For Quick Alerts
ALLOW NOTIFICATIONS  
For Daily Alerts

ಕಟ್ಟುಮಸ್ತಾದ ಮೈಕಟ್ಟಿಗೆ ಇಲ್ಲಿದೆ ನೋಡಿ ಸರಳ ಸೂತ್ರ

By Arshad
|

ಮಹಿಳೆಯರಿಗೆ ಸೌಂದರ್ಯ ಹೇಗೆ ಭೂಷಣವೋ ಅಂತೆಯೇ ಪುರುಷರಿಗೆ ಸುದೃಢವಾದ ಮೈಕಟ್ಟು ಭೂಷಣವಾಗಿದೆ. ಅದರಲ್ಲೂ ಅತಿ ಧಡೂತಿಯೂ ಅಲ್ಲದ, ನರಪೇತಲವೂ ಅಲ್ಲದ ಸ್ನಾಯುಗಳಿಂದ ಹುರಿಗಟ್ಟಿದ ಶರೀರ ಎಲ್ಲರ ಮನಸೆಳೆಯುವುದು ಮಾತ್ರವಲ್ಲದೇ ಆರೋಗ್ಯವನ್ನೂ ಕಾಪಾಡುತ್ತದೆ. ಏಕೆಂದರೆ ಹುರಿಗಟ್ಟಿದ ಸ್ನಾಯುಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಸತತವಾದ ಮತ್ತು ನಿಯಮಿತವಾದ ವ್ಯಾಯಾಮ, ಸಾಕಷ್ಟು ನಿದ್ದೆ, ಸೂಕ್ತಪ್ರಮಾಣದ ಮತ್ತು ಪೌಷ್ಠಿಕ ಆಹಾರ ಮತ್ತು ಮುಖ್ಯವಾಗಿ ದೈಹಿಕ ಶ್ರಮದಲ್ಲಿ ಕೊರತೆಯಾಗದಿರಲು ಮನೋನಿಗ್ರಹ ಅಗತ್ಯವಾಗಿವೆ.

ನಮ್ಮ ದೇಹದ ತೂಕದ ಬಹುಪಾಲನ್ನು ಹೊಂದಿರುವ ಸ್ನಾಯುಗಳ ವಿಚಿತ್ರವೆಂದರೆ ಇವುಗಳು ಅಗತ್ಯಕ್ಕೆ ತಕ್ಕಷ್ಟೇ ಬೆಳೆಯುತ್ತವೆ. ಹಾಗಾಗಿ ಸ್ಥೂಲಕಾಯದವರಲ್ಲಿ ಸ್ನಾಯುಗಳಿಗಿಂತಲೂ ಕೊಬ್ಬು ಹೆಚ್ಚಿರುತ್ತದೆ ಮತ್ತು ಅಷ್ಟೇ ತೂಕದ ಹುರಿಗಟ್ಟಿದ ಸ್ನಾಯುಗಳಿರುವ ವ್ಯಕ್ತಿಯಲ್ಲಿ ಹೆಚ್ಚಿನ ಸ್ನಾಯುಗಳಿದ್ದು ಕೊಬ್ಬು ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ಆ ಸ್ಥೂಲಕಾಯದವರಿಗಿಂತಲೂ ಎಷ್ಟೂ ಹೆಚ್ಚು ಪಾಲಿನ ದೈಹಿಕ ಶ್ರಮವನ್ನು ಸುದೃಢ ವ್ಯಕ್ತಿಗಳು ನಿರ್ವಹಿಸಬಲ್ಲರು.

ಸ್ನಾಯುಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಏಕೆಂದರೆ ಇದಕ್ಕಾಗಿ ಮೆದುಳಿಗೆ ಇದರ ಅಗತ್ಯದ ಸೂಚನೆಗಳನ್ನು ನೀಡಬೇಕಾಗುತ್ತದೆ. ತೂಕ ಅಥವಾ ಸೆಳೆತವಿರುವ (ಉದಾಹರಣೆಗೆ ಸ್ಪ್ರಿಂಗ್) ಮೊದಲಾದ ಮಾಧ್ಯಮಗಳಿಂದ ಸ್ನಾಯುಗಳಿಗೆ ಕೆಲಸ ನೀಡಿ ಇಲ್ಲಿ ಇನ್ನೂ ಹೆಚ್ಚಿನ ಸ್ನಾಯುಗಳ ಅಗತ್ಯ ಇದೆ ಎಂದು ಮೆದುಳಿಗೆ ಸೂಚನೆ ನೀಡುವುದೇ ವ್ಯಾಯಾಮ! ಅದಕ್ಕೆ ತಕ್ಕಂತೆ ಮೆದುಳು ಸ್ಪಂದಿಸಿ ಆ ಅಗತ್ಯಕ್ಕೆ ತಕ್ಕಂತೆ ಸ್ನಾಯುಗಳನ್ನು ಬೆಳೆಸಲು ಸೂಚನೆ ನೀಡುತ್ತದೆ.

ಬೇಕಿದ್ದರೆ ಪರಾಮರ್ಶಿಸಿ, ನಾವು ಬರೆಯುವುದನ್ನು ಒಂದೇ ಕೈಯಿಂದ ಅಭ್ಯಾಸ ಮಾಡಿಕೊಂಡಿರುವುದರಿಂದ ಇನ್ನೊಂದು ಕೈಯಲ್ಲಿ ಬರೆಯಲು ಸಾಧ್ಯವಿಲ್ಲ. ಏಕೆಂದರೆ ನಾವು ಇನ್ನೊಂದು ಕೈಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡುವ ಮೂಲಕ ಮೆದುಳಿಗೆ ಸೂಚನೆ ನೀಡಿಯೇ ಇಲ್ಲ! ಸ್ನಾಯುಗಳನ್ನು ಬೆಳೆಸಲು ಮೆದುಳಿಗೆ ಸೂಚನೆ ನೀಡುವ ಜೊತೆಗೇ ಇನ್ನೇನೇನನ್ನು ಮಾಡಬೇಕು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಸಲಹೆ ನೀಡಲಾಗಿದೆ, ಮುಂದೆ ಓದಿ..

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇರಲಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇರಲಿ

ಪ್ರೋಟೀನ್ ಎಂದಾಕ್ಷಣ ಹೆಚ್ಚಿನವರು ಕೋಳಿ ಮಾಂಸವನ್ನೇ ಅಪೇಕ್ಷಿಸುತ್ತಾರೆ. ಆದರೆ ಮಾಂಸ, ಮೀನು ಮೊಟ್ಟೆಗಳಲ್ಲಿರುವಷ್ಟೇ ಪ್ರೋಟೀನುಗಳೂ ನಮ್ಮ ಬೇಳೆ ಮತ್ತು ಕಾಳುಗಳಲ್ಲಿಯೂ ಇದೆ. ಅಚ್ಚರಿ ಎಂದರೆ ಎತ್ತಿನ ಆಹಾರವೆಂದು ನಮ್ಮೆಲ್ಲರ ಅವಗಣನೆಗೆ ಗುರಿಯಾಗಿರುವ ಹುರುಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇರಲಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇರಲಿ

ಇನ್ನುಳಿದಂತೆ ಹಸಿ ಬಟಾಣಿ, ಶೇಂಗಾಬೀಜ, ಕಡ್ಲೆಕಾಳು, ಹೆಸರು ಕಾಳು, ಅದರಲ್ಲೂ ಮೊಳಕೆ ಬರಿಸಿದ ಕಾಳುಗಳು, ಬೀನ್ಸ್, ಸೋಯಾ ಅವರೆ, ಹಾಲು ಮತ್ತು ಬಾದಾಮಿ ಮೊದಲಾದ ಒಣಫಲಗಳಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನ್ ಇದೆ. ಒಂದೇ ಆಹಾರಕ್ಕೆ ದಾಸರಾಗುವ ಬದಲು ವಿವಿಧ ಬಗೆಯ ಆಹಾರಗಳನ್ನು ಸೇವಿಸುವ ಮೂಲಕ ಸ್ನಾಯುಗಳನ್ನು ಬೆಳೆಸಲು ನೆರವು ನೀಡಬಹುದು.

ಆಹಾರದಲ್ಲಿ ಕ್ಯಾಲೋರಿಗಳು ಹೆಚ್ಚಿರಲಿ

ಆಹಾರದಲ್ಲಿ ಕ್ಯಾಲೋರಿಗಳು ಹೆಚ್ಚಿರಲಿ

ನಿಮ್ಮ ನಿತ್ಯದ ಆಹಾರದಲ್ಲಿ ಸಿಗುವ ಕ್ಯಾಲೋರಿಗಳಿಗಿಂತ ಕನಿಷ್ಟ ಐನೂರು ಕ್ಯಾಲೋರಿಗಳನ್ನಾದರೂ ಹೆಚ್ಚು ಸೇವಿಸಿ. ಇದರಿಂದ ವಾರಕ್ಕೆ ಸುಮಾರು ಅರ್ಧ ಕೇಜಿಯಷ್ಟು ತೂಕ ಹೆಚ್ಚಲು ಸಾಧ್ಯವಾಗುತ್ತದೆ. ಆದರೆ ಕ್ಯಾಲೋರಿ ಹೆಚ್ಚಿರಬೇಕು ಎಂದು ಅಡ್ಡಾದಿಡ್ಡಿ ಯಾವುದೇ ಆಹಾರ ಸೇವಿಸದಿರಿ.

ಆಹಾರದಲ್ಲಿ ಕ್ಯಾಲೋರಿಗಳು ಹೆಚ್ಚಿರಲಿ

ಆಹಾರದಲ್ಲಿ ಕ್ಯಾಲೋರಿಗಳು ಹೆಚ್ಚಿರಲಿ

ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ. ಆದರೆ ಈ ಹೆಚ್ಚುವರಿ ಕ್ಯಾಲೋರಿಗಳನ್ನು ಹೆಚ್ಚುವರಿ ವ್ಯಾಯಮದ ಮೂಲಕ ಬಳಸಿಕೊಳ್ಳುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ನಮ್ಮ ದೇಹ ಇದನ್ನು ಕೊಬ್ಬನ್ನಾಗಿ ಪರಿವರ್ತಿಸಿ ತೂಕ ಹೆಚ್ಚಿಸಿಬಿಡುತ್ತದೆ.

ಭಾರ ಎತ್ತುವ ಹೆಚ್ಚು ವ್ಯಾಯಾಮಗಳನ್ನು ಮಾಡಿ

ಭಾರ ಎತ್ತುವ ಹೆಚ್ಚು ವ್ಯಾಯಾಮಗಳನ್ನು ಮಾಡಿ

ನಮ್ಮ ಸ್ನಾಯುಗಳಿಗೆ ದೂಡುವುದಕ್ಕಿಂತಲೂ ಸೆಳೆತದಲ್ಲಿ ಹೆಚ್ಚಿನ ಶ್ರಮ ಬೇಕು. ಇದೇ ಕಾರಣಕ್ಕೆ ನಾವು ಬೆನ್ನ ಮೇಲೆ ಹೆಚ್ಚಿನ ಹೊರೆಯನ್ನು ಹೊರಬಲ್ಲೆವು. ಸ್ನಾಯುಗಳ ಬೆಳವಣಿಗೆಗೆ ದೂಡುವುದಕ್ಕಿಂತಲೂ ಸೆಳೆತದ ಶ್ರಮ ಹೆಚ್ಚು ಹೆಚ್ಚು ನೀಡುವುದರಿಂದ ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ತೂಕವನ್ನು ಎತ್ತುವ ವ್ಯಾಯಾಮಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸುವ ಮೂಲಕ ಶೀಘ್ರವೇ ಸ್ನಾಯುಗಳು ಬೆಳೆಯಲು ಸಾಧ್ಯವಾಗುತ್ತದೆ.

ಭಾರ ಎತ್ತುವ ಹೆಚ್ಚು ವ್ಯಾಯಾಮಗಳನ್ನು ಮಾಡಿ

ಭಾರ ಎತ್ತುವ ಹೆಚ್ಚು ವ್ಯಾಯಾಮಗಳನ್ನು ಮಾಡಿ

ಆದರೆ ಭಾರ ಎತ್ತುವ ಮುನ್ನ ಇದರ ಸರಿಯಾದ ಕ್ರಮವನ್ನು ಅನುಸರಿಸುವುದು ಅತ್ಯಗತ್ಯ. ಇದಕ್ಕೆ ಪರಿಣಿತರ ಸಲಹೆ ಮತ್ತು ನಿಗಾ ಅಗತ್ಯ. ಮನೆಯಲ್ಲಿ ನಡೆಸುವ ಬದಲು ಹತ್ತಿರದ ವ್ಯಾಯಾಮಶಾಲೆಗೆ ದಾಖಲಾಗಿ ಪರಿಣಿತರ ಸಲಹೆಯನ್ನು ಪಾಲಿಸಿ. ಇಲ್ಲದಿದ್ದರೆ ತಪ್ಪಾದ ಒಂದು ಭಂಗಿಯಲ್ಲಿ ಭಾರ ಎತ್ತುವ ಮೂಲಕ ಅಪಘಾತವಾಗಬಹುದು ಮತ್ತು ದುಬಾರಿ ಚಿಕಿತ್ಸೆಗಾಗಿ ಹಲವಾರು ಬಾರಿ ಆಸ್ಪತ್ರೆಗೆ ಬೇಟಿ ನೀಡಬೇಕಾಗಿಯೂ ಬರಬಹುದು.

ಎದೆಯ ಸ್ನಾಯುಗಳಿಗಾಗಿ ಬೆಂಚ್ ಪ್ರೆಸ್ ಮಾಡಿ

ಎದೆಯ ಸ್ನಾಯುಗಳಿಗಾಗಿ ಬೆಂಚ್ ಪ್ರೆಸ್ ಮಾಡಿ

ಎದೆಯ ಮತ್ತು ಪಕ್ಕೆಗಳ ಸ್ನಾಯುಗಳನ್ನು ಬೆಳೆಸಲು ಬೆಂಚ್ ಪ್ರೆಸ್ ಅತ್ಯಂತ ಸೂಕ್ತವಾದ ವ್ಯಾಯಮವಾಗಿದೆ. ಇದರಿಂದ ಎದೆಯಭಾಗದ ಸೌಷ್ಟವ ಆಕರ್ಷಕವಾಗುತ್ತದೆ.

ಕಾಲುಗಳ ಸ್ನಾಯುಗಳಿಗಾಗಿ ಬಸ್ಕಿ ಹೊಡೆಯಿರಿ

ಕಾಲುಗಳ ಸ್ನಾಯುಗಳಿಗಾಗಿ ಬಸ್ಕಿ ಹೊಡೆಯಿರಿ

ಚಿಕ್ಕಂದಿನಲ್ಲಿ ಶಾಲೆಯಲ್ಲಿ ಶಿಕ್ಷೆಯಾಗಿ ಬಸ್ಕಿ ಹೊಡೆದಿದ್ದುದು ನೆನಪಿದೆಯೇ? ಈ ಬಸ್ಕಿ ನಿಮ್ಮ ಕಾಲುಗಳ ಸ್ನಾಯುಗಳನ್ನು (ಮೀನಖಂಡ) ಬೆಳೆಸಲು ನೆರವಾಗುತ್ತದೆ. ಇದಕ್ಕಾಗಿ ಈಗ ಕಿವಿ ಹಿಡಿದುಕೊಳ್ಳಬೇಕಾಗಿಲ್ಲ, ಕೈಗಳನ್ನು ಮುಂದೆ ಚಾಚಿದರೆ ಸಾಕು.

ಕಾಲುಗಳ ಸ್ನಾಯುಗಳಿಗಾಗಿ ಬಸ್ಕಿ ಹೊಡೆಯಿರಿ

ಕಾಲುಗಳ ಸ್ನಾಯುಗಳಿಗಾಗಿ ಬಸ್ಕಿ ಹೊಡೆಯಿರಿ

ಆದರೆ ಇದರ ಸರಿಯಾದ ವಿವರವನ್ನು ನಿಮ್ಮ ದೈಹಿಕ ಶಿಕ್ಷಕರು ನೀಡಬಲ್ಲರು. ಏಕೆಂದರೆ ಈ ವ್ಯಾಯಾಮದಲ್ಲಿ ಉಸಿರನ್ನು ಕ್ರಮಬದ್ದವಾಗಿ ಎಳೆದುಕೊಂಡು ಬಿಡುವುದು ಅಗತ್ಯವಾಗಿದೆ.

ಚಿಕ್ಕ ಪ್ರಮಾಣದಲ್ಲಿ, ಆದರೆ ಹೆಚ್ಚು ಸಲ ಊಟ ಮಾಡಿ

ಚಿಕ್ಕ ಪ್ರಮಾಣದಲ್ಲಿ, ಆದರೆ ಹೆಚ್ಚು ಸಲ ಊಟ ಮಾಡಿ

ಸ್ನಾಯುಗಳನ್ನು ಬೆಳೆಸಲು ಕಾಲಕಾಲಕ್ಕೆ ಶಕ್ತಿಯ ಪೂರೈಕೆಯಾಗುತ್ತಲೇ ಇರಬೇಕು. ಆದ್ದರಿಂದ ದಿನಕ್ಕೆ ಮೂರು ಹೊತ್ತು ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುವ ಬದಲು ಪ್ರತಿ ಮೂರು ಅಥವಾ ನಾಲ್ಕು ಗಂಟೆಗಳ ಅವಧಿಯಲ್ಲಿ ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರುವುದು ಹೆಚ್ಚು ಪ್ರಯೋಜನಕಾರಿ.

ವ್ಯಾಯಾಮದ ಬಳಿಕ ವಿಶ್ರಾಂತಿ ಪಡೆಯಿರಿ

ವ್ಯಾಯಾಮದ ಬಳಿಕ ವಿಶ್ರಾಂತಿ ಪಡೆಯಿರಿ

ಯಾವುದೇ ವ್ಯಾಯಾಮವನ್ನು ಸತತವಾಗಿ ಪ್ರತಿದಿನ ಮಾಡಬಾರದು. ದಿನ ಬಿಟ್ಟು ದಿನ ಬೇರೆ ಬೇರೆ ಸ್ನಾಯುಗಳಿಗಾಗಿ ಇರುವ ವ್ಯಾಯಾಮಗಳನ್ನೇ ಮಾಡಬೇಕು. ಇಲ್ಲದಿದ್ದರೆ ಬೆಳವಣಿಗೆಯ ಹಂತದಲ್ಲಿರುವ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಒಳಗಿನಿಂದ ತುಂಡಾಗುತ್ತವೆ. ಅಲ್ಲದೆ ವಾರದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ, ದಿನ ಬಿಟ್ಟು ದಿನ ವ್ಯಾಯಾಮ ಮಾಡುವುದು ಶ್ರೇಯಸ್ಕರ.

ಹೃದಯ ಬಡಿತ ಹೆಚ್ಚಿಸುವ ವ್ಯಾಯಾಮಗಳನ್ನು ಮಾಡಿ

ಹೃದಯ ಬಡಿತ ಹೆಚ್ಚಿಸುವ ವ್ಯಾಯಾಮಗಳನ್ನು ಮಾಡಿ

ಭಾರದ ವ್ಯಾಯಾಮಗಳಲ್ಲಿ ಹೃದಯದ ಬಡಿತ ಹೆಚ್ಚಿದರೂ ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗಿ ಬಿಡುತ್ತದೆ. ಇದು ನಿಮ್ಮ ಸ್ನಾಯುಗಳನ್ನು ಬೆಳೆಸಬಹುದೇ ಹೊರತು ನಿಮ್ಮ ಶರೀರದ ದಾರ್ಢ್ಯತೆಯಲ್ಲ. ಇದನ್ನು ಹೆಚ್ಚಿಸಲು ಹೃದಯ ಬಡಿತ ಹೆಚ್ಚಿಸುವ ನಿಧಾನಗತಿಯ ಓಟ, ಕೊಂಚ ದೂರವಾದರೂ ವೇಗದ ಗತಿಯಲ್ಲಿ ಓಡುವುದು, ನಿಂತಲ್ಲೇ ನಡೆಯುವುದು (ಜಾಗಿಂಗ್), ಹಗ್ಗ ಜಗ್ಗುವುದು (ಸ್ಕಿಪ್ಪಿಂಗ್), ಈಜು, ಸೈಕಲ್ ತುಳಿಯುವುದು ಮೊದಲಾದವು ಕೊಬ್ಬನ್ನು ಕರಗಿಸುವ ಜೊತೆಗೇ ದೇಹದ ದಾರ್ಢ್ಯತೆಯನ್ನು ಹೆಚ್ಚಿಸಲೂ ನೆರವಾಗುತ್ತವೆ.

ಸಾಕಷ್ಟು ನಿದ್ರಿಸಿ

ಸಾಕಷ್ಟು ನಿದ್ರಿಸಿ

ಎಲ್ಲಾ ವ್ಯಾಯಾಮ ಮತ್ತು ಹೃದಯ ಬಡಿತ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಿದ ಬಳಿಕ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳದಿದ್ದರೆ ಇದುವರೆಗೆ ಪಟ್ಟ ಕಷ್ಟವೆಲ್ಲಾ ನೀರಿನಲ್ಲಿ ಹುಣಸೆಹಣ್ಣು ತೊಳೆದ ಹಾಗೆ ಆಗುತ್ತದೆ. ನಿಮ್ಮ ವ್ಯಾಯಾಮದ ಪೂರ್ಣ ಪ್ರಯೋಜನ ಪಡೆಯಲು ಕನಿಷ್ಟ ಎಂಟು ಘಂಟೆಗಳ ಕಾಲ ನಿದ್ರಿಸಿ.

ಸಾಕಷ್ಟು ನಿದ್ರಿಸಿ

ಸಾಕಷ್ಟು ನಿದ್ರಿಸಿ

ಪ್ರಾರಂಭದಲ್ಲಿ ಕೊಂಚ ಅನಾನೂಕೂಲ ಅನಿಸಿದರೂ ಸ್ನಾಯುಗಳು ನಿಧಾನವಾಗಿ ಬೆಳೆಯುತ್ತಿದ್ದಂತೆಯೇ ನಿದ್ದೆ ಬೇಗನೇ ಆವರಿಸಲು ತೊಡಗುತ್ತದೆ. ಇದರಿಂದ ನೀವು ಮೈ ಹಗುರವಾದಂತೆ ಭಾವಿಸುತ್ತೀರಿ ಹಾಗೂ ಹೆಚ್ಚಿನವರ ಪಾಲಿನ ಭಾಗ್ಯವಲ್ಲದ ಪವಡಿಸಿದ ತಕ್ಷಣ ಪಡೆಯುವ ನಿದ್ರೆಯ ಐಶ್ವರ್ಯವನ್ನೂ ಪಡೆಯುತ್ತೀರಿ.

English summary

The Basics Of Muscle Building

How to build muscles? Well, to put it in a simple way, you must need to grow stronger to increase your muscle mass. And growing stronger implies increasing the capacity of your muscles. This takes time and isn't a one day job. Now, read on to know the basics of muscle building. Now, read on to know the basics of muscle building.
X
Desktop Bottom Promotion