For Quick Alerts
ALLOW NOTIFICATIONS  
For Daily Alerts

ತೂಕ ಕಡಿಮೆ ಮಾಡಲು ಉಪವಾಸ ಮಾಡುತ್ತಿದ್ದರೆ ಎಚ್ಚರ!

By Super Admin
|

ಫಾಸ್ಟ್ ಫುಡ್ ಜೀವನಶೈಲಿಯಲ್ಲಿ ದೇಹವನ್ನು ಬಲೂನಿನಂತೆ ಊದಿಸಿಕೊಂಡ ಬಳಿಕ ಛೇ! ಹೀಗೆ ಹೇಗಾಯಿತು? ನನ್ನ ದೇಹವು ಬೊಜ್ಜು ಬೆಳೆಸಿಕೊಂಡಿದೆ, ಅಲ್ಲದೆ ತೂಕವು ಹೆಚ್ಚಾಗುತ್ತಿದೆ, ಹಾಗಾಗಿ ತಕ್ಷಣ ಬೊಜ್ಜನ್ನು ಕರಗಿಸಿ, ಸ್ಲಿಮ್ ಆಗಿ ಕಾಣಲು ಬಯಸುತ್ತೇವೆ... ಅತೀ ಕಡಿಮೆ ಅವಧಿಯಲ್ಲಿ ತೆಳ್ಳಗಾಗುವ ಪ್ರಯತ್ನ ಬೇಡ!

ಆದರೆ ಕರಗಿಸಲು ಜಿಮ್‌ಗೆ ಹೋಗಬೇಕು, ಯೋಗ ಮಾಡಬೇಕು ಎನ್ನುವ ಸಲಹೆ ಬರುತ್ತದೆ. ಈ ಸಲಹೆಗಳನ್ನು ಪಾಲಿಸಲು ನಮ್ಮಲ್ಲಿ ಸಮಯವೂ ಇಲ್ಲ, ತಾಳ್ಮೆಯೂ ಇಲ್ಲ. ದೇಹವನ್ನು ಕರಗಿಸಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತೇವೆ. ತೂಕ ಇಳಿಸಿಕೊಳ್ಳುವ ನೆಪದಲ್ಲಿ, ಊಟ ಮಾತ್ರ ಬಿಡಬೇಡಿ

ಬೊಜ್ಜನ್ನು ಕರಗಿಸಬೇಕಾದರೆ ಊಟ ಮಾಡದೆ ಇರಲು ಪ್ರಾರಂಭಿಸುತ್ತೇವೆ. ದಿನದಲ್ಲಿ ಎರಡು ಹೊತ್ತು ಊಟ ಮಾಡುವ ಬದಲು ಒಂದೇ ಸಲ ಊಟ ಮಾಡುತ್ತೇವೆ. ಆದರೆ ಬೊಜ್ಜು ಕರಗಿಸಲು ಊಟ ಮಾಡದೆ ಇರುವುದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ! ಅಚ್ಚರಿಯಾಯಿತೇ? ಮುಂದೆ ಓದಿ...

ಚಯಾಪಚಾಯ ನಿಧಾನವಾಗಿಸುತ್ತದೆ

ಚಯಾಪಚಾಯ ನಿಧಾನವಾಗಿಸುತ್ತದೆ

ದೇಹವು ಯಾವುದೇ ಪೋಷಕಾಂಶಗಳನ್ನು ಪಡೆಯದಿರುವಾಗ ಶಕ್ತಿಯನ್ನು ಉಳಿಸಿಕೊಳ್ಳಲು ನಿಮ್ಮ ಚಯಾಪಚಾಯ ಕ್ರಿಯೆಯು ತುಂಬಾ ನಿಧಾನವಾಗುತ್ತದೆ.

ಉಸಿರು ವಾಸನೆ

ಉಸಿರು ವಾಸನೆ

ಶಕ್ತಿಯನ್ನು ಉತ್ಪಾದಿಸಲು ದೇಹಕ್ಕೆ ಸರಿಯಾಗಿ ಕಾರ್ಬೋಹೈಡ್ರೇಟ್ಸ್ ಗಳು ಸಿಗದೆ ಇರುವಾಗ ಕೆಟೊಸಿಸ್ ಎನ್ನುವ ಹಂತಕ್ಕೆ ದೇಹವು ತಲುಪುವುದು. ಈ ವೇಳೆ ಉತ್ಪತ್ತಿಯಾಗುವ ಕೆಟೊನೆ ಅಂಶದಿಂದ ದುರ್ವಾಸನೆ ಉಸಿರು ಬರುವುದು. ಬೆಳಗ್ಗೆ ಉಪಾಹಾರವನ್ನು ತ್ಯಜಿಸಿದರೆ ಮಧ್ಯಾಹ್ನದ ಊಟದ ವೇಳೆ ಇದರ ಪರಿಣಾಮವಾಗುವುದು.

ನಿಶ್ಯಕ್ತಿ

ನಿಶ್ಯಕ್ತಿ

ಉಪವಾಸವಿದ್ದಾಗ ಕಂಡುಬರುವ ಸಾಮಾನ್ಯ ಲಕ್ಷಣವೆಂದರೆ ಅದು ನಿಶ್ಯಕ್ತಿ. ಉಪವಾಸವಿದ್ದಾಗ ದೇಹದಲ್ಲಿ ವಿಟಮಿನ್ ಗಳ ಅಸಮತೋಲನಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿ ನಿಶ್ಯಕ್ತಿ ಕಾಣಿಸುವುದು. ಶಕ್ತಿ ಇಲ್ಲದೆ ಇರುವಾಗ ಯಾವುದೇ ದೈಹಿಕ ಚಟುವಟಿಕೆ, ವ್ಯಾಯಾಮ ಮಾಡಲು ಸಾಧ್ಯವಿಲ್ಲ.

ನಿರ್ಜಲೀಕರಣ

ನಿರ್ಜಲೀಕರಣ

ಆಹಾರ ತೆಗೆದುಕೊಳ್ಳದೆ ಬೊಜ್ಜು ಕರಗಿಸಲು ಹೋಗುವವರಲ್ಲಿ ಇದು ಕಾಣಸಿಕೊಳ್ಳುತ್ತದೆ. ಉಪವಾಸ ಮಾಡುವುದರಿಂದ ದೇಹದಲ್ಲಿನ ನೀರಿನಾಂಶವು ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುವುದು.

ಸ್ನಾಯುಗಳ ಬೆಳವಣಿಗೆ ಕುಂಠಿತ

ಸ್ನಾಯುಗಳ ಬೆಳವಣಿಗೆ ಕುಂಠಿತ

ದೇಹವು ಯಾವಾಗಲೂ ಉಪವಾಸ ಮಾಡುತ್ತಲಿದ್ದರೆ ಆಗ ಅದಕ್ಕೆ ಬೇಕಾಗಿರುವಂತಹ ಅತ್ಯಗತ್ಯ ಪೋಷಕಾಂಶಗಳು ಲಭ್ಯವಾಗದೆ ಇರುವುದರಿಂದ ಸ್ನಾಯುಗಳ ಬೆಳವಣಿಗೆ ಕುಂಠಿತವಾಗಬಹುದು. ಇದರಿಂದ ಮಾಂಸಖಂಡವನ್ನು ಕಳಕೊಳ್ಳಬಹುದು.

ಒಣಚರ್ಮ

ಒಣಚರ್ಮ

ಉಪವಾಸ ಮಾಡಿ ದೇಹದ ತೂಕವನ್ನು ಕರಗಿಸಲು ಪ್ರಯತ್ನಿಸವವರ ಚರ್ಮವು ಒಣಗುವುದು. ಉಪವಾಸದಿಂದ ಚರ್ಮವು ಒಣಗಿ ಜೋತು ಬಿದ್ದಂತೆ ಆಗಬಹುದು.

ಕೂದಲು ತೆಳುವಾಗುವುದು

ಕೂದಲು ತೆಳುವಾಗುವುದು

ಉಪವಾಸದಿಂದಾಗಿ ನಿಮ್ಮ ಕೂದಲಿನ ಮೇಲೆ ಪರಿಣಾಮವಾಗಬಹುದು. ಕೂದಲಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗದೆ ಇರಬಹುದು. ಇದರಿಂದ ಕೂದಲು ತೆಳ್ಳಗೆ ಆಗಬಹುದು.

English summary

This Is What Happens to your body when you starve to lose weight

You only had a bowl of soup for dinner, and you are now heading to bed. But your brain and belly signal you to go to the kitchen first as you are already hungry. You are trying to slim down so you think it is better to go with a little something in your belly. But did you know that starving to lose weight can have many side effects? have a look
Story first published: Saturday, July 23, 2016, 19:41 [IST]
X
Desktop Bottom Promotion