ಯೋಗ ಟಿಪ್ಸ್: ಕಾಲುಗಳ ಸದೃಢತೆಗೆ ವೃಕ್ಷಾಸನ

By: Vani nayak
Subscribe to Boldsky

ಕಾಲುಗಳ ಸದೃಢತೆ ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ಅತ್ಯಾವಶ್ಯಕ. ನಿಮ್ಮ ಕಾಲುಗಳಲ್ಲಿ ಬಲವಿಲ್ಲದಿದ್ದರೆ, ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತದೆ. ನಡೆಯಲು, ಓಡಾಡಲು, ಕೆಲಸ ಮಾಡಲು ಹಾಗು ನಿಲ್ಲಲು ಸಹ ಸಾಧ್ಯವಾಗುವುದಿಲ್ಲ. ಹಾಗಾಗಿ, ನಮ್ಮ ಕಾಲಿನ ಸದೃಢತೆ ಬಗ್ಗೆ ಅರಿತುಕೊಳ್ಳುವ ಬಗೆ ಹೇಗೆ?

ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿ ಹಾಗು ಪರೀಕ್ಷಿಸಿದ ನಂತರ ಕಾಲುಗಳನ್ನು ಬಲಗೊಳಿಸಲು ಉತ್ತಮ ವಿಧಾನ ಯೋಗಾಭ್ಯಾಸ ಎಂದು ತಿಳಿದು ಬಂದಿದೆ.  ಎಲ್ಲಾ ಆಸನಗಳಲ್ಲಿ, ವೃಕ್ಷಾಸನವು ಕಾಲುಗಳ ಸದೃಢತೆಯನ್ನು ಹೆಚ್ಚಿಸಲು ಉತ್ತಮವಾಗಿದೆ. ಇದನ್ನು ಆಂಗ್ಲ ಭಾಷೆಯಲ್ಲಿ "ಟ್ರೀ ಪೋಸ್" ಎಂತಲೂ ಕರೆಯುತ್ತಾರೆ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ

ಕಾಲುಗಳಲ್ಲಿ ಸ್ವಲ್ಪ ಕೂಡ ನೋವು ಕಾಣಿಸಿಕೊಂಡರೂ, ಕಾಲುಗಳನ್ನು ಚಲಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮೊದಲಿಗೆ ನಾವು ನೋವುನಿವಾರಕ ಸ್ಪ್ರೇಗಳಿಗೋ ಅಥವಾ ಗುಳಿಗೆಗಳಿಗೋ ಮೊರೆಹೋಗುತ್ತೇವೆ. ಇದರಿಂದ ಸಮಸ್ಯೆಗೆ ಸ್ವಲ್ಪ ಮಟ್ಟದಲ್ಲಿ ಪರಿಹಾರ ಸಿಕ್ಕರೂ ಅದು, ತಾತ್ಕಾಲಿಕವಾಗಿರುತ್ತದೆ.

Vrikshasana
 

ದೀರ್ಘ ಕಾಲದ ಪರಿಹಾರವನ್ನು ನೀವು ಕಂಡುಕೊಳ್ಳಬೇಕಾದ್ದಲ್ಲಿ, ಕಾಲುಗಳ ಬಲವನ್ನು ಹೆಚ್ಚಿಸಲು ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಅದರಲ್ಲೂ ವೃಕ್ಷಾಸನವನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ. ಹಲವು ಆಸನಗಳ ಮೂಲ ವೃಕ್ಷಾಸನವಾಗಿದೆ. ಇದು ಪ್ರಾರಂಭಿಕ ಹಂತದಲ್ಲಿದ್ದವರೂ ಕೂಡ ಹಾಕಬಹುದಾದಂತಹ ಸುಲಭವಾದ ಆಸನವಾಗಿದೆ.

ಆದರೆ, ದೇಹ ಹಾಗು ಕಾಲುಗಳ ಸಮತೋಲತೆ ಬಹಳ ಮುಖ್ಯವಾಗಿರುತ್ತದೆ. ಬನ್ನಿ, ಈ ಆಸನವನ್ನು ಹಾಕುವ ಬಗೆ ಬೇಗೆ ಎಂದು ತಿಳಿದುಕೊಳ್ಳೋಣ.

ವೃಕ್ಷಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲಿಗೆ, ತಾಡಾಸನವನ್ನು ಹಾಕಬೇಕು.
2. ತೋಳುಗಳು ದೇಹದ ಎರಡೂ ಬದಿಯಲ್ಲಿ ಆರಾಮವಾಗಿರಿಸಿರಬೇಕು.
3. ನಿಧಾನವಾಗಿ ಮಂಡಿಯನ್ನು ಬಾಗಿಸಿ, ಪಾದವನ್ನು ಇನ್ನೊಂದು ತೊಡೆಯ ಮೇಲಿರಿಸಬೇಕು.
4. ಮತ್ತೊಂದು ಕಾಲನ್ನು ನೇರವಾಗಿರಿಸಬೇಕು.

Vrikshasana

5. ಕಾಲುಗಳನ್ನು ಸಮತೋಲನವಾಗಿಟ್ಟುಕೊಳ್ಳಿ. ನಂತರ ಧೀರ್ಘವಾಗಿ ಉಸಿರಾಡಿಸಿ.
6. ನಿಧಾನವಾಗಿ, ಎರಡೂ ತೋಳುಗಳನ್ನು ಮೇಲಕ್ಕೆ ಎತ್ತಿ.
7. ನಮಸ್ತೆ ಮಾಡುವಂತೆ,ಎರಡೂ ಅಂಗೈಗಳನ್ನು ಒಂದಕ್ಕೊಂದು ಜೋಡಿಸಬೇಕು.
8. ಬೆನ್ನೆಲಬು ನೇರವಾಗಿರಬೇಕು ಮತ್ತು ಕಣ್ಣುಗಳು ನೇರ ದೃಷ್ಟಿಯನ್ನು ಹೊಂದಿರಬೇಕು.
9. ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು.
10. ಇನ್ನೊಂದು ಕಾಲಿಗೂ ಇದೇ ಕ್ರಮವನ್ನು ಅನುಸರಿಸಬೇಕು.

ವೃಕ್ಷಾಸನದಿಂದಾಗುವ ಇತರ ಲಾಭಗಳು
*ಇದರಿಂದ ಕಾಲುಗಳ ಹಿಗ್ಗುವಿಕೆಯನ್ನು ಹೆಚ್ಚಿಸಬಹುದು.
*ತೋಳುಗಳನ್ನು ಹಿಗ್ಗಿಸುತ್ತದೆ.
*ಬೆನ್ನನ್ನು ಹಿಗ್ಗಿಸಿದಂತಾಗುತ್ತದೆ.
*ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
*ದೇಹದ ಸಮತೋಲನತೆ ಕಾಪಾಡುತ್ತದೆ.
*ಸೊಂಟ ನೋವು ಅಥವಾ ಸಿಯಾಟಿಕ ಸಮಸ್ಯೆ ಇದ್ದವರಿಗೆ ಇದನ್ನು ಅಭ್ಯಾಸ ಮಾಡುವುದರಿಂದ ಆರಾಮ ಕೊಡುತ್ತದೆ.
*ಸೊಂಟವನ್ನು ಬಲಗೊಳಿಸುತ್ತದೆ.

Vrikshasana
 

ಎಚ್ಚರಿಕೆ:
ವೃಕ್ಷಾಸನವು ಹಲವು ಆಸನಗಳ ಮೂಲವಾಗಿದ್ದು, ಬಹಳ ಉತ್ತಮವಾದ ಆಸನವಾಗಿದೆ. ಆದರೆ ಈ ಆಸನವನ್ನು ಅಭ್ಯಾಸ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾರಿಗೆ ಮೈಗ್ರೇನ್ ಮತ್ತು ರಕ್ತದೊತ್ತಡದಲ್ಲಿ ಏರುಪೇರಾಗುವ ಸಮಸ್ಯೆ ಇದೆಯೋ ಅಂತಹವರು ಈ ಆಸನವನ್ನು ಹಾಕತಕ್ಕದ್ದಲ್ಲ. ಹಾಗಾಗಿ, ನುರಿತ ಯೋಗಾ ತರಬೇತಿದಾರರ ಸಲಹೆ, ಸೂಚನೆಗಳ ಮೇರೆಗೆ ಮಾಡುವುದು ಹೆಚ್ಚು ಸೂಕ್ತ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Vrikshasana (Tree Pose) To Make The Legs Strong

Vrikshasana which is commonly known as theTree Pose is one of the best known asanas to make the legs strong. Whenever you have a slight pain in the legs and you are not able to move your legs, the first thing we do is apply pain relief sprays or pop in pankillers. Yes, this provides immediate relief but this is only for a short period of time.
Please Wait while comments are loading...
Subscribe Newsletter