ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ 'ಸ್ಪೆಷಲ್ ಕಾಫಿ'!

ಕಾಫಿ ಪ್ರಿಯರಿಗೆ ಒಂದು ಸಿಹಿ ಸುದ್ದಿ, ದಿನನಿತ್ಯ ಸೇವಿಸುವ ಕಾಫಿಗೆ ಕೊಂಚ ದಾಲ್ಚಿನ್ನಿ, ಕೋಕೋ, ಜೇನನ್ನು ಬೆರೆಸಿ ಕುಡಿದರೆ, ತಿಂಗಳಿಗೆ ಹತ್ತು ಕೇಜಿಗಳಷ್ಟು ತೂಕ ಇಳಿಸಿಕೊಳ್ಳಬಹುದು....

By: Arshad
Subscribe to Boldsky

ಕರ್ನಾಟಕದ ಜನರಿಗೆ ಟೀ ಗಿಂತಲೂ ಕಾಫಿಯೇ ಬೆಳಗ್ಗಿನ ಪೇಯವಾಗಿ ಹೆಚ್ಚು ಪ್ರಿಯವಾಗಿದೆ. ಹೆಚ್ಚಿನವರಿಗೆ ಕೊಡಗಿನ, ಚಿಕ್ಕಮಗಳೂರಿನ ಕಾಫಿ ಇಲ್ಲದೇ ಬೆಳಗ್ಗಿನ ಗಂಟೆಯೇ ಮುಂದೆ ಹೋಗದು. ಕಾಫಿಯಲ್ಲಿನ ಕೆಫೀನ್ ಮನಸ್ಸಿಗೆ ಮುದ ನೀಡಿದರೆ ರುಚಿಗಾಗಿ ಬೆರೆಸುವ ಸಕ್ಕರೆ ಮತ್ತು ಹಾಲಿನ ಕಾರಣ ದೇಹಕ್ಕೆ ಹೆಚ್ಚಿನ ಕೊಬ್ಬು ಲಭಿಸುತ್ತದೆ. ಬೆಳಗಿನ ಜಾವ ಸೇವಿಸಿ- ಬಿಸಿ ಬಿಸಿಯಾದ ಬೆಣ್ಣೆ ಕಾಫಿ!

ನಿತ್ಯವೂ ನಿಯಮಿತ ಪ್ರಮಾಣದಲ್ಲಿ ಕಾಫಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹಲವು ರೋಗಗಳನ್ನು ತಡೆಗಟ್ಟಬಹುದು. ಆದರೆ ಕಾಫಿಯ ಸೇವನೆಯಿಂದ ತೂಕವಿಳಿಸುವ ಕ್ರಿಯೆಗೆ ಕೊಂಚ ಹಿನ್ನಡೆಯುಂಟಾಗುತ್ತದೆ. ತಜ್ಞರು ಇದಕ್ಕೆ ಹಾಲಿಲ್ಲದ ಕಾಫಿ ಕುಡಿಯಲು ಸಲಹೆ ಮಾಡುತ್ತಾರೆ.

ಆದರೆ ವರ್ಷಗಳ ಸೇವನೆಯಿಂದ ಒಗ್ಗಿ ಹೋಗಿರುವ ನಾಲಿಗೆ ಇದನ್ನು ಒಪ್ಪಿಕೊಳ್ಳುವುದಿಲ್ಲ.ರುಚಿ ಹೆಚ್ಚಿಸಲು ಕೊಂಚ ದಾಲ್ಚಿನ್ನಿ, ಕೋಕೋ, ಜೇನು ಅಥವಾ ಕೊಬ್ಬರಿ ಮೊದಲಾದವುಗಳನ್ನು ಸೇರಿಸಬಹುದು. ಬೆಳಗ್ಗೆ ಒಂಬತ್ತರ ನಂತರ, ಕಾಫಿ ಸೇವಿಸಿ! ಕೇಳಿ ಆಶ್ಚರ್ಯವಾಯಿತೇ?

ಆದರೆ ತೂಕವನ್ನೂ ಇಳಿಸಬೇಕು, ಕಾಫಿಯನ್ನೂ ಬಿಡಲಾರೆ ಎಂಬ ಸ್ಥಿತಿ ಇದ್ದರೆ ಇವೆಲ್ಲವನ್ನೂ ಬೆರೆಸಿ ಕುಡಿಯುವ ಮೂಲಕ ತಿಂಗಳಿಗೆ ಹತ್ತು ಕೇಜಿಗೂ ತೂಕ ಇಳಿಸಲು ಸಾಧ್ಯ. ಬನ್ನಿ, ಈ ಅದ್ಭುತ ಪೇಯವನ್ನು ಕುಡಿಯುವ ಮೂಲಕ ನಿಮ್ಮ ತೂಕವಿಳಿಸುವ ಕ್ರಿಯೆ ಹೇಗೆ ಉತ್ತಮಗೊಳ್ಳುತ್ತದೆ ಎಂಬುದನ್ನು ನೋಡೋಣ....    

ದಾಲ್ಚಿನ್ನಿ ಮತ್ತು ಜೇನಿನ ಜೋಡಿ...

ದಾಲ್ಚಿನ್ನಿ ಅಥವಾ ಚಕ್ಕೆ ಮತ್ತು ಜೇನು ಭಿನ್ನವಾಗಿ ಕೆಲಸ ಮಾಡುತ್ತವೆ. ದಾಲ್ಚಿನ್ನಿ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸುವಂತೆ ಮಾಡಿದರೆ ಹಾಲಿನಲ್ಲಿದ್ದ ಪೋಷಕಾಂಶಗಳನ್ನು ಹೀರಿಕೊಳ್ಳಲು ಜೇನು ನೆರವಾಗುತ್ತದೆ.

ದಾಲ್ಚಿನ್ನಿ ಮತ್ತು ಜೇನಿನ ಜೋಡಿ...

ಕೊಬ್ಬರಿ ಎಣ್ಣೆ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಐಚ್ಛಿಕವಾಗಿ ಬಳಸಲಾಗುವ ಕೋಕೋ ಕಾಫಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬನ್ನಿ ಈ ಪೇಯವನ್ನು ತಯಾರಿಸುವ ಬಗೆಯನ್ನು ನೋಡೋಣ ಈಗ.... 

ಅಗತ್ಯವಿರುವ ಸಾಮಾಗ್ರಿಗಳು

*¾ ಕಪ್ ಕೊಬ್ಬರಿ ಎಣ್ಣೆ
*1 ಚಿಕ್ಕ ಚಮಚ ದಾಲ್ಚಿನ್ನಿ ಪುಡಿ
*½ ಕಪ್ ಜೇನು (ಐಚ್ಛಿಕ)
*1 ಚಿಕ್ಕ ಚಮಚ ಕೋಕೋ ಪುಡಿ (ಐಚ್ಛಿಕ)

ವಿಧಾನ

ಮೇಲೆ ತಿಳಿಸಿದ ಎಲ್ಲಾ ಸಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಲೇಹ್ಯದಷ್ಟು ದಪ್ಪನಾಗಿ ಅರೆಯಿರಿ. ಈ ಮಿಶ್ರಣವನ್ನು ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ.

ಬಳಕೆ

ಪ್ರತಿದಿನ ಬೆಳಿಗ್ಗೆ ನಿಮ್ಮ ಕಾಫಿ ಇನ್ನೂ ಬಿಸಿಬಿಸಿಯಾಗಿದ್ದಂತೆಯೇ ಈ ಮಿಶ್ರಣದ ಒಂದು ಅಥವಾ ಎರಡು ಚಿಕ್ಕಚಮದಷ್ಟು ಪ್ರಮಾಣವನ್ನು ಬೆರೆಸಿ ಚೆನ್ನಾಗಿ ಕಲಕಿ.

ಬಳಕೆ

ಪೂರ್ಣವಾಗಿ ಕರಗಿದ ಬಳಿಕ ಕುಡಿಯಿರಿ. ಕೊಬ್ಬರಿ ಎಣ್ಣೆ ಕಾಫಿಯ ಮೇಲೆ ತೇಲುತ್ತಾ ಕಾಫಿಯನ್ನು ಹೀರುವ ಅನುಭವವನ್ನು ಇನ್ನಷ್ಟು ಚೆನ್ನಾಗಿಸುತ್ತದೆ. ಕ್ರಮೇಣ ನಿಮ್ಮ ತೂಕವೂ ಇಳಿಮುಖವಾಗಿ ಹೋಗುವುದನ್ನು ಕಾಣಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, November 4, 2016, 12:35 [IST]
English summary

Put these two ingredients your coffee weightloss

Put These 2 Ingredients in Your Coffee. ... Not only will these ingredients help you lose weight, they will also improve the taste of your morning ...
Please Wait while comments are loading...
Subscribe Newsletter