For Quick Alerts
ALLOW NOTIFICATIONS  
For Daily Alerts

ಗರ್ಭ ಕಂಠದ ನೋವಿಗೆ ಅರ್ಧ ಮತ್ಸ್ಯೇಂದ್ರಾಸನ

By Vani Naik
|

ಬನ್ನೆಲಬುರಿತ ಅಥವಾ ಆಂಗ್ಲ ಭಾಷೆಯಲ್ಲಿ ಕರೆಯುವ ಹಾಗೆ, ಸರ್ವಿಕಲ್ ಸ್ಪಾಂಡಿಲೈಟಿಸ್, ಇತ್ತೀಚಿನ ದಿನಗಳಲ್ಲಿ ಚಿರಪರಿಚಿತ ಶಬ್ದ. ಇದನ್ನು ಸೆರ್ವಿಕಲ್ ಆಸ್ಟಿಯೋಆರ್ತ್ರೈಟಿಸ್ ಅಥವಾ ನೆಕ್ ಆರ್ತ್ರೈಟಿಸ್ ಎಂದೂ ಕರೆಯುತ್ತಾರೆ. ಶಾಲೆಗೆ ಹೋಗುವ ಮಕ್ಕಳ ಬಾಯಲ್ಲಿ ಈ ಶಬ್ಧವನ್ನು ಕೇಳಲ್ಪಟ್ಟರೂ ಆಶ್ಚರ್ಯವಿಲ್ಲ. ಇಂದಿನ ಅಂತರ್ಜಾಲ, ಸ್ಮಾರ್ಟ್ ಫೋನ್ ಯುಗದಲ್ಲಿ, ಮಕ್ಕಳೂ ಸಹ ತಮಗೆ ಸ್ವಂತ ಉಪಕರಣಗಳನ್ನು ಕೇಳುತ್ತಾರೆ.

ಅದೇನೇ ಇರಲಿ, ಇವುಗಳನ್ನು ಉಪಯೊಗಿಸುವ ರೀತಿ ಸರಿ ಇಲ್ಲ. ನಿರಂತರವಾಗಿ ಕೆಳಗೆ ನೊಡುವುದು, ಕತ್ತನ್ನು ಬಹಳ ಸಮಯದವರೆಗೆ ಬಾಗಿಸುವುದು ಅಥವಾ ಹಾಸಿಗೆಯ ಮೇಲೆ ಮಲಗಿ ನೊಡುವುದು. ಇವುಗಳು ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ. ಗರ್ಭಕಂಠದ ನೋವು, ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ದೀರ್ಘ ಕಾಲ ಕುರ್ಚಿಯಮೇಲೆ ಕುಳಿತು ಕೆಲಸ ಮಾಡುವವರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಥಟ್ ಅಂತ ಶಕ್ತಿ ಬರಬೇಕೇ? ಒಮ್ಮೆ ಭುಜಂಗಾಸನ ಪ್ರಯತ್ನಿಸಿ

ಒಂದೇ ಜಾಗದಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸವನ್ನು ಮಾಡುವವರು ಕೂಡ ಬನ್ನೆಲಬುರಿತ ಅಥವಾ ಗರ್ಭಕಂಠದ ನೋವಿಗೆ ತುತ್ತಾಗುತ್ತಾರೆ. ಕುತ್ತಿಗೆ ಭಾಗದ ಡಿಸ್ಕ್ ಮತ್ತು ಕೀಲುಗಳಲ್ಲಿ ಈ ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬಿನ ಕಾರ್ಟಿಲೇಜ್ ಮತ್ತು ಮೂಳೆಗಳ ಸವೆತದಿಂದ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಪ್ರಾರಂಭಿಕ ಹಂತದಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡು, ವಯಸ್ಸಾಗುತ್ತಿದ್ದಂತೆ ಹೆಚ್ಚಾಗುವ ಸಂಭವವಿರುತ್ತದೆ. ಬೆನ್ನೆಲಬುರಿತದ ಸಮಸ್ಯೆಗೆ ಇತರೆ ಕಾರಣಗಳೇನೆಂದರೆ:

Ardha Matsyendrasana for Cervical Pain

ಕುತ್ತಿಗೆಗೆ ಆದ ಗಾಯಗಳು
*ಹೆಚ್ಚು ಭಾರವಾದ ವಸ್ತುವನ್ನು ಎತ್ತುವುದು
*ದೀರ್ಘಕಾಲದವರೆಗೆ ಕುತ್ತಿಗೆಯನ್ನು ಒಂದೇ ದಿಕ್ಕಿನಲ್ಲಿಡುವುದು
*ಒತ್ತಡಗಳು
*ಅನುವಂಶಿಕ ಕಾಯಿಲೆ
*ಧೂಮಪಾನ
*ಬೊಜ್ಜು
*ಆಲಸಿತನ ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

ಇಂಥ ನೋವಿಗೆ ತುತ್ತಾದವರು, ನಿರಂತರ ಯೋಗಾಭ್ಯಾಸದಿಂದ ಸಮಸ್ಯೆಯಿಂದ ಹೊರಬರಬಹುದು. ಅರ್ಧಮತ್ಸ್ಯೇಂದ್ರಾಸನ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಈ ಆಸನದ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. ಅರ್ಧ ಎಂದರೆ "ಅರ್ಧ", ಮತ್ಸ್ಯ ಎಂದರೆ "ಮೀನು", ಇಂದ್ರ ಎಂದರೆ "ರಾಜ" ಮತ್ತು ಆಸನ ಎಂದರೆ "ಭಂಗಿ".

ಈ ಆಸನವನ್ನು ಹಾಕಲು ಕ್ರಮಬದ್ಧವಾಗಿ ವಿವರಣೆ ನೀಡಲಾಗಿದೆ.
1. ನಿಮ್ಮ ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಿ, ಪಾದಗಳನ್ನು ಒಟ್ಟಿಗೆ ಜೋಡಿಸಿರಬೇಕು. ಬೆನ್ನೆಲುಬು ನೇರವಾಗಿರಬೇಕು.
2. ನಿಮ್ಮ ಎಡಗಾಲನ್ನು ಮಡಿಸಿ, ಎಡಗಾಲಿನ ಹಿಮ್ಮಡಿಯನ್ನು ಬಲಭಾಗದ ಸೊಂಟದ ಹತ್ತಿರ ತರಬೇಕು.
3. ನಿಮ್ಮ ಬಲಗಾಲನ್ನು ಎಡಗಾಲಿನ ಮಂಡಿಯ ಮೇಲೆ ತರಬೇಕು.


4. ನಿಮ್ಮ ಎಡಗೈಯನ್ನು ಬಲಗಾಲಿನ ಮಂಡಿಯ ಮೇಲಿಟ್ಟು, ಬಲಗೈಯನ್ನು ನಿಮ್ಮ ಹಿಂಬದಿಗೆ ತರಬೇಕು.
5. ನಿಮ್ಮ ಸೊಂಟ, ಕುತ್ತಿಗೆ ಮತ್ತು ಭುಜವನ್ನು ನೀವು ಪ್ರಾರಂಭಿಸಿದ ಭಂಗಿಯ ಅಭಿಮುಖವಾಗಿ ತಿರುಗಿಸಿ.
6. ಅದೇ ದಿಕ್ಕಿನಲ್ಲಿ ಹಿಂತಿರುಗಿ ನೋಡಿ.
7. ನಿಮ್ಮ ಬೆನ್ನೆಲುಬನ್ನು ನೇರವಾಗಿರಿಸಿ.
8. ಕನಿಷ್ಠ 60 ಸೆಕೆಂಡುಗಳ ಕಾಲ ಇದೇ ಸ್ಥಿತಿಯಲ್ಲಿರಿ ಅಥವಾ ನಿಮಗೆ ಸಾಧ್ಯವಾಗುವಷ್ಟು ಮಾತ್ರ.
9. ಈಗ ಉಸಿರು ಹೊರಗೆ ಬಿಟ್ಟು ಹಿಂದಿರುವ ಕೈಯನ್ನು ಸಡಲಿಸಿ, ನಂತರ ಸೊಂಟ ಮತ್ತು ಕೊನೆಯದಾಗಿ ಕತ್ತನ್ನು ಸಡಲಿಸಿ.
10. ಕೆಲಕ್ಷಣ ನೇರವಾಗಿ ಕುಳಿತುಕೊಳ್ಳಿ ನಂತರ ಎದ್ದೇಳಿರಿ.
11. ಇದೇ ಭಂಗಿಯನ್ನು ಇನ್ನೊಂದು ಕಾಲಿನಿಂದ ಪುನರಾವರ್ತಿಸಿ. ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

ಇತರ ಲಾಭಗಳು
ಇದು ಬೆನ್ನಿನ ಮೂಳೆಕಟ್ಟನ್ನು ಹುರಿಗೊಳಿಸುತ್ತದೆ, ಮಂಡಿಮೂಳೆಯನ್ನು ಗಟ್ಟಿಗೊಳಿಸುತ್ತದೆ ಮತ್ತು ದೇಹವನ್ನು ಇನ್ನಷ್ಟು ಸಡಿಲವಾಗಿಸುತ್ತದೆ.

ಎಚ್ಚರಿಕೆ
ನೀವು ಯಾವುದೇ ಶಸ್ತ್ರಚಿಕಿತ್ಸೆಗೊಳಗಾಗಿದ್ದರೆ ಈ ಆಸನ ಆರಂಭಿಸುವ ಮೊದಲು ವೈದ್ಯರ ಸಲಹೆಯನ್ನು ಮರೆಯದೆ ಪಡೆಯಿರಿ. ಆರೋಗ್ಯವನ್ನು ವೃದ್ಧಿಸುವ ಬಾಬಾ ರಾಮ್‌ದೇವ್‌ ಯೋಗಾಸನಗಳು!

English summary

Ardha Matsyendrasana for Cervical Pain

Cervical spondylitis, also known as cervical osteoarthritis or neck arthritis, is quite a familiar term these days. You will not be surprised to hear this term from middle school going kids. In this era of the Internet and smartphones, even kids want their own devices. However, their method of using it is quite wrong. Continuously gazing down, bending their neck, or lying down on the bed can cause health problems, cervical pain being one of them.
X
Desktop Bottom Promotion