For Quick Alerts
ALLOW NOTIFICATIONS  
For Daily Alerts

ಶೀಘ್ರವಾಗಿ ಹೊಟ್ಟೆಯ ಬೊಜ್ಜು ಕರಗಿಸುವ,ಅರಿಶಿನ-ಲಿಂಬೆಯ ಜೋಡಿ

By Arshad
|

ಇಂದಿನ ದಿನಗಳಲ್ಲಿ ಬಹುತೇಕ ಮನುಷ್ಯರು ಸ್ಥೂಲಕಾಯ ಮತ್ತು ಹೊಟ್ಟೆಯ ಬೊಜ್ಜಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನ ಶೈಲಿ ಹಾಗೂ ಈ ಮೂಲಕ ದೇಹದಲ್ಲಿ ಬಳಕೆಯಾಗದೇ ಹೋಗುವ ಶಕ್ತಿ. ದೇಹದಲ್ಲಿ ಉತ್ಪತ್ತಿಯಾದ ಶಕ್ತಿ ಬಳಕೆಯಾಗದೇ ಹೋದರೆ ಇವು ಕೊಬ್ಬಿನ ಜೀವಕೋಶಗಳಾಗಿ ಮುಂದಿನ ಬಳಕೆಗೆ ದೇಹದೆಲ್ಲೆಡೆ ಸಂಗ್ರಹಗೊಳ್ಳುತ್ತವೆ.

ಅತಿ ಹೆಚ್ಚು ಸಂಗ್ರಹಗೊಳ್ಳುವ ಮತ್ತು ಅತಿ ಕಡೆಯದಾಗಿ ಕರಗುವ ಕೊಬ್ಬೆಂದರೆ ಸೊಂಟದ ಮತ್ತು ಹೊಟ್ಟೆಯ ಮುಂದಿನ ಕೊಬ್ಬು. ಕೊಬ್ಬನ್ನು ಕರಗಿಸಲು ಕೆಲವಾರು ವಿಧಾನಗಳಿವೆ. ಇವುಗಳಲ್ಲಿ ಲಿಂಬೆ ಮತ್ತು ಅರಿಶಿನದ ಮಿಶ್ರಣ ಅತ್ಯಂತ ಪ್ರಬಲವಾದ ಆಯ್ಕೆಯಾಗಿದ್ದು ನೈಸರ್ಗಿಕವಾಗಿ ಕೊಬ್ಬನ್ನು ಶೀಘ್ರವಾಗಿ ಕರಗಿಸುವ ಸಾಮರ್ಥ್ಯ ಹೊಂದಿದೆ.

ಅರಿಶಿನದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ ಹಾಗೂ ಇದರೊಂದಿಗೆ ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ, ಕಬ್ಬಿಣ, ಮೆಗ್ನೀಶಿಯಂ ಹಾಗೂ ಸತುಗಳಿವೆ. ಇದರೊಂದಿಗೆ ಪ್ರೋಟೀನ್, ನಿಯಾಸಿನ್, ವಿಟಮಿನ್ ಎ, ಸಿ ಹಾಗೂ ಇ ಮೊದಲಾದ ಪೋಷಕಾಂಶಗಳೂ ಇವೆ. ಈ ಖನಿಜ ಮತ್ತು ವಿಟಮಿನ್ನುಗಳು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯುತ್ತಮವಾಗಿವೆ.

ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಇನ್ನು ಲಿಂಬೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇದೆ. ಅಲ್ಲದೇ ಇದರಲ್ಲಿರುವ ಪೆಕ್ಟಿನ್ ಎಂಬ ನೈಸರ್ಗಿಕ ನಾರು ಆಹಾರದ ಹಪಹಪಿಕೆಯನ್ನು ಕಡಿಮೆಗೊಳಿಸುವುದು ಮಾತ್ರವಲ್ಲ, ಜೀರ್ಣಗೊಂಡ ಆಹಾರ ಕರುಳುಗಳ ಒಳಗೆ ಸುಲಭವಾಗಿ ಚಲಿಸುವಂತೆ ಮಾಡಲೂ ನೆರವಾಗುತ್ತದೆ. ಲಿಂಬೆಯಲ್ಲಿ ಆಂಟಿ ಆಕ್ಸಿಡೆಂಟು ಹಾಗೂ ಸ್ವಚ್ಛಗೊಳಿಸುವ ಗುಣಗಳಿವೆ. ಅಲ್ಲದೇ ಹೊಟ್ಟೆಯಲ್ಲಿ ಅಜೀರ್ಣತೆಯಿಂದ ಉಂಟಾಗಿದ್ದ ತೊಂದರೆಗಳನ್ನು ನಿವಾರಿಸಲು, ಜೀವರಾಸಾಯನಿಕ ಕ್ರಿಯೆಯನ್ನುಉತ್ತಮಗೊಳಿಸುವುದು ಹಾಗೂ ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಇವೆರಡರಲ್ಲಿಯೂ ವಿಶೇಷ ಗುಣಗಳಿರುವುದೇನೋ ಸರಿ, ಆದರೆ ಇವೆರಡೂ ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಳಸುವುದು ಹೇಗೆ? ಬನ್ನಿ, ಈ ಕೆಳಗೆ ವಿವರಿಸಿರುವ ಸುಲಭ ವಿಧಾನಗಳನ್ನು ಅನುಸರಿಸಿ ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ನಿವಾರಿಸಬಹುದು....

ಲಿಂಬೆ-ಅರಿಶಿನ ಬೆರೆಸಿದ ಉಗುರುಬೆಚ್ಚನೆಯ ನೀರು

ಲಿಂಬೆ-ಅರಿಶಿನ ಬೆರೆಸಿದ ಉಗುರುಬೆಚ್ಚನೆಯ ನೀರು

ಒಂದು ಲೋಟದಲ್ಲಿ ಅರ್ಧ ಲಿಂಬೆಯ ರಸ ಹಾಗೂ ಕಾಲು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ. ಒಂದು ವೇಳೆ ಲಿಂಬೆಯ ಹುಳಿ ಸಹಿಸಲು ಸಾಧ್ಯವಾಗದೇ ಇದ್ದರೆ 1/8 ಚಿಕ್ಕ ಚಮಚ ಜೇನು ಸೇರಿಸಿ. ಈ ನೀರನ್ನು ಬೆಚ್ಚಗಿದ್ದಂತೆಯೇ ಸೇವಿಸಿ.

ಲಿಂಬೆ-ಅರಿಶಿನ ಬೆರೆಸಿದ ಉಗುರುಬೆಚ್ಚನೆಯ ನೀರು

ಲಿಂಬೆ-ಅರಿಶಿನ ಬೆರೆಸಿದ ಉಗುರುಬೆಚ್ಚನೆಯ ನೀರು

ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ ಕೊಂಚ ಹೊತ್ತಿನ ಬಳಿಕ ಉಪಾಹಾರ ಸೇವಿಸಿ. ಉತ್ತಮ ಪರಿಣಾಮ ಪಡೆಯಲು ದಿನಕ್ಕೆರಡು ಬಾರಿ ಒಂದು ವಾರದವರೆಗೆ ಸೇವಿಸಿ. ಬಳಿಕ ಮುಂದಿನ ಎರಡು ವಾರಗಳವರೆಗೆ ಈ ವಿಧಾನಕ್ಕೆ ರಜೆ ನೀಡಿ ಇನ್ನೂ ಒಂದು ವಾರದ ಅವಧಿಯಲ್ಲಿ ಮುಂದುವರೆಸಿ.

ಶುಂಠಿ-ಅರಿಶಿನದ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಲಿಂಬೆ-ಅರಿಶಿನದ ಚಿನ್ನದ ಲೇಪ

ಲಿಂಬೆ-ಅರಿಶಿನದ ಚಿನ್ನದ ಲೇಪ

ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಲಿಂಬೆಯ ರಸವನ್ನು ಹಿಂಡಿ. ಇದಕ್ಕೆ ಅರ್ಧ ಚಿಕ್ಕಚಮಚ ಅರಿಶಿನ ಬೆರೆಸಿ. ಕಾಲು ಚಿಕ್ಕಚಮಚ ಕಾಳುಮೆಣಸಿನ ಪುಡಿ ಹಾಗೂ ಕಾಲು ಚಿಕ್ಕಚಮಚ ಆಲಿವ್ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಸಂಯೋಜನೆಯಿಂದ ಅರಿಶಿನದ ಕುರ್ಕುಮಿನ್ ನ ಜೈವಿಕ ಲಭ್ಯತೆ ಹಾಗೂ ದೇಹ ಈ ಪೋಷಕಾಂಶಗಳನ್ನು ಪೂರ್ಣವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ಆಲಿವ್ ಎಣ್ಣೆ ಸಿಗದೇ ಇದ್ದರೆ ಕೊಬ್ಬರಿ ಎಣ್ಣೆಯನ್ನೂ ಬಳಸಬಹುದು. ಈ ಲೇಪನವನ್ನು ದಿನಕ್ಕೆ ಎರಡರಿಂದ ಮೂರು ಬಾರಿಯಂತೆ, ಪ್ರತಿ ಬಾರಿ ಒಂದರಿಂದ ಎರಡು ಚಿಕ್ಕ ಚಮಚ ಸೇವಿಸಬೇಕು.

ಲಿಂಬೆ-ಅರಿಶಿನದ ಚಿನ್ನದ ಲೇಪ

ಲಿಂಬೆ-ಅರಿಶಿನದ ಚಿನ್ನದ ಲೇಪ

ಈ ವಿಧಾನದಿಂದ ಹೊಟ್ಟೆಯ ಕೊಬ್ಬು ಅತಿ ಶೀಘ್ರವಾಗಿ ಕರಗುತ್ತದೆ. ಉತ್ತಮ ಪರಿಣಾಮ ಪಡೆಯಲು ಪ್ರತಿ ಊಟದ ಬಳಿಕ ಸೇವಿಸಬೇಕು. ಊಟಕ್ಕೂ ಮೊದಲು ಸೇವಿಸಿದರೆ ಹಸಿ ಅರಿಶಿನದ ಪರಿಣಾಮವಾಗಿ ಹೊಟ್ಟೆಯಲ್ಲಿ ಆಮ್ಲೀಯತೆಯುಂಟಾಗಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಸೇವಿಸಕೂಡದು.

ಅರಿಶಿನ ಮತ್ತು ಲಿಂಬೆಯ ಟೀ

ಅರಿಶಿನ ಮತ್ತು ಲಿಂಬೆಯ ಟೀ

ಒಂದು ಕಪ್ ಹಾಲನ್ನು ಮಧ್ಯಮ ಉರಿಯಲ್ಲಿ ಒಂದು ಬಾಣಲೆಯಲ್ಲಿ ಬಿಸಿಮಾಡಿ. ಇದಕ್ಕೆ ಅರ್ಧ ಚಿಕ್ಕಚಮಚ ಲಿಂಬೆರಸ ಹಾಗೂ ಅರ್ಧ ಚಿಕ್ಕಚಮಚ ಜೇನು, ಕೊಂಚ ವೆನಿಲ್ಲಾ ಎಸೆನ್ಸ್ ಹಾಗೂ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ ಸೇರಿಸಿ. ಬಳಿಕ ಉರಿಯನ್ನು ಚಿಕ್ಕದಾಗಿಸಿ ಮುಂದಿನ ಐದು ನಿಮಿಷಗಳ ಕಾಲ ಕುದಿಸಿ. ಬಳಿಕ ಉರಿ ಆರಿಸಿ ಸೋಸಿ ಬಿಸಿಯಿದ್ದಂತೆಯೇ ಸೇವಿಸಿ. ಪ್ರತಿ ಬಾರಿ ಎರಡರಿಂದ ಮೂರು ಚಿಕ್ಕ ಚಮಚದಷ್ಟು ಪ್ರಮಾಣವನ್ನು ದಿನ್ನಕ್ಕೊಮ್ಮೆಯಂತೆ ಸತತವಾಗಿ ಒಂದು ವಾರ ಸೇವಿಸಿ. ಈ ಟೀಯನ್ನು ಊಟಕ್ಕೆ ಮೊದಲೂ ಅಥವಾ ಬಳಿಕವೂ ಸೇವಿಸಬಹುದು. ಈ ವಿಧಾನದಿಂದಲೂ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕರಗುತ್ತದೆ.

 ಅರಿಶಿನ-ಲಿಂಬೆಯ ರಸ ಸಾಲಾಡ್ ನೊಂದಿಗೆ

ಅರಿಶಿನ-ಲಿಂಬೆಯ ರಸ ಸಾಲಾಡ್ ನೊಂದಿಗೆ

ಒಂದು ವೇಳೆ ಹೊಟ್ಟೆಯ ಕೊಬ್ಬನ್ನು ನಿಜವಾಗಿಯೂ ಕರಗಿಸಬೇಕೆಂದಿದ್ದರೆ ನಿಮ್ಮ ಊಟದಲ್ಲಿ ಹಸಿ ತರಕಾರಿಗಳು ಮತ್ತು ಸಾಲಾಡ್ ಗಳನ್ನು ಅಳವಡಿಸಿಕೊಳ್ಳಬೇಕು. ಈ ಸಾಲಾಡ್ ಗಳನ್ನು ಅರಿಶಿನ ಮತ್ತು ಲಿಂಬೆರಸದಿಂದ ತೋಯಿಸಿ ಸೇವಿಸಿದರೆ ಅತಿ ಹೆಚ್ಚಿನ ನೆರವು ದೊರಕುತ್ತದೆ. ಈ ಸಾಲಾಡ್ ಗಳಿಗೆ ಅರ್ಧ ಚಿಕ್ಕಚಮಚ ಚೆಕ್ಕೆಯ ಎಣ್ಣೆ ಸೇರಿಸಿದರೆ ಇನ್ನೂ ಉತ್ತಮ. ಚೆಕ್ಕೆಯ ಉರಿಯೂತ ನಿವಾರಕ ಗುಣ ಹೊಟ್ಟೆ ಕರಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮುನ್ನೆಚ್ಚರಿಕೆಗಳು

ಮುನ್ನೆಚ್ಚರಿಕೆಗಳು

ಆದರೆ ಈ ವಿಧಾನಗಳನ್ನು ಅನುಸರಿಸುವ ಮುನ್ನ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅಗತ್ಯ. ಒಂದು ವೇಳೆ ನೀವು ಸಂಧಿವಾತ, ಮೂತ್ರಪಿಂಡಗಳಲ್ಲಿ ಕಲ್ಲು, ಪಿತ್ತಕೋಶದಲ್ಲಿ ಕಲ್ಲು ಮೊದಲಾದ ತೊಂದರೆ ಇದ್ದರೆ ಈ ವಿಧಾನಗಳನ್ನು ಅನುಸರಿಸಬೇಡಿ.

ಒಂದು ವೇಳೆ ನಿಮಗೆ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಯಾಗುವುದಿದ್ದರೆ ಈ ವಿಧಾನ ಪ್ರಾರಂಭಿಸುವುದನ್ನು ಮುಂದೆ ಹಾಕಿ ಅಥವ ಈಗಾಗಲೇ ಪ್ರಾರಂಭಿಸಿದ್ದರೆ ನಿಲ್ಲಿಸಿ, ಯಾವುದಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಅಲ್ಲದೇ ಗರ್ಭಿಣಿಯರು ಹಾಗೂ ಬಾಣಂತಿಯರಿಗೂ ಈ ವಿಧಾನ ಸೂಕ್ತವಲ್ಲ.

English summary

Turmeric, Lemon Remedy For Quick Stomach Fat Reduction

Turmeric is a rich source of dietary fibre and minerals like calcium, potassium, sodium, iron, magnesium and zinc. It also contains protein, niacin, Vitamin A, vitamin C and vitamin E. The minerals and vitamins present in turmeric make it an excellent supplement for stomach fat reduction.
X
Desktop Bottom Promotion