ಕಿಬ್ಬೊಟ್ಟೆಯ ಅಂಗಾಂಗಗಳ ಆರೋಗ್ಯಕ್ಕೆ- ಪರಿವೃತ್ತ ಜಾನು ಶಿರಸಾಸನ

By: vani nayak
Subscribe to Boldsky

ಕಿಡ್ನಿ, ಲಿವರ್ ಮತ್ತು ಉದರ ಇವು ಹೊಟ್ಟೆಯ ಪ್ರಮುಖ ಭಾಗಗಳಾಗಿವೆ. ಈ ಅಂಗಾಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಎಲ್ಲರ ಮೊಟ್ಟ ಮೊದಲ ಆದ್ಯತೆ ಆಗಬೇಕು. ಏಕೆಂದರೆ ಈ ಅಂಗಾಗಗಳಿಗೆ ಸ್ವಲ್ಪ ಕೂಡ ತೊಂದರೆಯಾದರೆ ಇಡೀ ದೇಹದ ಕಾರ್ಯ ನಿರ್ವಹಣೆ ಏರುಪೇರಾಗುತ್ತದೆ. ಹಾಗಾಗಿ ಉದರದ ಅಂಗಾಗಗಳನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಾಧ್ಯ?

ಹೊಟ್ಟೆಯ ಭಾಗದ ಅಂಗಾಗಗಳನ್ನು ಅಥವಾ ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಉತ್ತೇಜಿಸಲು ಉತ್ತಮ ವಿಧಾನವನ್ನು ಹುಡುಕುತ್ತಿದ್ದರೆ, ಅದಕ್ಕೆ ಯೋಗಾಸನವು ಸರಿಯಾದ ಮಾರ್ಗವಾಗಿರುತ್ತದೆ. ಅದರಲ್ಲೂ ಪರಿವೃತ್ತ ಜಾನು ಶಿರಸಾಸನ ಹೊಟ್ಟೆಯ ಭಾಗದ ಅಂಗಾಗಗಳನ್ನು ಉತ್ತೇಜಿಸಲು ಉತ್ತಮ ಆಸನವಾಗಿದೆ.    ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'   

ಪರಿವೃತ್ತ ಜಾನು ಶಿರಸಾಸನ ಎಂಬ ಪದವನ್ನು ಸಂಸ್ಕೃತ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಪರಿವೃತ್ತ ಎಂದರೆ "ಸುತ್ತ" ಎಂದರ್ಥ. ಜಾನು ಎಂದರೆ "ಮಂಡಿ" ಎಂದರ್ಥ. ಶಿರಸ ಎಂದರೆ "ತಲೆ" ಎಂದರ್ಥ ಮತ್ತು ಆಸನ ಎಂದರೆ "ಭಂಗಿ" ಎಂದರ್ಥ. ಪ್ರಾರಂಭಿಕ ಹಂತದಲ್ಲಿ ಈ ಆಸನವನ್ನು ಹಾಕುವುದು ಕಷ್ಟವಾಗಬಹುದು. ಆದರೆ ನಿರಂತರ ಅಭ್ಯಾಸದಿಂದ ಸುಲಭವಾಗುತ್ತದೆ. ಪರಿವೃತ್ತ ಜಾನು ಶಿರಸಾಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

Parivrtta Janu Sirsasana
 

ಈ ಆಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲಿಗೆ ನೆಲದ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ ಚಾಚಿ.
2. ನಂತರ ಒಂದು ಕಾಲನ್ನು ವಿಧಾನವಾಗಿ ಮಡಿಸಿ ತೊಡೆಸಂದಲ್ಲಿ ಇರಿಸಿ.
3. ನಿಧಾನವಾಗಿ ಬಲಮಂಡಿಯನ್ನು ಸಹ ಮಡಿಸಿ ಬಲ ಸೊಂಟದ ಹತ್ತಿರ ಇರಿಸಿ.
4. ಧೀರ್ಘವಾಗಿ ಉಸಿರೆಳೆದುಕೊಂಡು, ಬಲಭಾಗದೆಡೆಗೆ ಬಾಗಿ.
5. ಪಾದದ ಕಡೆಗೆ ಬಾಗಲು ಪ್ರಯತ್ನಿಸಿ.

Parivrtta Janu Sirsasana

6. ಬಲಗಾಲಿನ ಕಾಲ್ಬೆರಳುಗಳನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಿ.
7. ಕಾಲ್ಬೆರಳುಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡು, ನಿಧಾನವಾಗಿ ಮಂಡಿಯನ್ನು ನೇರವಾಗಿಸಿ.
8. ನಿಧಾನವಾಗಿ ನಿಮ್ಮ ಹೆಡಕನ್ನು ಸೂರಿನತ್ತ ಮೇಲಕ್ಕೆ ಎತ್ತಿ.
9. ಎಡಗೈಯನ್ನು ತಲೆಯ ಮೇಲಕ್ಕೆ ಚಾಚಬೇಕು.
10. ದೀರ್ಘವಾಗಿ ಉಸಿರೆಳೆದುಕೊಂಡು ಮುಂದಕ್ಕೆ ಚಾಚಿ.
11. ಇದೇ ಭಂಗಿಯಲ್ಲಿ ಸ್ವಲ್ಪ ಸಮಯ ಇರಬೇಕು.
12. ಈ ಕ್ರಮವನ್ನು ಇನ್ನೊಂದು ಕಾಲಿಗೂ ಅನುಸರಿಸಬೇಕು.    ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ

ಪರಿವೃತ್ತ ಜಾನು ಶಿರಸಾಸನದಿಂದಾಗುವ ಇತರ ಲಾಭಗಳು:
*ಭುಜಗಳ ಹಿಗ್ಗುವಿಕೆಗೆ ನೆರವಾಗುತ್ತದೆ
*ಬೆನ್ನೆಲುಬನ್ನು ಹಿಗ್ಗಿಸಲು ನೆರವಾಗುತ್ತದೆ
*ಮಂಡಿರಜ್ಜಿಗೆ ಬಲವನ್ನು ತಂದುಕೊಡುತ್ತದೆ
*ಬೆನ್ನು ನೋವಿನಿಂದ ಬಳಲುವವರಿಗೆ ಆರಾಮ ಕೊಡುತ್ತದೆ
*ಆಯಾಸವನ್ನು ನಿವಾರಿಸುತ್ತದೆ.

Parivrtta Janu Sirsasana
 

ಎಚ್ಚರಿಕೆ:
ತೋಳುಗಳಲ್ಲಿ ಗಾಯಗೊಂಡವರು, ಪಚನ ಸಮಸ್ಯೆಯನ್ನು ಹಾಗು ಡೈಯೇರಿಯಾವನ್ನು ಎದುರಿಸುತ್ತಿರುವವರು ಈ ಆಸನವನ್ನು ಹಾಕುವಾಗ ಎಚ್ಚರಿಕೆ ವಹಿಸಬೇಕು. ನುರಿತ ಯೋಗಾ ತರಬೇತಿದಾರರಿಂದ ಸಲಹೆಗಳ ಮೇರೆಗೆ ಹಾಕುವುದು ಹೆಚ್ಚು ಸೂಕ್ತ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Parivrtta Janu Sirsasana to Stimulate The Abdominal Organs

The kidneys, liver and stomach form the most important parts of the abdominal organs. Keeping these organs healthy should be a priority for everyone, as any damage to these organs would affect the entire functioning of the body. So how do we ensure that we have healthy abdominal organs?
Please Wait while comments are loading...
Subscribe Newsletter