For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಬೇಕೇ? ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

By Arshad
|

ತೂಕ ಇಳಿಸುವುದು ಇಂದಿನ ದಿನದ ಫ್ಯಾಷನ್ ಮಾತ್ರವಲ್ಲ, ಆರೋಗ್ಯದ ಕಾಳಜಿ ಇರುವ ಯಾರಿಗೂ ಅನಿವಾರ್ಯವಾಗಿದೆ. ಇಂದಿನ ಬದಲಾದ ಜೀವನಶೈಲಿಯ ಕಾರಣ ಸವಲತ್ತು ಹೆಚ್ಚುತ್ತಿದ್ದಂತೆಯೇ ಸ್ಥೂಲಕಾಯವೂ ಹೆಚ್ಚುತ್ತಿದೆ.

ತೂಕ ಇಳಿಸಲು ದೈಹಿಕ ಚಟುವಟಿಕೆ, ವ್ಯಾಯಾಮದಲ್ಲಿ ಹೆಚ್ಚಳ, ಆಹಾರದಲ್ಲಿ ನಿಯಂತ್ರಣ ಮೊದಲಾದವನ್ನು ನಿಮ್ಮ ಮೇಲೆ ಹೇರಿಕೊಳ್ಳುತ್ತಾ ಹೋದಂತೆಯೇ ಕೆಲವಾರು ಬದಲಾವಣೆಗಳು ಕಂಡುಬರುತ್ತವೆ, ಕಂಡುಬರಬೇಕು ಸಹಾ. ವಿಶೇಷವಾಗಿ ಕುಡಿಯುವ ನೀರಿನ ಪ್ರಮಾಣ ಜೀವ ರಾಸಾಯನಿಕ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ತೂಕ ಇಳಿಕೆಯ ಸಮಯದಲ್ಲಿ ಆರೋಗ್ಯವೂ ಕೆಡದೇ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳಬೇಕಾದರೆ ಕೇವಲ ನೀರು ಮಾತ್ರ ಸಾಕಾಗದು. ಬದಲಿಕೆ ಪೌಷ್ಟಿಕವಾದ ಪೇಯಗಳು ತೂಕ ಇಳಿಕೆಯ ಕ್ರಿಯೆಯನ್ನು ಸುಲಭವಾಗಿಸುತ್ತವೆ. ಬನ್ನಿ, ಇವುಗಳು ಯಾವುವು ಎಂಬುದನ್ನು ನೋಡೋಣ:

cucumber juice

ಬಾಳೆಹಣ್ಣು-ನೀರಿನ ಮಿಶ್ರಣ
ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಇದಕ್ಕೆ ಕೊಂಚ ಐಸ್ ತುಂಡುಗಳು ಮತ್ತು ಅರ್ಧ ಕಪ್ ನೀರು ಹಾಕಿ ನೊರೆನೊರೆಯಾಗಿಸಿ ಕಡೆಯಿರಿ. ಈ ನೀರನ್ನು ತಣ್ಣಗಿರುವಂತೆಯೇ ಕುಡಿಯಿರಿ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಲವಣಗಳು ನೀರಿನಲ್ಲಿ ಕರಗುತ್ತವೆ. ಈ ಪೇಯವನ್ನು ಕುಡಿಯುವ ಮೂಲಕ ಹಾಲು ಕುಡಿಯದೇ ಇದ್ದು ಹಾಲಿನ ಮೂಲಕ ಪಡೆಯಬಹುದಾದ ಪೋಷಕಾಂಶಗಳನ್ನು ಪಡೆದೂ ಕೊಬ್ಬಿಲ್ಲದೇ ಇರುವ ಕಾರಣ ತೂಕ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ಬೆಂಬಲ ದೊರಕುತ್ತದೆ.

ಸೌತೆಕಾಯಿ-ಕೊತ್ತಂಬರಿ ಸೊಪ್ಪಿನ ಜ್ಯೂಸ್
ಒಂದು ಚಿಕ್ಕ ಸೌತೆ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ತುರಿದ ಅರ್ಧ ಇಂಚು ಶುಂಠಿ, ಒಂದು ಚಿಕ್ಕಚಮಚ ಲೋಳೆಸರದ ರಸ ಸೇರಿಸಿ ಮಿಕ್ಸಿಯಲ್ಲಿ ಕಡೆಯಿರಿ. ಇದಕ್ಕೆ ಕೆಲವು ಐಸ್ ತುಂಡುಗಳನ್ನು ಸೇರಿಸಿ ಮತ್ತಷ್ಟು ಕಡೆಯಿರಿ. ನಿಮಗೆ ಸೂಕ್ತವೆನಿಸುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಲಿಂಬೆಯ ರಸ ಸೇರಿಸಿ ಕುಡಿಯಿರಿ. ಈ ಪೇಯ ಅತ್ಯಂತ ಸಮರ್ಥವಾದ ವಿಷನಿವಾರಕವಾಗಿದ್ದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಉತ್ತಮವಾಗಿದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೊಂದು ಲೋಟ ಕುಡಿದರೆ ಸಾಕು. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಕಿವಿ, ಸೌತೆ, ಸ್ಟ್ರಾಬೆರಿ ಹಣ್ಣಿನ ಜ್ಯಾಸ್
ಒಂದು ಕಿವಿಹಣ್ಣಿನ ತಿರುಳು, ತುರಿದ ಒಂದು ಸೌತೆ ಮತ್ತು ಕೆಲವು ಸ್ಟ್ರಾಬೆರಿಗಳನ್ನು ಜಜ್ಜಿ ಒಂದು ಜಗ್ ನೀರಿನಲ್ಲಿ ಹಾಕಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಈ ಹೊತ್ತಿನಲ್ಲಿ ಹಣ್ಣುಗಳ ಪೋಷಕಾಂಶಗಳು ನೀರಿನಲ್ಲಿ ಕರಗಿರುತ್ತದೆ. ಈ ಜಗ್ ನಿಂದ ನೀರನ್ನು ಬಗ್ಗಿಸಿಕೊಂಡು ಖಾಲಿಯಾದ ಜಗ್ಗಿನಲ್ಲಿ ಇನ್ನಷ್ಟು ನೀರನ್ನು ಸುರಿದಿಡಿ.
ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಈ ನೀರಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ವಿಟಮಿನ್ ಎ ಸಹಿತ ಹಲವು ಪೋಷಕಾಂಶಗಳು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೇ ತೂಕ ಕಳೆದುಕೊಳ್ಳುವ ವ್ಯಾಯಾಮಕ್ಕೆ ಅಗತ್ಯವಾಗಿರುವ ಹೆಚ್ಚಿನ ಶಕ್ತಿ ನೀಡುತ್ತದೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ

ಅರಿಶಿನ, ಲಿಂಬೆ ಬೆರೆಸಿದ ಟೀ
ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಅರಿಶಿನ, ಕೊಂಚ ಟೀಪುಡಿ, ಚಿಟಿಕೆಯಷ್ಟು ಚೆಕ್ಕೆಯ ಪುಡಿ ಬೆರೆಸಿ ಕುದಿಸಿ. ಸುಮಾರು ಎರಡು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಸಿ. ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಅರ್ಧ ಲಿಂಬೆಯ ರಸವನ್ನು ಬೆರೆಸಿ ತಕ್ಷಣ ಕುಡಿಯಿರಿ. ಈ ಟೀ ಯಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡುಗಳಿದ್ದು ತೂಕ ಇಳಿಸಲು ನೆರವಾಗುತ್ತದೆ ಹಾಗೂ ಅರಿಶಿನದ ಬ್ಯಾಕ್ಟೀರಿಯಾನಿವಾರಕ ಗುಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಸೂಚನೆ: ಈ ಎಲ್ಲಾ ಮನೆಮದ್ದನ್ನು ಪ್ರಯತ್ನಿಸುವ ಮೊದಲು ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ.....

English summary

Drinks that will boost your weight loss

If you are trying to lose weight, little things matter. While nothing beats water to help you stay energised, these drinks contain nutrients that boost your metabolism. Here are the health experts explain how you can drink your way to weight loss.
X
Desktop Bottom Promotion