For Quick Alerts
ALLOW NOTIFICATIONS  
For Daily Alerts

ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'

By Manu
|

ಬಹುಶಃ ನೀವು ಆರೋಗ್ಯಕರವಾಗಿರಲು ಹೊಸ, ಹೊಸ ಮಾರ್ಗಗಳ ಹುಡುಕಾಟವನ್ನು ನಡೆಸುತ್ತಿರಬಹುದು. ಯಾವ ವ್ಯಾಯಮವನ್ನು ಮಾಡಿದರೆ ಒಳ್ಳೆಯದು ಎಂದು ನೀವು ಚಿಂತಿಸುತ್ತಿರಬಹುದು. ಅದರಲ್ಲೂ ನಿಮ್ಮ ಕಾಲುಗಳು ತುಂಬಾ ದುರ್ಬಲಗೊಂಡಿವೆ ಎಂಬ ಭಾವನೆಯು ನಿಮ್ಮನ್ನು ಕಾಡುತ್ತಿರಬಹುದು. ಸದೃಢ ಕಾಲುಗಳು ಸದೃಢ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುತ್ತವೆ. ಅದಕ್ಕಾಗಿಯೇ ಜಂಪಿಂಗ್, ಓಟ, ಜಾಗಿಂಗ್, ನಡಿಗೆ ಇತ್ಯಾದಿ ವ್ಯಾಯಮಗಳನ್ನು ಕಾಲುಗಳನ್ನು ಬಲಿಷ್ಠ ಮಾಡುವುದಕ್ಕಾಗಿಯೇ ಕಂಡು ಹಿಡಿದಿದ್ದಾರೆ ಎನಿಸುತ್ತದೆ.

 Parivrtta Trikonasana (Revolved Triangle Pose) For Stronger Legs

ಕಾಲುಗಳು ಎಷ್ಟು ಸಮರ್ಥವಾಗಿದ್ದರೆ ಅಷ್ಟು ಸಾಮರ್ಥ್ಯ ನಿಮ್ಮಲ್ಲಿ ಇದೆ ಎಂದರ್ಥ. ಫುಟ್‌ಬಾಲ್ ಸೇರಿದರೆ ಹಲವಾರು ಹೊರಾಂಗಣ ಕ್ರೀಡೆಗಳಿಗೆ ಕಾಲೇ ಪ್ರಧಾನ. ಇನ್ನು ಕುಳಿತು ಕೆಲಸ ಮಾಡುವ ಜನ ಕಾಲಿನಿಂದ ನಮಗೆ ಯಾವುದೇ ಪ್ರಯೋಜನ ಇಲ್ಲ ಎಂದುಕೊಂಡರೆ ತಪ್ಪು. ಏಕೆಂದರೆ ಕಾಲುಗಳು ವ್ಯಾಯಾಮವಿಲ್ಲದೆ ದುರ್ಬಲಗೊಂಡರೆ ನೀವೂ ಸಹ ದುರ್ಬಲರಾಗುತ್ತೀರಿ. ಕಾಲುಗಳು ಚಟುವಟಿಕೆಯಿಂದ ಇದ್ದರೆ ದೇಹ ಲವಲವಿಕೆಯಿಂದ ಇರುತ್ತದೆ.

ಈಗ, ಇಷ್ಟೆಲ್ಲಾ ತಿಳಿದ ಮೇಲೆ, ನಿಮಗೂ ಸದೃಢ ಕಾಲುಗಳು ಬೇಕು ಎಂದೆನಿಸುತ್ತಿದೆಯಲ್ಲವೇ? ಅದಕ್ಕಾಗಿ ಒಂದು ಯೋಗಾಸನವಿದೆ. ಅದರ ಹೆಸರೇ ಪರಿವೃತ್ತ ತ್ರಿಕೋನಾಸನ. ಬನ್ನಿ ಅದನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಕೆಳ ಬೆನ್ನು ನೋವಿಗೆ ಒಂದೇ ಪರಿಹಾರ 'ಮರೀಚ್ಯಾಸನ'

ಪರಿವೃತ್ತ ತ್ರಿಕೋನಾಸನ ಎಂಬ ಪದವು ಸಂಸ್ಕೃತ ಪದವಾಗಿದ್ದು "ಪರಿವೃತ್ತ" ಎಂದರೆ ತಿರುಗಿದ ಮತ್ತು "ತ್ರಿಕೋನ" ಎಂದರೆ ತ್ರಿಭುಜದದಂತಹ ಆಸನ ಎಂದರ್ಥವನ್ನು ನೀಡುತ್ತದೆ.
ಬನ್ನಿ ಈ ಯೋಗಾಸನವನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ...
1)ನೇರವಾಗಿ ನಿಂತುಕೊಳ್ಳಿ, ಪರ್ವತಾಸನ ಮಾಡುವಾಗ ನಿಲ್ಲುವಿರಲ್ಲವೇ ಹಾಗೆ. ಇದೇ ಈ ಆಸನಕ್ಕೆ ಸ್ಥಿತಿ.
2)ಒಂದು ಕಾಲನ್ನು ಹಿಂದಕ್ಕೆ ಸರಿಸಿ, ಸ್ವಲ್ಪ ತಿರುಗಿಸಿ.
3)ನಿಮ್ಮ ಇನ್ನೊಂದು ಪಾದವು ಮುಂದೆ ಇರಬೇಕು.
4)ಎರಡೂ ಕಾಲಿನ ಹಿಮ್ಮಡಿ ಮತ್ತು ಪಾದದ ಕಮಾನು ಸಮವಾಗಿರಬೇಕು.
5)ನಿಮ್ಮ ಒಂದು ಕೈಯನು ಸೊಂಟದ ಮೇಲೆ ಇಡಿ, ಇನ್ನೊಂದು ಕೈಯನ್ನು ನೇರವಾಗಿ ತಲೆಯ ಮೇಲೆ ಚಾಚಿ.
6)ನಿಮ್ಮ ಬೆನ್ನು ಮೂಳೆಯನ್ನು ಹಿಗ್ಗಿಸಿ ಮತ್ತು ಕೆಳ ಬೆನ್ನನ್ನು ಸಹ ಹಿಗ್ಗಿಸಿ.
7)ದೀರ್ಘವಾದ ಶ್ವಾಸವನ್ನು ತೆಗೆದುಕೊಳ್ಳಿ. ಒಂದು ಕೈಯಿಂದ ನೆಲವನ್ನು ಮುಟ್ಟಿ. ದೇಹ ಬಳುಕಬಾರದು.
8)ಸೊಂಟವನ್ನು ತಿರುಗಿಸಿ ಮತ್ತು ಕೈಯನ್ನು ಸಾಧ್ಯವಾದಷ್ಟು ನೇರವಾಗಿ ಚಾಚಿ.(ಚಿತ್ರದಲ್ಲಿ ತೋರಿಸಿರುವಂತೆ)
9)ನಿಧಾನವಾಗಿ ಈ ಸ್ಥಿತಿಯಿಂದ ಹೊರಬನ್ನಿ.
10)ಇದೇ ಭಂಗಿಯನ್ನು ಇನ್ನೊಂದು ಕಾಲು ಮತ್ತು ಕೈಯನ್ನು ಬಳಸಿ ಪುನರಾವರ್ತಿಸಿ. ಸದೃಢ ಸ್ನಾಯುಗಳ ಆರೋಗ್ಯಕ್ಕೆ-ಪರಿಗಾಸನ

ಪರಿವೃತ್ತ ತ್ರಿಕೋನಾಸನದ ಇತರೆ ಪ್ರಯೋಜನಗಳು
*ಹೊಟ್ಟೆಯ ಭಾಗದ ಅಂಗಗಳನ್ನು ಉದ್ದೀಪಿಸಲು ಸಹಾಯ ಮಾಡುತ್ತದೆ.
*ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
*ಉಸಿರಾಟವನ್ನು ಸುಧಾರಿಸುತ್ತದೆ.
*ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
*ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ.
*ಸೊಂಟ ಮತ್ತು ಬೆನ್ನು ಮೂಳೆಯನ್ನು ಹಿಗ್ಗಿಸುತ್ತದೆ. ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ಎಚ್ಚರಿಕೆ
ಬೆನ್ನುಮೂಳೆ ಗಾಯ, ಸೊಂಟದ ನರದ ತೊಂದರೆ, ಕೆಳಬೆನ್ನಿನ ನೋವು, ತಲೆನೋವು, ಮೈಗ್ರೇನ್ ತೊಂದರೆ ಇರುವವರು ಈ ಆಸನವನ್ನು ಅನುಸರಿಸಬಾರದು. ಈ ನೋವುಗಳ ತೀವ್ರತೆಯನ್ನು ಪರಿಗಣಿಸಿ ಯೋಗಶಿಕ್ಷಕರು ಅಥವಾ ನಿಮ್ಮ ವೈದ್ಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲರು.

English summary

Parivrtta Trikonasana (Revolved Triangle Pose) For Stronger Legs

You have been looking out for a way to go healthy, you chose on your exercise regime and then all of a sudden you are not able to move your legs. You get stuck. The word Parivrtta Trikonasana comes from the Sanskrit word 'Parivrtta' which means revolved, 'Trikona' which means triangle and 'Asana' which means pose. Have a look at the step-wise procedure to perform Parivrtta Trikonasana.
X
Desktop Bottom Promotion