For Quick Alerts
ALLOW NOTIFICATIONS  
For Daily Alerts

ಕಡಿಮೆ ರಕ್ತದೊತ್ತಡ ಸಮಸ್ಯೆಯ ಲಕ್ಷಣ ಮತ್ತು ಕಾರಣ

|
Low Blood Pressure
ವಯಸ್ಸು 30 ದಾಟಿದರೆ ಸಾಕು, ಒಂದೊಂದೇ ಕಾಯಿಲೆಗಳು ಶುರುವಾಗುತ್ತದೆ. ಅದರಲ್ಲೂ ಹೆಚ್ಚಿನ ಜನರಲ್ಲಿ ಕಂಡು ಬರುವ ಸಮಸ್ಯೆಯೆಂದರೆ ಬಿಪಿ (ರಕ್ತದೊತ್ತಡ). ಒಂದೋ ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆ. ಕಡಿಮೆ ರಕ್ತದೊತ್ತಡ ಕಾಣಿಸಿಕೊಂಡರೆ ಪಾರ್ಶ್ವವಾಯು ಮತ್ತು ಇತರ ಕಾಯಿಲೆಗಳು ಉಂಟಾಗುವುದು. ಆದ್ದರಿಂದ ಕಡಿಮೆ ರಕ್ತದೊತ್ತಡ ಕಂಡುಬಂದರೆ ಕೂಡಲೇ ವೈದ್ಯರನ್ನು ಕಂಡು ಸೂಕ್ತವಾದ ಚಿಕಿತ್ಸೆಯನ್ನು ಮಾಡಬೇಕು. ಕಡಿಮೆ ರಕ್ತದೊತ್ತಡದ ಸಮಸ್ಯೆಯಿದೆ ಎಂದು ಕಂಡು ಹಿಡಿಯುವುದು ಹೇಗೆ? ಎಂದು ತಿಳಿಯಲು ಮುಂದೆ ಓದಿ:

ಕಡಿಮೆ ರಕ್ತದೊತ್ತಡ ಉಂಟಾಗಿದೆ ಎಂದು ಈ ಕೆಳಗಿನ ಲಕ್ಷಣಗಳಿಂದ ಕಂಡು ಹಿಡಿಯಬಹುದು:

ಸುಸ್ತು, ತಲೆಸುತ್ತು, ಎದೆ ನೋವು ಕಾಣಿಸಿಕೊಳ್ಳುವುದು. ತುಂಬಾ ಕಡಿಮೆ ರಕ್ತದೊತ್ತಡ ಉಂಟಾದರೆ ಹೃದಯ, ಕರುಳು ಮತ್ತು ಮೆದುಳಿಗೆ ಹಾನಿಯನ್ನು ಉಂಟು ಮಾಡಿ ಜೀವಕ್ಕೆ ಅಪಾಯವನ್ನು ತರುತ್ತದೆ.

ಕಡಿಮೆ ರಕ್ತದೊತ್ತಡದ ಸಮಸ್ಯೆ ಅನೇಕ ಕಾರಣಗಳಿಂದ ಉಂಟಾಗಬಹುದು. ವಾಂತಿ, ಬೇಧಿಯಿಂದ ದೇಹದಲ್ಲಿ ನೀರಿನಂಶ ಕಂಡು ಬಂದರೆ, ಮಿತಿಮೀರಿ ವ್ಯಾಯಾಮ, ವಿಪರೀತ ಬೆವರಿದರೆ, ಸುಸ್ತು, ತುಂಬಾ ಹೊತ್ತು ಶಾಖವಿರುವ ಪ್ರದೇಶದಲ್ಲಿ ನಿಂತರೆ ರಕ್ತಪರಿಚಲನೆಯಲ್ಲಿ ವ್ಯತ್ಯಾಸ ಉಂಟಾಗಿ ಕಡಿಮೆ ರಕ್ತದೊತ್ತಡ ಉಂಟಾಗುವುದು.

ಹೃದಯದ ಸಮಸ್ಯೆ: ಹೃದಯದ ಸಮಸ್ಯೆಗಳಿದ್ದರೆ ಎದೆಯಲ್ಲಿ ಉರಿ, ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಈ ಕಾರಣಗಳಿಂದ ಕಡಿಮೆ ರಕ್ತದೊತ್ತಡ ಉಂಟಾಗುವುದು.

ಔಷಧಿಗಳು: ಖಿನ್ನತೆಯಂತಹ ಕಾಯಿಲೆಗಳಿಗೆ ಔಷಧಿ ತೆಗೆದುಕೊಳ್ಳುವಾಗ ಕಡಿಮೆ ರಕ್ತದೊತ್ತಡ ಉಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಮದ್ಯಪಾನ ಮತ್ತು ಇತರ ಡ್ರಗ್ಸ್ ಸೇವನೆ ಅಭ್ಯಾಸ ಇದ್ದರೆ ರಕ್ತದೊತ್ತಡ ಕಡಿಮೆಯಾಗುವುದು. ಇದಲ್ಲದೆ ನರಗಳಲ್ಲಿ ಸಮಸ್ಯೆ ಇದ್ದರೆ, ಮೂತ್ರ ವಿಸರ್ಜನೆಯಾದ ತಕ್ಷಣ ತಲೆಸುತ್ತಿ ಬಿದ್ದರೆ, antibiotic ಮಾತ್ರೆಗಳನ್ನು ನುಂಗುವುದರಿಂದ ಕೂಡ ಕಡಿಮೆ ರಕ್ತದೊತ್ತಡ ಕಾಣಿಸಿಕೊಳ್ಳಬಹುದು.

ರಕ್ತದೊತ್ತಡ ಕಡಿಮೆಯಾಗಿದ್ದರೆ ಆಹಾರದಲ್ಲಿ ಈ ಕೆಳಗಿನ ವಸ್ತುಗಳನ್ನು ಸೇವಿಸಿದರೆ ರಕ್ತ ಪರಿಚಲನೆ ಸುಗಮವಾಗಿ ನಡೆಯಲು ಸಹಕಾರಿಯಾಗುವುದು.

ಹಸಿ ಬೀಟ್ ರೂಟ್, ವಿಟಮಿನ್ ಮಾತ್ರೆಗಳು, ವಿಟಮಿನ್ ಬಿ ಇರುವ ಪದಾರ್ಥಗಳು, ವಿಟಮಿನ್ ಸಿ ಮತ್ತು ಪ್ರೊಟೀನ್ ಇರುವ ಆಹಾರಗಳನ್ನು ತಿನ್ನುವುದರಿಂದ ರಕ್ತದೊತ್ತಡ ಸಾಮಾನ್ಯ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬಹುದು.

English summary

Reason And Solution For The Low Blood Pressure | ಕಡಿಮೆ ರಕ್ತದೊತ್ತಡಕ್ಕೆ ಕಾರಣ ಮತ್ತು ಪರಿಹಾರ

Low blood pressure symptoms and resulting ailments. If you suffering from low BP you have to tackle that problem. Here are few tips about how to tackle low blood pressure.
X
Desktop Bottom Promotion