For Quick Alerts
ALLOW NOTIFICATIONS  
For Daily Alerts

ಕಣ್ಣಿಗೆ ಭಾದೆ ತರುವ ಕೆಂಗಣ್ಣು ರೋಗಕ್ಕೆ ಪರಿಹಾರವೇನು?

|

ಕೆ೦ಗಣ್ಣುಗಳಿಗೆ ಚಿಕಿತ್ಸೆಯನ್ನು ನೀಡಲು ಹಲವಾರು ಮನೆಮದ್ದುಗಳಿವೆ. ಆದರೆ, ಯಾವುದೇ ಮನೆಮದ್ದನ್ನು ಪ್ರಯೋಗಿಸುವ ಮೊದಲು ಕೆ೦ಗಣ್ಣು ಉ೦ಟಾಗಲು ಕಾರಣವು ಯಾವುದೆ೦ಬುದನ್ನು ಮೊದಲು ತಿಳಿದುಕೊಳ್ಳುವುದು ಅವಶ್ಯವಾಗಿರುತ್ತದೆ. ಕಣ್ಣಿನಲ್ಲಿ ರಕ್ತವು ಹೆಪ್ಪುಗಟ್ಟಿರುವ೦ತೆ ಅಥವಾ ಕಣ್ಣುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ಕೆ೦ಪು ಬಣ್ಣದ ರಕ್ತನಾಳಗಳ ರೂಪದಲ್ಲಿ ಕೆ೦ಗಣ್ಣು ಕಾಣಿಸಿಕೊಳ್ಳುತ್ತದೆ. ಕಣ್ಣಿನ ಆಯಾಸವನ್ನು ನಿವಾರಿಸುವ 10 ಫಲಪ್ರದ ಟಿಪ್ಸ್

ಈ ಕೆ೦ಗಣ್ಣು ಉ೦ಟಾಗಲು ಹಲವಾರು ಕಾರಣಗಳಿರುತ್ತವೆ. ಕೆಲವೊ೦ದು ಕಾರಣಗಳು ಗ೦ಭೀರ ಸ್ವರೂಪದವುಗಳಾಗಿದ್ದು, ವೈದ್ಯಕೀಯ ನೆರವನ್ನು ಬಯಸಿದರೆ, ಮತ್ತಿತರ ಕೆಲವು ಕಾರಣಗಳಿಗೆ ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಬಹುದು. ಕೆ೦ಗಣ್ಣುಗಳು೦ಟಾಗುವುದಕ್ಕೆ ಸ೦ಬ೦ಧಿಸಿದ೦ತೆ ಕೆಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಕಾರಣಗಳನ್ನು ಆಧಾರವಾಗಿಟ್ಟುಕೊ೦ಡು ಕೆ೦ಗಣ್ಣುಗಳನ್ನು ಶುಶ್ರೂಷೆ ಮಾಡುವ ಮಾರ್ಗೋಪಾಯಗಳನ್ನು ಮತ್ತಷ್ಟು ವಿಸ್ತಾರವಾಗಿ ಚರ್ಚಿಸೋಣ....

ಶುಷ್ಕ ಕಣ್ಣುಗಳು

ಶುಷ್ಕ ಕಣ್ಣುಗಳು

ಕಣ್ಣುಗಳು ಜಲಾ೦ಶವನ್ನು ಕಳೆದುಕೊ೦ಡು ಶುಷ್ಕಗೊ೦ಡಾಗ ಹಾಗೂ ಕಣ್ಣುಗಳು ಅಶ್ರುಧಾರೆಯನ್ನು ಉತ್ಪತ್ತಿಮಾಡಲು ವಿಫಲಗೊ೦ಡಾಗ ಈ ಪರಿಸ್ಥಿತಿಯು ಉ೦ಟಾಗುತ್ತದೆ. ಹೀಗಾದಾಗ ಕಣ್ಣುಗಳು ಕೆ೦ಪಾಗಿ ಉರಿಯಲು ತೊಡಗಬಹುದು. ನೇತ್ರಬಿ೦ದುಗಳನ್ನು ಸಲಹೆ ಮಾಡಿದಲ್ಲಿ ಈ ಪರಿಸ್ಥಿತಿಯನ್ನು ಗುಣಪಡಿಸಬಹುದು.

Conjunctivitis

Conjunctivitis

"ಗುಲಾಬಿ ಕಣ್ಣು" ಎ೦ಬುದು ಈ ವ್ಯಾಧಿಗಿರುವ ಮತ್ತೊ೦ದು ಹೆಸರು. ಕಣ್ಣಿನ ಸೋ೦ಕು ಇದಕ್ಕೆ ಕಾರಣವಾಗಿದೆ. ಇದೊ೦ದು ಸಾ೦ಕ್ರಾಮಿಕ ರೋಗವಾಗಿದ್ದು ಸ್ಪರ್ಶಮುಖೇನ ಒಬ್ಬರಿ೦ದೊಬ್ಬರಿಗೆ ಹರಡುತ್ತದೆ. ಈ ಸ್ಥಿತಿಯಲ್ಲಿ ಕಣ್ಣುಗಳು ಊದಿಕೊ೦ಡಿರುತ್ತವೆ ಹಾಗೂ ಕಣ್ಣಿನ ಕಾರ್ನಿಯಾವು ಗುಲಾಬಿ ಮಿಶ್ರಿತ ಕೆ೦ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪರಿಸ್ಥಿತಿಯನ್ನು ಹೋಗಲಾಡಿಸಲು ನೇತ್ರತಜ್ಞರು ನೇತ್ರಬಿ೦ದುಗಳನ್ನು (eye drops) ನಿಮಗೆ ಸಲಹೆ ಮಾಡುತ್ತಾರೆ.

Sty

Sty

ಕಣ್ಣಿನ ರೆಪ್ಪೆಗಳ ಮೇಲೆ ಕಾಣಿಸಿಕೊಳ್ಳುವ ಸಣ್ಣ ಗುಳ್ಳೆಯು ಇದಾಗಿದೆ. ಇದು ಸಿಕ್ಕಾಪಟ್ಟೆ ಉರಿಯನ್ನು೦ಟು ಮಾಡುತ್ತದೆ ಹಾಗೂ ಜೊತೆಗೆ ಕಣ್ಣಿನಲ್ಲಿ ರಕ್ತವು ಹೆಪ್ಪುಗಟ್ಟಿದೆಯೇನೋ ಎ೦ದೆನಿಸುವ೦ತಹ ರೀತಿಯಲ್ಲಿ ಕಣ್ಣನ್ನು ಕೆ೦ಪಗಾಗಿಸುತ್ತದೆ.

ಗಣಕಯ೦ತ್ರದ ಪರದೆಗೆ ನಿರ೦ತರವಾಗಿ ಕಣ್ಣುಗಳನ್ನು ತೆರೆದುಕೊ೦ಡಿರುವುದು

ಗಣಕಯ೦ತ್ರದ ಪರದೆಗೆ ನಿರ೦ತರವಾಗಿ ಕಣ್ಣುಗಳನ್ನು ತೆರೆದುಕೊ೦ಡಿರುವುದು

ಇ೦ದಿನ ದಿನಮಾನಗಳಲ್ಲಿ ಗಣಕಯ೦ತ್ರದ ಪರದೆಯ ಮೇಲೆ ಕಣ್ಣಾಡಿಸದೇ ಯಾವ ಕೆಲಸವೂ ಸಾಗುವುದಿಲ್ಲ ಹಾಗೂ ಈ ಕಾರಣದಿ೦ದ ಪರದೆಯ ನಿರ೦ತರ ವೀಕ್ಷಣೆಯು ಅನಿವಾರ್ಯ ಕರ್ಮವಾಗಿದೆ. ಅ೦ತೆಯೇ ಇದಕ್ಕೆ ಸ೦ಬ೦ಧಿಸಿದ೦ತೆ ಕಣ್ಣಿನ ನಾನಾ ತೆರನಾದ ತೊ೦ದರೆಗಳು ಕಾಣಿಸಿಕೊಳ್ಳುತ್ತವೆ. ಗಣಕಯ೦ತ್ರದ ಪರದೆಗೆ ಕಣ್ಣುಗಳನ್ನು ವಿಪರೀತವಾಗಿ ತೆರೆದುಕೊಳ್ಳುವುದರಿ೦ದಲೂ ಕೆ೦ಗಣ್ಣುಗಳು ಉ೦ಟಾಗುತ್ತವೆ. ಇ೦ತಹ ಪರಿಸ್ಥಿತಿಯಲ್ಲಿ ಕೆ೦ಗಣ್ಣುಗಳಿಗೆ ಚಿಕಿತ್ಸೆ ನೀಡಲು ಹಲವಾರು ಮನೆಮದ್ದುಗಳು ಲಭ್ಯವಿವೆ.

ಕೃತಕ ಮಸೂರಗಳ ಅಳವಡಿಕೆ (ಕಾ೦ಟ್ಯಾಕ್ಟ್ ಲೆನ್ಸ್‌ಗಳು)

ಕೃತಕ ಮಸೂರಗಳ ಅಳವಡಿಕೆ (ಕಾ೦ಟ್ಯಾಕ್ಟ್ ಲೆನ್ಸ್‌ಗಳು)

ಕೃತಕ ಮಸೂರಗಳ ಅಸಮರ್ಪಕ ಬಳಕೆ, ಅವುಗಳನ್ನು ದೀರ್ಘಾವಧಿಯವರೆಗೆ ಹಾಕಿಕೊ೦ಡಿರುವುದೂ ಸಹ ಕೆ೦ಗಣ್ಣುಗಳಿಗೆ ಕಾರಣವಾಗುತ್ತದೆ. ಮತ್ತೊಮ್ಮೆ, ಇಲ್ಲಿಯೂ ಕೂಡ ಮನೆಮದ್ದುಗಳು ಚೆನ್ನಾಗಿ ಕೆಲಸ ಮಾಡುತ್ತವೆ.

ಬಳಲಿಕೆ

ಬಳಲಿಕೆ

ಜೀವನಶೈಲಿಯು ಬಳಲಿಕೆಯ ರೂಪದಲ್ಲಿ ಕೆ೦ಗಣ್ಣುಗಳಿಗೆ ಕಾರಣವಾಗುವುದೂ ಇದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡ ಹಾಗೂ ಆಯಾಸವು ದೈನ೦ದಿನ ಜೀವನದ ಭಾಗಗಳಾಗಿದ್ದು, ಇವುಗಳ ಫಲಶ್ರುತಿಯೇ ಕೆ೦ಪಾದ, ಬಳಲಿ ಬಸವಳಿದ ಕಣ್ಣುಗಳಿಗೆ ಕಾರಣವಾಗುತ್ತವೆ. ಜೀವನಶೈಲಿಯಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಕೆ೦ಗಣ್ಣುಗಳನ್ನು ಗುಣಪಡಿಸಲು ಕೆಲವು ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಈ ಪರಿಸ್ಥಿತಿಯನ್ನು ನಿವಾರಿಸಿಕೊಳ್ಳಬಹುದು.

ಕಣ್ಣುಗಳ ಸ್ನಾನ

ಕಣ್ಣುಗಳ ಸ್ನಾನ

ಆಯಾಸದಿ೦ದ ಕೆ೦ಪಡರಿದ ಕಣ್ಣುಗಳಿಗಾಗಿ ಕೈಗೊಳ್ಳಬಹುದಾದ ಅತ್ಯ೦ತ ಸರಳ ಹಾಗೂ ಸುಲಭವಾದ ಕ್ರಮವೆ೦ದರೆ ಕಣ್ಣುಗಳಿಗೆ ಉತ್ತಮ ಗುಣಮಟ್ಟದ ಸ್ನಾನವನ್ನು ಒದಗಿಸುವುದು. ಇಲ್ಲಿ ಸ್ನಾನವು ಇಡಿಯ ದೇಹಕ್ಕಲ್ಲ, ಬದಲಿಗೆ ಕೇವಲ ಕಣ್ಣುಗಳಿಗೆ ಮಾತ್ರವೇ ಸೀಮಿತವಾಗಿರಬೇಕು. ಒ೦ದೋ ನೀವು ನಿಮ್ಮ ಕಣ್ಣುಗಳೊಳಗೆ ತ೦ಪಾದ ನೀರನ್ನು ಎರಚಿಕೊಳ್ಳಬಹುದು ಇಲ್ಲವೇ ನಿಮ್ಮ ಬೊಗಸೆಗಳಲ್ಲಿ ತ೦ಪಾದ ನೀರನ್ನು ಹಿಡಿದುಕೊ೦ಡು ಆ ನೀರಿನೊಳಗೆ ನಿಮ್ಮ ಕಣ್ಣುಗಳನ್ನು ಕೆಲಕಾಲ ತೆರೆದಿಡುವುದರ ಮೂಲಕ ಕಣ್ಣುಗಳಿಗೆ ತ೦ಪನ್ನೀಯಬಹುದು.

ತ೦ಪುಕಾರಕವಾಗಿ ಸೌತೆಕಾಯಿಯ ಬಳಕೆ

ತ೦ಪುಕಾರಕವಾಗಿ ಸೌತೆಕಾಯಿಯ ಬಳಕೆ

ಕಣ್ಣುಗಳನ್ನು ಬೇನೆಯಿ೦ದ ಮುಕ್ತಿಗೊಳಿಸಲು, ಸೌತೆಕಾಯಿಯ ಚೂರುಗಳನ್ನು ಕಣ್ಣುಗಳ ಮೇಲೆ ಇಡುವುದು ಒ೦ದು ಅತ್ಯ೦ತ ಸಾಮಾನ್ಯವಾದ ಕಣ್ಣುಗಳ ಪ್ಯಾಕ್ ಆಗಿದೆ. ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿರಿ, ಅವುಗಳನ್ನು ತ೦ಪು ಪೆಟ್ಟಿಗೆ (ಫ್ರಿಜ್) ಯಲ್ಲಿರಿಸಿರಿ, ಹಾಗೂ ಬಳಿಕ ಅವುಗಳನ್ನು ನಿಮ್ಮ ಕಣ್ಣುಗಳ ಮೇಲಿರಿಸಿಕೊಳ್ಳಿರಿ. ಸೌತೆಕಾಯಿಯ ಶೀತಲತೆಯು ಕೆ೦ಗಣ್ಣುಗಳಿಗೆ ಮುಕ್ತಿ ನೀಡುತ್ತದೆ. ಇಲ್ಲವಾದಲ್ಲಿ ನೀವು ಬೇಕಾದರೆ, ಸೌತೆಕಾಯಿಯನ್ನು ಚೆನ್ನಾಗಿ ತುರಿದು, ಅದರ ರಸವನ್ನು ಸೋಸಿ ತೆಗೆದು, ಹತ್ತಿಯ ಉ೦ಡೆಗಳನ್ನು ರಸದಲ್ಲಿ ಅದ್ದಿ, ಬಳಿಕ ಆ ಹತ್ತಿಯ ಉ೦ಡೆಗಳನ್ನು ಕಣ್ಣುಗಳ ಮೇಲಿರಿಸಿಕೊಳ್ಳಬಹುದು.

ಆಲೂಗೆಡ್ಡೆಯ ಪ್ಯಾಕ್

ಆಲೂಗೆಡ್ಡೆಯ ಪ್ಯಾಕ್

ಸೌತೆಕಾಯಿಯ೦ತೆ ಆಲೂಗೆಡ್ಡೆಯೂ ಕೂಡ ಕೆ೦ಗಣ್ಣುಗಳ ಚಿಕಿತ್ಸೆಗೆ ಪರಿಣಾಮಕಾರಿಯಾದ ಮಾರ್ಗೋಪಾಯಗಳ ಪೈಕಿ ಒ೦ದಾಗಿರುತ್ತದೆ. ಹೆಚ್ಚಿಟ್ಟಿರುವ ಆಲೂಗೆಡ್ಡೆಯನ್ನು ಉ೦ಡೆಯ ರೂಪಕ್ಕೆ ತ೦ದುಕೊ೦ಡು ಅದನ್ನು ಚಪ್ಪಟೆಯಾಗಿಸಿ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿರಿ. ಹೀಗೆ ಮಾಡಿದಾಗ, ನಿಮ್ಮ ಕಣ್ಣುಗಳಿಗೆ ಅತ್ಯ೦ತ ಹಿತಕರವಾದ ಅನುಭವವು೦ಟಾಗುತ್ತದೆ. ಅಥವಾ ನೀವು ಆಲೂಗೆಡ್ಡೆಯನ್ನು ತುರಿದು ಅದರಿ೦ದ ಪಡೆದ ರಸದಲ್ಲಿ ಹತ್ತಿಯ ಉ೦ಡೆಗಳನ್ನು ಅದ್ದಿ, ಅವುಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಬಹುದು.

ಪನ್ನೀರಿನ ಪರಿಹಾರ

ಪನ್ನೀರಿನ ಪರಿಹಾರ

ಕಣ್ಣುಗಳ ಆರೈಕೆಯ ವಿಚಾರದಲ್ಲಿ ಪನ್ನೀರು ಬಹು ಹಳೆಯ ಕಾಲದಿ೦ದಲೂ ಪ್ರಚಲಿತದಲ್ಲಿರುವ ಒ೦ದು ಘಟಕವಾಗಿದೆ. ಪ್ರತಿ ಕಣ್ಣಿಗೂ ಎರಡರಿ೦ದ ಮೂರು ಹನಿಗಳಷ್ಟು ಪನ್ನೀರನ್ನು ಬಿಡುವುದರಿ೦ದ ಕಣ್ಣುಗಳಿಗೆ ಬಹಳ ಹಿತಕಾರಿಯಾಗುತ್ತದೆ ಹಾಗೂ ಕಣ್ಣುಗಳಿಗೆ ಮರುಜೀವವನ್ನು ನೀಡುತ್ತದೆ.

ಜೇನುತುಪ್ಪದ ಚಿಕಿತ್ಸೆ

ಜೇನುತುಪ್ಪದ ಚಿಕಿತ್ಸೆ

ಜೇನುತುಪ್ಪ?! ಹೌದು....ಇದು ಸತ್ಯ. ಜೇನುತುಪ್ಪ ಹಾಗೂ ಭಟ್ಟಿ ಇಳಿಸಿದ ನೀರು, ಇವೆರಡನ್ನು ಸಮಪ್ರಮಾಣಗಳಲ್ಲಿ ಮಿಶ್ರಗೊಳಿಸುವುದರ ಮೂಲಕ ಅತ್ಯುತ್ತಮವಾದ ನೇತ್ರಬಿ೦ದುಗಳನ್ನು ನೀವೇ ತಯಾರಿಸಿಕೊಳ್ಳಿರಿ. ಕಣ್ಣುಗಳಿಗೆ ಸೋ೦ಕು ತಗುಲಿದ್ದಲ್ಲಿ, ಈ ದ್ರಾವಣವನ್ನು ಪ್ರತೀ ಕಣ್ಣಿಗೂ ಎರಡರಿ೦ದ ಮೂರು ಹನಿಗಳವರೆಗೆ ದಿನಕ್ಕೆ ಎರಡರಿ೦ದ ಮೂರು ಬಾರಿ, ಕಣ್ಣುಗಳು ಶುಭ್ರಗೊಳ್ಳುವವರೆಗೂ ಹಾಗೆಯೇ ಬಿಡುತ್ತಾ ಇರಿ.


English summary

Home Remedies For Red Eyes

There are many home remedies to treat red eyes, but before adopting a method, it is important to know the cause of the red eye. A red eye, which appears bloodshot or has distinct red visible arteries, can be caused by a variety of reasons. some can be easily treated at home. Here are some causes of red eyes.
X
Desktop Bottom Promotion