For Quick Alerts
ALLOW NOTIFICATIONS  
For Daily Alerts

ನಿಮ್ಮ ಹೃದಯ ಗಟ್ಟಿಗೊಳಿಸಲು ನಟ್ಸ್ ತಿನ್ನಿ

|
Eat Heart Healthy Nuts
ನಿಮ್ಮ ಹೃದಯವನ್ನು ಜೋಪಾನವಾಗಿಡಬೇಕೆಂದರೆ ನೀವು ಡ್ರೈ ನಟ್ಸ್ ಸಹಾಯ ತೆಗೆದುಕೊಳ್ಳಲೇಬೇಕು. ಹೌದು. ಡ್ರೈ ನಟ್ಸ್ ಅನೇಕ ಕಾಯಿಲೆಗಳನ್ನು ದೂರವಿರಿಸುತ್ತೆ. ಅದರಲ್ಲೂ ಹೃದಯಾಘಾತದಂತಹ ಗಂಭೀರ ಸಮಸ್ಯೆ ನಿಮ್ಮ ಬಳಿ ಸುಳಿಯದಂತೆ ತಡೆಯುತ್ತೆ.

ಯಾವ ಡ್ರೈ ನಟ್ಸ್ ಹೃದಯಕ್ಕೆ ಹೇಗೆ ಒಳ್ಳೆಯದು ಎಂದು ತಿಳಿಯೋಣ:

1.ಬಾದಾಮಿ: ಬಾದಾಮಿಯನ್ನು ದಿನವೂ ಸೇವಿಸುವುದರಿಂದ ಹೃದಯ ಸ್ವಾಸ್ಥ್ಯವಾಗಿರುತ್ತೆ. ಇದು ಹೃದಯಕ್ಕೆ ರಕ್ತಸಂಚಲನ ಮಾಡುವ ನಾಳಗಳಲ್ಲಿನ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

2. ಗೋಡಂಬಿ: ದಿನವೂ ಒಂದೆರಡು ಗೋಡಂಬಿ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು. ಇದರಲ್ಲಿರುವ ಒಲಿಯಿಕ್ ಆಸಿಡ್ ಹೃದಯಕ್ಕೆ ಉತ್ತಮ.ಇದರಲ್ಲಿ ಬಯಾಟಿನ್ ಎಂಬ ಅಂಶ, ತಾಮ್ರಾಂಶ, ಮ್ಯಾಗ್ನೀಶಿಯಂ ಮತ್ತು ಕಬ್ಬಿಣಾಂಶ ಎಲ್ಲವೂ ರಕ್ತಕಣಗಳನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಹೃದಯದ ಸ್ನಾಯುಗಳಿಗೂ ಬಲ ನೀಡುತ್ತದೆ.

3. ಪಿಸ್ತಾ: ಪಿಸ್ತಾದಲ್ಲಿರುವ ಫೈಬರ್ ಹೃದಯಕ್ಕೆ ಆರೋಗ್ಯಕರ. ಪಿಸ್ತಾ ತಿನ್ನುವುದರಿಂದ ರಕ್ತನಾಳದಲ್ಲಿ ತುಂಬಿಕೊಂಡ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ನಂತರ ಕಾಯಿಲೆಯನ್ನೂ ತಡೆಗಟ್ಟುತ್ತದೆ.

4. ಅಕ್ರೋಡ: ವಾಲ್ ನಟ್ ಪೌಷ್ಟಿಕಾಂಶಗಳ ಗೂಡು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ವಿಟಮಿನ್ ಬಿ 1,2,3,6 ಮತ್ತು ಇ ಇದ್ದು, ತಾಮ್ರಾಂಶ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣಾಂಶ ತುಂಬಿಕೊಂಡಿದೆ. ವಾಲ್ ನಟ್ ರಕ್ತದ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಹೃದಯದ ಆರೋಗ್ಯಕ್ಕೆ ಅತಿ ಅವಶ್ಯಕವಾಗಿರುವ ಒಮೆಗಾ 3 ಆಸಿಡ್ ಅನ್ನು ಸಹ ದೇಹಕ್ಕೆ ಒದಗಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.

5. ಪೆಕಾನ್ ನಟ್ಸ್: ಪೆಕಾನ್ ನಟ್ಸ್ ನಲ್ಲಿ 15 ಕ್ಕೂ ಹೆಚ್ಚು ರೀತಿಯ ವಿಟಮಿನ್ ಗಳು ಲಭ್ಯವಿರುವುದರಿಂದ ಹೃದಯವನ್ನು ಆರೋಗ್ಯಭರಿತವಾಗಿರಿಸುವುದರಲ್ಲಿ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮೂಳೆ ಮತ್ತು ಸ್ನಾಯುಗಳೂ ಗಟ್ಟಿಗೊಳ್ಳುತ್ತದೆ.

English summary

Eat Heart Healthy Nuts | Healthy Heart Diet | ಹೃದಯಕ್ಕೆ ಅಗತ್ಯವಾದ ನಟ್ಸ್ ಸೇವನೆ | ಹೃದಯದ ಸ್ವಾಸ್ಥ್ಯಕ್ಕೆ ಡ್ರೈ ನಟ್ಸ್

Dry nuts are now easy medicines to prevent heart related ailments such as heart attack. They contain good fat that helps in reducing cholesterol which blocks the blood flow in the arteries and veins. Take a look at the types of nuts that needs to be a part of your healthy heart diet.
Story first published: Saturday, October 1, 2011, 10:09 [IST]
X
Desktop Bottom Promotion