For Quick Alerts
ALLOW NOTIFICATIONS  
For Daily Alerts

ಬಿಕಿನಿ ದಿರಿಸಿನಲ್ಲಿ ಮತ್ಸ್ಯ ಕನ್ಯೆಯಂತೆ ಕಾಣಿಸಿಕೊಳ್ಳಬೇಕೆ?

By Manu
|

ಮನೆಯಲ್ಲಿ ಟಿವಿ ಪರದೆ ಮೇಲೆ ತುಂಡುಡುಗೆ ತೊಟ್ಟು ಬರುವ ಲಲನೆಯರನ್ನು ನೋಡಿ ಹೆಂಗಸರು ಕಣ್ಣು ಮುಚ್ಚಿದರೆ, ಗಂಡಸರು ಹೀಗೆ ಇರಲಪ್ಪ ಎಂದು ಬಾಯಿ ಚಪ್ಪರಿಸುವುದು ಇದೆ!

ಏನೇ ಆದರೂ ಕೆಲವು ಮಹಿಳೆಯರು ಸಿನೆಮಾ ಮಂದಿ ಬಿಕನಿ ತೊಡುವುದನ್ನು ವಿರೋಧಿಸಿದರೂ ತಾನು ಒಂದು ದಿನ ಹೀಗೆ ಬಿಕನಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಹಂಬಲಿಸುತ್ತಾ ಇರುತ್ತಾರೆ. ಆದರೆ ಅವರ ಫಿಗರ್ ಇದಕ್ಕೆ ಆಸ್ಪದವನ್ನೇ ನೀಡಲ್ಲ. ಬಿಕಿನಿ ತೊಡಲಿ ಅಥವಾ ಬಿಡಲಿ ಕೆಲವರಿಗೆ ಬಿಕನಿ ಧರಿಸುವಂತಹ ಚೆಂದದ ದೇಹವಿರಬೇಕೆಂದು ಬಯಸುತ್ತಾರೆ. ಸ್ಲಿಮ್ ಅಂಡ್ ಫಿಟ್ ದೇಹ ಸೌಂದರ್ಯ ನಿಮ್ಮದಾಗಬೇಕೆ?

ಸುಂದರವಾದ ಕಾಲುಗಳು, ಪರಿಪೂರ್ಣ ಭುಜಗಳು ಮತ್ತು ಪೃಷ್ಠವನ್ನು ಹೊಂದಿದ್ದರೆ ಆಗ ತುಂಬಾ ಮಾದಕ ಮತ್ತು ಸುಂದರವಾಗಿ ಕಾಣುವುದರಲ್ಲಿ ಸಂಶಯವೇ ಇಲ್ಲ. ಬಿಕಿನಿ ಧರಿಸಲು ದೇಹ ಹೊಂದುವ ಆಹಾರಕ್ರಮವನ್ನು ಪಾಲಿಸುವುದರೊಂದಿಗೆ ಕೆಲವೊಂದು ಬಿಕಿನಿ ವ್ಯಾಯಾಮಗಳನ್ನು ಮಾಡಿದರೆ ವೇಗವಾಗಿ ಸಪೂರ ದೇಹವನ್ನು ಹೊಂದಿ ಆಕರ್ಷಕವಾಗಿ ಕಾಣಿಸಬಹುದು. ಇಲ್ಲಿ ಕೆಲವೊಂದು ಸರಳ ಹಾಗೂ ಆರೋಗ್ಯಕರ ಬಿಕಿನಿ ವ್ಯಾಯಾಮಗಳನ್ನು ತಿಳಿಸಲಾಗಿದೆ, ಬನ್ನಿ ಮುಂದೆ ಓದಿ...

ಬಿಕಿನಿ ವ್ಯಾಯಾಮ

ಬಿಕಿನಿ ವ್ಯಾಯಾಮ

ಬಿಕಿನಿ ವ್ಯಾಯಾಮ ಮಾಡುವಾಗ ಪಾಲಿಸಬೇಕಾಗಿರುವ ಮೊತ್ತ ಮೊದಲನೇಯ ಟಿಪ್ಸ್ ಎಂದರೆ ನೀವು ಪ್ರತೀ ನಾಲ್ಕು ವಾರಕ್ಕೊಮ್ಮೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಬೇಕು. ಇದು ನಿಮ್ಮ ಫಿಗರ್ ನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಸಾಮಾನ್ಯ ವ್ಯಾಯಾಮಕ್ಕಿಂತ ಬಿಕಿನಿ ಮತ್ತು ಇತರ ರೀತಿಯ ಕೆಲವೊಂದು ವ್ಯಾಯಾಮಗಳನ್ನು ರೊಟೇಶನ್ ನಲ್ಲಿ ಮಾಡುತ್ತಾ ಬಂದರೆ ನಿಮಗೆ ದಿನನಿತ್ಯದ ವ್ಯಾಯಾಮ ಬೋರ್ ಹೊಡೆಸುವುದಿಲ್ಲ. ಒಳ್ಳೆಯ ವ್ಯಾಯಾಮ ತಜ್ಞರಿಗೆ ಹೇಗೆ ವ್ಯಾಯಾಮ ಆರಂಭಿಸಬೇಕು ಮತ್ತು ನಿಲ್ಲಿಸಬೇಕೆಂದು ಚೆನ್ನಾಗಿ ತಿಳಿದಿರುತ್ತದೆ. ಇದರಿಂದ ನೀವು ವ್ಯಾಯಾಮ ಆರಂಭಿಸುವ ಮೊದಲು ಸರಿಯಾಗಿ ಯೋಜನೆ ಹಾಕಿಕೊಳ್ಳಿ.

ಮೊದಲ ಸಲ ವ್ಯಾಯಾಮ ಮಾಡುವವರು

ಮೊದಲ ಸಲ ವ್ಯಾಯಾಮ ಮಾಡುವವರು

ಮೊದಲ ಸಲ ವ್ಯಾಯಾಮ ಮಾಡುವವರು 30 ನಿಮಿಷಗಳ ಬಿಕಿನಿ ವ್ಯಾಯಾಮ ಮಾಡಬಹುದು ಮತ್ತು ಇದನ್ನು 40ರಿಂದ 45 ನಿಮಿಷ ತನಕ ವಿಸ್ತರಿಸಬಹುದು. ಅಲ್ಲದೆ ನೀವು ಅತೀಯಾದ ತಿನ್ನುವ ಅಭ್ಯಾಸದಿಂದ ಬಳಲುತ್ತಿದ್ದರೆ ಮಧ್ಯಾಹ್ನ ಊಟ ಅಥವಾ ಡಿನ್ನರ್ ಬಳಿಕ ಇಂತಹ ವ್ಯಾಯಾಮವನ್ನು ಆರಂಭಿಸುವುದು ಸೂಕ್ತ. ಇದರಿಂದ ಹೆಚ್ಚಿನ ಕ್ಯಾಲರಿ ದೇಹದಲ್ಲಿ ಶೇಖರಣೆಯಾಗುವುದು ತಪ್ಪುತ್ತದೆ. ಕುಳಿತುಕೊಂಡು ಟಿವಿಯಲ್ಲಿ ನಿಮ್ಮ ಫೇವರೆಟ್ ಕಾರ್ಯಕ್ರಮ ನೋಡುವ ಬದಲು ಆಚೆ ಈಚೆ ವಾಕಿಂಗ್ ಮಾಡುತ್ತಾ ಟಿವಿ ವೀಕ್ಷಿಸಿ.

ಬೆಳಗ್ಗಿನ ಸಮಯದಲ್ಲಿ ವ್ಯಾಯಾಮ

ಬೆಳಗ್ಗಿನ ಸಮಯದಲ್ಲಿ ವ್ಯಾಯಾಮ

ಬೆಳಗ್ಗಿನ ಸಮಯದಲ್ಲಿ ಜಾಗಿಂಗ್, ಬೆಟ್ಟದ ರಸ್ತೆಯಲ್ಲಿ ವೇಗವಾಗಿ ಓಡುವುದು ಅಥವಾ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವುದರಿಂದ ಕಾಲುಗಳು, ಸೊಂಟ ಮತ್ತು ತೊಡೆಯನ್ನು ಬಲಗೊಳಿಸುತ್ತದೆ. ಥ್ರೆಡ್ ಮಿಲ್‌ನಲ್ಲಿ ವ್ಯಾಯಾಮ ಮಾಡುವುದರಿಂದ ನೀವು ವೇಗ ಮತ್ತು ಒಳ್ಳೆಯ ರೀತಿ ವ್ಯಾಯಾಮ ಮಾಡಬಹುದು.

ದೈಹಿಕ ಕ್ಷಮತೆಗೆ

ದೈಹಿಕ ಕ್ಷಮತೆಗೆ

ಕಠಿಣ ಮನೆಕೆಲಸ, ಸೈಕ್ಲಿಂಗ್, ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವುದರಿಂದ ಹೆಚ್ಚಿನ ಒತ್ತಡವಿಲ್ಲದೆ ನೀವು ತೂಕ ಕಳಕೊಳ್ಳಬಹುದು. ಸಾಲ್ಸಾ ಡ್ಯಾನ್ಸಿಂಗ್, ಏರೋಬಿಕ್ಸ್ ಒಳ್ಳೆಯ ಕಾರ್ಡಿಯೊ ವ್ಯಾಯಾಮ ಉತ್ತಮ ಹಾಗೂ ಮನೋರಂಜನೆಯನ್ನೂ ನೀಡುತ್ತದೆ.

ಸೂಕ್ತ ಮೈಕಟ್ಟಿಗಾಗಿ

ಸೂಕ್ತ ಮೈಕಟ್ಟಿಗಾಗಿ

ಭುಜಗಳ ಸ್ನಾಯುಗಳನ್ನು ಬಲಗೊಳಿಸಲು ನೀವು ಕಿಕ್ ಬಾಕ್ಸಿಂಗ್, ಸ್ಕಿಪ್ಪಿಂಗ್ ಅನ್ನು ಮಾಡಬೇಕಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ವೇಳಗೆ ಮಾಡುವ ಕೆಲವು ಪುಶ್ ಅಪ್, ಸ್ಟ್ರೆಚ್ ಮತ್ತು ಕ್ರಂಚ್‌ನಿಂದ ನಿಮ್ಮ ದೇಹದ ಮೇಲ್ಭಾಗಕ್ಕೆ ಒಂದು ರೂಪ ಬರುತ್ತದೆ. ಈ ಬಿಕಿನಿ ವ್ಯಾಯಾಮದಿಂದ ನೀವು ಸ್ಲಿಮ್ ಆಗುವುದಕ್ಕೆ ಮಹತ್ವ ನೀಡದೆಯೇ ತೂಕ ಕಳಕೊಳ್ಳಬಹುದು. ಮನೆಗೆಲಸ ಮತ್ತು ಸರಳ ಜಾಗಿಂಗ್ ನಿಂದ ನೀವು ಸ್ವಿಮ್ ಸೂಟ್‌ನ ಫಿಗರ್‌ನ್ನು ಸುಲಭವಾಗಿ ಪಡೆಬಹುದು.

English summary

National Bikini Days: 4 Weeks To A Slim Body

Whether they wear a bikini or no, everyone would like to have a beautiful bikini body. The toned legs, the perfect bust and buttocks, that's the hot and happening look for all seasons. Apart from following a bikini diet, there needs to be a well planned bikini workout that will help you slim down at a faster pace and get the most aspired look. Here are a few bikini workout tips for easy and healthy fitness.
Story first published: Saturday, July 4, 2015, 19:42 [IST]
X
Desktop Bottom Promotion