For Quick Alerts
ALLOW NOTIFICATIONS  
For Daily Alerts

ಇದು ಆರೋಗ್ಯದ ವಿಷಯ: ಚಕ್ರಾಸನದಲ್ಲೇ ಎಲ್ಲವೂ ಇದೆ!

By Hemanth
|

ಯೋಗಗಳಲ್ಲಿ ಹಲವಾರು ಆಸನಗಳಿವೆ. ಎಲ್ಲವೂ ದೇಹವನ್ನು ದಂಡಿಸಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವುದು. ಇದರಲ್ಲಿ ಪ್ರಮುಖವಾಗಿರುವ ಆಸನವೆಂದರೆ ಚಕ್ರಾಸನ. ಚಕ್ರವೆಂದರೆ ಗಾಲಿ, ಆಸನವೆಂದರೆ ಭಂಗಿ. ಚಕ್ರದಂತೆ ನಮ್ಮ ದೇಹವನ್ನು ಭಾಗಿಸುವುದೇ ಈ ಆಸನ. ದೇಹವನ್ನು ಚಕ್ರದಂತೆ ಭಾಗಿಸಲು ಪ್ರಯತ್ನಿಸಿದಾಗ ಇದು ದೇಹದ ಪ್ರತಿಯೊಂದು ಅಂಗಗಳಿಗೂ ವ್ಯಾಯಾಮ ನೀಡುವುದು. ನಿದ್ರೆ ಬರುತ್ತಿಲ್ಲವೇ? ಮಾತ್ರೆ ಬಿಡಿ, ಯೋಗ ಮಾಡಿ

ಇದನ್ನು ಮಾಡುವುದು ಹೇಗೆ?
ಮೊದಲಿಗೆ ಆರಾಮವಾಗಿ ನೆಲದ ಮೇಲೆ ಮಲಗಿ. ಇದರ ಬಳಿಕ ನಿಧಾನವಾಗಿ ಕಾಲುಗಳನ್ನು ಮಡಚಿಕೊಳ್ಳಿ ಮತ್ತು ಪಾದವನ್ನು ಪೃಷ್ಠದ ಕಡೆಗೆ ತನ್ನಿ. ಕೈಗಳನ್ನು ಮಡಚಿ ಭುಜದ ಸಮೀಪ ನೆಲದ ಮೇಲಿಡಿ. ಅಂಗೈ ಮತ್ತು ಪಾದವನ್ನು ಬಳಸಿಕೊಂಡು ದೇಹವನ್ನು ಮೇಲಕ್ಕೆತ್ತಿ. ದೇಹಕ್ಕೆ ಹೆಚ್ಚಿನ ಒತ್ತಡವನ್ನು ಹಾಕದೆ ಅದನ್ನು ವೃತ್ತಾಕಾರವಾಗಿ ಬಗ್ಗಿಸಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ 50 ಸೆಕೆಂಡುಗಳ ಕಾಲ ನಿಲ್ಲಿ. ಈಗ ಕೈಗಳನ್ನು ಮಡಚಿ ಮತ್ತು ದೇಹವನ್ನು ಮೊದಲಿನ ಸ್ಥಿತಿಗೆ ತನ್ನಿ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

ಎಚ್ಚರಿಕೆ:
ಬೆನ್ನು ನೋವು, ರಕ್ತದ ಒತ್ತಡ, ಹೃದಯ ಸಂಬಂಧಿ ರೋಗಗಳು, ತಲೆನೋವು, ಆಮಶಂಕೆ ಅಥವಾ ಇತರ ಯಾವುದೇ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳು ಈ ಭಂಗಿಯನ್ನು ಮಾಡಬಾರದು. ಯೋಗ ಶಿಕ್ಷಕರ ನೆರವಿಲ್ಲದ ಈ ಆಸನವನ್ನು ಮಾಡಲು ಹೋಗಬೇಡಿ.

ಕಿಡ್ನಿಯ ಆರೋಗ್ಯಕ್ಕೆ

ಕಿಡ್ನಿಯ ಆರೋಗ್ಯಕ್ಕೆ

ಈ ಆಸನವು ಕಿಡ್ನಿ, ಯಕೃತ್ ಮತ್ತು ಪಿತ್ತಕೋಶಕ್ಕೆ ಒಳ್ಳೆಯದು. ನಿಯಮಿತವಾಗಿ ಮಾಡುವುದರಿಂದ ಈ ಅಂಗಾಂಗಗಳು ಬಲಯುತವಾಗುವುದು.

ದೇಹದ ಮೂಳೆಗಳ ಆರೋಗ್ಯಕ್ಕೆ

ದೇಹದ ಮೂಳೆಗಳ ಆರೋಗ್ಯಕ್ಕೆ

ವಯಸ್ಸಾಗುತ್ತಿರುವಂತೆ ಮೂಳೆಗಳು ಶಕ್ತಿಯನ್ನು ಕಳೆದುಕೊಳ್ಳುವುದು ಸಹಜ, ಹಾಗಾಗಿ ದಿನನಿತ್ಯ ಇಂತಹ ಆಸನಗಳನ್ನು ಮಾಡುವುದರಿಂದ, ಮೂಳೆಗಳ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಆಸ್ಟಿಯೋಪೊರೋಸಿಸ್, ಅಸ್ತಮಾ ಮತ್ತು ಬಂಜೆತನದ ಸಮಸ್ಯೆನ್ನು ಕಡಿಮೆ ಮಾಡುತ್ತದೆ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಈ ಆಸನದಿಂದ ಭುಜಗಳು, ತೋಳು, ಕೈಗಳು, ಮೊಣಕೈ ಮತ್ತು ಕಾಲುಗಳು ಬಲವನ್ನು ಪಡೆಯುವುದು.

ಹೃದಯದ ಸ್ವಾಸ್ಥ್ಯಕ್ಕೆ

ಹೃದಯದ ಸ್ವಾಸ್ಥ್ಯಕ್ಕೆ

ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದು. ಇತರ ಕೆಲವೊಂದು ವ್ಯಾಯಾಮಗಳಂತೆ ಈ ಆಸನವು ಹೃದಯಕ್ಕೆ ಕೆಲಸವನ್ನು ನೀಡಿ ರಕ್ತವು ಸರಿಯಾಗಿ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ.

ಖಿನ್ನತೆಯ ನಿಯಂತ್ರಣಕ್ಕೆ

ಖಿನ್ನತೆಯ ನಿಯಂತ್ರಣಕ್ಕೆ

ನಿಯಮಿತವಾಗಿ ಯೋಗ ಮಾಡುತ್ತಲಿದ್ದರೆ ಖಿನ್ನತೆಯನ್ನು ದೂರವಿಡಬಹುದು. ಇದು ಈ ಆಸನದ ಮತ್ತೊಂದು ಲಾಭ.

ಶ್ವಾಸಕೋಶಕ್ಕೆ ಒಳ್ಳೆಯದು

ಶ್ವಾಸಕೋಶಕ್ಕೆ ಒಳ್ಳೆಯದು

ಈ ಆಸನವು ನಿಮ್ಮ ಶ್ವಾಸಕೋಶಕ್ಕೆ ಒಳ್ಳೆಯದು. ಆಸನದ ವೇಳೆ ನೀವು ಯಾವ ರೀತಿಯಲ್ಲಿ ಉಸಿರು ತೆಗೆದುಕೊಂಡು ಹೊರಗೆ ಬಿಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಇದರ ಬಗ್ಗೆ ಯೋಗ ಶಿಕ್ಷಕರು ನಿಮಗೆ ತಿಳಿಸಿಕೊಡಬಹುದು.

ಥೈರಾಯ್ಡ್ ಗ್ರಂಥಿ

ಥೈರಾಯ್ಡ್ ಗ್ರಂಥಿ

ಈ ಆಸನವು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುವುದು ಎಂದು ಹಲವು ಪರೀಕ್ಷೆಗಳಿಂದ ಸಾಬೀತಾಗಿದೆ.

English summary

What Happens If You Perform Chakrasana

Chakra literally means a wheel and asana means a posture. This back bending posture is a famous yoga pose which stretches your whole body. It challenges the flexibility of your whole body and spine as you try to bend your body to form the shape of a wheel.
X
Desktop Bottom Promotion