For Quick Alerts
ALLOW NOTIFICATIONS  
For Daily Alerts

ಈ ಬಗೆಯ ಕಾಲುನೋವು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಒಂದು ವೇಳೆ ಕಾಲುನೋವು ತೀರಾ ಹೆಚ್ಚಾಗಿದ್ದು ಯಾವುದೋ ಒಂದು ಭಂಗಿಯಲ್ಲಿ ಮಡಚಿದಾಗ ಭಾರೀ ನೋವಾಗುತ್ತಿದ್ದರೆ ಈ ಭಾಗ ಅತಿ ಹೆಚ್ಚು ಘಾಸಿಗೊಳಗಾರುವುದನ್ನು ಸೂಚಿಸುತ್ತದೆ.

By Manu
|

ಇತ್ತೀಚೆಗೆ ನಿಮ್ಮ ಕಾಲುಗಳಲ್ಲಿ ಭಾರೀ ನೋವು ಕಾಣಿಸಿಕೊಳ್ಳುತ್ತಿದೆಯೇ? ಅಥವಾ ಹಿಂದಿನಿಂದಲೂ ಕೊಂಚ ಕಾಲು ನೋವಿದ್ದು ಇತ್ತೀಚೆಗೆ ಹೆಚ್ಚಾಗುತ್ತಿದೆ ಅನ್ನಿಸುತ್ತಿದೆಯೇ? ಹಾಗಾದರೆ ನೀವು ಈ ನೋವುಗಳನ್ನು ಸರ್ವಥಾ ಅಲಕ್ಷಿಸಬಾರದು. ಏಕೆಂದರೆ ಈ ನೋವುಗಳು ದೊಡ್ಡ ತೊಂದರೆಯ ಮುನ್ನೆಚ್ಚರಿಕೆಯಾಗಿದ್ದು ನಿಧಾನವಾಗಿ ಉಲ್ಬಣಗೊಳ್ಳುತ್ತಾ ಚಲನವಲನಕ್ಕೇ ಅಡ್ಡಿಯಾಗುತ್ತದೆ.

ಬರೆಯ ಕಾಲುನೋವು ಮಾತ್ರವಲ್ಲ, ಕೆಳಬೆನ್ನು, ಸೊಂಟ, ಭುಜ ಮತ್ತಿತರ ದೇಹದ ಭಾರ ಹೊರುವ ಯಾವುದೇ ಮೂಳೆಗಳಲ್ಲಿ ನೋವು ಇದ್ದರೆ ಇದಕ್ಕೆ ವೈದ್ಯರ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯ. ನಿತ್ಯದ ಚಲನವಲನಗಳ ಮೂಲಕ ನಮ್ಮ ದೇಹದ ಮೂಳೆಗಳು ನಿಧಾನವಾಗಿ ಸವೆಯುತ್ತಾ ಹೋಗುತ್ತವೆ. ಕಾಲು ನೋವು: ಸ್ಟೆಪ್ ಬೈ ಸ್ಟೆಪ್ ಟಿಪ್ಸ್, ಪ್ರಯತ್ನಿಸಿ ನೋಡಿ...

ನಡುವಯಸ್ಸು ದಾಟಿದ ಬಳಿಕ ಈ ಸವೆತ ಹೆಚ್ಚಾಗಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಒಂದು ವೇಳೆ ಕಾಲುನೋವು ತೀರಾ ಹೆಚ್ಚಾಗಿದ್ದು ಯಾವುದೋ ಒಂದು ಭಂಗಿಯಲ್ಲಿ ಮಡಚಿದಾಗ ಭಾರೀ ನೋವಾಗುತ್ತಿದ್ದರೆ ಈ ಭಾಗ ಅತಿ ಹೆಚ್ಚು ಘಾಸಿಗೊಳಗಾರುವುದನ್ನು ಸೂಚಿಸುತ್ತದೆ.

ಇದರಿಂದ ನಿತ್ಯದ ಕೆಲಸಗಳೆಲ್ಲಾ ಬಾಧೆಗೊಳಗಾಗುತ್ತವೆ. ಕೆಲಸ ಕಾರ್ಯಗಳೆಲ್ಲಾ ನಿಧಾನಗೊಳ್ಳುವುದು ಅಥವಾ ಇನ್ನೊಬ್ಬರ ಮೇಲೆ ಅವಲಂಬಿತವಾಗುವ ಅನಿವಾರ್ಯತೆಗೆ ಎದುರಾಗಬೇಕಾಗುತ್ತದೆ. ಒಂದು ವೇಳೆ ನಿಮಗೂ ಕಾಲುನೋವು ಇತ್ತೀಚೆಗೆ ಕಾಣಿಸಿಕೊಂಡಿದ್ದರೆ ಮುಂದೆ ಉಲ್ಬಣಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಲು ಕೆಳಗಿ ನೀಡಿರುವ ವಿವರಗಳು ನೆರವಾಗಲಿವೆ...

ಕಾಲಿನಲ್ಲಿ ಸೆಡೆತ

ಕಾಲಿನಲ್ಲಿ ಸೆಡೆತ

Leg Cramps ಎಂದು ಕರೆಯಲಾಗುವ ಈ ತೊಂದರೆ ಕಾಲಿನ ಮೀನಖಂಡದ ಸ್ನಾಯುಗಳ ಸೆಡೆತದ ಮೂಲಕ ಕಾಣಿಸಿಕೊಳ್ಳುತ್ತದೆ. ಈ ತೊಂದರೆ ದೇಹದಲ್ಲಿ ನೀರಿನ ಕೊರತೆಯಿಂದ ಸ್ನಾಯುಗಳು ಶಿಥಿಲವಾಗುತ್ತದೆ. ಇದಕ್ಕಾಗಿ ಸಾಕಷ್ಟು ದ್ರವಾಹಾರ ಸೇವಿಸುವ ಮೂಲಕ ಹಾಗೂ ಸೂಕ್ತವಾದ ಸೆಳೆತದ ವ್ಯಾಯಾಮದಿಂದ ಈ ತೊಂದರೆಯನ್ನು ನಿವಾರಿಸಬಹುದು.

ಮೊಣಕಾಲ ಗಂಟಿನಲ್ಲಿ ನೋವು

ಮೊಣಕಾಲ ಗಂಟಿನಲ್ಲಿ ನೋವು

ನಡುವಯಸ್ಸು ದಾಟಿದ ಬಳಿಕ ಮೊಣಕಾಲ ಗಂಟಿನಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಏಕೆಂದರೆ ನಿತ್ಯದ ಚಲನೆಯ ಕಾರಣದಿಂದ ಈ ಗಂಟು ಅತಿ ಹೆಚ್ಚಾಗಿ ಸವೆಯುತ್ತದೆ. ಒಂದು ವೇಳೆ ಇಲ್ಲಿ ನೋವು ಬಂದರೆ ಖಂಡಿತಾ ಅಲಕ್ಷ್ಯ ಮಾಡಬಾರದು. ಈ ನೋವು ಕಾಲನ್ನು ಮಡಚಿದಾಗ ಯಾವುದೋ ಒಂದು ಹಂತದಲ್ಲಿ ಅತಿ ಹೆಚ್ಚಾಗುವ ಕಾರಣ ಹೆಚ್ಚಿನವರು ಆ ಹಂತಕ್ಕೆ ಮಡಚದೇ ನೋವಿನಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಸಲ್ಲದು, ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಇದು ಸಂಧಿವಾತ ಅಥವಾ arthritis ಗೆ ಬದಲಾಗಲು ಹೆಚ್ಚು ಸಮಯ ಬೇಕಾಗಿಲ್ಲ.ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ಹಿಂಗಾಲ ನೋವು

ಹಿಂಗಾಲ ನೋವು

Sciatica ಎಂದು ಕರೆಯಲಾಗುವ ಈ ನೋವು ಸತತವಾಗಿ ನಿಂತಿರುವ ಮೂಲಕ ಕಾಲಿನ ನರಕ್ಕೆ (sciatic nerve) ಹೆಚ್ಚಿನ ಸೆಳೆತ ನೀಡುವ ಮೂಲಕ ಬರುತ್ತದೆ. ಈ ನೋವನ್ನೂ ಅಲಕ್ಷಿಸಿದರೆ ನೋವು ತೀವ್ರಗೊಳ್ಳುವ ಆತಂಕವಿದೆ.

ಹಿಮ್ಮಡಿಯ ನೋವು

ಹಿಮ್ಮಡಿಯ ನೋವು

ಹಿಂದೆಂದೋ ಹಿಮ್ಮಡಿಯ ಮೇಲೆ ಭಾರ ಬೀಳುವಂತೆ ಬಿದ್ದಿದ್ದರೆ ಅಥವಾ ಅತಿ ಹೆಚ್ಚಿನ ಭಾರವನ್ನು ಹೊತ್ತಿದ್ದರೆ ನಡುವಯಸ್ಸು ದಾಟಿದ ಬಳಿಕ ಹಿಮ್ಮಡಿಯಲ್ಲಿ ಭಾರೀ ನೋವು (Heel Achilles) ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ನೋವನ್ನು ಖಂಡಿತಾ ಅಲಕ್ಷಿಸಬಾರದು.ಆರೋಗ್ಯಕಾರಿ ಟಿಪ್ಸ್: ಹಿಮ್ಮಡಿ ನೋವೇ? ಇನ್ನು ಚಿಂತೆ ಬಿಡಿ!

ಕಾಲುಗಳ ಸೆಡೆತ

ಕಾಲುಗಳ ಸೆಡೆತ

ಕಾಲುಗಂಟುಗಳಲ್ಲಿ ಸೆಡೆತದ ಕಾರಣ ಕಾಲುಗಳನ್ನು ಮಡಚಲು ಕಷ್ಟವಾಗುವುದು ಅಥವಾ ಮಡಚುವಾಗ ನೋವಾಗುವುದು ಸಂಧಿವಾತದ ಪ್ರಾರಂಭಿಕ ಲಕ್ಷಣಗಳಾಗಿವೆ. ತಕ್ಷಣವೇ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆಯುವುದು ಅನಿವಾರ್ಯ.

ವಿಶೇಷ ಮಾಹಿತಿ

ವಿಶೇಷ ಮಾಹಿತಿ

ಶರೀರದ ಯಾವುದೇ ಭಾಗಗಳಂತೆ ಮೂಳೆಗಳಿಗೂ ಉತ್ತಮ ವ್ಯಾಯಾಮ, ಸಂತುಲಿತ ಆಹಾರ ಹಾಗೂ ಆರೋಗ್ಯಕರ ಜೀವನಕ್ರಮ ಅಗತ್ಯವಾಗಿದ್ದು ಇದರಿಂದ ಉತ್ತಮ ಆರೋಗ್ಯವನ್ನು ಬಹುಕಾಲದವರೆಗೆ ಉಳಿಸಿಕೊಳ್ಳಬಹುದು. ದೇಹದ ಮೂಳೆಗಳ ಸಾಂದ್ರತೆ ಹೆಚ್ಚಿಸಲು ಸರಳ ಸೂತ್ರ

English summary

These Types Of Leg Pain, They Are Dangerous!

Have you been experiencing constant leg pain, lately? If yes, then you must know that there are certain types of leg pain that must not be ignored, if you want to avoid further complications. Now, body pain, in any part of the body, may not be considered as a serious issue, unless it is excruciating. Many a times, body pain, especially leg and back pain, can be rather common, due to the daily wear and tear of muscle tissues
X
Desktop Bottom Promotion