For Quick Alerts
ALLOW NOTIFICATIONS  
For Daily Alerts

ಟೀ ಕಾಫಿಯ ಬದಲಿಗೆ, ಕ್ಯಾರೆಟ್-ಪಾಲಕ್ ಜ್ಯೂಸ್ ಕುಡಿಯಿರಿ

By Manu
|

ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಉತ್ತಮ ಎಂದು ಕೇಳಿದರೆ ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಮ್ಮ ಇಷ್ಟದ ಆಹಾರವನ್ನೇ ಸೂಚಿಸಬಹುದು. ಆದರೆ ಆಹಾರತಜ್ಞರ ಪ್ರಕಾರ ನಮ್ಮ ದೇಹಕ್ಕೆ ನಿಜಕ್ಕೂ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಕೆಲವೇ ಆಹಾರಗಳಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇವೆಲ್ಲವೂ ಇರುವ ವಿವಿಧ ಆಹಾರಗಳ ಸಂಗ್ರಹವಾದ 'ಸಮತೋಲನದ ಆಹಾರ'ವೇ ಶ್ರೇಷ್ಠ ಆಹಾರವಾಗಿದೆ. ಉತ್ತಮ ಆರೋಗ್ಯಕ್ಕೆ ಸಿಂಪಲ್‌ ಮನೆಮದ್ದು, ಎಂದಿಗೂ ನೆನಪಿರಲಿ

ಅಂದರೆ ನಮ್ಮ ದಿನದ ಆಹಾರದಲ್ಲಿ ಸಾಕಷ್ಟು ತರಕಾರಿ, ಧಾನ್ಯಗಳು, ಸುಲಭವಾಗಿ ಜೀರ್ಣವಾಗುವ ಮಾಂಸಾಹಾರ, ಪ್ರೋಟೀನು, ಮೊಟ್ಟೆ ಮತ್ತು ಇತರ ನೈಸರ್ಗಿಕ ಸಾಮಾಗ್ರಿಗಳಿರಬೇಕು. ಸಮತೋಲನದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸುತ್ತಾ ಬಂದರೆ ದೇಹಕ್ಕೆ ಅತ್ಯುತ್ತಮ ಪೋಷಣೆ ಲಭಿಸಿದಂತಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುವ ಮೂಲಕ ಯಾವುದೇ ರೋಗದಿಂದ ಮುಕ್ತವಾಗಿರುತ್ತದೆ. ಇದೇ ವಿಷಯವನ್ನು ಕನ್ನಡದಲ್ಲಿ "ಊಟ ಬಲ್ಲವನಿಗೆ ರೋಗವಿಲ್ಲ" ಎಂಬ ಗಾದೆಮಾತಿನ ರೂಪದಲ್ಲಿಯೂ ತಿಳಿಸಲಾಗಿದೆ.

What Happens To Your Body When You Drink Spinach With Carrot Juice?

ಈ ನಿಟ್ಟಿನಲ್ಲಿ ಕ್ಯಾರೆಟ್ ಹಾಗೂ ಪಾಲಕ್ ಒಂದು ಅದ್ಭುತ ಆಹಾರವಾಗಿದ್ದು ಸಮತೋಲನ ಆಹಾರಕ್ಕೆ ಬೇಕಾದ ಬಹಳಷ್ಟನ್ನು ನೀಡುತ್ತದೆ. ಇದರಿಂದ ಹಲವು ದೇಹದ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಇದಕ್ಕಾಗಿ ಒಂದು ಬಾರಿ ಸೇವಿಸಲು ಒಂದು ಕ್ಯಾರೆಟ್ ಮತ್ತು ಇದಕ್ಕೆ ಸರಿಸಮನಾದ ಪ್ರಮಾಣದ ಪಾಲಕ್ ಎಲೆಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಅಗತ್ಯವೆನಿಸಿದರೆ ಕೊಂಚವೇ ನೀರು ಸೇರಿಸಿ ಸೋಸದೇ ಹಾಗೇ ಕುಡಿದುಬಿಡಬೇಕು. ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

ಪ್ರತಿನಿತ್ಯ ಬೆಳಗ್ಗಿನ ಉಪಾಹಾರದ ಬಳಿಕ ಟೀ ಕಾಫಿಯ ಬದಲಿಗೆ ಈ ಅದ್ಭುತ ಜ್ಯೂಸ್ ಕುಡಿದರೆ ಇದರ ಗರಿಷ್ಠ ಉಪಯೋಗವನ್ನು ಪಡೆಯಬಹುದು. ಉಪಯೋಗಗಳೆಂದರೆ ಯಾವುವು? ಎಂಬ ನಿಮ್ಮ ಕುತೂಹಲವನ್ನು ಕೆಳಗಿನ ಮಾಹಿತಿ ಮೂಲಕ ವಿವರಿಸಲಾಗಿದೆ ಮುಂದೆ ಓದಿ...

ರಕ್ತಹೀನತೆಯಿಂದ ಕಾಪಾಡುತ್ತದೆ
ಈ ಜ್ಯೂಸ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣ ಮತ್ತು ವಿಟಮಿನ್ ಎ ಇರುವ ಕಾರಣ ಹೊಸ ಕೆಂಪುರಕ್ತಕಣಗಳು ಹುಟ್ಟಲು ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಲು ನೆರವಾಗುತ್ತದೆ. ರಕ್ತದಲ್ಲಿ ಕೆಂಪುರಕ್ತಕಣಗಳು ಹೆಚ್ಚಿದ್ದಾಗ ರಕ್ತದ ಕ್ಷಮತೆ ಹೆಚ್ಚುತ್ತದೆ. ಇದರಿಂದ ಪ್ರಥಮವಾಗಿ ರಕ್ತಹೀನತೆಯ ತೊಂದರೆ ಇಲ್ಲವಾದರೆ ಇದರ ಪರೋಕ್ಷ ಪರಿಣಾಮಗಳು ಹಲವಾರು ರೀತಿಯಿಂದ ದೇಹವನ್ನು ವಿವಿಧ ತೊಂದರೆಗಳಿಂದ ಕಾಪಾಡುತ್ತವೆ.

ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಈ ಜ್ಯೂಸ್ ನಲ್ಲಿ ಕ್ಯಾರೋಟಿನಾಯ್ಡ್ ಮತ್ತು ಫ್ಲೇವನಾಯ್ಡುಗಳೆಂಬ ಪೋಷಕಾಂಶಗಳಿದ್ದು ಇವು ದೇಹದಲ್ಲಿ ಯಾವುದೇ ಅಂಗ ಅಥವಾ ಅಂಗಾಂಶ ತನ್ನ ನಿಗದಿತ ಗಾತ್ರಕ್ಕಿಂತಲೂ ಹೆಚ್ಚಾಗಿ ಬೆಳೆಯದಂತೆ ತಡೆಯುತ್ತದೆ. ಇದರಿಂದ ಹಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.

ಜೀವಕೋಶಗಳ ಸವೆತ ತಡೆಯುತ್ತದೆ
ಕ್ಯಾರೆಟ್ ಮತ್ತು ಪಾಲಕ್ ಎರಡರಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದ್ದು ಜೀವಕೋಶಗಳ ಬೆಳವಣಿಗೆ ಮತ್ತು ಸತ್ತ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತವೆ. ಇದರಿಂದಾಗಿ ಚರ್ಮ ವಯಸ್ಸಿಗೂ ಮುನ್ನವೇ ಸಡಿಲವಾಗುವುದು, ವೃದ್ಧಾಪ್ಯದ ಚಿಹ್ನೆಗಳು ಚಿಕ್ಕವಯಸ್ಸಿಗೇ ಗೋಚರಿಸುವುದು ಮೊದಲಾದವು ಇಲ್ಲವಾಗುತ್ತವೆ. ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪಿನ ಪ್ರಯೋಜನಗಳೇನು?

ಮೂಳೆಗಳನ್ನೂ ದೃಢಗೊಳಿಸುತ್ತದೆ
ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ನಮ್ಮ ಮೂಳೆಗಳು ಇದನ್ನು ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ವಿಟಮಿನ್ ಕೆ ಇರುವ ಬೇರೆ ಮಾಧ್ಯಮ ಬೇಕು. ಆದ್ದರಿಂದ ಬರೆಯ ಹಾಲು ಕುಡಿಯುವ ಬದಲು ಕೊಂಚ ಜೇನು ಸೇರಿಸಿ ಕುಡಿಯುವುದೇ ಉತ್ತಮ.

ಈ ಜ್ಯೂಸ್ ನಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಕೆ ಇರುವ ಕಾರಣ ನಮ್ಮ ಆಹಾರದಲ್ಲಿ ಲಭ್ಯವಾದ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಸುಲಭವಾಗಿ ತುಂಡಾಗುವ ಸಂಭವ (osteoporosis) ಕಡಿಮೆಯಾಗುತ್ತದೆ. ಅಲ್ಲದೇ ಮೂಳೆಸಂದುಗಳಲ್ಲಿ ಸವೆತ ಕಡಿಮೆಯಾಗಿ ಸಂಧಿವಾತದ ಸಮಸ್ಯೆಯೂ ದೂರಾಗುತ್ತದೆ. ಆಗಾಗ ಕಾಡುವ ಮೂಳೆ ನೋವಿನಿಂದ ಮುಕ್ತಿ ಹೇಗೆ?
ಮೇಲೆ ತಿಳಿಸಿದ ಪ್ರಯೋಜನಗಳನ್ನು ತಿಳಿದ ಬಳಿಕವಾದರೂ ನಿತ್ಯವೂ ಈ ಅದ್ಭುತ ಜ್ಯೂಸ್ ಕುಡಿಯಲು ಮನಸ್ಸು ಮಾಡಿದರೆ ಸಾಕು. ಪ್ರಥಮ ದಿನದಿಂದಲೇ ನಿಮಗೆ ಇಷ್ಟವಾಗುವ ಈ ಜ್ಯೂಸ್ ನಿತ್ಯವೂ ಕುಡಿಯಲು ನೀವೇ ಹಾತೊರೆಯುವಂತಾಗುತ್ತದೆ.

English summary

What Happens To Your Body When You Drink Spinach With Carrot Juice?

Did you know that by including a healthy amount of vegetables, fruits, lean meat, eggs and other such natural ingredients, in our diet, we can ward off many disease? Yes, it is possible, as these natural ingredients are highly rich in various nutrients and minerals that nourish our body and keep our immune systems strong. Carrots and spinach too come with amazing health benefits that can keep many disorders at bay. Have a look at some of the health benefits of having the carrot and spinach drink regularly!
X
Desktop Bottom Promotion