For Quick Alerts
ALLOW NOTIFICATIONS  
For Daily Alerts

ಅಧಿಕ ತೂಕ ಮಾಡಲಿದೆ ಋತುಚಕ್ರದಲ್ಲಿ ಏರುಪೇರು!

By Jaya subramanya
|

ಅಧಿಕ ತೂಕವು ನಿಮ್ಮಲ್ಲಿ ಅನೇಕ ದೈಹಿಕ ನ್ಯೂನತೆಗಳನ್ನು ಉಂಟುಮಾಡುವುದರ ಜೊತೆಗೆ ತಿಂಗಳಿನ ಋತುಸ್ರಾವದ ಮೇಲೂ ಅಡ್ಡಪರಿಣಾಮಗಳನ್ನುಂಟು ಮಾಡುತ್ತದೆ. ದೇಹದ ತೂಕ ಏರಿಕೆ ಮತ್ತು ಇಳಿಯುವಿಕೆ ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿಮಗೆ ತೊಂದೊಡ್ಡಲಿವೆ. ಹೆಚ್ಚುವರಿ ತೂಕವು ದೇಹದಲ್ಲಿ ಅನೇಕ ಮಾರ್ಪಾಡುಗಳನ್ನುಂಟು ಮಾಡಲು ಕಾರಣವಾಗಿವೆ. ದೇಹದ ಅಧಿಕ ತೂಕವು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಮಾರಕವಾಗಲಿದೆ.

How Being Overweight Can Cause Irregular Periods

ಅಧಿಕ ದೇಹತೂಕದ ಜೊತೆಗೆ ಎರಡನೇ ವಿಧ ಮಧುಮೇಹದ ಸಮಸ್ಯೆಗಳನ್ನು ನೀವು ಅನುಭವಿಸುವ ಭೀತಿ ಇರುತ್ತದೆ. ಹೃದಯ ರೋಗ ಮತ್ತು ಕ್ಯಾನ್ಸರ್ ಕೂಡ ನಿಮ್ಮನ್ನು ಎಡತಾಕಬಹುದು. ಮುಟ್ಟಿನ ಸಮಸ್ಯೆಗಳಿಗೂ ಇದೇ ಹೆಚ್ಚುವರಿ ತೂಕ ಕಾರಣವಾಗಿದೆ. ಹೆಚ್ಚಿನ ಮಹಿಳೆಯರಿಗೆ ಪ್ರತೀ ತಿಂಗಳ ಅದೇ ದಿನದಂದು ಮುಟ್ಟು ಉಂಟಾಗುವುದಿಲ್ಲ. ಹೆಚ್ಚಾಗಿ ಸರಾಸರಿ 28 ದಿನಗಳಿಗೆ ಅಂತೆಯೇ 4 ರಿಂದ 6 ತಿಂಗಳಿಗೆ ಕೊನೆಯಾಗುವಲ್ಲಿ 24 ರಿಂದ 34 ದಿನಗಳಿಗೆ ಇದು ಉಂಟಾಗುತ್ತದೆ. ನಿಯಮಿತ ಹಾಗೂ ಅನಿಯಮಿತ ಮುಟ್ಟಿನ ಸಮಸ್ಯೆಗಳು ಮಹಿಳೆಯರಿಗೆ ಉಂಟಾಗುತ್ತದೆ.

ಇಂತಹ ಸಮಸ್ಯೆಯು ಅನಾರೋಗ್ಯವನ್ನು ತಂದೊಡ್ಡುತ್ತದೆ. ಇನ್ನೂ ಹೆಚ್ಚು ಮುಖ್ಯವಾಗಿ, ಗರ್ಭಾವಸ್ಥೆ ಸಮಸ್ಯೆಗಳು, ದೇಹದ ತೂಕ ಮತ್ತು ತೂಕ ಇಳಿಯುವುದು ಮಾಸಿಕ ಋತುಮಾನದ ಮೇಲೆ ಪ್ರಭಾವವನ್ನು ಬೀರುತ್ತದೆ. ಹೀಗೆಯೇ ದೇಹದ ತೂಕವು ಇಂತಹುದೇ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇಂದಿನ ಲೇಖನದಲ್ಲಿ ದೇಹದ ತೂಕವು ಉಂಟುಮಾಡುವ ಆರೋಗ್ಯ ಸಮಸ್ಯೆಗಳನ್ನು ತಿಳಿದುಕೊಳ್ಳೋಣ.

ದೇಹದ ತೂಕದಲ್ಲಿ ಹಾರ್ಮೋನುಗಳ ಏರುಪೇರು

ದೇಹದ ತೂಕ ಮತ್ತು ಇಳಿಕೆಯು ಮಹಿಳೆಯರ ಮಾಸಿಕದಲ್ಲಿ ಏರುಪೇರನ್ನು ಉಂಟುಮಾಡುತ್ತದೆ. ಅನಿಯಮಿತ ಋತುಚಕ್ರವು ದೇಹದ ತೂಕ ಮತ್ತು ಬೊಜ್ಜಿಗೆ ಸಂಪರ್ಕವನ್ನು ಹೊಂದಿದೆ. ಬೊಜ್ಜು ಹಾರ್ಮೋನುಗಳ ವ್ಯಾಧಿಯನ್ನುಂಟು ಮಾಡುವುದರಿಂದ ದೇಹದ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುತ್ತದೆ. ಅತಿಯಾದ ದೇಹ ತೂಕವು ಅನಿಯಮಿತ ಋತುಚಕ್ರವನ್ನು ಉಂಟುಮಾಡುವುದರೊಂದಿಗೆ ಋತುಚಕ್ರವನ್ನು ಕುಂಠಿತಗೊಳಿಸುತ್ತದೆ.

ಪಾಲಿಸ್ಟಿಕ್ ಓವರಿ ಸಿಂಡ್ರಮ್ ಅನಿಯಮಿತ ಋತುಚಕ್ರಕ್ಕೆ ಸಂಪರ್ಕವನ್ನು ಹೊಂದಿದೆ
ಪಿಸಿಒನೊಂದಿಗೆ ಮಹಿಳೆಯರಲ್ಲಿ ಬೊಜ್ಜಿನ ಹೆಚ್ಚು ವ್ಯಾಪಕತೆಯನ್ನು 65% ದಿಂದ 35% ದಷ್ಟು ಅಂದಾಜಿಸಬಹುದಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಅಶೇರ್‎ಮಾನ್ಸ್ ಸಿಂಡ್ರೋಮ್‎ನಂತಹ ಶ್ರೋಣಿಯ ಅಂಗಾಂಗಳ ಸಮಸ್ಯೆಗಳನ್ನು ಮಹಿಳೆಯರು ಹೊಂದಿರುವವರು ಅನಿಯಮಿತ ಮುಟ್ಟಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ.

ಮಹಿಳೆಯರ ಅಧಿಕ ತೂಕ ಮತ್ತು ಅನಿಯಮಿತ ಋತುಚಕ್ರವು ಪಿಸಿಒಗೆ ಕಾರಣವಾಗಿ ಅವರುಗಳ ದೇಹದಲ್ಲಿ ಹಾರ್ಮೋನುಗಳ ಅಸಮತೋಲವನ್ನು ಉಂಟುಮಾಡುತ್ತದೆ. ಇನ್ನೂ ಹೆಚ್ಚೆಂದರೆ ಅನಿಯಮಿತ ಮುಟ್ಟನ್ನು ಅಧಿಕ ದೇಹತೂಕವು ಉಂಟುಮಾಡುತ್ತದೆ. ಅಂತಃಸ್ರಾವಕ ಕಾಯಿಲೆಗಳಾದ ಪಿಸಿಓಗಳು ಮತ್ತು ಅಮೆನೊರ್ಹಿಯಾ ಅಧಿಕ ತೂಕದಿಂದ ಉಂಟಾಗುವ ಸಮಸ್ಯೆಗಳಾಗಿವೆ. ಪಿಸಿಓಗಳನ್ನು ಹೊಂದಿರುವ ಮಹಿಳೆಯರು ಅಸಮತೋಲಿತ ಹಾರ್ಮೋನು ಸಮಸ್ಯೆಗಳಿಂದ ಬಳಲುತ್ತಾರೆ ಇದರಿಂದ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತದೆ.

ಅಧಿಕ ಋತುಸ್ರಾವ
ಮುಟ್ಟಿನ ಬದಲಾವಣೆಗಳು ಕ್ರಮೇಣ ಕಾಲಾವಧಿಯಲ್ಲಿ ಉಂಟಾಗಬಹುದು. ಮಹಿಳೆಯರು ತಮ್ಮ 20, 30 ಮತ್ತು 40 ರ ಹರೆಯದಲ್ಲಿ ಋತುಚಕ್ರ ವಿಭಿನ್ನವಾಗಿರುತ್ತದೆ. ಋತುಚಕ್ರದಲ್ಲಿ ಕೆಲವು ವ್ಯತ್ಯಯಗಳು ಉಂಟಾಗಬಹುದು. ಆಹಾರ, ವ್ಯಾಯಾಮ ಅಥವಾ ಪರಿಸರೀಯ ಅಂಶಗಳು ಅಥವಾ ಅಧಿಕ ತೂಕದಿಂದಾಗಿ ಸ್ರಾವವೂ ಹೆಚ್ಚಾಗಿರುತ್ತದೆ.

English summary

How Being Overweight Can Cause Irregular Periods

One of the most common symptoms that young women undergo is irregular periods as well as weight gain. Weight loss or weight gain can have an effect on your menstrual cycle. Irregular periods can be caused by various factors that include weight gain or loss. However, excess weight is a major cause of change in the body. Here are a few reasons why being overweight can cause an irregular period.
X
Desktop Bottom Promotion