ಲಿಂಬೆ+ಜೇನು ಬೆರೆಸಿದ ನೀರು ಸೇವಿಸಿ-ತೂಕ ಇಳಿಸಿಕೊಳ್ಳಿ!

ಕೊಬ್ಬನ್ನು ಕರಗಿಸಬಲ್ಲ ಆಹಾರಗಳ ಪಟ್ಟಿಯಲ್ಲಿ ಪ್ರಥಮವಾಗಿ ನಿಲ್ಲುವುದು ಲಿಂಬೆ ಮತ್ತು ಜೇನು ಮಿಶ್ರಣ ಮಾಡಿದ ಉಗುರುಬೆಚ್ಚನೆಯ ನೀರು... ಹೌದು ಇದನ್ನು ದಿನಂಪ್ರತಿ ಕುಡಿಯುತ್ತಾ ಬಂದರೆ ತೂಕ ಕಡಿಮೆಯಾಗುತ್ತದೆ...

By: Arshad
Subscribe to Boldsky

ತೂಕ ಇಳಿಸುವ ವಿಷಯ ಬಂದಾಗ ಹೆಚ್ಚಿನವರು ನೀಡುವ ಸಲಹೆ - ಬೆಳಿಗ್ಗೆದ್ದು ಓಡಿ...! ಆದರೆ ಊಟದಲ್ಲಿ ಬದಲಾವಣೆ ಮಾಡದೇ ಬೆಳಿಗ್ಗೆದ್ದು ಎಷ್ಟು ಓಡಿದರೂ ನಿರರ್ಥಕ. ನಿಮಗೆ ನಿಜವಾಗಿಯೂ ತೂಕ ಇಳಿಸಲೇಬೇಕೆಂದಿದ್ದರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವತ್ತ ನಿಮ್ಮ ಚಿತ್ತ ಹರಿಯಬೇಕು.

lemon water
 

ಅಂದರೆ ಕೊಬ್ಬನ್ನು ಕರಗಿಸುವ ಆಹಾರಗಳ ಸೇವನೆ, ಕೊಬ್ಬನ್ನು ಬಳಸುವ ದೈಹಿಕ ಚಟುವಟಿಕೆಗಳು ಇತ್ಯಾದಿ. ಕೊಬ್ಬನ್ನು ಕರಗಿಸಬಲ್ಲ ಆಹಾರಗಳ ಪಟ್ಟಿಯಲ್ಲಿ ಪ್ರಥಮವಾಗಿ ನಿಲ್ಲುವುದು ಲಿಂಬೆ ಮತ್ತು ಜೇನು ಮಿಶ್ರಣ ಮಾಡಿದ ಉಗುರುಬೆಚ್ಚನೆಯ ನೀರು. ಒಂದು ವೇಳೆ ಲಿಂಬೆ ಮತ್ತು ಜೇನು ಬೆರೆಸಿದ ನೀರನ್ನು ಕುಡಿದ ಬಳಿಕವೂ ತೂಕ ಇಳಿಯುತ್ತಿಲ್ಲವೆಂದರೆ ಇದರ ಸೇವನೆಯ ಕ್ರಮದಲ್ಲಿ ಏನೋ ಕೊಂಚ ಬದಲಾವಣೆಯಾಗಿರಬಹುದು. ಬನ್ನಿ, ಇದರ ಸರಿಯಾದ ಕ್ರಮವನ್ನು ತಿಳಿದುಕೊಳ್ಳೋಣ:   ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್     

honey
 

* ಸುಮಾರು ಮೂರು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಜೇನನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ
* ಇದಕ್ಕೆ ಒಂದು ದೊಡ್ಡ ಲೋಟ ಉಗುರುಬೆಚ್ಚನೆಯ ನೀರನ್ನು ಸೇರಿಸಿ ಕಲಕಿ.
* ಈ ಪೇಯವನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ
* ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಈ ಅವಧಿಯಲ್ಲಿ ಸಾಧ್ಯವಾದಷ್ಟು ದೈಹಿಕ ವ್ಯಾಯಾಮಗಳನ್ನು ಮಾಡಿ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?
*ಮೊದಲನೆಯ ತಪ್ಪು ಎಂದರೆ ತಣ್ಣೀರಿನಲ್ಲಿ ಲಿಂಬೆ ಮತ್ತು ಜೇನನ್ನು ಬೆರೆಸುವುದು. ತಣ್ಣೀರಿನಲ್ಲಿ ಇವೆರಡೂ ಕರಗಿದರೂ ಇದರ ಕಣಗಳು ಬೆಸೆದಿರುವುದಿಲ್ಲ. ಹಾಗಾಗಿ ಹೊಟ್ಟೆಯಲ್ಲಿ ಇವು ಸುಲಭವಾಗಿ ಜೀರ್ಣಗೊಂಡು ಬಿಡುತ್ತವೆ.

lemon water
 

*ಉತ್ತಮ ಪರಿಣಾಮ ಪಡೆಯಬೇಕೆಂದರೆ ನೀರನ್ನು ಕೊಂಚ ಬಿಸಿಮಾಡಲೇಬೇಕು. ಆಗಲೇ ಈ ಪೇಯದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ವಿಧಾನ ಭಾರತದಲ್ಲಿ ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ವಿಶ್ವದ ಹಲವಾರು ಕಡೆಗಳಲ್ಲಿಯೂ ಜನಪ್ರಿಯವಾಗಿದೆ. ಜೇನಿನಲ್ಲಿ ಹಲವಾರು ಪೋಷಕಾಂಶಗಳಿವೆ.  ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು! 

honey

*ಅಲ್ಲದೇ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳೂ ಇವೆ. ಇವೆಲ್ಲವೂ ದೇಹದ ಜೀವರಾಸಾಯನ ಕ್ರಿಯೆಯನ್ನು ಉತ್ತಮ ಗೊಳಿಸುತ್ತವೆ. ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವ ಮೂಲಕವೂ ಕೊಬ್ಬು ಬಳಸಲ್ಪಡುತ್ತದೆ. ಲಿಂಬೆರಸದೊಡನೆ ಬೆರೆತಾಗ ಇದು ಜೀರ್ಣಗೊಳ್ಳಲು ದೇಹದ ಕೊಬ್ಬನ್ನು ಇನ್ನಷ್ಟು ಬಳಸಿಕೊಳ್ಳುವ ಮೂಲಕ ತೂಕ ಇಳಿಸುತ್ತದೆ.

lemon water
 

*ಕ್ರಿಕೆಟ್‌ನಲ್ಲಿ ಬರೆಯ ಬ್ಯಾಟಿಂಗ್ ಒಂದರಿಂದಲೇ ಗೆಲುವು ಸಾಧ್ಯವಿಲ್ಲ. ಫೀಲ್ಡಿಂಗ್, ಬೌಲಿಂಗ್, ಕ್ಷೇತ್ರರಕ್ಷಣೆ ಎಲ್ಲವೂ ಅಗತ್ಯ. ಅಂತೆಯೇ ತೂಕ ಇಳಿಸಲು ಬರೆಯ ಜೇನುಲಿಂಬೆಯ ರಸ ಕುಡಿದ ಮಾತ್ರಕ್ಕೇ ಸಾಕಾಗುವುದಿಲ್ಲ.     ತೂಕ ಇಳಿಸುವಲ್ಲಿ ಜೇನುತುಪ್ಪ ಮಾಡಲಿದೆ ಕಮಾಲಿನ ಮೋಡಿ!

ನಿತ್ಯದ ದೈಹಿಕ ಚಟುವಟಿಕೆ, ಅನಗತ್ಯವಾದ ಸಿದ್ಧ ಆಹಾರಗಳನ್ನು ಸೇವಿಸದಿರುವುದು, ಸಕ್ಕರೆಯ ಸೇವನೆಯನ್ನು ಕನಿಷ್ಠಗೊಳಿಸುವುದು, ಎಣ್ಣೆಯ, ಕೊಬ್ಬಿನ ಆಹಾರಗಳನ್ನು ಸೇವಿಸದಿರುವುದು, ಕುಳಿತೇ ಇರುವ ಅಭ್ಯಾಸವನ್ನು ಆಗಾಗ ಅಡ್ಡಾಡುವ ಮೂಲಕ ಬದಲಿಸುವುದು, ಎಷ್ಟು ಸಾಧ್ಯವೋ ಅಷ್ಟು ನಡೆಯುವುದು ಮೊದಲಾದ ಕೆಲವಾರು ಕ್ರಮಗಳಿಂದ ನಿಧಾನವಾಗಿ ತೂಕ ಇಳಿಸುವುದು ಸುಲಭವಾಗುತ್ತದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, November 19, 2016, 11:58 [IST]
English summary

lemon water and honey for weight-loss

Surely, most of us would have heard of numerous tips and remedies that claim to help us lose weight, right? If yes, then you must be wondering if the popular lemon and honey remedy for weight loss actually works. If you have already tried the lemon water with honey remedy for weight loss, and it hasn't worked well for you, then you are probably not doing it the right way.
Please Wait while comments are loading...
Subscribe Newsletter