For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಅಸ್ತಮಾ ವಿರುದ್ಧ ಹೋರಾಡಲು 'ಪಾಶಾಸನ'

By Manu
|

ಯೋಗಾಸನದಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿದ ಬಳಿಕ ಭಾರತೀಯರಿಗಿಂತ ಹೆಚ್ಚಾಗಿ ವಿದೇಶೀಯರೇ ಯೋಗಾಸನವನ್ನು ಹೆಚ್ಚು ಹೆಚ್ಚಾಗಿ ಅನುಸರಿಸುತ್ತಿದ್ದಾರೆ. ಇದು ಎಲ್ಲಾ ವಯೋಮಾನದವರಿಗೆ ಉತ್ತಮವಾದ ವ್ಯಾಯಾಮವಾಗಿದ್ದು ಹಲವಾರು ರೋಗಗಳಿಗೆ ಉತ್ತಮ ಪರಿಹಾರ ನೀಡುತ್ತದೆ.

ಶ್ವಾಸ ಪಡೆಯಲು ಕಷ್ಟವಾಗುವ ಅಸ್ತಮಾ ರೋಗಕ್ಕೂ ಕೆಲವು ಆಸನಗಳು ಉತ್ತಮ ಪರಿಹಾರ ಒದಗಿಸುತ್ತವೆ. ಅಸ್ತಮಾ ರೋಗಕ್ಕೆ ಕೆಲವಾರು ಕಾರಣಗಳಿವೆ. ಇವುಗಳಲ್ಲಿ ಅನುವಂಶಿಕ ತೊಂದರೆ, ನೀರಿನಲ್ಲಿ ಬದಲಾವಣೆ, ಗಾಳಿಯಲ್ಲಿ ಹೆಚ್ಚುತ್ತಿರುವ ಪ್ರದೂಷಣೆ, ಕೆಲವು ಪರಾಗಗಳಿಗೆ ದೇಹ ಅನುಭವಿಸುವ ಅಲರ್ಜಿ ಮೊದಲಾದವು ಪ್ರಮುಖವಾಗಿವೆ. ಥಂಡಿಯಲ್ಲಿ ಅಸ್ತಮಾ ಹೆಚ್ಚಾಗದಿರಲು ಕೆಲ ಸಲಹೆಗಳು

ಅಸ್ತಮಾ ಆವರಿಸಿದ ಬಳಿಕ ಇದಕ್ಕೆ ಸೂಕ್ತ ಔಷಧಿ ಲಭ್ಯವಿದೆಯಾದರೂ ಮೊದಲಿನ ಸ್ಥಿತಿಗೆ ಬರಲು ಸಾಧ್ಯವಿಲ್ಲ, ಆದರೆ ಹೆಚ್ಚೂ ಕಡಿಮೆ ಮೊದಲ ಸ್ಥಿತಿಯನ್ನು ಪಡೆಯಬಹುದು. ಅಲ್ಲದೇ ಇಂದು ಲಭ್ಯವಿರುವ ಔಷಧಿಗಳ ಮೂಲಕ ಈ ಸ್ಥಿತಿ ಬರದೇ ಇರುವಂತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಆದರೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದ್ದರೆ ಇದಕ್ಕೆ ಯೋಗಾಸನವೇ ಅತ್ಯುತ್ತಮ ಪರಿಹಾರ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Pasasana (Noose Pose) To Treat Asthma

ಅಸ್ತಮಾ ರೋಗದ ಪ್ರಭಾವವನ್ನು ಕಡಿಮೆ ಮಾಡಲು ಸಮರ್ಥವಾದ ಆಸನವೆಂದರೆ ಪಾಶಾಸನ. ಪಾಶ ಎಂದರೆ ಸಂಸ್ಕೃತದಲ್ಲಿ ಮೂಗು ಮತ್ತು ಆಸನ ಎಂದರೆ ಭಂಗಿ. ಬನ್ನಿ, ಈ ಆಸನವನ್ನು ಹೇಗೆ ಅನುಸರಿಸುವುದು ಎಂದು ಕಲಿತು ಅಸ್ತಮಾ ರೋಗದ ವಿರುದ್ಧ ಹೋರಾಡೋಣ: ಪಾಶಾಸನವನ್ನು ಹಂತ ಹಂತವಾಗಿ ಅನುಸರಿಸುವ ಕ್ರಮ: ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ

1. ಮೊದಲು ತಾಡಾಸನದಲ್ಲಿ ನಿಲ್ಲುವಂತೆ ನೆಟ್ಟಗೆ ನಿಂತುಕೊಳ್ಳಿ
2. ಈಗ ಮೊಣಕಾಲು ಮಡಚಿ ಕುಕ್ಕರಗಾಲಿನಲ್ಲಿ, ಅಂದರೆ ಕೇವಲ ಪಾದಗಳ ತುದಿಭಾಗ ನೆಲಕ್ಕೆ ತಾಕುವಂತೆ ಕುಳಿತುಕೊಳ್ಳಿ.
3. ಈ ಹಂತದಲ್ಲಿ ಪೃಷ್ಠಭಾಗ ಹಿಮ್ಮಡಿಯ ಮೇಲೆ ಸಮತೋಲನದಲ್ಲಿರಬೇಕು, ಅಂದರೆ ಯಾವುದೇ ಆಧಾರವಿಲ್ಲದೇ ಕುಳಿತುಕೊಳ್ಳಬೇಕು. ಎದೆಯ ಭಾಗ ಮೊಣಕಾಲುಗಳಿಗೆ ಒತ್ತುತ್ತಿರಬೇಕು.
4. ಈಗ ದೇಹವನ್ನು ಬಲಭಾಗಕ್ಕೆ ತಿರುಗಿಸಿ ಎಡಗೈಯ ಮೇಲ್ಭಾಗ ಬಲಮೊಣಕಾಲಿನ ಅತ್ತಬದಿ ಬರುವಂತೆ ತಿರುಗಿಸಬೇಕು. ಅಂದರೆ ಎಡಭುಜ ಬಲ ಮೊಣಕಾಲಿಗೆ ತಾಕುತ್ತಿರಬೇಕು.
5. ಈಗ ನಿಮ್ಮ ಎಡಗೈಯನ್ನು ಕೆಳಗಿನಿಂದ ಅತ್ತ ಬದಿ ಬರುವಂತೆ ಚಾಚಬೇಕು. ಅತ್ತ ಬಲಗೈಯನ್ನು ಬೆನ್ನಹಿಂಭಾಗದಿಂದ ತಂದು ಬೆರಳುಗಳಿಂದ ಎಡಗೈ ಬೆರಳುಗಳನ್ನು ಹಿಡಿದು ಸೆಳೆಯಬೇಕು.
6. ಈಗ ನಿಮ್ಮ ಎರಡೂ ಭುಜಗಳ ಮೂಳೆಗಳು ಸಾಧ್ಯವಾದಷ್ಟು ಹಿಂದಕ್ಕೆ ಹೋಗುವಂತೆ ಸೆಳೆಯಬೇಕು.
7. ಈಗ ನೆಲದಿಂದ ಮೇಲಿದ್ದ ಹಿಮ್ಮಡಿಗಳನ್ನು ನೆಲದ ಮೇಲಿರಿಸಬೇಕು.
8. ಈಗ ಕುತ್ತಿಗೆಯನ್ನು ಹಿಂದಕ್ಕೆ ವಾಲಿಸಿ ಸಾಧ್ಯವಾದಷ್ಟು ಎಡಬದಿಗೆ ತಿರುಗಿಸಿ. ಅಂದರೆ ಎದೆಯ ಮೂಳೆಯೂ ಸೆಳೆತಕ್ಕೊಳಗಾಗಲಿ.್
9. ಈ ಹಂತದಲ್ಲಿ ಸಾಕಷ್ಟು ದೀರ್ಘವಾಗಿ ಉಸಿರಾಡುತ್ತಾ ಸುಮಾರು ನಾಲ್ಕೈದು ನಿಮಿಷ ಹಾಗೇ ಇರಲು ಯತ್ನಿಸಿ. ಪ್ರಾರಂಭದಲ್ಲಿ ಸಾಧ್ಯವಾಗದಿದ್ದರೂ ಕ್ರಮೇಣವಾಗಿ ಸಾಧ್ಯವಾಗುತ್ತದೆ, ಬಳಿಕ ಬಂದ ಹಾಗೇ ಮೊದಲಿನ ಸ್ಥಿತಿಗೆ ಬನ್ನಿ.
10. ನಂತರ ಇದೇ ಕ್ರಮವನ್ನು ದೇಹದ ಇನ್ನೊಂದು ಬದಿಯಿಂದ ಅನುಸರಿಸಿ.

ಪಾಶಾಸನದ ಪ್ರಯೋಜನಗಳು:
*ಬೆನ್ನುಹುರಿಗೆ ಹೆಚ್ಚು ಸೆಳೆತ ನೀಡುವ ಮೂಲಕ ಭುಜಗಳಲ್ಲಿ ಆವರಿಸಿದ್ದ ಸೆಳೆತ ಕಡಿಮೆಯಾಗುತ್ತದೆ.
*ಪ್ರಷ್ಠದ ಸ್ನಾಯುಗಳು ಮತ್ತು ಮೂಳೆಗಳನ್ನು ಹಾಗೂ ಪಾದದ ಮೂಳೆಗಳನ್ನು ದೃಢಗೊಳಿಸುತ್ತದೆ.
*ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತದೆ.
*ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ದಂಡಾಸನ- ವಾತಕ್ಕೆ ಸಂಬಂಧಪಟ್ಟ ನೋವಿಗೆ ರಾಮಬಾಣ

ಎಚ್ಚರಿಕೆ:
ಪಾದದ ಗಂಟು ಅಥವಾ ಸೊಂಟದ ಮೂಳೆಯಲ್ಲಿ ನೋವು ಅಥವಾ ಗಾಯಗಳಿರುವವರು ಈ ಆಸನವನ್ನು ಅನುಸರಿಸದಿರುವುದು ಉತ್ತಮ. ಆದರೂ ಯಾವುದಕ್ಕೂ ನಿಮ್ಮ ಯೋಗ ಶಿಕ್ಷಕರನ್ನು ಭೇಟಿಯಾಗಿ ನಿಮ್ಮ ತೊಂದರೆಗಳನ್ನು ಮೊದಲೇ ತಿಳಿಸಿದರೆ ನಿಮಗೆ ಈ ಆಸನ ಸೂಕ್ತವೋ ಅಲ್ಲವೋ ಎಂಬುದನ್ನು ಅವರು ನೋಡಿ ಸಲಹೆ ನೀಡಬಲ್ಲರು.

English summary

Pasasana (Noose Pose) To Treat Asthma

Asthma seems to be a growing health concern, as it has been affecting people from all ages, right from the kids to the elderly. There are several factors that may trigger the symptoms of asthma. Change in weather, increasing pollution level, etc, are considered as few of the environmental factors that can stimulate asthma. There are certain cases of asthma which are genetic as well.
X
Desktop Bottom Promotion