For Quick Alerts
ALLOW NOTIFICATIONS  
For Daily Alerts

ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು

By Manu
|

ಯೋಗಾಸನದಲ್ಲಿ ಮೀನನ್ನು ಹೋಲುವ ಆಸನಕ್ಕೆ ಮತ್ಸ್ಯಾಸನ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆ ಏನೆಂದರೆ ಒಂದು ವೇಳೆ ನೀರಿನಲ್ಲಿದ್ದಾಗ ಈ ಆಸನವನ್ನು ಅನುಸರಿಸಿದರೆ ಮೀನಿನಂತೆ ನೀರಿನಲ್ಲಿ ಸುಲಭವಾಗಿ ತೇಲಬಹುದು, ಇದಕ್ಕಾಗಿ ಕೈಕಾಲು ಅಲ್ಲಾಡಿಸುವ ಅಗತ್ಯವೇ ಇಲ್ಲ. ಈ ಆಸನದಿಂದ ನಮ್ಮ ಕುತ್ತಿಗೆ, ಭುಜ ಮತ್ತು ಪಕ್ಕೆಲುಬುಗಳ ನಡುವೆ ಇರುವ ಸ್ನಾಯುಗಳು ಬಲಗೊಳ್ಳುತ್ತವೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

ಅಲ್ಲದೇ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆಯಿಂದಲೂ ಹೊರಬರಲು ನೆರವಾಗುತ್ತದೆ. ಕುತ್ತಿಗೆ, ಬೆನ್ನು, ಭುಜಗಳ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ನೀಡುವ ಮೂಲಕ ಈ ಭಾಗದಲ್ಲಿದ್ದ ನೋವನ್ನು ನಿವಾರಿಸಲೂ ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಸಮಯ ಕುಳಿತುಕೊಂಡೇ ಇರುವ ಕಾರಣ ಮತ್ತು ಹೆಚ್ಚಿನವರು ಮಾನಿಟರ್ ವೀಕ್ಷಿಸುತ್ತಲೇ ದಿನದ ಹೆಚ್ಚಿನ ಸಮಯ ಕಳೆಯುವ ಕಾರಣದಿಂದಾಗಿ ಕುತ್ತಿಗೆ, ಭುಜ, ಬೆನ್ನು, ಕೆಳಬೆನ್ನು ಮೊದಲಾದ ಕಡೆಯ ಸ್ನಾಯುಗಳು ಜಡ್ಡುಹಿಡಿಯುತ್ತವೆ. ಈ ಜಡತೆ ಕುತ್ತಿಗೆ ಮತ್ತು ಭುಜಕ್ಕೆ ನಿಧಾನವಾಗಿ ನೋವು ನೀಡಲು ಕಾರಣವಾಗುತ್ತದೆ.

Matsyasana Or Fish Pose To Relieve Pain In Neck & Shoulders

ಈ ನೋವು ಈಗಾಗಲೇ ಪ್ರಾರಂಭವಾಗಿದ್ದರೆ ಇಂದಿನಿಂದಲೇ ಮತ್ಸ್ಯಾಸನವನ್ನು ಅನುಸರಿಸುವ ಮೂಲಕ ಈ ನೋವಿಗೆ ವಿದಾಯ ಹೇಳಬಹುದು. ಅಷ್ಟೇ ಅಲ್ಲ, ನೋವು ಉಂಟಾಗಬಹುದಾಗಿದ್ದ ಬೇರೆ ಸ್ನಾಯುಗಳನ್ನೂ ರಕ್ಷಿಸಿಕೊಳ್ಳಬಹುದು. ಬನ್ನಿ, ಮತ್ಸ್ಯಾಸನವನ್ನು ಅನುಸರಿಸುವ ಬಗೆ ಹೇಗೆ, ಇದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ:

ಹಂತಹಂತವಾಗಿ ಮತ್ಸ್ಯಾಸನವನ್ನು ಅನುಸರಿಸುವ ಬಗೆ:

ಹಂತ 1: ಮೊದಲು ಬೆನ್ನಮೇಲೆ ನೇರವಾಗಿ ಮಲಗಿಕೊಳ್ಳಿರಿ. ಎರಡೂ ಪಾದಗಳು ಒಂದಕ್ಕೊಂದು ತಾಕಿರಲಿ. ಕೈಗಳು ಸೊಂಟದ ಬದಿ ಇದ್ದು ಹಸ್ತಗಳು ಮೇಲೆ ಬರುವಂತಿರಲಿ. ಯಾವುದೇ ಒತ್ತಡವಿಲ್ಲದೇ ನಿರಾಳವಾಗಿರಿ.

ಹಂತ 2: ಈಗ ಎರಡೂ ಹಸ್ತಗಳನ್ನು ನಿತಂಬಗಳ ಕೆಳಗಿರಿಸಿ ಎರಡೂ ಮೊಣಕೈಗಳನ್ನು ಒಳಗೆಳೆದುಕೊಳ್ಳಿರಿ. ಈ ಪ್ರಯತ್ನದಲ್ಲಿ ಮೊದಲು ಸೊಂಟವನ್ನು ಎಡಕ್ಕೆ ಹೊರಳಿಸಿ ಬಲಹಸ್ತವನ್ನು ಒಳಗಿರಿಸಿ ಬಳಿಕ ಸೊಂಟವನ್ನು ಬಲಕ್ಕೆ ಹೊರಳಿಸಿ ಎಡ ಹಸ್ತವನ್ನು ಒಳಗಿಸಿರಿ ದೇಹದ ಭಾರವನ್ನು ಹಸ್ತಗಳ ಮೇಲೆ ಬರುವಂತೆ ಮಾಡಿ. ಸಾಮಾನ್ಯ 9 ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಹಂತ 3: ಬಳಿಕ ಪೂರ್ಣವಾಗಿ ಉಸಿರನ್ನು ಎಳೆದುಕೊಳ್ಳುತ್ತಾ ಎದೆಯನ್ನು ಮುಂದೆ ತನ್ನಿ. ಅಂದರೆ ಎರಡೂ ಮೊಣಕೈಗಳ ಮೇಲೆ ಭಾರ ಹಾಕಿ ಎದೆ ಮತ್ತು ತಲೆ ಮೇಲೆ ಎತ್ತಿ ಮುಂದೆ ನೋಡಿ. ಈಗ ನಿಮ್ಮ ಕಾಲುಬೆರಳುಗಳು ನಿಮಗೆ ಕಾಣಬೇಕು.

ಹಂತ 4: ಈ ಹಂತದಲ್ಲಿ ಉಸಿರು ಪೂರ್ಣವಾಗಿ ತುಂಬಿದ್ದು ಉಸಿರು ಕಟ್ಟಿ. ಬಳಿಕ ತಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ವಾಲಿಸಿ. ಈಗ ಬೆನ್ನೆಲುಬು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಕಮಾನಿನಂತೆ ಬಾಗಬೇಕು. ನಿಧಾನವಾಗಿ ತಲೆಯನ್ನು ನೆಲಕ್ಕೆ ತಾಕಿಸಿ.

ಹಂತ 5: ಈ ಹಂತದಲ್ಲಿ ಸಾಧ್ಯವಾದಷ್ಟು ಹೊತ್ತು ಇರಬೇಕು. ನಿಧಾನವಾಗಿ ಉಸಿರು ಬಿಟ್ಟು ಮತ್ತೆ ಎಳೆದುಕೊಳ್ಳಿರಿ. ಈ ಭಂಗಿಯಲ್ಲಿ ಕಾಲಬೆರಳುಗಳಿಗೆ ಯಾವುದೇ ಸೆಳೆತ ನೀಡದೇ ಸಡಿಲವಾಗಿರುವಂತೆ ನೋಡಿಕೊಳ್ಳಿ. ಈ ಹಂತದಲ್ಲಿ ನಿಮ್ಮ ದೇಹದ ಭಾರ ಮೊಣಕೈಗಳ ಮೇಲೆ ಇರಬೇಕೇ ವಿನಃ ತಲೆಯ ಮೇಲೆ ಭಾರ ನೀಡಕೂಡದು. ಎದೆ ಎಷ್ಟು ಸಾಧ್ಯವೋ ಅಷ್ಟೂ ಮೇಲಕ್ಕೆ ಹೋಗಲಿ, ತೊಡೆ, ಕಾಲುಗಳನ್ನು ನೇರವಾಗಿಯೇ ಇರಿಸಿ. (ಯೋಗಪಟುಗಳು ಈ ಹಂತದಲ್ಲಿ ಪದ್ಮಾಸನವನ್ನೂ ಅನುಸರಿಸಬಹುದು). ಕಣ್ಣುಗಳನ್ನು ಮುಚ್ಚಿಕೊಂಡು ದೀರ್ಘವಾಗಿ ಉಸಿರಾಡುತ್ತಾ ತನ್ಮಯತೆ ಅನುಭವಿಸಿ.

ಹಂತ 6: ಈ ಹಂತದಲ್ಲಿ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಇರಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಪೂರ್ಣ ಉಸಿರು ಒಳಗೆ ಎಳೆದು ಉಸಿರು ಕಟ್ಟಲು ಯತ್ನಿಸಿ. ಸುಮಾರು ಮೂರರಿಂದ ಹತ್ತು ನಿಮಿಷದ ಅವಧಿ ಬೇಕಾದಷ್ಟಾಯಿತು. ದೇಹದ ಯಾವುದೇ ಭಾಗಕ್ಕೆ ಒತ್ತಡ ನೀಡಬೇಡಿ, ನಿರಾಳವಾಗಿರಿ.

ಹಂತ 7: ಬಳಿಕ, ನಿಧಾನವಾಗಿ ತಲೆಯನ್ನು ಮುಂದಕ್ಕೆ ವಾಲಿಸುತ್ತಾ, (ಮೇಲೆ ಎತ್ತಬೇಡಿ) ಬೆನ್ನನ್ನು ನೇರವಾಗಿಸುತ್ತಾ ಭುಜವನ್ನು ನೆಲಕ್ಕೆ ತಾಕುವಂತೆ ಮಾಡಿ. ಈಗ ಕುತ್ತಿಗೆ ನೆಟ್ಟಗಾಗಿರಬೇಕು. ಈ ಹಂತವನ್ನು ಉಸಿರು ಬಿಡುತ್ತಾ ಅನುಸರಿಸಬೇಕು. ಬಳಿಕ ಪ್ರಾರಂಭದಲ್ಲಿ ಕೈಗಳನ್ನು ಸೊಂಟದ ಕೆಳಗೆ ಕೊಂಡುಹೋಗಿದ್ದ ವಿರುದ್ದ ಕ್ರಿಯೆಯಲ್ಲಿ ಹೊರತೆಗೆದು ಸೊಂಟದ ಪಕ್ಕದಲ್ಲಿ ಕೊಂಚ ದೂರವಿರಿಸಿ, ಹಸ್ತಗಳು ಮೇಲೆ ಬರುವಂತಿರಲಿ.

ಪಾದಗಳನ್ನು ಕೊಂಚ ದೂರದೂರವಾಗಿಸಿ ಶವಾಸನದ ರೂಪ ಪಡೆಯಿರಿ. ನಿಧಾನವಾಗಿ ತಲೆಯನ್ನು ಎಡಕ್ಕೂ ಬಲಕ್ಕೂ ಹೊರಳಿಸಿ ಕುತ್ತಿಗೆಯ ಸ್ನಾಯುಗಳಿಗೆ ಆರಾಮ ನೀಡಿ. ಕಾಲುಬೆರಳುಗಳನ್ನು ಕೊಂಚ ಸೆಳೆತ ನೀಡಿ ಆರಾಮಗೊಳಿಸಿ. ಈ ಭಂಗಿಯಲ್ಲಿ ನಾಲ್ಕಾರು ಬಾರಿ ಪೂರ್ಣ ಉಸಿರು ಒಳಗೆಳೆದು ಬಿಟ್ಟು ವಿಶ್ರಾಂತಿ ಪಡೆಯಿರಿ. ಬಳಿಕ ನಿಧಾನವಾಗಿ ಎದ್ದು ಕುಳಿತುಕೊಳ್ಳಿ.

ಮತ್ಸ್ಯಾಸನದ ಪ್ರಯೋಜನಗಳು:
• ಕುತ್ತಿಗೆ ಮತ್ತು ಎದೆಯ ಸ್ನಾಯುಗಳಿಗೆ ಸೆಳೆತ ನೀಡುತ್ತದೆ. ವಾಸ್ತವವಾಗಿ, ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಈ ಸ್ನಾಯುಗಳಿಗೆ ಸೆಳೆತ ಸಿಗುವುದೇ ಇಲ್ಲ.
• ಕುತ್ತಿಗೆ, ಭುಜದಲ್ಲಿ ಆಗಿದ್ದ ಪೆಡಸನ್ನು ನಿವಾರಿಸುತ್ತದೆ.
• ಉಸಿರಾಟವನ್ನು ನಿರಾಳವಾಗಿಸುತ್ತದೆ ಹಾಗೂ ಆಳವಾಗಿ ಉಸಿರಾಡಲು ಪ್ರೇರಣೆ ನೀಡುತ್ತದೆ.

ಎಚ್ಚರಿಕೆ:
ಒಂದು ವೇಳೆ ನೀವು ಹೆಚ್ಚಿನ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಈ ಆಸನವನ್ನು ಅನುಸರಿಸಬೇಡಿ. ಮೈಗ್ರೇನ್ ತಲೆನೋವು ಇರುವವರಿಗೂ ಈ ಆಸನ ಸಲ್ಲದು. ನಿದ್ರಾರಾಹಿತ್ಯದಿಂದ ಬಳಲುತ್ತಿರುವವರಿಗೂ ಸಲ್ಲದು. ಒಂದು ವೇಳೆ ಇತ್ತೀಚೆಗೆ ಯಾವುದಾದರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಈ ಆಸನ ಸಲ್ಲದು.
ವಾಸ್ತವವಾಗಿ ಶಸ್ತ್ರಚಿಕಿತ್ಸೆಯ ಬಳಿಕ ಯಾವುದೇ ಸೆಳೆತ ನೀಡುವ ಯೋಗಾಸನವಾಗಲೀ ವ್ಯಾಯಾಮವೇ ಆಗಲಿ ಸಲ್ಲದು. ಈ ಆಸನದ ಸರಿಯಾದ ಅನುಸರಣೆಗಾಗಿ ಯೋಗಶಿಕ್ಷಕರ ಸಹಾಯ ಪಡೆಯುವುದೂ ಉತ್ತಮ. ಕತ್ತು ನೋವಿಗೆ ಯೋಗಾಭ್ಯಾಸ ಪರಿಹಾರಕೊಡುತ್ತದೆ

English summary

Matsyasana Or Fish Pose To Relieve Pain In Neck & Shoulders

This asana has been derived from the Sanskrit term, like any other yoga pose, in which "Matsya" means fish and "asana" as usual means pose. This pose is so named because if this pose carried out in water, it will help the body to float, like in the case of the fishes. This pose helps to strengthen the flexor and intercostals and the muscles between the ribs. Also, it provides relief from tension and stress, stretches the throat, shoulder and neck.
X
Desktop Bottom Promotion