For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಲವಲವಿಕೆಗೆ, ವಿಟಮಿನ್ ಡಿ ಅತ್ಯವಶ್ಯಕ

By Hemanth
|

ದೇಹದ ಪ್ರತಿಯೊಂದು ಅಂಗಾಂಗಳಿಗೂ ವಿಟಮಿನ್ ಬೇಕೇಬೇಕು. ವಿಟಮಿನ್ ಕೊರತೆಯಿದ್ದರೆ ಯಾವುದೇ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಎಲುಬು ಮತ್ತು ರೋಗನಿರೋಧಕ ವ್ಯವಸ್ಥೆಗೆ ಮುಖ್ಯವಾಗಿ ವಿಟಮಿನ್ ಡಿ ಬೇಕಾಗುತ್ತದೆ. ವಿಟಮಿನ್ ಡಿ ದೇಹದಲ್ಲಿರುವ ಎಲುಬುಗಳಲ್ಲಿ ಖನಿಜಾಂಶವನ್ನು ತುಂಬಿಸುತ್ತದೆ.

Five Ways To Get Vitamin D

ವಿಟಮಿನ್ ಡಿ ಕೊರತೆಯಿಂದಾಗಿ ನಿಮ್ಮ ಎಲುಬು ಮೃದುವಾಗಿ ಶಕ್ತಿಯನ್ನು ಕಳೆದುಕೊಳ್ಳಬಹುದು. ವಿಟಮಿನ್ ಡಿ ಹಲವಾರು ರೀತಿಯ ಸೋಂಕುಗಳನ್ನು ನಿವಾರಣೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಬಿಳಿ ರಕ್ತದ ಕಣಗಳು ವಿಟಮಿನ್ ಡಿ ಯಿಂದಲೇ ಉತ್ಪತ್ತಿಯಾಗುತ್ತದೆ. ವಿಟಮಿನ್ ಡಿ ಯಿಂದ ಆಗುವ ಐದು ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳುವ. ವಿಟಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳು

ವಿಟಮಿನ್ ಡಿ3ಯು ವಿಟಮಿನ್ ಡಿಯ ಒಂದು ಅಂಗವಾಗಿದೆ. ಚರ್ಮವು ಸೂರ್ಯನ ಕಿರಣಗಳಿಗೆ ಒಗ್ಗಿಕೊಂಡಾಗ ವಿಟಮಿನ್ ಡಿ3ಯನ್ನು ಉತ್ಪತ್ತಿ ಮಾಡುತ್ತದೆ. ದೇಹದ ಶೇ.90ರಷ್ಟು ವಿಟಮಿನ್ ಡಿ ಚರ್ಮದಿಂದ ಬರುತ್ತದೆಯೆಂತೆ. ಬೆಳಿಗ್ಗೆ 11 ಗಂಟೆ ಮೊದಲು ಮತ್ತು ಸಂಜೆ ನಾಲ್ಕು ಗಂಟೆ ಬಳಿಕ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ. ಇದರಿಂದ ವಿಟಮಿನ್ ಡಿ ನಿಮ್ಮ ದೇಹವನ್ನು ಸೇರುತ್ತದೆ.

ಮೀನುಗಳಾದ ಸಾಲ್ಮನ್, ಸಾರ್ಡಿನ್ ಮತ್ತು ಟ್ಯೂನಾದಲ್ಲಿ ಉನ್ನತ ಮಟ್ಟದ ವಿಟಮಿನ್ ಡಿ ಇದೆ. ಈ ಮೀನುಗಳನ್ನು ದಿನಾಲೂ ತಿಂದರೆ ನಿಮಗೆ ದೈನಂದಿನ ಕೆಲಸಕ್ಕೆ ಬೇಕಾಗಿರುವ ವಿಟಮಿನ್ ಡಿ ಸಿಗುವುದು. ಮೊಟ್ಟೆಯಲ್ಲೂ ವಿಟಮಿನ್ ಡಿ ಹೇರಳವಾಗಿದೆ.

ಎರಡು ದೊಡ್ಡ ಮೊಟ್ಟೆಯಲ್ಲಿ ನಿಮಗೆ ಬೇಕಾಗಿರುವ ವಿಟಮಿನ್ ಡಿ ಯ ಎಂಟು ಭಾಗದಷ್ಟು ಲಭ್ಯವಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಡಿ ಇದೆ. ದಿನಾಲೂ ಮೊಸರನ್ನು ತಿಂದರೆ ನಿಮಗೆ ಬೇಕಾಗಿರುವ ವಿಟಮಿನ್ ಡಿ ಪೂರೈಕೆಯಾಗುವುದು. ಕ್ಲಿನಿಕಲ್ ಎಂಡೋಕ್ರೈನಾಲಜಿ ಮತ್ತು ಮೆಟಬಲಿಸಮ್ ಜರ್ನಲ್ ನಲ್ಲಿ ಪ್ರಕಟವಾದ ಲೇಖನದಲ್ಲಿ ಲ್ಯಾಕ್ಟೋಬ್ಯಾಸಿಲಸ್ ಪ್ರೊಬಯಾಟಿಕ್ ಉತ್ಪನ್ನಗಳು ರಕ್ತದಲ್ಲಿ ವಿಟಮಿನ್ ಡಿ ಯನ್ನು ಉತ್ಪತ್ತಿ ಮಾಡುತ್ತದೆ. ಡಿ ಜೀವಸತ್ವದ ಕೊರತೆಯ 7 ಎಚ್ಚರಿಕೆಯ ಲಕ್ಷಣಗಳು

ಮೀನಿನ ಎಣ್ಣೆಯಲ್ಲಿ ಕೂಡ ವಿಟಮಿನ್ ಡಿ ಹೇರಳವಾಗಿದೆಯಂತೆ. ವಿಟಮಿನ್ ಡಿ ಕೊರತೆಯಿಂದ ಮಕ್ಕಳಲ್ಲಿ ಬರುವಂತಹ ಎಲುಬು ಮೃದುವಾಗುವ ಕಾಯಿಲೆಯನ್ನು ಮೀನಿನ ಎಣ್ಣೆಯಿಂದ ತಡೆಗಟ್ಟಬಹುದಾಗಿದೆ ಎಂದು 20ನೇ ಶತಮಾನದಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಮೀನಿನ ಎಣ್ಣೆಯಲ್ಲಿ ವಿಟಮಿನ್ ಎ ಇದೆ. ಇದು ವಿಟಮಿನ್ ಡಿ ಯ ಕೊರತೆಯನ್ನು ನೀಗಿಸುವುದು.

English summary

Five Ways To Get Vitamin D

From your bones to your immunity system, vitamin D plays an important role in your state of health. It is because vitamin D supports the body's capability to deposit minerals on the bone. Without enough vitamin D, your bones may become soft, porous and brittle. Studies have found a number of white blood cells that are a part of your resistance system have receptors for vitamin D.
X
Desktop Bottom Promotion