ಹೃದಯದ ಆರೋಗ್ಯಕ್ಕೆ 5 ಸರಳ ಸೂತ್ರಗಳು

Tips For Healthy Heart
ದಿನದ 24 ಗಂಟೆಯೂ ನೆಮ್ಮದಿ ಕೆಡಿಸಿಕೊಳ್ಳುವರಿದ್ದಾರೆ. ಆಫೀಸ್ ಕೆಲಸ, ಸಂಸಾರ ತಾಪತ್ರಯ, ಹೀಗೆ ಒತ್ತಡಗಳಿಗೆ ಕೊನೆಯಿಲ್ಲ. ಒತ್ತಡದ ಬದುಕಿನಿಂದ ಕೊಂಚ ರಿಲೀಫ್ ಪಡೆಯಲು ಧೂಮಪಾನ, ಕುಡಿತದಂತಹ ಚಟಗಳನ್ನು ಬೆಳೆಸಿಕೊಳ್ಳುವರಿದ್ದಾರೆ. (ಎಲ್ಲರೂ ಕಲಿಯಬೇಕಾದಐದು ಕೆಟ್ಟಚಟಗಳು )

ಇವೆಲ್ಲವೂ ಹೃದಯ ಸ್ವಾಸ್ಥ್ಯವನ್ನು ಹಾಳು ಮಾಡುವ ಶತ್ರುಗಳು. ಚಟ್ಟಕ್ಕೆ ಬೇಗ ಏರಿಸುವ ಇಂತಹ ಚಟಗಳಿಂದ ಪಾರಾಗಲು ಇಲ್ಲಿ ಐದು ಉಪಾಯಗಳಿವೆ. ಈ ಸಲಹೆ ಪಾಲಿಸಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.

1.ಧೂಮಪಾನ ನಿಷೇಧಿಸಿದೆ: 15-20 ವರ್ಷ ಧೂಮಪಾನ ಮಾಡಿದರೆ ಹೃದಯಾಘಾತ, ಹೃದಯದಲ್ಲಿ ತೂತು, ಉಸಿರಾಟದ ತೊಂದರೆ, ಬಿಡದ ಕೆಮ್ಮು ಮುಂತಾದ ಸಮಸ್ಯೆಗಳು ಕಾಣಿಸಿಕೊಂಡು ಜೀವನವೇ ನರಕವಾಗಿ ಬಿಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಧೂಮಪಾನ ಚಟದಿಂದ ಹೊರಬನ್ನಿ.

2. ಕಡಿಮೆ ಪ್ರಮಾಣದ ಉಪ್ಪು: ಅಧಿಕ ಉಪ್ಪು ತಿಂದರೆ ರಕ್ತದೊತ್ತಡ ಹೆಚ್ಚಾಗುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತದೆ.

3. ಆಹಾರಕ್ರಮ: ಒಳ್ಳಯ ಆಹಾರಕ್ರಮ ಪಾಲಿಸಿ. ಹೊರಗಡೆ ತಿನ್ನುವ ಬದಲು ಮನೆ ಊಟವನ್ನೇ ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಆಹಾರದಲ್ಲಿ ಕೊಬ್ಬಿನಂಶ ಕಡಿಮೆಯಿರಲಿ. ಸೊಪ್ಪು, ತಕಕಾರಿ, ಹಣ್ಣುಗಳನ್ನು ಅಧಿಕವಾಗಿ ಸೇವಿಸಬೇಕು.

4. ಒತ್ತಡ ಕಡಿಮೆ ಮಾಡುವುದು: ವ್ಯಾಯಾಮ, ಯೋಗ, ಸಂಗೀತ ಕೇಳುವುದು ಇವುಗಳಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.

5. ಸಂತೋಷ:
ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಬೇಕು. ಅಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಚಿಂತೆ ಮಾಡದೆ ಜೀವನವನ್ನು ನಡೆಸಬೇಕು. ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸುತ್ತಿರಬೇಕು. ಕಾಯಿಲೆಯ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿದರೆ ಅನಾರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸಲಹೆಗಳನ್ನು ಪಾಲಿಸಿದರೆ ಹೃದಯದ ಮಿಡಿತ ಹೆಚ್ಚುಕಾಲವಿರುತ್ತದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.