For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ದಿನನಿತ್ಯ ಓಟ, ಖಿನ್ನತೆ ದೂರ ಬಲುದೂರ!

By Hemanth
|

ಅಥ್ಲೆಟಿ‌ಕ್‌ಗಳನ್ನು ನೋಡಿದರೆ ಅವರು ಎಷ್ಟು ಫಿಟ್ ಇದ್ದಾರೆ ಎಂದು ನಿಮಗೆ ತಿಳಿಯುತ್ತದೆ. ಯಾವುದೇ ಕ್ರೀಡೆಯಾಗಲಿ ಫಿಟ್ ನೆಸ್ ತುಂಬಾ ಮುಖ್ಯವಾಗಿರುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಕ್ರೀಡಾಳು ಗಂಟೆಗಟ್ಟಲೆ ಓಡಿ ತನ್ನ ಫಿಟ್ ನೆಸ್ ಕಾಪಾಡಿಕೊಳ್ಳುತ್ತಾನೆ.

ಓಡುವುದರಿಂದ ಕ್ರೀಡಾಳುಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ತುಂಬಾ ಉಪಯೋಗವಿದೆ. ಓಡುವುದರಿಂದ ರಕ್ತದೊತ್ತಡವು ಕಡಿಮೆಯಾಗಿ ಮೂಳೆ ಹಾಗೂ ಸ್ನಾಯು ನಷ್ಟವನ್ನು ತಪ್ಪಿಸುವುದು ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಡುವುದು. ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

How Running Helps With Depression

ವಾರದಲ್ಲಿ ಕೆಲವು ದಿನ ಓಡಿದರೆ ನಿಮ್ಮ ಶಕ್ತಿಯು ಹೆಚ್ಚಾಗಿ ಹೃದಯ ಹಾಗೂ ಶ್ವಾಸಕೋಶವು ಬಲಿಷ್ಠವಾಗುವುದು. ಇಷ್ಟು ಮಾತ್ರವಲ್ಲದೆ ಖಿನ್ನತೆಯನ್ನು ನಿವಾರಿಸಲು ಓಡುವುದು ಒಳ್ಳೆಯ ವ್ಯಾಯಾಮ. ವ್ಯಕ್ತಿಯೂ ಒಂದೇ ರೀತಿಯಾಗಿ ಇರುವುದಿಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಕೆಲವರಿಗೆ ಖಿನ್ನತೆಯ ಸಮಸ್ಯೆ ಕಾಡುತ್ತಾ ಇರುತ್ತದೆ.

ಕೆಲವೊಂದು ಸಲ ನಮಗೆ ಎಲ್ಲವೂ ಖಾಲಿಯಿರುವಂತೆ ಮತ್ತು ತುಂಬಾ ಬೇಸರವಾದ ಭಾವನೆಯಾವುದು ಸಹಜ. ಇದು ಖಿನ್ನತೆಯ ಲಕ್ಷಣಗಳಲ್ಲಿ ಒಂದಾಗಿದೆ.

ಸಾಮಾನ್ಯವಾಗಿ ಖಿನ್ನತೆಯೆನ್ನುವುದು ಮನಶಾಸ್ತ್ರದ ಪರಿಸ್ಥಿತಿಗೆ ಸಂಬಂಧಿಸಿದ್ದಾಗಿದೆ. ಆದರೆ ಇದು ವ್ಯಕ್ತಿಯ ಪ್ರತಿಯೊಂದು ಚಟುವಟಿಕೆ ಮತ್ತು ಆತನ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಉಂಟು ಮಾಡುವುದು.

ಬೇಸರ, ಅಪರಾಧಿ ಭಾವನೆ, ನಿರಾಸಕ್ತಿ, ಅತಿಯಾಗಿ ತಿನ್ನುವುದು, ನಿದ್ರಾಹೀನತೆ, ಆತ್ಮಹತ್ಯೆಗೆ ಪ್ರಯತ್ನಿಸುವುದು ಇವುಗಳು ಖಿನ್ನತೆಯ ಕೆಲವೊಂದು ಲಕ್ಷಣಗಳಾಗಿವೆ.

ಓಡುವುದರಿಂದ ಯಾವ ರೀತಿಯ ಲಾಭಗಳು ಆಗಲಿದೆ ಎಂದು ತಿಳಿದುಕೊಳ್ಳಬೇಕಾದರೆ ಖಿನ್ನತೆ ಇರುವ ವ್ಯಕ್ತಿಗಳು ಸುಮಾರು 10 ಕಿ.ಮೀ. ತನಕ ಓಡಬೇಕು. ಇದರಿಂದ ಅವರ ವ್ಯಕ್ತಿತ್ವ ಕೂಡ ಒಳ್ಳೆಯದಾಗುತ್ತದೆ. ಖಿನ್ನತೆಗೆ ಮತ್ತೊಂದು ಕಾರಣವೆಂದರೆ ಎಂಡ್ರೋಫಿನ್ಸ್ ಎನ್ನುವ ಹಾರ್ಮೋನುಗಳು ಸರಿಯಾಗಿ ಬಿಡುಗಡೆಯಾಗದೆ ಇರುವುದು. ಜಾಗಿಂಗ್ ಮಾಡುವವರಿಗೆ ಮಾತ್ರ ಈ ಬಂಪರ್ ಕೊಡುಗೆ

ದೇಹದಲ್ಲಿ ಎಂಡ್ರೋಫಿನ್ಸ್ ಹಾರ್ಮೋನುಗಳು ಬಿಡುಗಡೆಯಾದರೆ ಭಾವನೆಗಳು ಉತ್ತಮವಾಗುವುದು. ಇದು ನೈಸರ್ಗಿಕ ಶಮನಕಾರಿಯಂತೆ ಕೆಲಸ ಮಾಡಿ ಮನಸ್ಸಿನ ನೋವನ್ನು ನಿವಾರಣೆ ಮಾಡುವುದು. ಇದು ವಯಸ್ಸಾಗುವುದನ್ನು ನಿಧಾನಗೊಳಿಸುವುದು ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂದು ತಿಳಿದುಬಂದಿದೆ. ಖಿನ್ನತೆಯಿಂದ ಹೊರಬರಲು ಟಿಪ್ಸ್

ಆದರೆ ಯಾವ ಕಾರಣದಿಂದಾಗಿ ಇದು ಬಿಡುಗಡೆಯಾಗುತ್ತದೆ ಎಂದು ವಿಜ್ಞಾನಿಗಳಿಗೆ ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ದೀರ್ಘವಾದ ವ್ಯಾಯಾಮ, ಚಾಕಲೇಟ್ ಈ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದು.

ಹೆಚ್ಚಿನ ವ್ಯಾಯಮ ಮತ್ತು ಓಡುವುದರಿಂದ ದೇಹದಲ್ಲಿ ಎಂಡ್ರೋಫಿನ್ಸ್ ಹಾರ್ಮೋನು ಬಿಡುಗಡೆ ಹೆಚ್ಚಾಗುವುದು. ಆದರೆ ಓಡುವುದರಿಂದ ಖಿನ್ನತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಆದರೆ ಓಡುವುದರಿಂದ ಖಿನ್ನತೆಗೆ ತಾತ್ಕಾಲಿಕ ಶಮನ ಸಿಗಬಹುದು. ಖಿನ್ನತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಂಡರೆ ಅವರಿಗೆ ಸ್ವಲ್ಪ ಮಟ್ಟಿನ ಆರಾಮ ಸಿಗುವುದು ಖಚಿತ.

English summary

How Running Helps With Depression

Running has been proved to be of great advantage to the human body as it helps to lower your blood pressure level, fight bone and muscle loss and drop a few pounds. Flexibility, high energy levels as well as a strong heart and lungs can also be perks of running just a couple of days a week.
X
Desktop Bottom Promotion