For Quick Alerts
ALLOW NOTIFICATIONS  
For Daily Alerts

ಹೃದಯಾಘಾತ ಯಾವಾಗ ತುಂಬಾ ಅಪಾಯಕಾರಿ ?

By Super
|
Heart Problems
ಎರಡು ಸಲ ಹೃದಯಾಘಾತವಾಗಿ ನಂತರ ಮೂರನೆ ಬಾರಿ ಆದರೆ ತುಂಬಾ ಅಪಾಯಕಾರಿ, ಇದರಿಂದ ಪ್ರಾಣಕ್ಕೆ ಅಪಾಯವಾಗುವುದು ಎಂದು ವೈದ್ಯರು ಹೇಳುತ್ತಾರೆ.

ಅದೆ ರೀತಿ ಯಾವ ಸಮಯದಲ್ಲಿ ಹೃದಯಾಘಾತವಾಗುತ್ತದೆ ಅದರ ಆಧಾರದ ಮೇಲೆ ಅಪಾಯದ ಸುಳಿವನ್ನು ತಿಳಿಯಬಹುದು ಎಂಬುದಾಗಿ ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ಅದರ ಪ್ರಕಾರ ಹೃದಯಾಘಾತ ರಾತ್ರಿ 1ರ ನಂತರ ಮತ್ತು ಬೆಳಗ್ಗೆ 5ರ ಒಳಗೆ ಬಂದರೆ ಇದರಿಂದ ಪ್ರಾಣಕ್ಕೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಇದನ್ನು ಭಾರತದಲ್ಲಿನ ಹೃದ್ರೋಗ ತಜ್ಞರು ಸಹ ಒಪ್ಪಿ ಕೊಂಡಿದ್ದಾರೆ.

ಬೆಳಗ್ಗಿನ ಸಮಯದಲ್ಲಿ ಮನಸ್ಸು ಎಚ್ಚರವಿದ್ದು ದೇಹ ಮಾತ್ರ ಮಲಗಿರುತ್ತದೆ. ಆಗ ನರದಲ್ಲಿ ಆಡ್ರೆನಾಲಿನ್, ನಾರ್ ಆಡ್ರೆ ನಾಲಿನ್, ಕೋರ್ಟಿಸೊಲ್ ಎಂಬ ಹಾರ್ಮೋನ್ ಗಳು ಬಿಡುಗಡೆಯಾಗಿ ಅದು ಹೃದಯದ ಬಡಿತವನ್ನು ಹೆಚ್ಚು ಮಾಡಿ ಉಸಿರಾಡಲು ತೊಂದರೆ ಉಂಟಾಗುವುದು. ಇದರಿಂದ ಪ್ರಾಣಕ್ಕೆ ಅಪಾಯ ಹೆಚ್ಚು.

ರಾತ್ರಿ 1ರಿಂದ ಮತ್ತು ಬೆಳಗ್ಗೆ 5ರ ನಡುವೆ ಹೃದಯದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೆ ಜನರು ಹೆಚ್ಚಾಗಿ ಬೇಗನೆ ತುರ್ತು ಚಿಕಿತ್ಸೆಗೆ ಹೋಗುವ ಬದಲು ಬೆಳಕಾಗುವುದನ್ನು ಕಾಯುತ್ತಾರೆ, ಆದರೆ ಈ ನಡುವಳಿಕೆ ಪ್ರಾಣಕ್ಕೆ ಅಪಾಯವನ್ನು ತರಬಹುದು.

ಆದ್ದರಿಂದ ಈ ವೇಳೆಗಳಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ತಕ್ಷಣವೆ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.

English summary

When Heart Attach Is Too Dangerous | Health And Heart Problem | ಹೃದಯಾಘಾತ ಯಾವಾಗ ಉಂಟಾದರೆ ತುಂಬಾ ಅಪಾಯ | ಆರೋಗ್ಯ ಮತ್ತು ಹೃದಯದ ಸಮಸ್ಯೆ

Cardiac arrest are too dangerous when it happens between the time of 1pm to 5am. The recent research have thrown light on this factor. Most of the cardiac Doctor agree this point.
Story first published: Wednesday, January 18, 2012, 12:55 [IST]
X
Desktop Bottom Promotion