For Quick Alerts
ALLOW NOTIFICATIONS  
For Daily Alerts

ಅಸ್ತಮಾ ರೋಗವನ್ನು ಸೋಲಿಸುವ ಯೋಗಾಸನಗಳು

By manu
|

ನದಿಗಿಳಿದವನಿಗೆ ಮಾತ್ರ ಚಳಿ ಗೊತ್ತು. ಹೊರಗಡೆ ನಿಂತು ನೋಡುವವನಿಗಲ್ಲ ಎನ್ನುವ ಮಾತಿದೆ. ಇದು ನಿಜ ಕೂಡ. ಯಾಕೆಂದರೆ ಯಾವುದೇ ರೋಗವಾದರೂ ಸರಿ. ಅದನ್ನು ಅನುಭವಿಸಿದವರಿಗೆ ಮಾತ್ರ ಅದರ ಸಂಕಟಗಳು ತಿಳಿದಿರುತ್ತದೆ. ಬೇರೆಯವರಿಗೆ ಅದೆಲ್ಲಾ ಅರ್ಥವಾಗುವುದು ಕಷ್ಟ. ಇಂತಹ ರೋಗಗಳಲ್ಲಿ ಅಸ್ತಮಾ ಕೂಡ ಒಂದಾಗಿದೆ. ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

ಅಸ್ತಮಾ ಇರುವವರಿಗೆ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಕೆಲವೊಂದು ಸಂದರ್ಭದಲ್ಲಿ ಇದರಿಂದ ತುಂಬಾ ಅಪಾಯ ಎದುರಿಸಬೇಕಾಗುತ್ತದೆ. ಆದರೆ ಅಸ್ತಮಾವನ್ನು ಯೋಗದ ಮೂಲಕ ಪರಿಹರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ಹೇಗೆ ಎಂದು ಓದುತ್ತಾ ತಿಳಿಯಿರಿ. ಹೆಚ್ಚಿನ ಅಸ್ತಮಾ ರೋಗಿಗಳು ಇನ್ ಹೇಲರ್ ಉಪಯೋಗಿಸುತ್ತಾರೆ. ಆದರೆ ಯೋಗ ಮಾಡುವುದರಿಂದ ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಯೋಗದ ಕೆಲವೊಂದು ಆಸನಗಳಿಂದ ಅಸ್ತಮಾವನ್ನುಹೇಗೆ ನಿವಾರಿಸಬಹುದು ಎಂದು ತಿಳಿದುಕೊಳ್ಳುವ....

ಪ್ರಾಣಾಯಾಮ

ಪ್ರಾಣಾಯಾಮ

ಇದು ತುಂಬಾ ಸರಳ ಆಸನವಾಗಿದೆ. ಎರಡು ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಿ. ತಲೆ, ಕುತ್ತಿಗೆ ಮತ್ತು ಬೆನ್ನು ತುಂಬಾ ನೇರವಾಗಿರಲಿ. ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಾಟದ ಕಡೆ ಗಮನಹರಿಸಿ. ಹೊಟ್ಟೆಯನ್ನು ಬಳಸಿಕೊಂಡು ಸತತವಾಗಿ ಉಸಿರಾಡಿ. 2-3 ನಿಮಿಷ ಹೀಗೆ ಮಾಡಿ ಬಳಿಕ ವಿಶ್ರಾಂತಿ ಪಡೆಯಿರಿ. ಇದನ್ನೇ ಪುನಾರವರ್ತಿಸಿ.... ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

ಶವಾಸನ

ಶವಾಸನ

ನೆಲದ ಮೇಲೆ ಬೆನ್ನು ಬಳಸಿ ನೇರವಾಗಿ ಮಲಗಿ, ಕೈಗಳು ನೇರವಾಗಿರಲಿ. ಅಂಗೈ ನೆಲವನ್ನು ಮುಟ್ಟಲಿ. ಪಾದಗಳು ಆಕಾಶವನ್ನು ನೋಡುತ್ತಿರಲಿ. ದೇಹವನ್ನು ಹಗುರವಾಗಿಸಿ ಉಸಿರಾಟದ ಕಡೆ ಗಮನಹರಿಸಿ. ನಿಮ್ಮ ಕಡೆ ಗಮನ ಕೇಂದ್ರೀಕರಿಸಿ ಮತ್ತು ದೇಹದ ಎಲ್ಲಾ ಭಾಗಗಳು ಆರಾಮವಾಗಿರಲಿ. 5-10 ನಿಮಿಷ ಕಾಲ ಈ ಆಸನವನ್ನು ಮಾಡಿ. ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

ಶವಾಸನ

ಶವಾಸನ

ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಿ. ಯಾವುದೇ ಕಾರಣದಿಂದ ನಿಮಗೆ ಕಾಲು ಮಡಚಲು ಸಾಧ್ಯವಾಗುತ್ತಿಲ್ಲವೆಂದಾದರೆ ಆಗ ಟವೆಲ್ ಅನ್ನು ಕಾಲಿನ ಅಡಿಯಲ್ಲಿ ಇರಿಸಿಕೊಳ್ಳಿ. ಬಲದ ಕೈಯನ್ನು ಎದೆಯ ಮೇಲೆ ಮತ್ತು ಎಡದ ಕೈಯನ್ನು ಹೊಟ್ಟೆಯ ಮೇಲಿಡಿ.ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಿಧಾನವಾಗಿ ಉಸಿರಾಡಿ ಮತ್ತು ಉಸಿರಾಟದ ಕಡೆ ಗಮನಹರಿಸಿ. ಐದು ನಿಮಿಷ ಈ ಭಂಗಿಯಲ್ಲಿರಿ ಬಳಿಕ ಆರಾಮ ಮಾಡಿ. ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ'

ಪತಂಗ ಆಸನ

ಪತಂಗ ಆಸನ

ಪಾದಗಳು ಜತೆಯಾಗಿ ಇರುವಂತೆ ಮೊಣಕಾಲುಗಳು ಎದುರಿಗೆ ಇರುವಂತೆ ಕುಳಿತುಕೊಳ್ಳಿ. ಇದು ಪತಂಗದ ರೆಕ್ಕೆಯಂತಿರಲಿ. ಹಿಂಗಾಲುಗಳನ್ನು ಕೈಯಿಂದ ಹಿಡಿದುಕೊಂಡು ಪಾದಗಳನ್ನು ಸೊಂಟದ ಕಡೆ ತನ್ನಿ. ಉಸಿರಾಟದ ಕಡೆ ಗಮನಹರಿಸಿ ದೇಹವನ್ನು ಮುಂದಕ್ಕೆ ಬಾಗಿಸಿ. ಇದೇ ಭಂಗಿಯಲ್ಲಿ ಹತ್ತರ ತನಕ ಎಣಿಕೆ ಮಾಡಿ.

ಸೇತುವೆ ಆಸನ

ಸೇತುವೆ ಆಸನ

ಬೆನ್ನನ್ನು ನೆಲಕ್ಕೆ ಮಾಡಿಕೊಂಡು ನೇರವಾಗಿ ಮಲಗಿ ಕೈಗಳು ದೇಹಕ್ಕೆ ಅಂಟಿಕೊಂಡಿರಲಿ. ಈಗ ಕಾಲುಗಳನ್ನು ಬಗ್ಗಿಸಿ ಪೃಷ್ಠದ ಹತ್ತಿರಕ್ಕೆ ತನ್ನಿ. ಪಾದಗಳು ಮೊಣಕಾಲಿನ ಅಡಿಯಲ್ಲಿರುತ್ತದೆ. ಬೆನ್ನಿನ ಕೆಲ ಭಾಗದೊಂದಿಗೆ ಪೃಷ್ಠವನ್ನು ಮೇಲಕ್ಕೆ ಎತ್ತಿ. ಕೈಗಳು ನೇರವಾಗಿರಲಿ ಮತ್ತು ಎದೆಯು ಅಗಲವಾಗಬೇಕು. 30 ಸೆಕೆಂಡಿನಿಂದ 1 ನಿಮಿಷ ತನಕ ಹಾಗೆ ಇರಲಿ. ಉಸಿರಾಟದ ಕಡೆ ಗಮನಹರಿಸಿ. ಮೊದಲಿನ ಸ್ಥಿತಿಗೆ ನಿಧಾನವಾಗಿ ಬನ್ನಿ. ಪೃಷ್ಠ ಮತ್ತು ಬೆನ್ನಿನ ಕಡೆ ಗಮನಹರಿಸಿ.... ರಕ್ತದೊತ್ತಡವನ್ನು ನಿಯಂತ್ರಿಸಲು ಅನುಸರಿಸಿ-'ಸೇತುಬಂಧಾಸನ'

English summary

Yoga Asanas That Provide Relief From Asthma

Asthma is one such painful problem which leaves a person to struggle for proper breathing and, in some cases, it can have dangerous consequences as well. Here we shall be discussing more on the Yoga asanas that the sufferers can perform in order to get rid of the pain, continue reading.
X
Desktop Bottom Promotion