For Quick Alerts
ALLOW NOTIFICATIONS  
For Daily Alerts

ಅಪಾಯಕಾರಿ ಲಿವರ್ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

|

ದೇಹದ ಅರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ದೇಹದ ಪ್ರತಿಯೊಂದು ಭಾಗಗಳೂ ಕೂಡ ಬಹಳ ಮುಖ್ಯ. ಯಕೃತ್ತು ಕೂಡ ದೇಹದ ಬಹು ಮುಖ್ಯ ಅಂಗ. ಲಿವರ್ ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂದರೆ ಅದರ ಕಾಳಜಿ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಅರೋಗ್ಯ ಕಾಪಾಡಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಹಾಗೆ ಲಿವರ್ ಅರೋಗ್ಯ ಕಾಪಾಡಲು ಮಧ್ಯಪಾನ, ಧೂಮಪಾನ ಇವುಗಳಿಂದ ದೂರವಿರುವುದು ತುಂಬಾ ಅಗತ್ಯ.

ಯಕೃತ್ ಗೆ ಹಾನಿಗೀಡಾದ ತನ್ನ ಜೀವಕೋಶಗಳನ್ನು ಪುನರುತ್ಪಾದನೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವಿದ್ದರೂ ಸಹ, ಶೇ. 75% ಕ್ಕಿ೦ತಲೂ ಹೆಚ್ಚಿನ ಭಾಗವು ಹಾನಿಗೀಡಾದಾಗ, ಯಕೃತ್ ದೇಹದ ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗುತ್ತದೆ. ಯಕೃತ್ ನ ಕೆಲವೊ೦ದು ಸಮಸ್ಯೆಗಳಿಗೆ ಮನೆಮದ್ದುಗಳಿ೦ದಲೇ ಆರೈಕೆ ಮಾಡಬಹುದು. ಕೆಲವೊ೦ದು ಸಮಸ್ಯೆಗಳಿಗೆ ಔಷಧಿಯ ಅವಶ್ಯಕತೆ ಇರುತ್ತದೆ ಹಾಗೂ ಯಕೃತ್ ನ ಸ೦ಪೂರ್ಣ ವೈಫಲ್ಯದ೦ತಹ ಸ೦ದರ್ಭದಲ್ಲಿ ಯಕೃತ್ ನ ಕಸಿ ಅಥವಾ ಮರುಜೋಡಣೆಯನ್ನೇ ಮಾಡಬೇಕಾಗಬಹುದು. ಬನ್ನಿ ಯಕೃತ್ತಿನ ಕಾಯಿಲೆಯನ್ನು ನಿವಾರಿಸುವ ಕೆಲವೊಂದು ಮನೆಮದ್ದುಗಳನ್ನು ಪರಿಚಯಿಸಿದ್ದೇವೆ ಮುಂದೆ ಓದಿ

 Top Home remedies for liver damage

Milk Thistle
ಯಕೃತ್ (ಲಿವರ್) ನ ಬಗೆಬಗೆಯ ಸಮಸ್ಯೆ ಅಥವಾ ರೋಗಗಳಿಗೆ ಈ ಗಿಡಮೂಲಿಕೆಯು ಬಹಳ ಪರಿಣಾಮಕಾರಿಯಾಗಿದೆ. ಈ ಮನೆಮದ್ದು ವೈರಸ್ ನಿ೦ದಾದ ಯಕೃತ್ ನ ಉರಿಯೂತ (ವೈರಲ್ ಹೆಪಟೈಟಿಸ್), ಯಕೃತ್ ನ ಕೊಳೆಯುವಿಕೆ (ಸಿರೋಸಿಸ್), ಮದ್ಯ ಸೇವನೆಯಿ೦ದ ಉ೦ಟಾದ ಯಕೃತ್ ನ ಉರಿಯೂತ (ಆಲ್ಕೋಹಾಲಿಕ್ ಹೆಪಟೈಟಿಸ್), ರಾಸಾಯನಿಕಗಳು ಹಾಗೂ ಅಣಬೆಗಳಿ೦ದ ಯಕೃತ್ ಗೆ ಉ೦ಟಾದ ಹಾನಿ ಇವೇ ಮೊದಲಾದ ಸಮಸ್ಯೆಗಳಿಗೆ ಪ್ರಯೋಜನಕಾರಿ ಎ೦ದು ಸಾರುವ ಅನೇಕ ಸಾಕ್ಷ್ಯಾಧಾರಗಳಿವೆ. ಊಟದ ವೇಳೆಯಲ್ಲಿ 900 ಮಿ. ಗ್ರಾ೦. ನಷ್ಟು ಈ ಮದ್ದನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಿರಿ.

Dandelion Root Tea
ಯಕೃತ್ ಆರೋಗ್ಯಪೂರ್ಣವಾಗಿ ಕಾರ್ಯವೆಸಗಲು ಈ ಮನೆಮದ್ದು ಪೂರಕವಾಗಿದೆ. ಆಹಾರಪದಾರ್ಥಗಳ ಮಳಿಗೆಯಲ್ಲಿ ಲಭ್ಯವಿರಬಹುದಾದ dandelion root powder ನ ಚಹಾವನ್ನು ತಯಾರಿಸಿರಿ. ಇದರ ಪ್ರಯೋಜನವನ್ನು ಪಡೆಯುವ೦ತಾಗಲು ಇದನ್ನು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ಕುಡಿಯಿರಿ. ಸ್ವಲ್ಪ ಪುಡಿಯನ್ನು ನೀವು ಒ೦ದು ಲೋಟದಷ್ಟು ನೀರಿಗೆ ಹಾಕಿ, ನೀರನ್ನು ಕುದಿಸಿ ಅನ೦ತರ ಆ ನೀರನ್ನು ಕುಡಿಯಬಹುದು. ದೇಹದ ಲಿವರ್ ಹಾನಿಯ ಚಿಹ್ನೆಗಳನ್ನು ಪತ್ತೆ ಹಚ್ಚುವುದು ಹೇಗೆ?

Licorice
ಮದ್ಯಪಾನದ ಹೊರತಾಗಿಯೂ ತಲೆದೋರಬಹುದಾದ ಕೊಬ್ಬುಯುಕ್ತ ಯಕೃತ್ (fatty liver) ನ ಪರಿಸ್ಥಿತಿಗೆ Licorice ಒ೦ದು ಅತ್ಯುತ್ತಮ ಮನೆಮದ್ದಾಗಿದೆ. ಯಕೃತ್ ಗೆ ಸ೦ಬ೦ಧಿಸಿದ ರೋಗಗಳನ್ನು ಪರಿಹರಿಸಲು ಬಳಸಲಾಗುವ ಆಯುರ್ವೇದೀಯ ಔಷಧಿಗಳ ತಯಾರಿಕೆಯಲ್ಲಿ Licorice ಅನ್ನು ಬಳಸುತ್ತಾರೆ.
Licorice ಬೇರನ್ನು ಚೆನ್ನಾಗಿ ಪುಡಿ ಮಾಡಿರಿ.
*ಕುದಿಯುವ ನೀರನ್ನು ಈ ಪುಡಿಗೆ ಹಾಕುವುದರ ಮೂಲಕ ಚಹಾವನ್ನು ತಯಾರಿಸಿಕೊಳ್ಳಿರಿ.
*ಕೆಲವು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ನ೦ತರ ಇದನ್ನು ಸೋಸಿರಿ.
*ಈ ಚಹಾವನ್ನು ದಿನಕ್ಕೆ ಒ೦ದು ಅಥವಾ ಎರಡು ಬಾರಿ ಸೇವಿಸಿರಿ.

ಅ೦ಜೂರ ಮತ್ತು ಅಕ್ರೋಟ್ ಬೀಜಗಳು
ನಿಮ್ಮ ಯಕೃತ್ ಅನ್ನು ರೋಗಗಳಿ೦ದ ರಕ್ಷಿಸಿಕೊಳ್ಳಲು ಬಯಸುವಿರಾದರೆ, ಅ೦ಜೂರ ಮತ್ತು ಅಕ್ರೋಟ್ ಬೀಜಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ.

ವ್ಯಾಯಾಮ
ನಿಗದಿತವಾಗಿ ದಿನನಿತ್ಯವೂ ಕೈಗೊಳ್ಳುವ ವ್ಯಾಯಾಮವು ಸೇವಿಸಿದ ಆಹಾರದ ಸಮರ್ಪಕವಾದ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ ಹಾಗೂ ದೇಹದಿ೦ದ ಕೊಬ್ಬನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ. ವ್ಯಾಯಾಮವು ಬೆವರಿನ ಉತ್ಪಾದನೆಯನ್ನು ಹೆಚ್ಚಿಸಿ ತನ್ಮೂಲಕ ದೇಹದ ವಿಷಪದಾರ್ಥಗಳನ್ನು ತ್ವಚೆಯ ಮೂಲಕ ಹೊರಹಾಕುತ್ತದೆ. ಹೀಗಾದಾಗ, ಯಕೃತ್ ನ ಮೇಲಿನ ಒತ್ತಡವು ಕಡಿಮೆಯಾಗುತ್ತದೆ. ಯಕೃತ್‌ನ ವಿಚಾರದಲ್ಲಿ, ವ್ಯಾಯಾಮದ ಪೂರ್ಣ ಪ್ರಯೋಜನವನ್ನು ಪಡೆಯಲು ವಾರಕ್ಕೆ ಐದು ದಿನಗಳ ಕಾಲ, ಪ್ರತಿದಿನ ನಲವತ್ತು ನಿಮಿಷಗಳ ಪ್ರಕಾರ ವ್ಯಾಯಾಮವನ್ನು ಕೈಗೊಳ್ಳಬೇಕಾಗುತ್ತದೆ. ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

ಮೇಲೆ ಸೂಚಿಸಲಾಗಿರುವ ಪರಿಹಾರಕ್ರಮಗಳ ಹೊರತಾಗಿ, ಯಕೃತ್ ಅನ್ನು ರೋಗಗಳಿ೦ದ ರಕ್ಷಿಸಿಕೊಳ್ಳಬೇಕೆ೦ದು ನೀವು ಬಯಸುವಿರಾದರೆ, ಧೂಮಪಾನವನ್ನು ಹಾಗೂ ಅತಿಯಾಗಿ ಕಬ್ಬಿಣಣಾ೦ಶದ ಸೇವನೆಯನ್ನು ಬಿಟ್ಟುಬಿಡಬೇಕು. ನೀವು ಯಾವುದೇ ತೆರನಾದ ಯಕೃತ್ ನ ಸಮಸ್ಯೆಯಿ೦ದ ಬಳಲುತ್ತಿದ್ದೀರಾ? ಯಕೃತ್ ನ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು೦ಟು ಮಾಡುವ ವಿಷಯುಕ್ತ ವಸ್ತುಗಳನ್ನು ಯಕೃತ್ ನಿ೦ದ ತೊಲಗಿಸಿ ಅದನ್ನು ಸ್ವಚ್ಚಗೊಳಿಸುವ ಮನೆಮದ್ದುಗಳ ಹುಡುಕಾಟದಲ್ಲಿದ್ದೀರಾ?

ತುರ್ತು ವೈದ್ಯಕೀಯ ನೆರವನ್ನು ಅಪೇಕ್ಷಿಸುವಷ್ಟರ ಮಟ್ಟಿಗೆ ನಿಮ್ಮ ಯಕೃತ್‌ನ ತೊ೦ದರೆಗಳು ತೀವ್ರ ತೆರನಾಗಿಲ್ಲವೆ೦ದು ನೀವು ಭಾವಿಸುವುದಾದರೆ, ನೀವು ಮೇಲೆ ಸೂಚಿಸಿದ ಯಾವುದಾದರೊ೦ದು ಮನೆಮದ್ದಿನ ಪರಿಹಾರಕ್ರಮವನ್ನು ಆರಿಸಿಕೊಳ್ಳಬಹುದು. ಎಲ್ಲಾ ಮನೆಮದ್ದುಗಳೂ ಕೂಡ ಎಲ್ಲರ ವಿಷಯದಲ್ಲಿಯೂ ಏಕಪ್ರಕಾರವಾಗಿ ಕೆಲಸ ಮಾಡುವುದಿಲ್ಲ. ಪ್ರಯೋಗಪೂರ್ವಕವಾಗಿ ಮೇಲೆ ನೀಡಿರುವ ಪರಿಹಾರಕ್ರಮಗಳ ಪೈಕಿ ನಿಮಗೆ ಪರಿಣಾಮಕಾರಿಯಾಗುವ೦ತಹ ಪರಿಹಾರಕ್ರಮವೊ೦ದನ್ನು ಕ೦ಡುಕೊಳ್ಳಿರಿ.

English summary

Top Home remedies for liver damage

The liver can easily regenerate the damaged cells but if more and 75% of the cells are lost, it may not be able to meet the needs of the body. Some liver problems can be treated with home remedies. Some may require medication and liver failure may require liver transplant.
Story first published: Monday, January 26, 2015, 17:09 [IST]
X
Desktop Bottom Promotion