ಸೊಂಟದ ಸುತ್ತಳತೆ ಹೆಚ್ಚಿದರೆ, ಕಾಯಿಲೆಗಳಿಗೆ ಮುಕ್ತ ಆಹ್ವಾನ!

ಒಮ್ಮೆ ಸೊಂಟದ ಸುತ್ತಳತೆ ಹೆಚ್ಚುತ್ತಾ ಹೋಯಿತೋ, ಇದು ಇನ್ನಷ್ಟು ವಿಸ್ತಾರವಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಆದರೆ ಇದು ಯಾವುದೋ ಕಾಯಿಲೆಯ ಮುನ್ಸೂಚನೆಯಾಗಿದ್ದು ಹೆಚ್ಚಿನ ಸಮಯದಲ್ಲಿ ಮಾರಣಾಂತಿಕವಾಗಿ ಪರಿಣಮಿಸಬಹುದು.

By: Arshad
Subscribe to Boldsky

ನಮ್ಮ ದೇಹದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರುವ ಅಳತೆ ಎಂದರೆ ಸೊಂಟದ ಸುತ್ತಳತೆ. ನಿನ್ನೆಯವರೆಗೆ ಸರಿಯಾಗಿದ್ದ ಪ್ಯಾಂಟ್ ಅಥವಾ ಶರ್ಟ್ ಇಂದು ಕೊಂಚ ಬಿಗಿಯಾದರೆ ಸೊಂಟದ ಅಳತೆ ಹೆಚ್ಚಿರುವುದು ಖಚಿತವಾಗುತ್ತದೆ. ಸೊಂಟದ ಸುತ್ತಳತೆ ಹೆಚ್ಚಿರುವುದು ಊಟದ ಸ್ವಾದ ಹೆಚ್ಚು ಇಷ್ಟವಾಗಿರುವ ಸಂಕೇತವೆಂದೇ ಎಲ್ಲರೂ ಭಾವಿಸುತ್ತಾರೆ.    ಸೊಂಟದ ಕೊಬ್ಬನ್ನು ಇಳಿಸುತ್ತೆ ಈ ಸರಳ ಮದ್ದು

ಆದರೆ ಇದು ಮುಂದೆ ಎದುರಾಗುವ ಕಾಯಿಲೆಯ ಮುನ್ಸೂಚನೆಯೂ ಆಗಿರುವುದನ್ನು ಮಾತ್ರ ಅನುಮಾನಿಸಲಾರರು. ಒಮ್ಮೆ ಸೊಂಟದ ಸುತ್ತಳತೆ ಹೆಚ್ಚುತ್ತಾ ಹೋಯಿತೋ, ಇದು ಇನ್ನಷ್ಟು ವಿಸ್ತಾರವಾಗಲು ಹೆಚ್ಚು ಸಮಯ ಬೇಕಾಗಿಲ್ಲ. ಆದರೆ ಇದು ಯಾವುದೋ ಕಾಯಿಲೆಯ ಮುನ್ಸೂಚನೆಯಾಗಿದ್ದು ಹೆಚ್ಚಿನ ಸಮಯದಲ್ಲಿ ಮಾರಣಾಂತಿಕವಾಗಿ ಪರಿಣಮಿಸಬಹುದು.  ಸುಲಭದಲ್ಲಿ ಕರಗದ ಸೊಂಟದ ಬೊಜ್ಜು ಕರಗಿಸಲು ಟಿಪ್ಸ್

ಆದ್ದರಿಂದ ಯಾವಾಗ ಸೊಂಟದ ಸುತ್ತಳತೆ ಹೆಚ್ಚಿತೋ ತಕ್ಷಣ ಎಚ್ಚೆತ್ತು ಇದರ ಬಗ್ಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಕೊಂಚ ವ್ಯಾಯಾಮ, ಕೊಂಚ ಆಹಾರದಲ್ಲಿ ಕಟ್ಟುನಿಟ್ಟು ಅಗತ್ಯ. ಬನ್ನಿ, ಸೊಂಟದ ಸುತ್ತಳತೆ ಹೆಚ್ಚಿಸುವ ಕಾಯಿಲೆಗಳು ಯಾವುವು ಎಂಬುದನ್ನು ನೋಡೋಣ...

ಸ್ಥೂಲಕಾಯ

ಸೊಂಟದ ಸುತ್ತಳತೆ ಹೆಚ್ಚುವುದು ಎಂದರೆ ಹೊಟ್ಟೆಯ ಮುಂಭಾಗದಲ್ಲಿ ಕೊಬ್ಬು ಸಂಗ್ರಹವಾಗಿರುವುದು ಸ್ಪಷ್ಟವಾಗಿದೆ. ಇದು ನಿಧಾನವಾಗಿ ಸ್ಥೂಲಕಾಯವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸ್ಥೂಲಕಾಯ ಹತ್ತು ಹಲವು ತೊಂದರೆಗಳಿಗೆ ಕಾರಣವಾಗಿದೆ. ಇದರಲ್ಲಿ ಮೂಳೆಗಳ ಮೇಲೆ ಹೆಚ್ಚಿನ ಒತ್ತಡ, ಸ್ನಾಯುಗಳ ಮೇಲೆ ಹೆಚ್ಚಿನ ಭಾರ, ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ದೂಡಬೇಕಾದ ಅಗತ್ಯತೆಯಿಂದ ಹೃದಯಕ್ಕೆ ಹೆಚ್ಚುವ ಒತ್ತಡ ಹಲವು ಖಾಯಿಲೆಗಳಿಗೆ ಆಹ್ವಾನ ನೀಡುತ್ತದೆ.   ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?

ಹೃದಯದ ಸಮಸ್ಯೆಗಳು

ಹೆಚ್ಚುವ ಸೊಂಟದ ಸುತ್ತಳತೆ ಎಂದರೆ ಹೆಚ್ಚಿದ ಕೊಬ್ಬು ಮತ್ತು ಈ ಭಾರವನ್ನು ಹೊರಲು ಹೆಚ್ಚುವ ಸ್ನಾಯುಗಳಿಗೆ ಹೆಚ್ಚಿನ ರಕ್ತಸರಬರಾಜು ಮಾಡಬೇಕಾಗಿ ಬರುತ್ತದೆ. ಇದು ಹಲವು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು.

ಮಧುಮೇಹ

ಸೊಂಟದ ಸುತ್ತಳತೆ ಹೆಚ್ಚುವುದು ಮಧುಮೇಹ ಆವರಿಸುವ ಸಾಧ್ಯತೆಯನ್ನು ಅತಿ ಹೆಚ್ಚಿಸುತ್ತದೆ. ಅದರಲ್ಲೂ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸವಿರುವ ವ್ಯಕ್ತಿಗಳಿಗಂತೂ ಮಧುಮೇಹ ಆವರಿಸುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ.  ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಯಕೃತ್ ಕಾಯಿಲೆ

ಒಂದು ವೇಳೆ ದೇಹದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ ಇದು ಸೊಂಟದ ಸುತ್ತಳತೆ ಹೆಚ್ಚಲು ನೆರವಾಗುವ ಜೊತೆಜೊತೆಗೇ ಯಕೃತ್ತಿನಲ್ಲಿಯೂ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ. ಯಕೃತ್ ನಲ್ಲಿನ ಕೊಬ್ಬು ಯಕೃತ್ ಕಾಯಿಲೆಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡ

ಸೊಂಟದ ಸುತ್ತಳತೆ ಹೆಚ್ಚುತ್ತಿದ್ದಂತೆಯೇ ರಕ್ತದ ಅಗತ್ಯತೆಯೂ ಹೆಚ್ಚುತ್ತದೆ. ಇದರಿಂದ ಹೃದಯ ಹೆಚ್ಚು ಒತ್ತಡದಲ್ಲಿ ರಕ್ತವನ್ನು ದೂಡಬೇಕಾಗುತ್ತದೆ. ಪರಿಣಾಮವಾಗಿ ಅಧಿಕ ರಕ್ತದೊತ್ತಡ ಎದುರಾಗುತ್ತದೆ.  ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

ಉಸಿರಾಟದ ತೊಂದರೆ

ಸೊಂಟದ ಸುತ್ತ ಕೊಬ್ಬು ಹೆಚ್ಚುತ್ತಿದ್ದಂತೆಯೇ ದೇಹದ ಭಾರವೂ ಹೆಚ್ಚುತ್ತಾ ಹೋಗುತ್ತದೆ. ಅಂದರೆ ಹೆಚ್ಚಿನ ಭಾರವನ್ನು ಹೊತ್ತೊಯ್ಯಲು ಹೆಚ್ಚಿನ ಆಮ್ಲಜನಕದ ಅಗತ್ಯವಿದೆ. ಇದರಿಂದ ಕೊಂಚವೂ ಹೆಚ್ಚು ನಡೆದಾಡಿದರೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ನೀಡಲು ಶ್ವಾಸಕೋಶ ಅಸಮರ್ಥವಾಗುತ್ತದೆ. ಇದರಿಂದ ಏದುಸಿರು ಬಿಡುವಂತಾಗಿದ್ದು ಉಸಿರಾಟದ ತೊಂದರೆ ಎದುರಾಗುತ್ತದೆ.

ಕ್ಯಾನ್ಸರ್

ಸೊಂಟದ ಸುತ್ತಳತೆ ಹೆಚ್ಚುತ್ತಿದ್ದಂತೆಯೇ ಕೆಲವು ಕ್ಯಾನ್ಸರ್ ಆವರಿಸುವ ಸಾಧ್ಯತೆಯೂ ಹೆಚ್ಚುತ್ತಾ ಹೋಗುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸುತ್ತದೆ. ವಿಶೇಷವಾಗಿ ಯಕೃತ್ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ ಎಂದು ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.  ಎಚ್ಚರ; ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, November 5, 2016, 10:58 [IST]
English summary

Check Your Waist Size, It Tells You About These Diseases

If you want to be healthy and keep yourself away from the risk of various diseases that might turn fatal at times, then it is necessary to keep the waist size under control. Healthy diet and regular exercise help in this regard. Here is a list of a few diseases that your waist size can reflect. Take a look.
Please Wait while comments are loading...
Subscribe Newsletter