For Quick Alerts
ALLOW NOTIFICATIONS  
For Daily Alerts

ಸಂಧಿ ನೋವು ಇದ್ದರೆ, ಇಂತಹ ಆಹಾರಗಳಿಂದ ದೂರವಿರಿ

By Hemanth
|

ಮೂಳೆ ಮಾಂಸಗಳಿಂದ ಕೂಡಿರುವ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ನೋವು ನೋವಾಗಿ ಇರದೆ ದೊಡ್ಡ ತಲೆನೋವಾದರೆ ಅದೇ ನಮ್ಮ ಜೀವನಕ್ಕೆ ತೊಂದರೆಯನ್ನು ಉಂಟು ಮಾಡುತ್ತಿರುತ್ತದೆ. ಸಣ್ಣ ನೋವೆಂದು ಕಡೆಗಣಿಸಿದರೆ ಮುಂದೆ ಅದೇ ನೋವು ದೊಡ್ಡ ಮಟ್ಟದಲ್ಲಿ ನಮ್ಮನ್ನು ಕಾಡಿ ಹಾಸಿಗೆ ಹಿಡಿಯುವಂತಹ ಸಂದರ್ಭ ಎದುರಾಗಬಹುದು. ಹಾಗಾಗಿ ಯಾವುದೇ ನೋವುಗಳನ್ನು ಕಡೆಗಣಿಸುವಂತಿಲ್ಲ.

ಅದರಲ್ಲೂ ಸಂಧಿ ನೋವಿನ ಬಗ್ಗೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು. ಸಂಧಿನೋವು ಇದ್ದವರಿಗೆ ವ್ಯಾಯಾಮ, ಕೆಲಸ ಮತ್ತು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಸಂಧಿನ ಸುತ್ತ ಇರುವ ಸ್ನಾಯು ಹಾಗೂ ಅಂಗಾಂಶಗಳ ಉರಿಯೂತದಿಂದಾಗಿ ನೋವು ಕಾಣಿಸಿಕೊಳ್ಳುವುದು ಎಂದು ಅಧ್ಯಯನಗಳು ಹೇಳಿವೆ. ಈ ಸಂಧಿ ನೋವು ಭುಜ, ಕೈ, ಕಾಲು, ಮೊಣಕಾಲು, ಮೊಣಕೈ ಇವುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಸಂಧಿನಲ್ಲಿ ಕಾಣಿಸಿಕೊಳ್ಳುವಂತಹ ಸೆಳೆತ ಮತ್ತು ನೋವನ್ನು ಅರ್ಥಟೀಸ್ ಎನ್ನಲಾಗುತ್ತದೆ. ಇದೊಂದು ಸ್ನಾಯು ಸಂಬಂಧಿ ಕಾಯಿಲೆಯಾಗಿದ್ದು, ಹಲವಾರು ಜನರನ್ನು ಕಾಡುತ್ತದೆ. ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು

ಅಸ್ಟೋಪೊರೊಸಿಸ್, ಸೋಂಕು ಕೂಡ ಗಂಟು ನೋವಿಗೆ ಪ್ರಮುಖ ಕಾರಣವಾಗಿದೆ. ಸಂಧಿನೋವನ್ನು ನಿವಾರಿಸಲು ಹಲವಾರು ರೀತಿಯ ಮದ್ದುಗಳು, ಮಸಾಜ್‌ಗಳು, ಎಣ್ಣೆಗಳು ಇವೆ. ಇದರೊಂದಿಗೆ ಸಣ್ಣ ಪ್ರಮಾಣದ ವ್ಯಾಯಾಮ ಮತ್ತು ಆಹಾರ ಪಥ್ಯವು ತುಂಬಾ ಮುಖ್ಯ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಕೆಲವೊಂದು ಆಹಾರಗಳು ಸಂಧಿ ನೋವನ್ನು ಹೆಚ್ಚಿಸುವುದು. ಇಂತಹ ಆಹಾರಗಳ ಬಗ್ಗೆ ನಾವು ವಿವರವನ್ನು ನೀಡಿದ್ದು, ಇದನ್ನು ಓದಿಕೊಳ್ಳಿ...

ಕೃತಕ ಸಕ್ಕರೆ

ಕೃತಕ ಸಕ್ಕರೆ

ಸಂಧಿ ನೋವಿನ ಸಮಸ್ಯೆ ಇರುವವರು ಕಡ್ಡಾಯವಾಗಿ ಕೃತಕ ಸಕ್ಕರೆ ಅಥವಾ ಸಂಸ್ಕರಿತ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಇವುಗಳ ಸೇವನೆಯಿಂದ ದೇಹದ ತೂಕ ಹೆಚ್ಚುವುದು ಮತ್ತು ಅದು ಸಂಧಿನ ಮೇಲೆ ಒತ್ತಡ ಹೇರುವುದು.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಪ್ಯಾಕ್ ಮಾಡಲ್ಪಟ್ಟ ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಗಳಿವೆ. ಪ್ರೋಟೀನ್ ಜೀವಕ್ಕೆ ಒಳ್ಳೆಯದಾದರೂ ಸಂಧು ನೋವು ಇರುವವರಿಗೆ ಇದು ವರ್ಜ್ಯ. ಪ್ರೋಟೀನ್ ಸ್ನಾಯುಗಳ ಉರಿಯೂತ ಮತ್ತು ನೋವನ್ನು ಹೆಚ್ಚಿಸುವುದು. ಪ್ರೋಟೀನ್ ಹೆಚ್ಚಿನ ಸೇವನೆಯಿಂದ ತೂಕ ಹೆಚ್ಚಳವಾಗುವುದು.

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸ

ಸಂಸ್ಕರಿತ ಮತ್ತು ಕೆಂಪು ಮಾಂಸದಲ್ಲಿ ನಿಟ್ರಿಟ್ಸ್ ಮತ್ತು ಪುರಿನ್ಸ್ ಎನ್ನುವ ಅಂಶಗಳು ಕ್ಯಾಲರಿಗಳೊಂದಿಗೆ ಬರುತ್ತದೆ. ಇದು ಸ್ನಾಯುಗಳ ಉರಿಯೂತವನ್ನು ಹೆಚ್ಚಿಸಿ ತುಂಬಾ ನೋವು ಉಂಟು ಮಾಡುವುದು.

ಟೊಮೇಟೊ

ಟೊಮೇಟೊ

ಟೊಮೇಟೊದಲ್ಲಿ ಉನ್ನತ ಮಟ್ಟದ ಯುರಿಕ್ ಆ್ಯಸಿಡ್ ಇದೆ. ಇದು ಸಂಧುಗಳಲ್ಲಿ ಜಮೆಯಾಗಿ ನಿಮ್ಮ ನೋವನ್ನು ದ್ವಿಗುಣಗೊಳಿಸಬಹುದು. ಇದನ್ನು ಕಡೆಗಣಿಸಿ.

ಚಿಪ್ಪು ಮೀನು

ಚಿಪ್ಪು ಮೀನು

ಚಿಪ್ಪು ಮೀನಿನಲ್ಲಿ ಪ್ಯುರಿನ್ ಗಳಿವೆ. ಇದು ಬಳಿಕ ಯುರಿಕ್ ಆ್ಯಸಿಡ್ ಆಗಿ ಪರಿವರ್ತನೆಯಾಗುವುದು. ನಿಮ್ಮ ದೇಹದಲ್ಲಿ ಹೆಚ್ಚಿನ ಮಟ್ಟದ ಯುರಿಕ್ ಆ್ಯಸಿಡ್ ಇದ್ದಾಗ ಉರಿಯೂತ ಮತ್ತು ನೋವು ಹೆಚ್ಚಾಗುವುದು.

ಮೊಟ್ಟೆ

ಮೊಟ್ಟೆ

ದಿನಾಲೂ ಮೊಟ್ಟೆ ಸೇವಿಸುವ ಹವ್ಯಾಸ ಇಟ್ಟುಕೊಂಡಿದ್ದರೆ ಅದನ್ನು ಈಗಲೇ ಬಿಟ್ಟುಬಿಡಿ. ಯಾಕೆಂದರೆ ಇದರಿಂದ ನಿಮ್ಮ ಸಂಧಿ ನೋವು ಹೆಚ್ಚಾಗುವುದು. ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಅರಾಚಿಡೊನಿಕ್ ಆ್ಯಸಿಡ್ ಉರಿಯೂತ ಮತ್ತು ಸಂಧು ನೋವನ್ನು ಹೆಚ್ಚಿಸುವುದು.

ತರಕಾರಿ ಎಣ್ಣೆ

ತರಕಾರಿ ಎಣ್ಣೆ

ಸೂರ್ಯಕಾಂತಿ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಜೋಳದ ಎಣ್ಣೆಯಲ್ಲಿ ಅತಿಯಾದ ಕೊಬ್ಬು ಇದೆ. ಇದನ್ನು ಬಳಸುವುದರಿಂದ ದೇಹ ತೂಕ ಹೆಚ್ಚಾಗಿ ಸಂಧಿ ನೋವು ಹೆಚ್ಚಾಗುವುದು.

ಆಲ್ಕೋಹಾಲ್

ಆಲ್ಕೋಹಾಲ್

ಮದ್ಯಪಾನ ಮಾಡುತ್ತಿದ್ದರೆ ಅದನ್ನು ತ್ಯಜಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಆಲ್ಕೋಹಾಲ್ ನಲ್ಲಿರುವ ಯುರಿಕ್ ಆ್ಯಸಿಡ್ ಉರಿಯೂತ ಮತ್ತು ಸಂಧು ನೋವು ಹೆಚ್ಚಿಸುವುದು. ಕೆಲವೊಂದು ಆಲ್ಕೋಹಾಲ್ ನೋವನ್ನು ಗುಣಪಡಿಸುವ ಶಕ್ತಿಯನ್ನು ಕುಂದಿಸುವುದು.

ಸಂಸ್ಕರಿಸಿದ ಉಪ್ಪು

ಸಂಸ್ಕರಿಸಿದ ಉಪ್ಪು

ಸಂಸ್ಕರಿತ ಉಪ್ಪಿನಲ್ಲಿರುವ ಪ್ರಾಸ್ಪರಸ್ ಮತ್ತು ಸಿಲಿಕಾನ್ ನಂತಹ ಮಿನರಲ್ ಗಳು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡಿ ಅದು ದುರ್ಬಲಗೊಳ್ಳುವಂತೆ ಮಾಡುತ್ತದೆ. ಇದರಿಂದ ಸಂಧು ನೋವು ಇರುವವರು ಸಂಸ್ಕರಿತ ಉಪ್ಪಿನಿಂದ ದೂರವಿರಿ.

English summary

9 Foods To Stay Away From If You Have Joint Pain

There are times when we are upset with people and can call them a "pain in the neck", but actually suffering from the discomfort of body pain is an entirely different story! Living with a long-term physical pain can decrease the quality of your life to a great extent. The constant nagging pain around your joints can stop you from doing a lot of things such as exercising, dancing, going on long walks, etc. Joint pain is caused by the inflammation of muscles and tissues around your joints.
Story first published: Friday, April 29, 2016, 19:35 [IST]
X
Desktop Bottom Promotion