For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ-ಮೂಲ ಅರಿಯಿರಿ

By Arshad
|

ಪ್ರತಿವರ್ಷದಂತೆಯೇ ಈ ವರ್ಷವೂ ಸೆಪ್ಟೆಂಬರ್ ಒಂದರಿಂದ ಏಳರವರೆಗೆ (ಮಂಗಳವಾರದಿಂದ ಮುಂದಿನ ಸೋಮವಾರದವೆರೆಗೆ) ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ-2015 ರ ರೂಪದಲ್ಲಿ ಆಚರಿಸಲಾಗುತ್ತಿದೆ. ಆದರೆ ಏಕಾಗಿ ಈ ಆಚರಣೆ ಎಂಬುದನ್ನು ಬಲ್ಲಿರಾ? ನಮ್ಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯ. ಇದು ಸಮಾಜದ ಎಲ್ಲಾ ಜನರಿಗೂ ಲಭ್ಯವಾಗಿ ಉತ್ತಮ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣವನ್ನು ಈ ಆಚರಣೆ ಪ್ರಸ್ತುತಪಡಿಸುತ್ತದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡಿಯ ವಿಶ್ವದಲ್ಲಿ ಇದೇ ವಾರ ಆಚರಿಸಲಾಗುತ್ತದೆ.

ಸಾಮಾನ್ಯ ಜನರಲ್ಲಿ ಆಹಾರದ ಬಗ್ಗೆ ತಮ್ಮ ಹಿರಿಯರಿಂದ ತಿಳಿದುಬಂದಿರುವ ಮಾಹಿತಿಯೇ ಹೆಚ್ಚು. ಆದರೆ ಪೌಷ್ಠಿಕಆಹಾರದ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಕಡಿಮೆಯಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದೂ ಈ ವಾರದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಸಾಮಾನ್ಯವಾಗಿ ಪೂರ್ವಾಗ್ರಹವಾದ ನಂಬಿಕೆಗಳಿಂದ ಜನರು ಕೆಲವು ಆಹಾರಗಳನ್ನು ಸೇವಿಸುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಸಂತುಲಿತ ಆಹಾರ ಅಗತ್ಯ.

Significance of National Nutrition Week 2015

ಇದರಲ್ಲಿ ಪೂರ್ಣಧಾನ್ಯಗಳು, ಹಣ್ಣು, ತರಕಾರಿ, ಕೊಬ್ಬು ರಹಿತ ಹಾಲು ಮತ್ತು ಕೊಬ್ಬು ರಹಿತ ಹಾಲಿನ ಉತ್ಪನ್ನಗಳು, ಮಾಂಸ, ಮೀನು, ಒಣಫಲಗಳು, ಬೀಜಗಳು ಮೊದಲಾದವುಗಳು ಒಳಗೊಂಡಿರಬೇಕು. ಜನರಿಗೆ ಸೂಕ್ತವಾದ ಮಾಹಿತಿ, ತರಬೇತಿ, ರಸ್ತೆನಾಟಕ, ಕರಪತ್ರ, ವಿವಿಧ ಮನರಂಜನಾ ಕಾರ್ಯಕ್ರಮಗಳ ಮೂಲಕ ಈ ಬಗ್ಗೆ ಅರಿವು ಮೂಡಿಸುವುದೇ ಈ ವಾರಾಚರಣೆಯ ಕಾರ್ಯವೈಖರಿಯಾಗಿದೆ.

ಒಂದು ವಾರದ ಅವಧಿಯಲ್ಲಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಗೃಹವಿಜ್ಞಾನ ಇಲಾಖೆಯ ವಿದ್ಯಾರ್ಥಿಗಳಿಂದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಆರೋಗ್ಯಕರ ಆಹಾರದ ತಯಾರಿಕಾ ವಿಧಾನದ ಪ್ರಾತ್ಯಕ್ಷಿಕೆ, ವಿವಿಧ ಸ್ಪರ್ಧೆಗಳು, ಗೋಧಿ ಮತ್ತು ಸೋಯಾಬೀನ್ ನಡುವೆ ಒಂದು ಆರೋಗ್ಯಕರ ಸ್ಪರ್ಧೆ, ತಾಯಂದಿರಿಗಾಗಿ ವಿಶೇಷ ಉಪನ್ಯಾಸಗಳು, ರಸ್ತೆ ನಾಟಕಗಳು, ಆಹಾರದ ಕುರಿತಾದ ಸಮ್ಮೇಳನಗಳು ಮೊದಲಾದ ವಿವಿಧ ಕಾರ್ಯಕ್ರಮಗಳನ್ನು ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿ ಏರ್ಪಡಿಸಲಾಗುತ್ತದೆ.

ಅಲ್ಲದೇ ಈ ಆಚರಣೆಯ ಅಂಗವಾಗಿ ಕುಟುಂಬಗಳಿಗೆ ಒಂದು ಪೂರಕ ಕಿಟ್ ನೀಡಲಾಗುವುದು. ಇದರಲ್ಲಿ ಇಡಿಯ ಕುಟುಂಬದ ಆರೋಗ್ಯದ ಕುರಿತಾದ ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಅಂದರೆ 2010ರಿಂದ ಈ ಆಚರಣೆಯಲ್ಲಿ ವಿಶ್ವ ನಗ್ನಾಹಾರ ದಿನ (Nude Food Day) ಯನ್ನೂ ಆಚರಿಸಲಾಗುತ್ತದೆ. ಇಲ್ಲಿ ನಗ್ನವೆಂದರೆ ಅಪ್ಪಟ, ಯಾವುದೇ ಕಲಬೆರಕೆ ಅಥವಾ ಕೃತಕ ರಾಸಾಯನಿಕವಿಲ್ಲದ ಎಂದರ್ಥ.

ರಾಷ್ಟ್ರೀಯ ಪೌಷ್ಠಿಕಆಹಾರ ವಾರ-2015: ಕಾರ್ಯಕ್ರಮಗಳ ವಿವರ:
ರಾಷ್ಟ್ರದ ಪ್ರಮುಖ ಆಹಾರ ಸಂಸ್ಥೆಗಳು, ವಿವಿಧ ಶಾಲೆಗಳು ಮತ್ತು ಸಂಘಸಂಸ್ಥೆಗಳು ಆಹಾರದ ಕುರಿತಾದ ಉಪಯುಕ್ತ ಮಾಹಿತಿಯನ್ನು ಜನರಿಗೆ ತಲುಪಿಸುತ್ತವೆ. ರಾಷ್ಟ್ರೀಯ ಮತ್ತು ಖಾಸಗಿ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕೈಜೋಡಿಸಿ ಹಲವು ವಿಧದಲ್ಲಿ ಸಹಕರಿಸುತ್ತವೆ. ಜನರಿಗೆ ಅರ್ಥವಾಗುವಂತೆ ಹಲವು ಪ್ರಾತ್ಯಕ್ಷಿಕೆ ಮೂಲಕ ಆಹಾರ, ಪೌಷ್ಟಿಕತೆ ಮತ್ತು ಆರೋಗ್ಯದ ಕುರಿತಾದ ಮಾಹಿತಿಗಳನ್ನು ವಿವರಿಸಲಾಗುತ್ತದೆ. ಇದನ್ನು ಜನರಿಗೆ ತಲುಪಿಸಿ ಅವರಿಂದ ಈ ಮಾಹಿತಿ ಇತರರಿಗೂ ತಲುಪುವಂತೆ, ತನ್ಮೂಲಕ ಇಡಿಯ ದೇಶದಲ್ಲಿ ಜನರು ಪ್ರಜ್ಞಾವಂತರಾಗುವಂತೆ ಮಾಡುವ ಪ್ರಯತ್ನಗಳು ನಡೆಯುತ್ತವೆ.

ಅಷ್ಟೇ ಅಲ್ಲ, ಆಹಾರಗಳನ್ನು ಹೇಗೆ ಕಾಪಾಡಬೇಕು, ಯಾವ ರೀತಿ ಸಂಸ್ಕರಿಸಬೇಕು, ಯಾವ ಆಹಾರಗಳು ಕಡಿಮೆ ಅವಧಿಯಲ್ಲಿ ಹಾಳಾಗುತ್ತವೆ, ಯಾವ ಆಹಾರಗಳನ್ನು ಹೆಚ್ಚು ಕಾಲ ಕೆಡದಂತೆ ಉಳಿಸಿಡಬಹುದು ಮೊದಲಾದ ಮಾಹಿತಿಗಳನ್ನೂ ನೀಡಲಾಗುತ್ತದೆ. ಸಮ್ಮೇಳನಗಳಿಗೆ ಆಗಮಿಸಿದ ಜನರಿಗೆ ಆಹಾರದ ಸಂಶ್ಲೇಷಣೆ ಮತ್ತು ಗುಣಮಟ್ಟದ ಪ್ರಕಾರ ಪರಿಗಣಿಸಲು ಅಗತ್ಯವಾದ ತರಬೇತಿಯನ್ನೂ ನೀಡಲಾಗುತ್ತದೆ.

ಕೇಂದ್ರ ಸರ್ಕಾರದಿಂದಲೂ ಈ ಆಚರಣೆಗೆ ಪ್ರೋತ್ಸಾಹ ದೊರಕಿದ್ದು ರಾಷ್ಟ್ರವ್ಯಾಪ್ತಿ ಜನತೆಯ ಆರೋಗ್ಯವನ್ನು ಕಾಪಾಡಲು ಹಲವು ಕಾರ್ಯನೀತಿಗಳನ್ನು ಪ್ರಸ್ತುತಪಡಿಸಲಾಗಿದೆ. WHO ಸಂಸ್ಥೆಯ National Nutrition Policy-ರಾಷ್ಟ್ರೀಯ ಪೌಷ್ಠಿಕ ಆಹಾರ ಕಾರ್ಯನೀತಿಯನ್ನು ಭಾರತದಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಇಲಾಖೆ ಜಂಟಿಯಾಗಿ ಅಳವಡಿಸಲು ಈ ವಾರದಲ್ಲಿ ಹತ್ತು ಹಲವು ಕಾರ್ಯಸೂಚಿಯನ್ನು ಬಿಡುಗಡೆ ಮಾಡುತ್ತವೆ. ರಾಷ್ಟ್ರದ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆಗಳಲ್ಲಿ ಈ ಬಗ್ಗೆ ಹಲವು ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತದೆ.

ಈ ಕೇಂದ್ರಗಳಲ್ಲಿ ಲಭ್ಯವಾದ ಮಾಹಿತಿಯನ್ನು ಕಲೆಹಾಕಿ ಆರೋಗ್ಯದ ಕುರಿತಾದ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಇತ್ತೀಚಿನ ಬಿಸಿಯೂಟ, ಶಾಲೆಗಳಲ್ಲಿ ಹಾಲು ನೀಡುವ ಕಾರ್ಯಕ್ರಮಗಳಿಗೆ ಈ ಮಾಹಿತಿಗಳೇ ಪ್ರೇರಣೆಯಾಗಿವೆ. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪೌಷ್ಠಿಕ ಆಹಾರದ ಕುರಿತ ಸಂದೇಶವನ್ನು ತಮ್ಮ ಜನರಿಗೂ ತಲುಪಿಸಿ ಈ ಯೋಜನೆಯನ್ನು ಫಲಪ್ರದಗೊಳಿಸಲು ಸಹಕರಿಸಿ.

English summary

Significance of National Nutrition Week 2015

National Nutrition Week 2015 would be celebrated from Tuesday (1st of September) to the Monday (7th of September). National Nutrition Week. National Nutrition Week is celebrated each year from 1st September to the 7th September to aware the people about important tips of their health and well-being. Through the national nutrition week campaign people from all over the world can be educated to maintain their look and feel better.
X
Desktop Bottom Promotion