ದೇಹದ ಹೆಚ್ಚುವರಿ ತೂಕದ ನಿಯಂತ್ರಣಕ್ಕೆ ಜೇನಿನಲ್ಲಿದೆ ಪರಿಹಾರ

ಜೇನು ಒಂದು ಸ್ನಿಗ್ಧ ದ್ರವವಾಗಿರುವ ಕಾರಣ ಇದನ್ನು ಬಹುತೇಕ ಯಾವುದೇ ಆಹಾರದೊಡನೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಹಾಲಿನೊಂದಿಗೆ ಇದು ಬೆರೆಯುವ ಪರಿಯನ್ನು ಕಂಡೇ ಹಿರಿಯ ಕವಿಗಳು ಹಾಲು ಜೇನಿನಂತಹ ಸಂಸಾರ ಎಂದು ವರ್ಣಿಸಿದ್ದಾರೆ, ಮುಂದೆ ಓದಿ...

By: Jaya subramanya
Subscribe to Boldsky

ನೀವು ಹೆಚ್ಚುವರಿ ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಮತ್ತು ಮುಜುಗರವನ್ನು ಹೊಂದಿದ್ದೀರಿ ಎಂದಾದಲ್ಲಿ ನಮ್ಮಲ್ಲಿದೆ ಒಂದು ಸೂಪರ್ ಔಷಧ. ಅಧಿಕ ತೂಕ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಒಂದು ಕಾಯಿಲೆಯಾಗಿ ಮಾರ್ಪಡುತ್ತಿದೆ. ಹೆಚ್ಚುವರಿ ತೂಕವು ದೇಹ ಸೌಂದರ್ಯವನ್ನು ಹೇಗೆ ಕೆಡಿಸುತ್ತದೋ ಅಂತೆಯೇ ಹಲವಾರು ದೈಹಿಕ ಕಾಯಿಲೆಗಳಿಗೂ ಮುಖ್ಯ ಕಾರಣವಾಗಿ ಬಿಡುತ್ತವೆ....

Honey
 

ಹಾಗಿದ್ದರೆ ನಿಮ್ಮ ದೇಹ ತೂಕದ ಚಿಂತೆಯನ್ನು ನಿವಾರಿಸುವ ಪರಿಹಾರ ನಮ್ಮ ಬಳಿ ಇದೆ. ಜೇನನ್ನು ಬಳಸಿಕೊಂಡು ಅಧಿಕ ದೇಹತೂಕ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ದೇಹದ ಚಯಾಪಚಯ ಶಕ್ತಿಯನ್ನು ಜೇನು ವರ್ಧಿಸಲಿದ್ದು, ಜೇನು ಮತ್ತು ಲಿಂಬೆಯನ್ನು ಒಗ್ಗೂಡಿಸಿಕೊಂಡು ದೇಹದ ಬೊಜ್ಜಿನಿಂದ ನಿವಾರಣೆಯನ್ನು ಪಡೆದುಕೊಳ್ಳಬಹುದಾಗಿದೆ.   ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!  

Honey
 

ಜೇನು ಮತ್ತು ದಾಲ್ಚಿನ್ನಿಯನ್ನು ಬಳಸಿಕೊಂಡು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ. ಹೆಚ್ಚಿನ ಬಳಕೆದಾರರು ಈ ವಿಧಾನವನ್ನು ಪಾಲಿಸಿ ದೇಹತೂಕದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಹಂತಗಳು ಹೆಚ್ಚು ಸರಳವಾಗಿದೆ.             ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ

ಒಂದು ಕಪ್‎ನಷ್ಟು ಬಿಸಿ ನೀರಿಗೆ ಅರ್ಧ ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ದೊಡ್ಡ ದೊಡ್ಡ ಭಾಗಗಳಿದ್ದರೆ ಅದನ್ನು ಬೇರ್ಪಡಿಸಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ. ಖಾಲಿ ಹೊಟ್ಟೆಗೆ ಈ ದ್ರಾವಣವನ್ನು ಸೇವಿಸಿ ನಂತರ ಅರ್ಧಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ.‎

Honey
 

ರಾತ್ರಿ ವೇಳೆಯಲ್ಲಿ ಕೂಡ ಇದನ್ನು ಜ್ಯೂಸ್‎ನಂತೆ ನಿಮಗೆ ಸೇವಿಸಬಹುದಾಗಿದೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲಿದ್ದು ಹೊಟ್ಟೆಯನ್ನು ಭರ್ತಿಮಾಡಲಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಒತ್ತಡವನ್ನು ನಿವಾರಿಸಲಿದೆ. ಜಾಸ್ತಿ ತಿನ್ನುವ ಅಭ್ಯಾಸವಿದ್ದವರು ಇಲ್ಲವೇ ರಾತ್ರಿ ಚೆನ್ನಾಗಿ ತಿಂದು ಜೀರ್ಣಕ್ರಿಯೆ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ಜೇನು ದ್ರಾವಣ ನಿಮಗೆ ಆರಾಮದಾಯಕವಾಗಿದೆ. ಇದು ನೇರ ಕಾರ್ಬೊಹೈಡ್ರೇಟ್ ಆಗಿದ್ದು ಇದರಲ್ಲಿರುವ ಜೀರ್ಣಕ್ರಿಯೆಗೆ ಸುಗಮವಾಗಿರುವ ಸಕ್ಕರೆಯನ್ನು ಒಳಗೊಂಡಿದೆ.

Honey
 

ತೂಕ ನಿವಾರಿಸುವಲ್ಲಿ ಸಕ್ಕರೆಯ ಬದಲಿಗೆ ಜೇನನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಇಂತಹ ಸಕ್ಕರೆಯಲ್ಲಿ ವಿಟಮಿನ್‎ಗಳು ಕೊರತೆ ಇದ್ದು, ಮಿನರಲ್‌‎ಗಳು ಖಾಲಿ ಕ್ಯಾಲೋರಿಯನ್ನು ಒಳಗೊಂಡಿರುತ್ತವೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದು ಅತ್ಯಧಿಕ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುತ್ತದೆ ಇದು ಅಂಗಾಂಶಗಳಲ್ಲಿ ಮತ್ತು ದೇಹದ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬನ್ನು ಪೇರಿಸುತ್ತದೆ.  ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Ways To Use Honey For Weight Loss

Are you looking for ways to lose fat? The excellent news is that honey, a natural sweetener, helps in losing weight on one hand and on the other hand, comprises twenty two amino acids and an extensive variety of minerals essential to speed up the metabolic process. Hence, it is helpful in preventing obesity.
Please Wait while comments are loading...
Subscribe Newsletter