೆಡ್ ಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

In fact, within the great variety of breads, there are many that are good for your heart. The commonest type of bread is white bread but it is filled with fats and cholesterol.
X
Desktop Bottom Promotion