For Quick Alerts
ALLOW NOTIFICATIONS  
For Daily Alerts

ಖಳನಾಯಕ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಿಂಪಲ್ ಮನೆಮದ್ದು

By Manu
|

ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಎಂಬ ಪದವನ್ನು ಬಹಳ ಕೇಳುತ್ತಾ ಬಂದಿದ್ದೇವೆ. ಅಲ್ಲದೇ ಇದನ್ನೊಂದು ಖಳನಾಯಕನಂತೆಯೂ ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಕೊಲೆಸ್ಟ್ರಾಲ್ ಎಂದರೆ ನಮ್ಮ ಅಹಾರದ ಮೂಲಕ ಬರುವಂತಹ ಜಿಡ್ದು. ಇದು ನಮ್ಮ ರಕ್ತ ಮತ್ತು ಪ್ರತಿ ಜೀವಕೋಶದಲ್ಲಿಯೂ ಇದೆ. (ಜೀವಕೋಶದ ಹೊರಪದರದ ಮುಖ್ಯ ಅಂಗವಾಗಿದೆ). ಹೃದಯಾಘಾತಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ ಬಗ್ಗೆ ಎಚ್ಚರವಿರಲಿ!

An Ancient Remedy For Cholesterol

ಅಲ್ಲದೆ ಒಂದು ನಿಗದಿತ ಪ್ರಮಾಣದಲ್ಲಿ ನಮಗೆ ಅಗತ್ಯವೂ ಹೌದು. ಇದರ ಪ್ರಮುಖ ಕೆಲಸವೇನೆಂದರೆ ದೇಹಕ್ಕೆ ಅಗತ್ಯವಿರುವ ಹಾರ್ಮೋನುಗಳನ್ನು (ಉದಾಹರಣೆಗೆ ಈಸ್ಟ್ರೋಜೆನ್, ಟೆಸ್ಟೋಸ್ಟೆರಾನ್, ಪ್ರೊಜೆಸ್ಟರಾನ್ ಇತ್ಯಾದಿ) ಉತ್ಪಾದಿಸಲು ನೆರವಾಗುವುದು, ವಿಟಮಿನ್ ಡಿ. ಮತ್ತು ಪಿತ್ತರಸದ ಉತ್ಪಾದನೆಗೆ ನೆರವಾಗುವುದು ಇತ್ಯಾದಿ. ಹಾಗಾದರೆ ಇದನ್ನೇಕೆ ಖಳನಾಯಕನಂತೆ ಬಿಂಬಿಸಲಾಗುತ್ತಿದೆ?

ವಾಸ್ತವವಾಗಿ ಈ ಖಳನಾಯಕನ ಪಾತ್ರಕ್ಕೆ ನಾವೇ ಕಾರಣ. ಏಕೆಂದರೆ ನಮ್ಮ ಆಹಾರದ ಮೂಲಕ ಒಳಬರುವ ಅತಿ ಹೆಚ್ಚು ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ನಾವು ಹೊರಹಾಕಲು ಸಾಕಷ್ಟು ದೈಹಿಕ ಚಟುವಟಿಕೆ ನಡೆಸುವುದೇ ಇಲ್ಲ. ಇನ್ನೊಂದರ್ಥದಲ್ಲಿ ನಾವು ಸೇವಿಸುತ್ತಿರುವ ಆಹಾರದಲ್ಲಿ ಅಗತ್ಯಕ್ಕೂ ಹೆಚ್ಚು ಪ್ರಮಾಣದ ಕೊಲೆಸ್ಟ್ರಾಲ್ ಇದೆ. ಕೊಲೆಸ್ಟಾಲ್ ಅನ್ನು ಒಟ್ಟಾಗಿ ಕರೆಯುತ್ತೇವೆಯೇ ವಿನಃ ವಾಸ್ತವವಾಗಿ ಇದರಲ್ಲಿ ಮೂರು ವಿಭಾಗಗಳಿವೆ.

ಅವೆಂದರೆ HDL, LDL, ಮತ್ತು ಟ್ರೈಗ್ಲಿಸರೈಡ್ಸ್. ಇವು ಮೂರೂ ಪ್ರತಿ ವ್ಯಕ್ತಿಯಲ್ಲಿ ಬೇರೆ ಬೇರೆಯಾಗಿರುತ್ತವೆ. ಆರೋಗ್ಯಕರ ಮಟ್ಟದಲ್ಲಿ HDL ಅಥವಾ ಉತ್ತಮ ಕೊಲೆಸ್ಟಾಲ್ ಹೆಚ್ಚಿರಬೇಕು, LDL ಕಡಿಮೆ ಇರಬೇಕು ಮತ್ತು ಟ್ರೈಗ್ಲಿಸರೈಡ್ಸ್ ನಡುವಿನ ಪ್ರಮಾಣದಲ್ಲಿರಬೇಕು. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಆದರೆ ಕೆಲವು ಆಹಾರಗಳ ಮೂಲಕ ನಾವು LDL ಹೆಚ್ಚು ಮತ್ತು HDL ಕಡಿಮೆ ಪಡೆದುಬಿಡುತ್ತೇವೆ. ಇದಕ್ಕೆ ಜ್ವಲಂತ ಉದಾಹರಣೆ ಡಾಲ್ಡಾ, ಪಾಮ್ ಎಣ್ಣೆ ಮತ್ತು ಪ್ರಾಣಿಜನ್ಯ ಕೊಬ್ಬು. ಇನ್ನಿಬ್ಬರನ್ನು ಬಿಟ್ಟು LDLಯನ್ನೇಕೆ ಖಳನಾಯಕನನ್ನಾಗಿ ಬಿಂಬಿಸಲಾಗುತ್ತಿದೆ ಎಂದರೆ ಇದರ ಜಿಡ್ಡುತನಕ್ಕಾಗಿ. ಇರು ರಕ್ತದ ಮೂಲಕ ನರಗಳಲ್ಲಿ ಹರಿಯುವ ಸಮಯದಲ್ಲಿ ತಿರುವು ಮತ್ತು ಕವಲುಗಳಿರುವಲ್ಲಿ ಮೂಲೆಯಲ್ಲಿ ಅಂಟಿಬಿಡುತ್ತದೆ.

ಬಳಿಕ ಬರುವ ರಕ್ತದಲ್ಲಿರುವ ಜಿಡ್ಡು ಕಣಗಳನ್ನೂ ತನ್ನೊಂದಿಗೆ ಅಂಟಿಸಿಕೊಂಡು ರಕ್ತಪರಿಚಲನೆಗೆ ಸ್ಥಳವನ್ನು ಅತಿ ಕಿರಿದು ಮಾಡಿಬಿಡುತ್ತದೆ. ಈ ಕಿರುದಾದ ತೂತಿನ ಮೂಲಕ ರಕ್ತವನ್ನು ದೂಡಲು ಹೃದಯಕ್ಕೆ ಈಗ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದೇ ಅಧಿಕ ರಕ್ತದೊತ್ತಡ. ಈಗ ಅರ್ಥವಾಯಿತಲ್ಲ LDL ಏಕೆ ಕೆಟ್ಟದ್ದೆಂದು?

ಖಳನಾಯಕನೆಂದು ಗೊತ್ತಿದ್ದೂ ಇದನ್ನು ಹಾಗೇ ನಮ್ಮ ರಕ್ತನಾಳಗಳ ಒಳಗೆ ಹಾಗೇ ಬಿಟ್ಟಿದ್ದೇವೆಲ್ಲಾ? ನಾವೇನು ಹೇಡಿಗಳೇ? ಒಂದು ವೇಳೆ ನಿಮ್ಮ ಉತ್ತರವೂ ಅಲ್ಲ ಎಂದಾದಲ್ಲಿ, ಇದನ್ನು ನಿವಾರಿಸಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಕೆಳಗೆ ನೀಡಲಾಗಿರುವ, ಕೇವಲ ಅಡುಗೆಮನೆಯ ಪರಿಕರಗಳನ್ನು ಬಳಸಿರುವ ಪುರಾತನ ವಿಧಾನ ನಿಮ್ಮ ಕೈ ಬಲಪಡಿಸಲಿದೆ: ಕೊಲೆಸ್ಟ್ರಾಲ್ ತಡೆಗಟ್ಟುವ ಮಾರ್ಗಗಳು

ಅಗತ್ಯವಿರುವ ಸಾಮಾಗ್ರಿಗಳು:
*ಶುಂಠಿಯ ಒಣಪುಡಿ- ಒಂದು ಚಿಕ್ಕ ಚಮಚ
*ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ
*ಜೇನು - ಒಂದು ಚಿಕ್ಕ ಚಮಚ


*ಸೇಬಿನ ಶಿರ್ಕಾ - ಒಂದು ಚಿಕ್ಕ ಚಮಚ
*ಲಿಂಬೆ ರಸ- ಒಂದು ಚಿಕ್ಕ ಚಮಚ

*ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ನಾಲ್ಕೈದು ದಿನಗಳವರೆಗೆ ಫ್ರಿಜ್ಜಿನಲ್ಲಿಡಿ.
*ಬಳಿಕ ಮುಂಜಾನೆಯ ಉಪಾಹಾರ ಮತ್ತು ರಾತ್ರಿಯ ಊಟಕ್ಕೂ ಸುಮಾರು ಇಪ್ಪತ್ತು ನಿಮಿಷ ಮುನ್ನ ಕೊಂಚ ಪ್ರಮಾಣ, ಅಂದರೆ ಒಂದು ಚಿಕ್ಕ ಚಮಚದಷ್ಟನ್ನು ಸೇವಿಸುತ್ತಾ ಬನ್ನಿ.


*ಕೆಲವೇ ದಿನಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಇಳಿದು ಅಧಿಕ ರಕ್ತದೊತ್ತಡವೂ ಕಡಿಮೆಯಾಗಿರುವುದನ್ನು ಕಂಡು ಅಚ್ಚರಿಪಡುತ್ತೀರಿ.
ಶುಂಠಿ, ಬೆಳ್ಳುಳ್ಳಿ, ಜೇನು ಮತ್ತು ಲಿಂಬೆಯಲ್ಲಿರುವ ಔಷಧೀಯ ಗುಣಗಳು ರಕ್ತದಲ್ಲಿ ಅಂಟಿಕೊಂಡಿದ್ದ ಜಿಡ್ಡನ್ನು ಸಡಿಲಗೊಳಿಸಿ ವಿಸರ್ಜಿಸಲು ನೆರವಾಗುತ್ತವೆ. ತನ್ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
English summary

An Ancient Remedy For Cholesterol

Cholesterol is nothing but a substance that looks like wax. It is found in most of the cells that are present in your body. Is it useless? Well, it is useful. Your body needs it for many purposes. In order to prepare certain hormones and certain vitamins, your body needs cholesterol. Also, some amount of cholesterol enters your body through the food you eat. The problem with excess levels of cholesterol in your body is that it travels along your blood flow.
X
Desktop Bottom Promotion