For Quick Alerts
ALLOW NOTIFICATIONS  
For Daily Alerts

ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ಸಂಧಿವಾತ ವಯಸ್ಸಾಗುತ್ತಿರುವ ಪುರುಷರಲ್ಲಿ ಮತ್ತು ಮುಟ್ಟು ನಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗುವುದೇ ಈ ಸಮಸ್ಯೆಗೆ ಮೂಲ ಕಾರಣ.. ಚಿಂತಿಸದಿರಿ, ಇಲ್ಲಿದೆ ನೋಡಿ ಸಿಂಪಲ್ ಜ್ಯೂಸ್

By Arshad
|

ಸಂಧಿವಾತ, ಮೂಳೆಸಂದುಗಳಲ್ಲಿ ನೋವಾಗುವುದು ನಿತ್ಯದ ಕೆಲಸಗಳಿಗೆಲ್ಲಾ ಅಡ್ಡಿಯಾಗುವ ತೊಂದರೆಯಾಗಿದೆ. ವಿಶೇಷವಾಗಿ ಪಾದ, ಮಂಡಿ, ಕೈಬೆರಳುಗಳ ಸಂದುಗಳ ನೋವು ಕುಳಿತುಕೊಳ್ಳಲು, ನಿಲ್ಲಲು, ನಿತ್ಯದ ಕೆಲಸಕಾರ್ಯಗಳಿಗೆಲ್ಲಾ ಅಡ್ಡಿಯಾಗುತ್ತದೆ. ಸಂಧಿವಾತ, ಉರಿಯೂತ ನಿವಾರಿಸುವ ಪವರ್ ಫುಲ್ ಜ್ಯೂಸ್

ಈ ನೋವಿನ ತೀವ್ರತೆ ಪ್ರತಿಯೊಬ್ಬರಲ್ಲಿಯೂ ಬೇರೆಬೇರೆಯಾಗಿರುತ್ತದೆ. ಕೆಲವರಿಗೆ ಹೆಚ್ಚು ಮಡಚಿದರೆ ಮಾತ್ರ ನೋವು ಬಂದರೆ ಕೆಲವರಿಗೆ ಅಲುಗಿಸಿದರೂ ಅಸಾಧ್ಯವಾದ ನೋವಾಗುತ್ತದೆ. ಸಂಧಿವಾತಕ್ಕೆ ಕೆಲ ಪ್ರಮುಖ ಕಾರಣಗಳು

ಒಂದು ವೇಳೆ ಈ ಸಂಧಿನೋವಿನಿಂದ ನೀವು ಬಳಲುತ್ತಿದ್ದರೆ ನಿಸರ್ಗ ನೀಡಿರುವ ಈ ವಿಧಾನದಿಂದ ನಿಮ್ಮ ನೋವು ಖಂಡಿತಾ ಕಡಿಮೆಯಾಗುತ್ತದೆ. ಈ ವಿಧಾನ ಒಂದು ಪೇಯವನ್ನು ಮನೆಯಲ್ಲಿಯೇ ಸಿದ್ಧಪಡಿಸಿ ಸೇವಿಸುವುದಾಗಿದ್ದು ಇದಕ್ಕಾಗಿ ಒಂದು ಬೀಟ್ರೂಟ್, ಒಂದು ಎಳೆ ಸೌತೆಕಾಯಿ ಮತ್ತು ಒಂದು ಕ್ಯಾರೆಟ್ ಸಾಕು. ಬನ್ನಿ, ಈ ವಿಧಾನವನ್ನು ಹೇಗೆ ಅನುಸರಿಸುವುದು ಎಂಬುದನ್ನು ನೋಡೋಣ:

ಬೀಟ್ರೂಟ್

ಬೀಟ್ರೂಟ್

ಮಧ್ಯಮ ಗಾತ್ರದ ಬೀಟ್ರೂಟ್ ಒಂದನ್ನು ಸ್ವಚ್ಛಗೊಳಿಸಿ ಸಿಪ್ಪೆ ಸುಲಿದು ಚಿಕ್ಕದಾದ ತುಂಡುಗಳನ್ನಾಗಿಸಿ. ಗೌರವರ್ಣದ ತ್ವಚೆಗಾಗಿ ಪ್ರಯತ್ನಿಸಿ- ಬೀಟ್‌ರೂಟ್ ಜ್ಯೂಸ್

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯನ್ನೂ ಸಿಪ್ಪೆ ಸುಲಿದು ಬೀಜಗಳಿರುವಂತೆಯೇ ಚಿಕ್ಕದಾದ ತುಂಡುಗಳನ್ನಾಗಿಸಿ.... ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಕ್ಯಾರೆಟ್

ಕ್ಯಾರೆಟ್

ಇದೇ ರೀತಿ ಕ್ಯಾರೆಟ್ಟನ್ನೂ ಸಿಪ್ಪೆ ಸುಲಿದು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.

ನುಣ್ಣನೆ ಕಡೆಯಿರಿ

ನುಣ್ಣನೆ ಕಡೆಯಿರಿ

ಈ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ನುಣ್ಣನೆ ಕಡೆಯಿರಿ. ನಿಮಗೆ ಸೂಕ್ತವೆನಿಸಿದಷ್ಟು ಉಗುರುಬೆಚ್ಚನೆಯ ನೀರು ಸೇರಿಸಿ.

ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ

ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ

ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕಡಿಮೆಯಾಗಿರುವುದನ್ನು ನೋಡಿ ಚಕಿತಗೊಳ್ಳುವಿರಿ.

English summary

Get Rid Of Gout Pain Instantly With This One Natural Juice!

Severe pain, especially at the nodes of your feet or even the knees and joints, is a major symptom of gout. The intensity of the pain can vary from one person to the other. Few might have slight pain but for a few, it gets excruciating. So, if you are looking out for a way to treat such painful gout, then today we will be explaining about one of the best natural ways to get rid of gout pain.
X
Desktop Bottom Promotion