For Quick Alerts
ALLOW NOTIFICATIONS  
For Daily Alerts

ಎಚ್ಚರ: ಆಫೀಸ್ ಕೆಲಸ-ಸ್ಥೂಲಕಾಯಕ್ಕೆ ಮುಕ್ತ ಆಹ್ವಾನ!

By Arshad
|

ಇಂದಿನ ದಿನಗಳಲ್ಲಿ ಲಭ್ಯವಿರುವ ಹೆಚ್ಚಿನ ಉದ್ಯೋಗಗಳೆಲ್ಲಾ ಕುರ್ಚಿಯಲ್ಲಿ ಕುಳಿತೇ ಮಾಡುವಂತಹದ್ದಾಗಿವೆ. ಇಡಿಯ ದಿನ ಕುಳಿತುಕೊಂಡಿರುವ ಕಾರಣ ಸ್ಥೂಲಕಾಯವೂ ಸುಲಭವಾಗಿ ಆವರಿಸುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸ್ಥೂಲಕಾಯಕ್ಕೆ ಕೇವಲ ಕುಳಿತುಕೊಂಡಿರುವುದೇ ಕಾರಣವಾಗಿರುವುದಿಲ್ಲ.

belly fat

ಬದಲಿಗೆ ಸ್ಥೂಲಕಾಯವನ್ನು ಬೆಂಬಲಿಸುವ ಕೆಲವು ಚಟುವಟಿಕೆಗಳೇ ಪ್ರಮುಖ ಕಾರಣವಾಗಿರುತ್ತವೆ. ಈ ಚಟುವಟಿಕೆಗಳ ಬಗ್ಗೆ ತಿಳಿದ ತಕ್ಷಣ ಈ ವಾಸ್ತವ ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವುದು ಖಂಡಿತ. ಬನ್ನಿ, ಈ ಚಟುವಟಿಕೆಗಳು ಯಾವುದು ಎಂಬುದನ್ನು ನೋಡೋಣ:

ಕ್ಯೂಬಿಕಲ್‌ನಲ್ಲಿ ಸೂರ್ಯನ ಬೆಳಕಿನ ಕೊರತೆ
ಹೆಚ್ಚಿನ ಉದ್ಯೋಗಗಳು ಕಚೇರಿಯ ಕ್ಯೂಬಿಕಲ್ ಅಥವಾ ಚಿಕ್ಕ ಚೌಕಾಕಾರದ ಕೋಣೆಯಲ್ಲಿ ಇಕ್ಕಟ್ಟಿನಲ್ಲಿ ನಡೆಯುತ್ತವೆ. ಈ ಸ್ಥಳದಲ್ಲಿ ಸೂರ್ಯನ ಬೆಳಕು ಬರುವ ಸಾಧ್ಯತೆ ಕಡಿಮೆ. ಇಡಿಯ ದಿನ ಕಚೇರಿಯಲ್ಲಿ ಕಳೆಯುವ ಮೂಲಕ ಸೂರ್ಯನ ಬೆಳಕನ್ನು ಕಾಣದೇ ದೇಹ ಕೆಲವೊಂದು ದೈನಿಕ ಅಗತ್ಯದ ಪೋಷಕಾಂಶಗಳನ್ನು ಪಡೆಯಲು ಅಸಮರ್ಥವಾಗುತ್ತದೆ.

ಅಲ್ಲದೇ ನಮ್ಮ ಜೈವಿಕ ಗಡಿಯಾರವೂ ಸರಿಯಾಗಿ ಕೆಲಸ ಮಾಡದೇ ಹಸಿವಾಗಬಾರದ ಸಮಯದಲ್ಲಿ ಹಸಿವನ್ನೂ, ಹಸಿವಾಗಬೇಕಾದ ಸಮಯದಲ್ಲಿ ಹಸಿವಾಗದೇ ಅನಗತ್ಯವಾದ ಸಿದ್ಧ ಮತ್ತು ಕೊಬ್ಬಿನ ಆಹಾರ ಸೇವಿಸಲು ಪ್ರೇರಣೆ ನೀಡುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದ ದೇಹ ಇನ್ಸುಲಿನ್ ಬಳಸಿಕೊಳ್ಳದ ಸ್ಥಿತಿಯನ್ನೂ ತಲುಪುತ್ತದೆ. ಇವೆಲ್ಲವೂ ಸ್ಥೂಲಕಾಯಕ್ಕೆ ನೇರವಾದ ಕಾರಣಗಳಾಗಿವೆ.

ಕಚೇರಿಯಲ್ಲಿ ವಿಪರೀತ ಚಳಿ
ಇಂದಿನ ದಿನಗಳಲ್ಲಿ ನಿಮಗೆ ಅಗತ್ಯವಿರಲೀ ಇಲ್ಲದಿರಲಿ, ಹೊರಗಿನ ತಾಪಮಾನ ಆಹ್ಲಾದಕರವಾಗಿರಲೀ ಇಲ್ಲದಿರಲಿ, ಒಟ್ಟಾರೆ ಏಸಿ ಮಾತ್ರ ನಡೆಯುತ್ತಲೇ ಇರಬೇಕು ಎಂಬ ಅಲಿಖಿತ ಕಾನೂನೊಂದು ಎಲ್ಲೆಡೆ ಜಾರಿಯಲ್ಲಿದೆ. ಹವಾನಿಯಂತ್ರಿತ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ!

ಇದರ ಪರಿಣಾಮವಾಗಿ ಕಛೇರಿ, ಸಿನೆಮಾ ಮಂದಿರ, ಆಹಾರ ಮಳಿಗೆ, ಸುಪರ್ ಮಾರ್ಕೆಟ್, ಒಟ್ಟಾರೆ ಎಲ್ಲಿ ಹೋದರೂ ಏಸಿಗಳು ಸತತವಾಗಿ ನಡೆಯುತ್ತಾ ಚಳಿ ಹುಟ್ಟಿಸುತ್ತವೆ. ಇದರಿಂದ ದೇಹದ ಕ್ಯಾಲೋರಿಗಳು ಖರ್ಚಾಗದೇ ಸ್ಥೂಲಕಾಯ ಹೆಚ್ಚುತ್ತದೆ.

ಆಗಾಗ ಎಲ್ಲರೊಂದಿಗೆ ಊಟಕ್ಕೆ ಹೋಗುವುದು
ಕಚೇರಿಯಲ್ಲಿ ನಾಲ್ಕಾರು ಜನರೊಂದಿಗೆ ಇದ್ದಾಗ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಲು ಎಲ್ಲರೊಂದಿಗಿನ ಒಡನಾಟ ತುಂಬಾ ಅಗತ್ಯ. ಆಗಾಗ ಎಲ್ಲರೂ ಊಟಕ್ಕೆ ಹೊರಗೆ ಹೋಗುವುದು ಅಥವಾ ತರಿಸುವುದು ಸಹಾ ಮಾಮೂಲಿ.


ಈ ಸಮಯದಲ್ಲಿ ಹೆಚ್ಚಿನವರು ತರಿಸುವುದು ಕೊಬ್ಬಿನ ಪ್ರಮಾಣ ಹೆಚ್ಚಿರುವ ಸಿದ್ದ ಆಹಾರಗಳನ್ನೇ! ಊಟದ ಸಮಯದಲ್ಲಿ ಹರಟೆ ಹೊಡೆಯುತ್ತಾ ಅಗತ್ಯಕ್ಕೂ ಹೆಚ್ಚು ಸಿದ್ದ ಆಹಾರಗಳನ್ನು ಹೊಟ್ಟೆಗೆ ಇಳಿಸುವ ಮೂಲಕ ಹೆಚ್ಚಿನ ತೂಕ ಏರುತ್ತದೆ. ಈ ವಿಷಯವನ್ನು ಆರೋಗ್ಯ ಮಾಧ್ಯಮಗಳೇ ದೃಢೀಕರಿಸಿವೆ.

ನಿಮ್ಮ ಸಹೋದ್ಯೋಗಿಗಳೂ ಸ್ಥೂಲಕಾಯರಾಗಿರುವುದು

ನಮ್ಮ ಮನವೊಂದು ಮರ್ಕಟವಿದ್ದಂತೆ. ಸುತ್ತಮುತ್ತಲ ಪ್ರದೇಶಕ್ಕೆ ಅನುಗುಣವಾಗಿ ವರ್ತಿಸುವುದು ಇದರದ್ದೊಂದು ಲಕ್ಷಣ. ಅಂತೆಯೇ ನಿಮ್ಮ ಸುತ್ತಮುತ್ತಲ ಜನರಲ್ಲಿ ಹೆಚ್ಚಿನವರು ಸ್ಥೂಲಕಾಯರಾಗಿದ್ದರೆ ಮತ್ತು ಇವರ ಆಹಾರ ಅಭ್ಯಾಸಗಳೆಲ್ಲಾ ಸ್ಥೂಲಕಾಯವನ್ನು ಹೆಚ್ಚಿಸುವಂತೆಯೇ ಆಗಿದ್ದರೆ ಇವರ ಪ್ರಭಾವದಿಂದ ಉಳಿದವರೂ ಹೆಚ್ಚು ಸ್ಥೂಲಕಾಯವುಳ್ಳವರಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಒತ್ತಡದಲ್ಲಿದ್ದಾಗ ಹೆಚ್ಚು ತಿನ್ನುವುದು
ಮನಸ್ಸು ಒತ್ತಡದಲ್ಲಿದ್ದಾಗ ನಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ಬೆವರು ಹರಿಸುವುದು, ರಕ್ತದ ಬಡಿತವನ್ನು ಹೆಚ್ಚಿಸುವುದು ಬಾಯಿ ಒಣಗಿಸುವುದು ಮೊದಲಾದವುಗಳಿಗೆ ಕಾರಣವಾಗುತ್ತವೆ.


ಇದರ ಜೊತೆಗೇ ಸಕ್ಕರೆ ಮತ್ತು ಕೊಬ್ಬಿನ ಆಹಾರಗಳಿಗೆ ಬೇಡಿಕೆಯನ್ನೂ ಸಲ್ಲಿಸುತ್ತವೆ. ಅಲ್ಲದೇ ಆ ಸಮಯದಲ್ಲಿ ಕ್ಯಾಲೋರಿಗಳನ್ನು ಖರ್ಚು ಮಾಡುವುದನ್ನೂ ಕಡಿಮೆ ಮಾಡಿಬಿಡುತ್ತವೆ. ಪರಿಣಾಮವಾಗಿ ಸ್ಥೂಲಕಾಯ ಏರುತ್ತಲೇ ಹೋಗುತ್ತದೆ.
English summary

shocking ways your job is making you fat

Yes, sitting on the desk all day can make you put on a lot of weight, but there are other surprising factors which contribute to weight gain in office. Are you wondering what they are? Read through the list.
Story first published: Wednesday, October 26, 2016, 19:16 [IST]
X
Desktop Bottom Promotion