ದೇಹದ ತೂಕ ಇಳಿಸುವ ಪವರ್-'ಮೆಂತೆ' ಕಾಳಿನಲ್ಲಿದೆ!

ಅಡುಗೆ ಮನೆಯ ಈ ಪುಟ್ಟ ರಾಣಿ-ಮೆಂತೆಯ ಕಾರುಬಾರು ಕೇಳಿದರೆ ನಿಮಗೆಯೇ ಅಚ್ಚರಿಯಾಗಬಹುದು! ಕಾರಣವಿಷ್ಟೇ ಮೂರ್ತಿ ಚಿಕ್ಕದಾದರೂ ಕೀರ್ತ ದೊಡ್ಡದು ಎಂಬಂತಿರುವ ಈ ಮೆಂತೆ ಕಾಳುಗಳು ತೂಕ ಇಳಿಸುವಲ್ಲಿ ಎತ್ತಿದ ಕೈ....

By: Arshad
Subscribe to Boldsky

ಮೆಂತೆಕಾಳುಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಮಧುಮೇಹವನ್ನು ನಿಯಂತ್ರಿಸುವುದು ಇತ್ಯಾದಿ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಇದರೊಂದಿಗೆ ದೇಹದ ತೂಕವನ್ನು ನಿಯಂತ್ರಿಸಲೂ ಈ ಪುಟ್ಟಕಾಳುಗಳು ಸಕ್ಷಮವಾಗಿವೆ. ಬನ್ನಿ, ಈ ಮೆಂತೆಯನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ.....   

ಉಗುರುಬೆಚ್ಚನೆಯ ನೀರಿನೊಂದಿಗೆ.....

ಸುಮಾರು ಎರಡು ಚಮಚದಷ್ಟು ಮೆಂತೆಕಾಳುಗಳನ್ನು ಕೊಂಚವೇ ಹುರಿದು ಮಿಕ್ಸಿಯ ಚಿಕ್ಕಜಾರ್‌ನಲ್ಲಿ ಪುಡಿಯಾಗಿಸಿ. ಪ್ರತಿದಿನ ಬೆಳಿಗ್ಗೆ ಈ ಪುಡಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಈ ಪುಡಿಯನ್ನು ದಿನದ ಇತರ ಊಟದಲ್ಲಿ ಬೆರೆಸಿ ತಿನ್ನಬಹುದು.

ಮೊಳಕೆ ಬರಿಸಿದ ಮೆಂತೆ ಕಾಳುಗಳು

ಮೆಂತೆಕಾಳುಗಳು ಮೊಳಕೆ ಬರಿಸಿದ ಬಳಿಕ ಇವುಗಳಲ್ಲಿ ವಿಟಮಿನ್ನುಗಳು ಮತ್ತು ಖನಿಜಗಳು ಹೆಚ್ಚುತ್ತವೆ. ಪ್ರತಿದಿನ ಬೆಳಿಗ್ಗೆ ಕೊಂಚ ಮೊಳಕೆಬರಿಸಿದ ಮೆಂತೆಕಾಳುಗಳನ್ನು ಖಾಲಿಹೊಟ್ಟೆಯಲ್ಲಿ ತಿನ್ನುವ ಮೂಲಕ ತೂಕ ಶೀಘ್ರವಾಗಿ ಇಳಿಯುತ್ತದೆ. ಮೆಂತೆಕಾಳುಗಳನ್ನು ಮೊಳಕೆ ಬರಿಸಲು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಈ ಬಟ್ಟೆಯನ್ನು ಆಗಾಗ ತಣ್ಣೀರು ಚಿಮುಕಿಸುತ್ತಾ ತೇವವಾಗಿರಿಸಿ.

ಮೊಳಕೆ ಬರಿಸಿದ ಮೆಂತೆ ಕಾಳುಗಳು

ಈ ಗಂಟಿನ ಮೇಲೆ ಕೊಂಚ ಭಾರದ ವಸ್ತು ಅಥವಾ ಕಲ್ಲನ್ನಿಟ್ಟು ಮೂರು ದಿನಗಳ ಕಾಲ ಹಾಗೇ ಇರಿಸಿ. ಮೂರು ದಿನಗಳ ನಂತರ ಗಂಟು ಬಿಚ್ಚಿ ಮೊಳಕೆ ಮೇಲೆ ಬರುವಂತೆ ಮಾಡಿ. ಇವುಗಳ ಹಿರಿಮೆ ಎಂದರೆ ಈ ಮೊಳಕೆಗಳು ಸಾಕಷ್ಟು ಉದ್ದವಾಗುವರೆಗೂ ಸೇವಿಸಬಹುದು. ಆದ್ದರಿಂದ ಕೊಂಚ ಹೆಚ್ಚೇ ಕಾಳುಗಳನ್ನು ಮೊಳಕೆ ಬರಿಸುವ ಮೂಲಕ ಹೆಚ್ಚು ದಿನಗಳ ಕಾಲ ಸೇವಿಸಬಹುದು.  ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?

ನೀರಿನಲ್ಲಿ ನೆನೆಸಿಟ್ಟ ಕಾಳುಗಳು

ಕೊಂಚ ಮೆಂತೆಕಾಳುಗಳನ್ನು ರಾತ್ರಿ ಒಂದು ಲೋಟದಲ್ಲಿ ಮುಳುಗುವಷ್ಟು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ಲೋಟದ ನೀರನ್ನು ಸೋಸಿ ಈ ಕಾಳುಗಳನ್ನು ಖಾಲಿಹೊಟ್ಟೆಯಲ್ಲಿ ಜಗಿದು ಸೇವಿಸಿ. ಇದರಿಂದ ಇಡಿಯ ದಿನ ಹೊಟ್ಟೆ ತುಂಬಿದಂತಿದ್ದು ಅನಾರೋಗ್ಯಕರ ಆಹಾರಗಳನ್ನು ಸೇವಿಸದಂತೆ ತಡೆಯುತ್ತದೆ. ಇದರಲ್ಲಿ ಕ್ಯಾಲೋರಿಗಳೂ ಕಡಿಮೆ ಇರುವುದರಿಂದ ಹೆಚ್ಚಿನ ತೂಕವಿರದೇ ಇರುವುದೂ ಇಲ್ಲ.

ಮೆಂತೆ ಮತ್ತು ಜೇನು

ಆಯುರ್ವೇದದಲ್ಲಿ ತೂಕ ಇಳಿಸಲು ಆಯ್ದುಕೊಂಡ ಸಾಮಾಗ್ರಿಗಳಲ್ಲಿ ಮೆಂತೆ ಮತ್ತು ಜೇನು ಮುಖ್ಯವಾಗಿವೆ. ಮೆಂತೆ ಕಾಳುಗಳನ್ನು ಬೇಯಿಸಿ ಮಾಡಿದ ಟೀ ಯಲ್ಲಿ ಕೊಂಚ ಜೇನು ಸೇರಿಸಿ ಇದಕ್ಕೆ ಕೊಂಚ ಲಿಂಬೆರಸವನ್ನೂ ಸೇರಿಸುವ ಮೂಲಕ ತೂಕ ಇಳಿಸಲು ಸಾಧ್ಯವಾಗುತ್ತದೆ. ಈ ಟೀ ಯನ್ನು ನಿತ್ಯವೂ ಬೆಳಗ್ಗಿನ ಟೀ ಬದಲಿಗೆ ಈ ಟೀಯನ್ನು ಕುಡಿಯಿರಿ.

ಮೆಂತೆಯ ಟೀ

ಆರೋಗ್ಯವನ್ನು ಉತ್ತಮಗೊಳಿಸಲು ಮೆಂತೆ ಉತ್ತಮವಾದ ಸಾಮಾಗ್ರಿಯಾಗಿದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರೊಂದಿಗೆ ಕೊಂಚ ದಾಲ್ಚಿನ್ನಿ ಪುಡಿ ಮತ್ತು ಹಸಿಶುಂಠಿ ಸೇರಿಸಿದರೆ ಇನ್ನೂ ಉತ್ತಮವಾಗುತ್ತದೆ.

ಮೆಂತೆಯ ಟೀ

ಪ್ರತಿದಿನ ಕೊಂಚ ಮೆಂತೆಕಾಳುಗಳನ್ನು ನುಣ್ಣಗೆ ಅರೆದು ನಿಮ್ಮ ಟೀಯೊಂದಿಗೆ ದಾಲ್ಚಿನ್ನಿ ಪುಡಿ ಮತ್ತು ಶುಂಠಿ ಸೇರಿಸಿ ಕುಡಿಯುವ ಮೂಲಕ ತೂಕ ಇಳಿಕೆಯಲ್ಲಿ ಪ್ರಗತಿ ಕಾಣುತ್ತದೆ. 

ತೂಕ ಇಳಿಸಿಕೊಳ್ಳಬೇಕೇ? ಬೆಳಿಗ್ಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, November 8, 2016, 15:04 [IST]
English summary

Do You Know That Methi Helps In Reducing Weight?

Methi or fenugreek is a natural ingredient that has a number of benefits for our health like controlling blood pressure and keeping diabetes under check, besides reducing weight.
Please Wait while comments are loading...
Subscribe Newsletter