ಸ್ಥೂಲಕಾಯದಿಂದ ಮುಕ್ತಿ ಹೊಂದಲು ಸುಲಭೋಪಾಯ

ಇಷ್ಟದ ತಿಂಡಿ ತಿನಿಸನ್ನು ತ್ಯಾಗ ಮಾಡಿ, ದಿನ ನಿತ್ಯ ನಡಿಗೆ, ವ್ಯಾಯಾಮ ಮಾಡಿದರೂ ಸ್ಥೂಲಕಾಯವೇ ಅಟ್ಟಹಾಸ ಬೀರುತ್ತಿದೆಯೇ? ಹಾಗಾದರೆ ಇದಕ್ಕೆ ನಿಮ್ಮ ಕೆಲವು ಮುಂಜಾನೆಯ ಅಭ್ಯಾಸಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿದ್ದಿರಬಹುದು...!

By: Arshad
Subscribe to Boldsky

ಸ್ಥೂಲಕಾಯ ಕಳೆದುಕೊಳ್ಳಲು ನೀವು ನಡೆಸುತ್ತಿರುವ ಪ್ರಯತ್ನಗಳು ಫಲಕಾರಿಯಾಗುತ್ತಿಲ್ಲವೇ? ನಿಮ್ಮ ನೆಚ್ಚಿನ ಸಿದ್ಧ ಆಹಾರಗಳನ್ನು ತ್ಯಾಗ ಮಾಡಿ ನಡಿಗೆ, ವ್ಯಾಯಾಮ ಮೊದಲಾದವುಗಳನ್ನು ಆಚರಿಸಿದರೂ ನಿಮ್ಮ ತ್ಯಾಗದ ಬದಲಾಗಿ ಸ್ಥೂಲಕಾಯವೇ ಅಟ್ಟಹಾಸ ಬೀರುತ್ತಿದೆಯೇ? 

belly fat
 

ಹಾಗಾದರೆ ಇದಕ್ಕೆ ನಿಮ್ಮ ಕೆಲವು ಮುಂಜಾನೆಯ ಅಭ್ಯಾಸಗಳು ನಿಮ್ಮ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿದ್ದಿರಬಹುದು. ಈ ಅಭ್ಯಾಸಗಳು ಯಾವುವು ಎಂಬ ಕುತೂಹಲ ಮೂಡಿತೇ, ಬನ್ನಿ, ಈ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ:

ಮುಂಜಾನೆಯ ಸವಿನಿದ್ದೆಯನ್ನು ಹೆಚ್ಚು ಕಾಲ ಅನುಭವಿಸುವುದು
ನಿದ್ದೆಯ ಸಮಯದಲ್ಲಿ ದೇಹದಲ್ಲಿ ಬಹಳಷ್ಟು ಅನೈಚ್ಛಿಕ ಕೆಲಸಗಳು ನಡೆಯುತ್ತವೆ. ಬೆಳಿಗ್ಗೆದ್ದ ಬಳಿಕ ಇತರ ಕೆಲಸಗಳು ಮುಂದುವರೆಯಬೇಕು. ಈ ಕೆಲಸಗಳನ್ನು ನಿರ್ವಹಿಸಲು ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಈ ಸಮಯದಲ್ಲಿ ನಿದ್ದೆ ಮಾಡುವುದನ್ನು ಮುಂದುವರೆಸಿದರೆ ಈ ಕೊಬ್ಬು ಬಳಸಲ್ಪಡದೇ ಹಾಗೇ ಉಳಿದುಬಿಡುತ್ತದೆ.

Sleep
 

PLoS ONE ಎಂಬ ಆರೊಗ್ಯ ನಿಯತಕಾಲಿಕೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ದಿನಕ್ಕೆ ಹತ್ತು ಗಂಟೆಗೂ ಹೆಚ್ಚು ಹೊತ್ತು ನಿದ್ರಿಸಿದರೆ ಸ್ಥೂಲಕಾಯ ಹೆಚ್ಚುವ ಸಾಧ್ಯತೆ ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ರಿಸಿರುವವರಿಗಿಂತಲೂ ಹೆಚ್ಚು.

ಗಾಢನಿದ್ರೆ ಆವರಿಸದೇ ಇರುವುದು
ಬಿಎಂಐ ಅಥವಾ ದೇಹದ ಎತ್ತರಕ್ಕೆ ತಕ್ಕ ತೂಕ ಸರಿಯಾದ ಮಟ್ಟದಲ್ಲಿರುವುದು ಆರೋಗ್ಯಕ್ಕೆ ಮೂಲ. National Sleep Foundation ಎಂಬ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ನಿತ್ಯವೂ ಬೇಗನೇ ಮಲಗಿ ಬೇಗನೇ ಏಳದೇ ಇರುವ ಅಭ್ಯಾಸವಿರುವವರಿಗೆ ಗಾಢ ನಿದ್ದೆ ಆವರಿಸದೇ ತೂಕ ಇಳಿಸುವ ಪ್ರಯತ್ನಗಳು ಹೆಚ್ಚು ಫಲಕಾರಿಯಾಗುವುದಿಲ್ಲ.  ಬರೀ ಎರಡೇ ವಾರಗಳಲ್ಲಿ ಬರೋಬ್ಬರಿ 5 ಕೆ.ಜಿ ತೂಕ ಇಳಿಸಿಕೊಳ್ಳಿ!  

belly fat
 

ತೂಕ ನೋಡಿಕೊಳ್ಳದೇ ಇರುವುದು
ವೈದ್ಯಕೀಯ ಪತ್ರಿಕೆಯೊಂದು ನೀಡಿರುವ ವಿವರದ ಪ್ರಕಾರ ನಿಯಮಿತವಾಗಿ, ಸಾಧ್ಯವಾದರೆ ನಿತ್ಯವೂ ತೂಕ ನೋಡಿಕೊಳ್ಳುತ್ತಾ ಇರಬೇಕು. ಆಗಲೇ ಮಾನಸಿಕವಾಗಿ ತೂಕ ಇಳಿಸುವ ಪ್ರಕ್ರಿಯೆಗೆ ಫಲ ಸಿಗುತ್ತದೆ ಎಂದು ತಿಳಿದುಬಂದಿದೆ. ತೂಕ ನೋಡಿಕೊಳ್ಳಲು ಅತ್ಯುತ್ತಮ ಸಮಯವೆಂದರೆ ಬೆಳಿಗ್ಗೆದ್ದ ಬಳಿಕ ಪ್ರಾತಃವಿಧಿಗಳನ್ನು ಮುಗಿಸಿದ ಬಳಿಕ ಖಾಲಿಹೊಟ್ಟೆಯಲ್ಲಿ ನೋಡಿಕೊಳ್ಳುವುದು. ಏಕೆಂದರೆ ಈ ಸಮಯದಲ್ಲಿ ದೇಹ ನೀರು ಮತ್ತು ಕಲ್ಮಶಗಳನ್ನು ಕಳೆದುಕೊಂಡಿದ್ದು ಸರಿಯಾದ ತೂಕ ಲಭಿಸುತ್ತದೆ.  

weight loss
 

ಬೆಳಗ್ಗಿನ ಸೂರ್ಯನ ಕಿರಣಗಳನ್ನು ಪಡೆಯದೇ ಇರುವುದು
ವರದಿಯ ಪ್ರಕಾರ ಬೆಳಗ್ಗಿನ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡಿಕೊಳ್ಳುವ ಮೂಲಕ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ವಿಟಮಿನ್ ಡಿ ಲಭಿಸುತ್ತದೆ. ಇದು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲವನ್ನೂ ನೀಡುತ್ತದೆ.

ಮುಂಜಾನೆಯ ಉಪಾಹಾರ ತ್ಯಜಿಸುವುದು
ದಿನದ ಮೂರೂ ಹೊತ್ತಿನ ಆಹಾರಗಳಲ್ಲಿ ಕಡೆಗಣಿಸಲೇಬಾರದ ಆಹಾರ ಅಂದರೆ ಮುಂಜಾನೆಯ ಉಪಾಹಾರ. ಮುಂಜಾನೆಯ ಹೊತ್ತಿನಲ್ಲಿ ಮೆದುಳಿಗೆ ಹೆಚ್ಚಿನ ರಕ್ತದ ಸಂಚಾರ ಅಗತ್ಯವಿದ್ದು ಉಪಾಹಾರವನ್ನು ತ್ಯಜಿಸುವ ಮೂಲಕ ಮೆದುಳಿಗೆ ರಕ್ತದ ಕೊರತೆ ಎದುರಾಗುತ್ತದೆ. ಅಲ್ಲದೇ ರಾತ್ರಿಯ ಕ್ರಿಯೆಗಳಿಗೆ ದೇಹ ಶಕ್ತಿಯನ್ನು ಬಳಸಿರುವ ಕಾರಣ ಬೆಳಗ್ಗಿನ ಹೊತ್ತಿನಲ್ಲಿ ಹಸಿವು ಹೆಚ್ಚಿರುತ್ತದೆ.

breakfast
 

ಈ ಹೊತ್ತಿನಲ್ಲಿ ಅಲ್ಪ ಉಪಾಹರವೇ ಅತ್ಯುತ್ತಮ. ಉಪಾಹಾರ ತ್ಯಜಿಸಿದರೆ ಹಸಿವಿನ ಸಂಕೇತಗಳು ಬಲವಾಗುತ್ತಾ ಹೋಗುತ್ತದೆ ಹಾಗೂ ಅನಿವಾರ್ಯವಾಗಿ ಹೆಚ್ಚಿನ ಕೊಬ್ಬಿನಾಂಶವಿರುವ ಸಿದ್ಧ ಆಹಾರಗಳತ್ತ ಮತ್ತು ಹೆಚ್ಚಿನ ಸಕ್ಕರೆ ಇರುವ ಆಹಾರಗಳತ್ತ ಒಲವು ಮೂಡಿಸುತ್ತದೆ. ಪರಿಣಾಮವಾಗಿ ಹಿಂದಿನ ದಿನಗಳಲ್ಲಿ ಮಾಡಿದ ಪ್ರಯತ್ನಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.  ಕಡಿಮೆ ಖರ್ಚಿನಲ್ಲಿ ಕೊಬ್ಬು ಕರಗಿಸಲು ಅಪ್ಪಟ ಭಾರತೀಯ ಅಡುಗೆಗಳು!

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, November 28, 2016, 10:05 [IST]
English summary

Morning habits that are making you fat

You started to exercise, and you have done away with the fast food, but you see no difference on your weighing scale. The problem could be with your morning habits which are preventing you from losing weight. So are you making these mistakes?
Please Wait while comments are loading...
Subscribe Newsletter