For Quick Alerts
ALLOW NOTIFICATIONS  
For Daily Alerts

ವ್ಯಾಯಮದ ಬಳಿಕ ಇಂತಹ ಚಹಾಗಳನ್ನು ಕುಡಿದು ನೋಡಿ...

By Manu
|

ನಾವು ತಿನ್ನುವ ಪ್ರತಿಯೊಂದು ಆಹಾರದ ಬಗ್ಗೆ ದಿನಕ್ಕೊಂದು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಚಹಾದ ಬಗ್ಗೆ ನಡೆಸಿರುವ ಕೆಲವೊಂದು ಸಂಶೋಧನೆಗಳು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿವೆ. ಆದರೆ ಇನ್ನು ಕೆಲವು ಅಧ್ಯಯನಗಳು ಚಹಾ ಕೂಡ ಆರೋಗ್ಯಕಾರಿ ಎಂದು ಹೇಳಿವೆ.

ಆದರೆ ವ್ಯಾಯಾಮದ ಬಳಿಕ ಯಾವ ಚಹಾ ಕುಡಿಯಬೇಕು ಎನ್ನುವ ಬಗ್ಗೆ ಹೆಚ್ಚಿನವರಿಗೆ ಗೊಂದಲವಿದೆ. ಹಸಿರು ಚಹಾ(ಗ್ರೀನ್ ಟೀ), ಕಪ್ಪು ಚಹಾ, ಹರ್ಬಲ್(ಗಿಡಮೂಲಿಕೆ) ಚಹಾ ಮತ್ತು ಶುಂಠಿ ಚಹಾ ಹೀಗೆ ಹಲವಾರು ವಿಧದ ಚಹಾಗಳಿವೆ. ವ್ಯಾಯಮದ ಬಳಿಕ, ಸೇವಿಸುವ ಆಹಾರವೂ ಪರ್ಫೆಕ್ಟ್ ಆಗಿರಬೇಕು!

ಈ ಎಲ್ಲಾ ಚಹಾಗಳನ್ನು ವ್ಯಾಯಾಮದ ಮೊದಲು ಅಥವಾ ಬಳಿಕ ಕುಡಿಯಬಹುದಾಗಿದೆ. ಇದು ಆರೋಗ್ಯಕಾರಿ ಹಾಗೂ ದೇಹಕ್ಕೆ ಶಕ್ತಿಯನ್ನು ನೀಡುವುದು. ಈ ಚಹಾಗಳನ್ನು ಕುಡಿದರೆ ಶಕ್ತಿ ಹೆಚ್ಚಾಗಿ ಕೊಬ್ಬು ಕರಗುವುದು. ವ್ಯಾಯಮದ ಬಳಿಕ ಕುಡಿಯಬೇಕಾದ ಚಹಾಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ....

ಗ್ರೀನ್(ಹಸಿರು) ಟೀ

ಗ್ರೀನ್(ಹಸಿರು) ಟೀ

ತೂಕ ಕಳೆದುಕೊಳ್ಳಲು ಇದು ಅತ್ಯುತ್ತಮವಾದ ಗಿಡಮೂಲಿಕೆ ಚಹಾ. ವ್ಯಾಯಾಮದ ಮೊದಲು ಅಥವಾ ಬಳಿಕ ಗ್ರೀನ್ ಟೀ ಕುಡಿದರೆ ಅದರಿಂದ ಕೊಬ್ಬು ಕರಗಿ ದೇಹವು ಶಕ್ತಿಯನ್ನು ಪಡೆಯುವುದು. ಗ್ರೀನ್ ಟೀಯಲ್ಲಿರುವ ಕೆಫಿನ್ ತೂಕ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಗ್ರೀನ್(ಹಸಿರು) ಟೀ

ಗ್ರೀನ್(ಹಸಿರು) ಟೀ

ಗ್ರೀನ್ ಟೀಯಲ್ಲಿರುವ ಕೆಫಿನ್ ಹಸಿವನ್ನು ನಿಯಂತ್ರಿಸಿ, ಕ್ಯಾಲರಿ ದಹಿಸಿ ದೇಹದಲ್ಲಿರುವ ಹೆಚ್ಚುವರಿ ನೀರನ್ನು ತೆಗೆಯುತ್ತದೆ. ವ್ಯಾಯಾಮದ ಬಳಿಕ ಗ್ರೀನ್ ಟೀ ಕುಡಿದರೆ ಚಯಾಪಚಾಯ ಕ್ರಿಯೆ ಸುಧಾರಣೆಯಾಗಿ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕ್ಯಾಲರಿ ದಹಿಸಲು ನೆರವಾಗುತ್ತದೆ.

ಕಪ್ಪು ಚಹಾ

ಕಪ್ಪು ಚಹಾ

ವ್ಯಾಯಮ ಮಾಡಿದ ಬಳಿಕ ಕಪ್ಪು ಚಹಾ ಕುಡಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದ ಶಕ್ತಿಯನ್ನು ವೃದ್ಧಿಸಿ ದಿನಪೂರ್ತಿ ನೀವು ಉಲ್ಲಾಸಿತವಾಗಿರುವಂತೆ ನೋಡಿಕೊಳ್ಳುತ್ತದೆ.

ಕಪ್ಪು ಚಹಾ

ಕಪ್ಪು ಚಹಾ

ವ್ಯಾಯಮದ ಬಳಿಕ ಕಪ್ಪು ಚಹಾ ಕುಡಿಯುವುದರಿಂದ ರಕ್ತನಾಳದಲ್ಲಿರುವ ನೈಟ್ರಿಕ್ ಆಕ್ಸೈಡ್ ಮಟ್ಟವು ಹೆಚ್ಚಾಗಿ ಸುಲಭವಾಗಿ ಭಾರ ಎತ್ತಲು ಸಾಧ್ಯವಾಗುವುದು. ಕಪ್ಪು ಚಹಾ ಕ್ಯಾಲರಿ ದಹಿಸುವ ಕಾರಣದಿಂದ ತೂಕ ಕಡಿಮೆ ಮಾಡಬಹುದು. ಉತ್ತಮ ಫಲಿತಾಂಶಕ್ಕಾಗಿ ಕಪ್ಪು ಗ್ರೀನ್ ಟೀ ಕುಡಿಯಿರಿ.

ಶುಂಠಿ ಚಹಾ

ಶುಂಠಿ ಚಹಾ

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಹರ್ಬಲ್(ಗಿಡಮೂಲಿಕೆ) ಚಹಾ

ಹರ್ಬಲ್(ಗಿಡಮೂಲಿಕೆ) ಚಹಾ

ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ

ಹರ್ಬಲ್(ಗಿಡಮೂಲಿಕೆ) ಚಹಾ

ಹರ್ಬಲ್(ಗಿಡಮೂಲಿಕೆ) ಚಹಾ

ಕಾರ್ಡಿಯೋ ವ್ಯಾಯಾಮವನ್ನು ಮಾಡುತ್ತಲಿದ್ದರೆ ವ್ಯಾಯಾಮದ ಬಳಿಕ ತಂಪಾದ ಹರ್ಬಲ್ ಚಹಾ ಕುಡಿಯಿರಿ. ಈ ಎಲ್ಲಾ ರೀತಿಯ ಚಹಾವನ್ನು ಕುಡಿದರೆ ನೀವು ಫಿಟ್ ಆಗಿ ಆರೋಗ್ಯದಿಂದ ಇರಬಹುದಾಗಿದೆ.

English summary

Healthy Tea Flavours After A Workout!

There are few tea varieties which can be consumed before and after a workout such as green tea, black tea, herbal tea and ginger tea. These energy teas are consumed before and after a workout session to stay healthy and energetic.
X
Desktop Bottom Promotion