For Quick Alerts
ALLOW NOTIFICATIONS  
For Daily Alerts

ವಯಸ್ಸಾದವರಲ್ಲಿ ಕಂಡುಬರುವ ಹಿಮ್ಮಡಿ ನೋವಿಗೆ ನೈಸರ್ಗಿಕ ಪರಿಹಾರ

By Hemanth
|

ಮನುಷ್ಯನಿಗೆ ವಯಸ್ಸಾಗುತ್ತಾ ಇರುವಂತೆ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ಭಾದಿಸಲು ಆರಂಭವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಗಂಟು ನೋವು, ಕಾಲು ನೋವು, ಬೆನ್ನು ನೋವು ಇತ್ಯಾದಿ ಪ್ರಮುಖ ಸಮಸ್ಯೆಯಾಗಿರುತ್ತದೆ. ಆದರೆ ಇವುಗಳ ಬಗ್ಗೆ ಗಮನಹರಿಸದೆ ಕಡೆಗಣಿಸಿದರೆ ಅದರಿಂದ ದೊಡ್ಡ ಸಮಸ್ಯೆಯೇ ಎದುರಾಗಬಹುದು. ಈ ಬಗೆಯ ಕಾಲುನೋವು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ

ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಲ್ಲಿ ಹೆಚ್ಚಾಗಿ ಹಿಮ್ಮಡಿ ನೋವಿನ ಸಮಸ್ಯೆ ಕಾಣಿಸುತ್ತಾ ಇರುತ್ತದೆ. ಈ ನೋವು ತುಂಬಾ ಗಂಭೀರವಾಗಿರುತ್ತದೆ. ಇದಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಾ ಇರಬೇಕಾಗುತ್ತದೆ. ಹಿಮ್ಮಡಿ ನೋವನ್ನು ತುಂಬಾ ಸುಲಭವಾಗಿ ನೈಸರ್ಗಿಕ ವಿಧಾನದಿಂದ ಗುಣಪಡಿಸುವುದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಆರೋಗ್ಯಕಾರಿ ಟಿಪ್ಸ್: ಹಿಮ್ಮಡಿ ನೋವೇ? ಇನ್ನು ಚಿಂತೆ ಬಿಡಿ!

ವಯೋವೃದ್ಧರಲ್ಲಿ ಕಾಣಿಸಿಕೊಳ್ಳುವ ನೋವು ಯಾವ ರೀತಿಯಿಂದ ಬರುತ್ತದೆ ಎಂದು ತಿಳಿದುಕೊಂಡರೆ ಅದನ್ನು ಮೊದಲೇ ತಡೆಯಬಹುದು. ವಯಸ್ಸಾಗುತ್ತಾ ಇರುವಂತೆ ಹಿಮ್ಮಡಿಯು ಚಪ್ಪಟೆ ಮತ್ತು ಅಗಲವಾಗುತ್ತಾ ಹೋಗುತ್ತದೆ. ಇದರಿಂದಾಗಿ ಒತ್ತಡ ಹೆಚ್ಚಾಗಿ ಹಿಮ್ಮಡಿಯ ಎಲುಬುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ನೋವು ಕಾಣಿಸಿಕೊಳ್ಳುತ್ತದೆ. ವಯಸ್ಸಾಗುತ್ತಾ ಇರುವಂತೆ ತಿನ್ನುವ ಆಹಾರ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನಹರಿಸಬೇಕು....

ಮಧ್ಯಮ ಗಾತ್ರದ ಶುಂಠಿ

ಮಧ್ಯಮ ಗಾತ್ರದ ಶುಂಠಿ

ಒಂದು ಮಧ್ಯಮ ಗಾತ್ರದ ಶುಂಠಿ ತೆಗೆದುಕೊಂಡು ಅದನ್ನು ತುಂಡು ಮಾಡಿಕೊಳ್ಳಿ.

ಎರಡು ಕಪ್ ನೀರು

ಎರಡು ಕಪ್ ನೀರು

ಇನ್ನು ಎರಡು ಕಪ್ ನೀರು ತೆಗೆದುಕೊಂಡು ಅದನ್ನು ಕುದಿಸಿ.

ಕುದಿಯುತ್ತಿರುವ ನೀರಿಗೆ ಶುಂಠಿಯನ್ನು ಹಾಕಿ

ಕುದಿಯುತ್ತಿರುವ ನೀರಿಗೆ ಶುಂಠಿಯನ್ನು ಹಾಕಿ

ಕುದಿಯುತ್ತಿರುವ ನೀರಿಗೆ ಶುಂಠಿಯನ್ನು ಹಾಕಿ ಮತ್ತು 5-7 ನಿಮಿಷ ತನಕ ಕುದಿಯಲು ಬಿಡಿ.

ಕೆಲವು ಹನಿ ಲಿಂಬೆ ರಸ ಸೇರಿಸಿ

ಕೆಲವು ಹನಿ ಲಿಂಬೆ ರಸ ಸೇರಿಸಿ

ಇದಕ್ಕೆ ಕೆಲವು ಹನಿ ಲಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ(ಅಗತ್ಯವಿದ್ದರೆ) ಸೇರಿಸಿಕೊಳ್ಳಿ.

ದಿನದಲ್ಲಿ 3-4 ಸಲ ಈ ಶುಂಠಿ ಚಹಾವನ್ನು ಕುಡಿಯಿರಿ

ದಿನದಲ್ಲಿ 3-4 ಸಲ ಈ ಶುಂಠಿ ಚಹಾವನ್ನು ಕುಡಿಯಿರಿ

ದಿನದಲ್ಲಿ 3-4 ಸಲ ಈ ಶುಂಠಿ ಚಹಾವನ್ನು ಕುಡಿಯಿರಿ. ಹಸಿ ಶುಂಠಿಯನ್ನು ಅಡುಗೆಗೂ ಬಳಸಬಹುದು. ಶುಂಠಿಯ ಎಣ್ಣೆಯಿಂದ ನೋವಿರುವ ಹಿಮ್ಮಡಿಗೆ ದಿನದಲ್ಲಿ 1-2 ಸಲ ಮಸಾಜ್ ಮಾಡಿದರೆ ಒಳ್ಳೆಯದು.

English summary

Natural Remedy Helps The Elderly To Get Rid Of Heel Pain Quickly

One of the most common health problems faced by the elderly is heel pain. The pain varies; a few experience slight pain while for others the pain can be excruciating. So if you fall in this group then do not panic. There are certain natural home remedies that help in getting rid of heel pain effectively. Today in this article we will be explaining about one of the best natural remedies for heel pain.
X
Desktop Bottom Promotion