ಮ್ಯಾಜಿಕ್ ಟ್ರಿಕ್ಸ್! ಹೀಗೂ ದೇಹದ ತೂಕ ಇಳಿಸಿಕೊಳ್ಳಬಹುದು!

ತೂಕ ಇಳಿಸಲು ಅಕ್ಯೂಪ್ರೆಷರ್ ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ ನೀವು ಜಿಮ್‌ಗೆ ಹೋಗಬೇಕೆಂದಿಲ್ಲ ಮತ್ತು ಯಾವುದೇ ಔಷಧಿಯನ್ನು ಸೇವಿಸಬೇಕೆಂದಿಲ್ಲ.... ಅಚ್ಚರಿಯಾಯಿತೇ? ಹಾಗಾದರೆ ಮುಂದೆ ಓದಿ...

By: manu
Subscribe to Boldsky

ತೂಕ ಹೆಚ್ಚಿಸುವುದಕ್ಕಿಂತ ತೂಕ ಕಳೆದುಕೊಳ್ಳುವುದು ತುಂಬಾ ಕಠಿಣ ಕೆಲಸವೆಂದು ಪ್ರತಿಯೊಬ್ಬರು ಹೇಳುತ್ತಾರೆ. ಯಾಕೆಂದರೆ ತೂಕ ಹೆಚ್ಚಿಸಿಕೊಂಡಿರುವವರು ತೂಕ ಕಡಿಮೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ತೂಕ ಕಡಿಮೆ ಮಾಡಲು ಕೆಲವರು ಆಹಾರ ಪಥ್ಯ, ವ್ಯಾಯಾಮ ಮಾಡುತ್ತಾರೆ. ಕೆಲವರು ಜಿಮ್‌ಗೆ ಹೋಗುತ್ತಾರೆ. ಇನ್ನು ಕೆಲವರು ಅತಿಯಾದ ಉಪವಾಸ ಮಾಡಿ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.  ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಇಂತಹ ಸಂದರ್ಭಗಳಲ್ಲಿ ನೀವು ನೈಸರ್ಗಿಕ ಚಿಕಿತ್ಸೆ ಅನುಸರಿಸಿಕೊಂಡು ಹೋಗಬೇಕು. ತೂಕ ಇಳಿಸಲು ಆಕ್ಯುಪ್ರೆಷರ್ ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ ನೀವು ಜಿಮ್ ಗೆ ಹೋಗಬೇಕೆಂದಿಲ್ಲ ಮತ್ತು ಯಾವುದೇ ಔಷಧಿಯನ್ನು ಸೇವಿಸಬೇಕೆಂದಿಲ್ಲ.  ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ

ಬೆನ್ನು ನೋವು, ವಾಕರಿಕೆ, ತಲೆನೋವು ಮತ್ತು ಕುತ್ತಿಗೆ ನೋವಿಗೆ ಆಕ್ಯುಪ್ರೆಷರ್ ದಿವ್ಯೌಷಧಿ ಎಂದು ನೀವು ತಿಳಿದುಕೊಂಡಿರಬಹುದು. ಆದರೆ ತೂಕ ಕಳೆದುಕೊಳ್ಳಲು ಆಕ್ಯುಪ್ರೆಷರ್ ಅನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ಈ ಲೇಖನದಿಂದ ತಿಳಿಯಿರಿ....  


ತೂಕ ಇಳಿಕೆಗೆ ಆಕ್ಯುಪ್ರೆಷರ್‌

ದೇಹದಲ್ಲಿ ಒಂದು ಬಿಂದುವನ್ನು ಕೇಂದ್ರವಾಗಿರಿಸಿಕೊಂಡು ಬೆರಳು ಅಥವಾ ಸೂಜಿಯಂತಹ ಯಾವುದೇ ವಸ್ತುವಿನಿಂದ ಒತ್ತಡ ಹಾಕಿದರೆ ಆ ಜಾಗವು ಉತ್ತೇಜನಗೊಳ್ಳುತ್ತದೆ. ಈ ಬಿಂದುವು ಉತ್ತೇಜಗೊಂಡಾಗ ದೇಹದಲ್ಲಿ ರಾಸಾಯನಿಕ ಉತ್ಪತ್ತಿಯಾಗಿ ಹಲವಾರು ರೋಗಗಳನ್ನು ಶಮನಗೊಳಿಸಲು ಇದು ನೆರವಾಗುವುದು. ಆಕ್ಯುಪ್ರೆಷರ್‌ನ ಮತ್ತೊಂದು ಉಪಯೋಗವೆಂದರೆ ಇದರಿಂದ ಯಾವುದೇ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ. ಇದು ತೂಕ ಕಳೆದುಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ.

ತೂಕ ಕಳೆದುಕೊಳ್ಳಲು ಆಕ್ಯುಪ್ರೆಷರ್ ಹೇಗೆ ನೆರವಾಗುತ್ತದೆ?

ತೂಕ ಕಳೆದುಕೊಳ್ಳಬೇಕೆಂದು ಬಯಸುತ್ತಾ ಇರುವವರು ನಮ್ಮ ಕಿವಿಯ ಬದಿಯಲ್ಲಿ ಇರುವಂತಹ ಬಿಂದುಗಳ ಮೇಲೆ ಒತ್ತಡ ಹೇರಬೇಕು. ಕಿವಿಯ ಬದಿಯಲ್ಲಿ ಇರುವಂತಹ ಮೂರು ಬಿಂದುಗಳು ಆಗಾಗ ಹಸಿವಾಗುವುದನ್ನು ತಡೆಯುತ್ತದೆ.

ಸ್ಟೆಪ್ #1

ತೂಕ ಕಳೆದುಕೊಳ್ಳಲು ಮಾಡಬೇಕಾದ ಮೊದಲ ವಿಧಾನವೆಂದರೆ ಕಿವಿ ತೆರೆದುಕೊಳ್ಳುವ ಜಾಗದಲ್ಲಿ ನಿಮ್ಮ ಹೆಬ್ಬೆರಳನ್ನು ಇಟ್ಟುಕೊಳ್ಳಿ.

ಸ್ಟೆಪ್ #2

ನಿಮ್ಮ ದವಡೆಗಳನ್ನು ಮೇಲೆ ಕೆಳಗೆ ಮಾಡುವುದರಿಂದ ಸರಿಯಾದ ಬಿಂದುವಿನಲ್ಲಿ ಹೆಬ್ಬೆರಳು ಕೂರಲು ಸಹಕಾರಿಯಾಗುತ್ತದೆ.

ಸ್ಟೆಪ್ #3

ಬಿಂದು ಹೆಬ್ಬೆರಳಿಗೆ ಸಿಕ್ಕಿದ ಕೂಡಲೇ ಆ ಬಿಂದುವನ್ನು ಒತ್ತಿ ಮತ್ತು ಒಂದು ನಿಮಿಷ ಕಾಲ ಹಾಗೆ ಇಟ್ಟುಕೊಳ್ಳಿ.

ಸ್ಟೆಪ್ #4

ಈ ಬಿಂದುವನ್ನು ನೀವು ಒತ್ತಿ ಹಿಡಿದಾಗ ಅದು ಮೆದುಳಿಗೆ ಸಂದೇಶವನ್ನು ಕಳುಹಿಸಿಕೊಡುತ್ತದೆ. ಇದರಿಂದ ಹಸಿವನ್ನು ನಿಗ್ರಹಿಸಬಹುದು.

ಸ್ಟೆಪ್ #5

ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಆಕ್ಯುಪ್ರೆಷರ್‌ನ ಬಿಂದುವನ್ನು ಒತ್ತಿ ಹಿಡಿಯುದರೊಂದಿಗೆ ಆಹಾರ ಕ್ರಮದ ಬಗ್ಗೆ ಗಮನವನ್ನಿಡುವುದು ತುಂಬಾ ಮುಖ್ಯವಾಗಿದೆ. ತೂಕ ಕಳೆದುಕೊಳ್ಳಬೇಕೆಂದರೆ ಆಗ ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವುದು ಅತ್ಯಗತ್ಯ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

What Happens When You Press The Point Near Your Ears For A Minute?

When one starts putting on weight, the first thing that one does to lose weight is to go for dieting or hit the gym. There are a few people who go to the extreme of starving as well. Will all these steps bear the results as desired? Well, it might for a few people. But what about the consequences it might have on one's health? The side effects would be yet another cause of concern.
Please Wait while comments are loading...
Subscribe Newsletter