For Quick Alerts
ALLOW NOTIFICATIONS  
For Daily Alerts

ಹೃದಯಾಘಾತದ ಮುನ್ನ ಕಂಡುಬರುವ 4 ಲಕ್ಷಣಗಳು

|
4 Common Signs Of Heart Attack
ಹೃದಯಾಘಾತ ಯಾರಿಗೆ, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೃದಯಾಘಾತ ಉಂಟಾಗುವವರೆಗೆ ಹೃದಯದ ಸಮಸ್ಯೆ ಬರಬಹುದೆಂಬ ಎಂಬ ಕಲ್ಪನೆಯೂ ಇರುವುದಿಲ್ಲ. ಇದ್ದಕ್ಕಿದ್ದ ಹಾಗೇ ಎದೆಯಲ್ಲಿ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ. ತೀವ್ರವಾದ ಹೃದಯಾಘಾತ ಉಂಟಾದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.

ಇದ್ದಕ್ಕಿದ್ದ ಹಾಗೇ ಹೃದಯಾಘಾತ ಕಾಣಿಸಿಕೊಳ್ಳುವ ಮೊದಲು ಕೆಲವೊಂದು ಲಕ್ಷಣಗಳು ಕಂಡುಬರುತ್ತದೆ, ಅದನ್ನು ಹೆಚ್ಚಿನವರು ಗಮನಿಸುವುದೇ ಇಲ್ಲ, ಆ ಲಕ್ಷಣಗಳನ್ನು ಗುರುತಿಸಿದರೆ ವೈದ್ಯರನ್ನು ಕಂಡು ಮುನ್ನೆಚ್ಚರಿಕೆ ಕ್ರಮಗಳಿಂದ ಹೃದಯಾಘಾತದಿಂದ ಉಂಟಾಗಬಹುದಾದ ಆಪತ್ತನ್ನು ತಪ್ಪಿಸಬಹುದು. ಹೃದಯಾಘಾತ ಮುನ್ನ ಕಾಣಿಸಿಕೊಳ್ಳಬಹುದಾದ ಲಕ್ಷಣಗಳ ಬಗ್ಗೆ ಇಲ್ಲಿ ಹೇಳಾಗಿದೆ ನೋಡಿ:

ಅಜೀರ್ಣ ಸಮಸ್ಯೆ: ಹದಯಾಘಾತದ ಮುನ್ನ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು. ಹೊಟ್ಟೆಯಲ್ಲಿ ಉರಿ ಕಂಡು ಬರುತ್ತದೆ.

ಒತ್ತಡ: ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದೆಯಲ್ಲಿ ಏನೋ ಹಿಡಿದಂತೆ ಅನುಭವವಾಗುತ್ತದೆ. ಆ ನೋವು ಒಂದು ನಿಮಿಷದವರೆಗೂ ಕಾಣಿಸಿಕೊಳ್ಳಬಹುದು, ನಂತರ ಕಮ್ಮಿಯಾದಂತೆ ಅನಿಸುತ್ತದೆ. ಈ ರೀತಿ ಉಂಟಾದಾಗ ನಿರ್ಲಕ್ಷ್ಯ ಮಾಡಬೇಡಿ.

ಮೈಕೈ ನೋವು: ಭುಜ, ಕುತ್ತಿಗೆ, ದವಡೆ, ಎದೆ ಈ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಾತ್ರೆ ತೆಗೆದುಕೊಂಡರೂ ನೋವು ಕಡಿಮೆಯಾಗುವುದಿಲ್ಲ. ಈ ರೀತಿ ಕಾಣಿಸಿಕೊಂಡರೆ ಹೃದಯಾಘಾತ ಸಮೀಪದಲ್ಲಿಯೇ ಉಂಟಾಗಬಹುದು ಎಂದು ಸೂಚಿಸುವ ಲಕ್ಷಣಗಳಾಗಿವೆ.

ತಲೆಸುತ್ತು: ಹೃದಯಾಘಾತದ ಮುನ್ನ ಸುಸ್ತು, ಬೆವರುವಿಕೆ, ತಲೆ ಸುತ್ತು, ನಾಡಿಮಿಡಿತದಲ್ಲಿ ವ್ಯತ್ಯಾಸ ಕಂಡುಬರುವುದು. ಈ ರೀತಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

English summary

4 Common Signs Of Heart Attack | Tips For Heart Health | ಹೃದಯಘಾತ ಸಮೀಪಿಸುತ್ತಿದೆ ಎಂದು ಹೇಳುವ 4 ಲಕ್ಷಣಗಳು | ಹೃದಯದ ಆರೋಗ್ಯಕ್ಕಾಗಿ ಕೆಲ ಸಲಹೆಗಳು

Before get a heart attack there will be 4 common symptoms. Of you observe those common symptoms, the sooner the victim receives medical help, the better the chances are for a full recovery.
X
Desktop Bottom Promotion