For Quick Alerts
ALLOW NOTIFICATIONS  
For Daily Alerts

ಕೆಳ ಬೆನ್ನು ನೋವಿಗೆ ಒಂದೇ ಪರಿಹಾರ 'ಮರೀಚ್ಯಾಸನ'

By Manu
|

ಇತ್ತೀಚಿನ ದಿನಗಳಲ್ಲಿ ಮೈಮುರಿದು ಕೆಲಸ ಮಾಡುವ ಜನರು ಕಡಿಮೆಯಾಗುತ್ತಿದ್ದಾರೆ. ಆದರೂ ಈ ಜನರಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ತುಂಬಾ ಹೊತ್ತು ಒಂದೇ ಕಡೆ ಕುಳಿತು ಕೆಲಸ ಮಾಡುವುದೇ ಆಗಿದೆ. ಜೊತೆಗೆ ವ್ಯಾಯಾಮ ರಹಿತ ಜೀವನ ಇವರನ್ನು ಈ ಮಟ್ಟಕ್ಕೆ ತಂದು ಕುಳ್ಳಿರಿಸುತ್ತದೆ.

ಕೆಳ ಬೆನ್ನು ನೋವಿಗೆ ಹಲವಾರು ಕಾರಣಗಳು ಇದ್ದರೂ ಒಂದೇ ಕಡೆ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರ ಮೇಲೆ ಪ್ರಧಾನ ಆರೋಪವನ್ನು ಹೊರಿಸಲಾಗುತ್ತದೆ. ಕೆಳ ಬೆನ್ನು ನೋವಿಗೆ ಗಾಯಗಳು ಮತ್ತು ಸ್ನಾಯುಗಳಿಗೆ ವಯಸ್ಸಾಗುವಿಕೆಯು ಸಹ ಕಾರಣವಾಗಿರುತ್ತವೆ. ಇದರ ಜೊತೆಗೆ ನಾವು ಈ ಹಿಂದೆ ಅಡ್ಡಾ ದಿಡ್ಡಿಯಾಗಿ ನಮ್ಮ ದೇಹವನ್ನು ಬಳಸಿದ ಫಲಿತಾಂಶವಾಗಿ ಕೆಳ ಬೆನ್ನು ನೋವನ್ನು ನಾವು ಎದುರಿಸಬೇಕಾಗುತ್ತದೆ. ಬೆನ್ನು ನೋವಿಗೆ ಚಿಕಿತ್ಸೆ ಮಾಡುವ ಮುನ್ನ ತಿಳಿಯಿರಿ ಕಾರಣ!

 Marichyasana (Marichi's Pose) For Low Back Pain

ನೋವು ಬಂದ ಕೂಡಲೆ ನಾವು ಮಾಡುವ ಮೊದಲ ಕೆಲಸವೇ ನೋವು ನಿವಾರಕಗಳನ್ನು ಬಳಸುವುದಾಗಿರುತ್ತದೆ. ಏಕೆಂದರೆ ನೋವು ನಮ್ಮನ್ನು ಹಿಂಡಿ ಹಿಪ್ಪೆ ಮಾಡುವಾಗ ನಮಗೆ ಅದಕ್ಕಿಂತ ಪರಿಹಾರ ಮತ್ತೊಂದು ಕಾಣುವುದಿಲ್ಲ. ಈ ನೋವು ನಿವಾರಕಗಳು ನಮಗೆ ತಾತ್ಕಾಲಿಕವಾಗಿ ಮಾತ್ರ ಉಪಶಮನವನ್ನು ನೀಡುತ್ತವೆ. ಕೆಳ ಬೆನ್ನು ನೋವಿಗೆ ಶಾಶ್ವತ ಪರಿಹಾರವನ್ನು ನೀಡಬೇಕು ಎಂದರೆ ನೀವು ಯೋಗವನ್ನು ಕಲಿಯಬೇಕು.

ಅದರಲ್ಲಿ ಹಲವಾರು ಆಸನಗಳು ನಿಮ್ಮ ಬೆನ್ನು ನೋವಿಗೆ ಪರಿಹಾರವನ್ನು ನೀಡುತ್ತವೆ. ಅಂತಹ ಆಸನಗಳಲ್ಲಿ ಒಂದು "ಮರೀಚ್ಯಾಸನ" ಅಥವಾ ಮಾರೀಚಾಸನ ಇದು ಕೆಳ ಬೆನ್ನು ನೋವಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ.

ಈ ಆಸನದ ಹೆಸರು ಮಾರಿಯಚಿ ಎಂಬ ಋಷಿಯಿಂದ ಬಂದಿದೆ. ಮಾರಿಚಿ ಎಂದರೆ ಬೆಳಕಿನ ಕಿರಣ ಎಂದರ್ಥ. ಬನ್ನಿ ಮರೀಚ್ಯಾಸನ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಯೋಗ ಟಿಪ್ಸ್: ಬೆನ್ನು ನೋವಿನ ಸಮಸ್ಯೆಗೆ 'ಸುಖಾಸನ'

ಈ ಆಸನವನ್ನು ಮಾಡಲು ನೀವು ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.
*ಬೆನ್ನು ನೇರವಾಗಿರುವಂತೆ ಕುಳಿತು, ಕಾಲುಗಳನ್ನು ಚಾಚಿ.
*ಹಿಮ್ಮಡಿಗಳು ನೆಲದ ಮೇಲೆ ಇರುವಂತೆ ಇರಿಸಿಕೊಳ್ಳಿ. ಆಗ ಒಂದು ಮೊಣಕಾಲನ್ನು ಮಡಿಚಿ, ಆ ಮೊಣಕಾಲು ಎದೆಯ ಭಾಗಕ್ಕೆ ಹತ್ತಿರವಾಗಿ ಬರುವಂತೆ ಮಡಿಚಿ (ಚಿತ್ರವನ್ನು ನೋಡಿ)
*ನಿಮ್ಮ ಕಾಲಿನ ಬೆರಳುಗಳು ಮೇಲ್ಮುಖವಾಗಿರಲಿ.
* ಈಗ ಬೆನ್ನನ್ನು ಹಿಗ್ಗಿಸಿ ಮತ್ತು ನಿಮ್ಮ ಸೊಂಟದ ಮತ್ತೊಂದು ಭಾಗವನ್ನು ತಿರುಗಿಸಿ.
*ಕೆಳ ಬೆನ್ನು ಇನ್ನೊಂದು ಕಡೆಗೆ ತಿರುಗಿಸಿ.
*ತದನಂತರ ಮಡಿಚಿದ ಮೊಣಕಾಲನ್ನು ಕೈಗಳಿಂದ ಬಳಸಿಕೊಂಡು ತಬ್ಬಿಕೊಳ್ಳಿ( ಹಿಮ್ಮುಖವಾಗಿ). ಈಗ ದೀರ್ಘವಾಗಿ ಉಸಿರಾಡಿ.
*ನಿಮ್ಮ ಎದೆಯನ್ನು ಹಿಗ್ಗಿಸಿ, ಭುಜಗಳು ಸಹ ಹಿಗ್ಗಲಿ.
*ಇದೇ ಸ್ಥಿತಿಯಲ್ಲಿ ಒಂದು ನಿಮಿಷ ಇರಿ.
*ಇದನ್ನು ದೇಹದ ಎರಡು ಕಡೆ ಪ್ರಯತ್ನಿಸಿ. ಸುಮಾರು 4-5 ಬಾರಿ ಮಾಡಿದರೆ ಒಳ್ಳೆಯದು. ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ಮರೀಚ್ಯಾಸನ ಪ್ರಯೋಜನಗಳು
*ಬೆನ್ನು ಮತ್ತು ದೇಹದ ಹಿಂಭಾಗದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಭುಜದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
*ಮಲಬದ್ಧತೆಯನ್ನು ನಿವಾರಿಸುತ್ತದೆ.
*ಋತುಚಕ್ರದ ನೋವನ್ನು ನಿವಾರಿಸುತ್ತದೆ.
*ಆಯಾಸದಿಂದ ಮುಕ್ತಿಯನ್ನು ನೀಡುತ್ತದೆ.
*ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಒತ್ತಡದಿಂದ ಪರಿಹಾರ ನೀಡುತ್ತದೆ. ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು

ಎಚ್ಚರ
ಬೆನ್ನು ನೋವು, ತಲೆ ನೋವು, ಮೈಗ್ರೇನ್, ಅಧಿಕ ರಕ್ತದೊತ್ತಡ ಇರುವವರು ಈ ಆಸನ ಮಾಡಬೇಡಿ. ಇದನ್ನು ಮಾಡುವ ಮೊದಲು ತಜ್ಞ ಯೋಗ ಶಿಕ್ಷಕರ ಸಲಹೆ ಪಡೆಯಿರಿ.

English summary

Marichyasana (Marichi's Pose) For Low Back Pain

Sitting for long hours and working continuously without any break will definitely give you a lower back pain. It is one of the most common problems which you would be hearing often, especially from the working group of people. But if you are looking out for a permanent solution then practising yoga would be the best way out. Marichyasana also known as Marichi's Pose is known to have the best cure for low back pain.
X
Desktop Bottom Promotion