For Quick Alerts
ALLOW NOTIFICATIONS  
For Daily Alerts

ವಯಸ್ಸಾದವರಲ್ಲಿ ಮೊಣಕಾಲು ನೋವನ್ನು ಕಡಿಮೆ ಮಾಡಲು ಆಯುರ್ವೇದ ಚಿಕಿತ್ಸೆ

ದೈನಂದಿನ ಚಟುವಟಿಕೆಗಳು ಕೂಡ ಮಂಡಿನೋವಿನಿಂದಾಗಿ ಅಸಾಧ್ಯವಾಗುತ್ತದೆ. ಕೆಲವೊಂದು ಸಲ ಮಂಡಿನೋವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಾಗುತ್ತದೆ. ಆದರೆ ಆಯುರ್ವೇದದ ಮೂಲಕ ಮಂಡಿನೋವನ್ನು ಕಡಿಮೆ ಮಾಡಬಹುದು.

By Hemanth
|

ಹುಟ್ಟಿದ ಪ್ರತಿಯೊಬ್ಬನಿಗೂ ವಯಸ್ಸಾಗಲೇ ಬೇಕು. ಇದು ಪ್ರಕೃತಿ ನಿಯಮ. ಮಾನವನಿಂದ ಹಿಡಿದು ಮರಗಿಡಗಳ ತನಕ ಪ್ರತಿಯೊಂದಕ್ಕೂ ವಯಸ್ಸಾಗುತ್ತಾ ಹೋಗುತ್ತದೆ. ಆದರೆ ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಹಲವಾರು ರೀತಿಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ದೇಹದಲ್ಲಿ ಉಂಟಾಗುವ ಬದಲಾವಣೆಗಳೇ ಇದಕ್ಕೆ ಕಾರಣವಾಗಿದೆ. ಕೀಲುಗಳ ನೋವು: ಶೀಘ್ರ ಪರಿಹಾರಕ್ಕೆ ಸುಲಭ ಉಪಾಯಗಳು

Knee pain

ಸ್ನಾಯುಗಳು ಮತ್ತು ಅಂಗಾಂಶಗಳು ದುರ್ಬಲವಾಗುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಮಂಡಿನೋವು ವಯಸ್ಸಾಗುವ ಸಮಯದಲ್ಲಿ ಜೀವನವನ್ನು ದುಸ್ತರ ಮಾಡಿಬಿಡುತ್ತದೆ. ದೈನಂದಿನ ಚಟುವಟಿಕೆಗಳು ಕೂಡ ಮಂಡಿನೋವಿನಿಂದಾಗಿ ಅಸಾಧ್ಯವಾಗುತ್ತದೆ. ಕೆಲವೊಂದು ಸಲ ಮಂಡಿನೋವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಾಗುತ್ತದೆ. ಆದರೆ ಆಯುರ್ವೇದದ ಮೂಲಕ ಮಂಡಿನೋವನ್ನು ಕಡಿಮೆ ಮಾಡಬಹುದು. ಆ ಆಯುರ್ವೇದದ ಔಷಧಿ ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಹಿಂಡಿ ಹಿಪ್ಪೆ ಮಾಡುವ ಮೊಣಕಾಲು ನೋವಿಗೆ ತ್ವರಿತ ಪರಿಹಾರ...

ಔಷಧಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
*ಅರಿಶಿನ 2 ಚಮಚ
*ಆ್ಯಪಲ್ ಸೀಡರ್ ವಿನೇಗರ್ 2 ಚಮಚ

ಈ ಔಷಧಿಯನ್ನು ಪ್ರಯೋಗಿಸುವಾಗ ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು ಮತ್ತು ಪ್ರತಿದಿನವೂ ಮಂಡಿಗೆ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು.

ಅರಿಶಿನದಲ್ಲಿರುವ ಕುರ್ಕುಮಿನ್ ನಲ್ಲಿ ಉರಿಯೂತ ಶಮನಕಾರಿ ಗುಣಗಳು ಅಡಗಿವೆ. ಇದು ಊತವನ್ನು ಕಡಿಮೆ ಮಾಡಿಕೊಂಡು ನೋವನ್ನು ತಗ್ಗಿಸುವುದು. ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಆ್ಯಪಲ್ ಸೀಡರ್ ವಿನೇಗರ್‌ನಲ್ಲಿ ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದು ಗಂಟಿನ ತೇವಾಂಶವನ್ನು ಹೆಚ್ಚು ಮಾಡಿ ಗಂಟು ನೋವನ್ನು ಕಡಿಮೆ ಮಾಡುವುದು.

ತಯಾರಿಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಕಪ್ ಗೆ ಹಾಕಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈಗ ಔಷಧಿ ಸೇವಿಸಲು ತಯಾರಾಗಿದೆ.
*ರಾತ್ರಿ ಊಟದ ಬಳಿಕ ಎರಡು ತಿಂಗಳ ಕಾಲ ಇದನ್ನು ಸೇವಿಸಿ ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು

English summary

Ayurvedic Remedy To Reduce Knee Pain In The Elderly

Knee pain is extremely common in the elderly, because, the knee is a joint and the joint muscles are the ones that weaken relatively quickly, as they go to constant wear and tear. Knee pain, depending on the intensity, can make a person's life hell, as it curbs movement! In extremely cases, when knee pain is making a person literally bed ridden, even surgery may be required. So, here is an ayurvedic remedy that can help reduce knee pain in the elderly.
X
Desktop Bottom Promotion