ಯೋಗ ಟಿಪ್ಸ್: ಕಿಡ್ನಿಗಳ ಆರೋಗ್ಯಕ್ಕೆ ಉಪವಿಷ್ಟ ಕೋನಾಸನ

By: Vani nayak
Subscribe to Boldsky

ಕಿಡ್ನಿಗಳು ನಮ್ಮ ದೇಹದ ಬಹು ಮುಖ್ಯವಾದ ಅಂಗಗಳಲ್ಲಿ ಒಂದು. ಎರಡರಲ್ಲಿ ಒಂದೇ ಕಿಡ್ನಿಗೆ, ಸಣ್ಣ ಪ್ರಮಾಣದಲ್ಲಿ ಹಾನಿಯಾದರೂ ಅದರ ಕಾರ್ಯ ನಿರ್ವಹಣೆಗೆ ತೊಡಕಾಗುವುದಲ್ಲದೇ, ಇಡೀ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಆದ್ದರಿಂದ ನಿಮ್ಮ ಕಿಡ್ನಿಗಳನ್ನು ಆರೋಗ್ಯದಿಂದ ಇಟ್ಟುಕೊಳ್ಳಬೇಕಾದರೆ, ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ವಿವಿಧ ಬಗೆಯ ಯೋಗಾಸನಗಳಲ್ಲಿ, ಉಪವಿಷ್ಟ ಕೋನಾಸನವನ್ನು ಕಿಡ್ನಿಗಳನ್ನು ಉತ್ತೇಜಿಸುವುದಕ್ಕೆ ಸೂಕ್ತ ಆಸನ ಎಂದು ಪರಿಗಣಿಸಲಾಗಿದೆ. ಗರ್ಭ ಕಂಠದ ನೋವಿಗೆ ಅರ್ಧ ಮತ್ಸ್ಯೇಂದ್ರಾಸನ

ಕಿಡ್ನಿಯ ಬಹು ಮುಖ್ಯವಾದ ಕಾರ್ಯವೇನೆಂದರೆ ದೇಹದಲ್ಲಿನ ಟಾಕ್ಸಿನ್ಸ್ ಗಳನ್ನು ಹೊರಹಾಕುವುದು. ದೇಹದಲ್ಲಿನ ದ್ರವವನ್ನು ಸಮತೋಲನವಾಗಿಟ್ಟು ರಕ್ತದೊತ್ತಡವನ್ನು ನಿಯಂತ್ರಿಸುವ ಹಾರ್ಮೋನ್ಗಳನ್ನು ಬಿಡುಗಡೆ ಮಾಡುವುದು.

Upavistha Konasana To Stimulate The Kidneys
  

ಇದಿಷ್ಟೇ ಅಲ್ಲ ಕಿಡ್ನಿಗಳು ವಿಟಮಿನ್ "ಡಿ" ಯನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಮೂಳೆಗಳು ಸದೃಢವಾಗುತ್ತದೆ. ಈ ರೀತಿಯ ಹಲವು ಕಾರ್ಯವನ್ನು ನಿರ್ವಹಿಸುವ ಕಿಡ್ನಿಗಳಿಗೆ ಸ್ವಲ್ಪ ಕೂಡ ತೊಂದರೆ ಆದರೆ ಅದರ ಪರಿಣಾಮ ಇಡೀ ದೇಹದ ಮೇಲೆ ಬೀರುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಅಧೋಮುಖ ವೃಕ್ಷಾಸನ ಅನುಸರಿಸಿ

ಆದ್ದರಿಂದ ಕಿಡ್ನಿಗಳನ್ನು ಉತ್ತೇಜಿಸಲು ಹಾಗು ಆರೋಗ್ಯವಾಗಿಡಲು, ಎಲ್ಲಾ ವಿಧಾನಗಳಿಗಿಂತ ಯೋಗಾಸನ ಅದರಲ್ಲೂ ಉಪವಿಷ್ಟ ಕೋನಾಸನ ಬಹಳ ಸೂಕ್ತವಾದದ್ದು.

ಉಪವಿಷ್ಟ ಕೋನಾಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಉಪವಿಷ್ಟ" ಎಂದರೆ ಕುಳಿತಿರುವ, "ಕೋನ" ಎಂದರೆ ಕೋನ, ಹಾಗು "ಆಸನ" ಎಂದರೆ ಭಂಗಿ ಎಂದರ್ಥ. ಈ ಕೆಳಗೆ ಉಪವಿಷ್ಟಕೋನಾಸನವನ್ನು ಮಾಡುವ ಬಗೆ ಹೇಗೆ ಎಂದು ತಿಳಿಸಲಾಗಿದೆ.

Upavistha Konasana To Stimulate The Kidneys
 

ಉಪವಿಷ್ಟಕೋನಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ
1. ಮೊದಲಿಗೆ, ದಂಡಾಸನವನ್ನು ಹಾಕಿ. ಆರಾಮವಾಗಿ ಕುಳಿತುಕೊಂಡು ಕಾಲುಗಳನ್ನು ನೇರವಾಗಿ ನಿಮ್ಮ ಮುಂದಕ್ಕೆ ಚಾಚಿ.
2. ಕೈಗಳನ್ನು ನೆಲದಮೇಲಿರಿಸಬೇಕು.
3. ಕಾಲುಗಳನ್ನು 90 ಡಿಗ್ರೀ ಕೋನದಂತೆ ಅಗಲಿಸಿ.
4. ನಿಧಾನವಾಗಿ ನಿಮ್ಮ ಹೆಡಕನ್ನು (ಮುಂಡ) ಹಿಂದಕ್ಕೆ ಮಾಡಿ.
5. ಕಾಲ್ಬೆರಳುಗಳು ಮೇಲೆ ಸೂರಿನತ್ತ ಮುಖ ಮಾಡಿರಬೇಕು.
6. ನಿಮ್ಮ ಬೆನ್ನೆಲಬು ನೇರವಾಗಿರಬೇಕು.
7. ನಿಧಾನವಾಗಿ ನಿಮ್ಮ ಕೈಗಳನ್ನು ಮುಂದಕ್ಕೆ ಕಾಲ್ಗಳ ಮಧ್ಯೆ ತನ್ನಿ.
8. ನೀವು ಇದನ್ನು ಮಾಡುತ್ತಿದ್ದಂತೇ, ನಿಮ್ಮ ಮಂಡಿರಜ್ಜು ಕೂಡ ಚಾಚಿರುವಂತೆ ನೋಡಿಕೊಳ್ಳಿ.
9. ನಂತರ ಕಾಲ್ಬೆರಳನ್ನು ನಿಮ್ಮ ಹೆಬ್ಬೆಟ್ಟು ಮತ್ತು ಮೊದಲ ಎರಡು ಬೆಟ್ಟುಗಳ ಸಹಾಯದಿಂದ ಹಿಡಿದುಕೊಳ್ಳಿ.
10. ಇದನ್ನು ಮಾಡುತ್ತಿದ್ದಂತೆಯೇ ಸ್ವಲ್ಪ ಚಾಚಿ ನಿಮ್ಮ ಗದ್ದವನ್ನು ನೆಲಕ್ಕೆ ತಾಕುವಂತೆ ಮಾಡಿ.
11. ಕೆಲ ನಿಮಿಷಗಳ ಕಾಲ ಇದೇ ಭಂಗಿಯಲ್ಲಿದ್ದು ನಂತರ ನಿಧಾನವಾಗಿ ಹೊರಗೆ ಬನ್ನಿ. ಕಿಡ್ನಿ ವೈಫಲ್ಯ: ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಾಸತ್ಯತೆ      

Upavistha Konasana To Stimulate The Kidneys
 

ಉಪವಿಷ್ಟಕೋನಾಸನದಿಂದಾಗುವ ಇತರ ಲಾಭಗಳು:
*ಕಣಕಾಲಿನ ಹಿಂಭಾಗವನ್ನು ಹಿಗ್ಗಿಸಲು ನೆರವಾಗುತ್ತದೆ.
*ಮಂಡಿರಜ್ಜನ್ನು ಹಿಗ್ಗಿಸಲು ನೆರವಾಗುತ್ತದೆ.
*ಸೊಂಟವನ್ನು ಹಿಗ್ಗಿಸಲು ನೆರವಾಗುತ್ತದೆ.
*ಕಿಬ್ಬೊಟ್ಟೆಯ ಅಂಗಾಂಗಗಳನ್ನು ಉತ್ತೇಜಿಸುತ್ತದೆ.
*ಮನಸ್ಸನ್ನು ಶಾಂತವಾಗಿಡುತ್ತದೆ. ಪಚನ ಕಾರ್ಯಕ್ಕೆ ಸಹಾಯ ಮಾಡುತ್ತದೆ.
*ಉದ್ವೇಗದಿಂದ ಹೊರಬರಲು ಸಹಾಯ ಮಾಡಿ ಆರಾಮ ಕೊಡುತ್ತದೆ.
*ಬೆನ್ನೆಲಬನ್ನು ಹಿಗ್ಗಿಸಲು ನೆರವಾಗುತ್ತದೆ. ಕಿಡ್ನಿ ಕಾಳಜಿ: ಸ್ವಲ್ಪ ಯಾಮಾರಿದರೂ, ಜೀವಕ್ಕೆ ಸಂಚಕಾರ!

ಎಚ್ಚರಿಕೆ
ಉಪವಿಷ್ಟಕೋನಾಸನವು ಮೂತ್ರಪಿಂಡವನ್ನು ಉತ್ತೇಜಿಸಲು ಸಹಾಯ ಮಾಡುವುದರ ಜೊತೆಗೆ ಇತರ ಲಾಭಗಳಿದ್ದರೂ, ಈ ಆಸನವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು.
ಬೆನ್ನಿಗೆ ಗಾಯಗಳಾದವರು ಹುಷಾರಾಗಿ ಮಾಡತಕ್ಕದ್ದು. ನುರಿತ ಯೋಗಾ ತರಬೇತಿದಾರರಿಂದ ಸಲಹೆ ಸೂಚನೆಗಳ ಮೇರೆಗೆ ಅಭ್ಯಾಸ ಮಾಡುವುದು ಹೆಚ್ಚು ಸೂಕ್ತ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Sunday, September 11, 2016, 12:05 [IST]
English summary

Upavistha Konasana To Stimulate The Kidneys

Kidneys are one of the most vital organs of the body. Even a slight damage to either one of the kidneys will not just affect its functioning but end up affecting the entire body. So if you want to keep your kidneys healthy, then yoga asana would be the best option. Among all the yoga asanas, Upavistha Konasana,
Please Wait while comments are loading...
Subscribe Newsletter