For Quick Alerts
ALLOW NOTIFICATIONS  
For Daily Alerts

ಎಚ್ಚರ: ಲೈಫ್‌ನಲ್ಲಿ ಇಂತಹ ತಪ್ಪುಗಳನ್ನು ಮಾತ್ರ ಮಾಡಬೇಡಿ!

By Super
|

ಸವಲತ್ತುಗಳು ಹೆಚ್ಚಾಗುತ್ತಿದ್ದಂತೆ ನಾವು ಹೆಚ್ಚು ಸೋಮಾರಿಗಳಾಗುತ್ತಿದ್ದೇವೆ. ಅಂತೆಯೇ ನಮ್ಮ ದಿನಚರಿಗಳೂ ಬದಲಾಗುತ್ತಿವೆ. ತಡರಾತ್ರಿಯವರೆಗೆ ಪಾರ್ಟಿ ಮಾಡುವುದು ಮತ್ತು ಬೆಳಗ್ಗಿನ ಜಾವ ತಡವಾಗಿ ಏಳುತ್ತಿದ್ದೇವೆ. ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದೂ ಪ್ರತಿಷ್ಠೆಗಾಗಿ ಹಾನಿಕಾರಕ ಪಾನೀಯಗಳನ್ನು ಸೇವಿಸುತ್ತಿದ್ದೇವೆ. ಒಟ್ಟಾರೆ, ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಧಾವಿಸುತ್ತಿದ್ದೇವೆ. ನಿಸರ್ಗಕ್ಕೆ ವಿರುದ್ಧವಾಗಿ ನಡೆದವರು ಯಾರೂ ಎಂದಿಗೂ ಯಶಸ್ವಿಯಾಗಿಲ್ಲ.

ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳನ್ನು ಹಿರಿಯರು ಕಂಡುಹಿಡಿದು ಸೂಕ್ತಮಾರ್ಗದಲ್ಲಿ ನಡೆಯಲು ಬುದ್ಧಿ ಹೇಳುತ್ತಾರೆ. ಹಿರಿಯರಿರಬೇಕು ಮನೆಯಲ್ಲಿ ಎಂದು ಇದಕ್ಕೇ ಹೇಳುವುದು. ಆದರೆ ಅವರ ವಯಸ್ಸನ್ನು ಹಳೆಯ ಕಾಲದ ಗೊಡ್ಡು ಎಂದು ಹೀಯಾಳಿಸುವ ನಾವು ಅವರ ಮುಂದೆ ಗೋಣು ಅಲ್ಲಾಡಿಸಿದರೂ ಅವರಿಂದ ತಪ್ಪಿಸಿಕೊಂಡ ಮರುಕ್ಷಣವೇ ಹೆಂಡಕುಡಿಸಿದ ಕಪಿಯಾಗುತ್ತೇವೆ.

ಆದರೆ ನಮ್ಮ ಈ ಕೆಲವು ಅಭ್ಯಾಸಗಳು ದುರಭ್ಯಾಸವೆಂದು ನಮಗೆ ಗೊತ್ತೇ ಇರುವುದಿಲ್ಲ. ಎಲ್ಲಿಯವರೆಗೆ ಎಂದರೆ ಇದು ಒಂದು ಹಂತದಲ್ಲಿ ಹಠಾತ್ತಾಗಿ ಧಾಳಿ ಇಡುವವರೆಗೆ.

ಮೊಬೈಲಿನ ಸತತ ಬಳಕೆಯಿಂದ ಯಾವ ರೀತಿ ಹಾನಿಯಾಗಬಹುದು? ತಡರಾತ್ರಿಯವರೆಗೆ ಜಾಗರಣೆ ಇರುವ ಕೆಡುಕುಗಳೇನು? ವಾಹನ ಚಲಾಯಿಸುವಾಗ ಧಾವಂತದ ದುರಂತವೇನಾಗಬಹುದು? ಇಂತಹ ಪ್ರಶ್ನೆಗಳನ್ನು ಯುವಜನತೆಗೆ ಕೇಳಿದರೆ ಈ ಪ್ರಶ್ನೆ ಕೇಳಿದ ನಿಮ್ಮನ್ನೇ ಅವರು ಗತಕಾಲದ ಭೂತದಂತೆ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ಇವೆಲ್ಲಾ ಜೀವನದ ಥ್ರಿಲ್‌ಗಳು! ನಿಮ್ಮನ್ನು ನಿಧಾನವಾಗಿ ಸಾಯಿಸುತ್ತಿರುವ ನಿಮಗೆ ಅರಿವೇ ಇಲ್ಲದ ಅಭ್ಯಾಸಗಳ ವಾಸ್ತವವೇನು ಎಂದು ಅರಿಯಬೇಕೇ? ಕೆಳಗಿನ ಸ್ಲೈಡ್ ಶೋ ನೋಡಿ..

ಅಪರಿಚಿತರೊಂದಿಗಿನ ಅಸುರಕ್ಷಿತ ಸಂಪರ್ಕ

ಅಪರಿಚಿತರೊಂದಿಗಿನ ಅಸುರಕ್ಷಿತ ಸಂಪರ್ಕ

ನಿಸರ್ಗ ಏಕಸಂಗಾತಿಯನ್ನು ಮತ್ತು ಸಮಾಜ ಏಕಸಂಗಾತಿಯೊಂದಿಗಿನ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಆದರೆ ಇದನ್ನು ಮೀರಿ ಹೊರಗಿನ ಸಂಪರ್ಕ ಬಯಸುವವರಿಗೆ ಅದರ ಪರಿಣಾಮಗಳೇನಾಗಬಹುದು ಎಂಬ ಅರಿವಿರುವುದಿಲ್ಲ. ಅದರಲ್ಲೂ ಅಪರಿಚಿತರೊಂದಿಗಿನ ಅಸುರಕ್ಷಿತ ಸಂಪರ್ಕದ ಮೂಲಕ ಅನೇಕ ರೋಗಗಳು ಕೂಡ ಆವರಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಪರಿಚಿತರೊಂದಿಗಿನ ಅಸುರಕ್ಷಿತ ಸಂಪರ್ಕ

ಅಪರಿಚಿತರೊಂದಿಗಿನ ಅಸುರಕ್ಷಿತ ಸಂಪರ್ಕ

ಅದರಲ್ಲೂ ಎಚ್.ಐ.ವಿ ಸೋಂಕು ತಗುಲಿದರೆ ಯಾವುದೇ ಔಷಧಿ ಲಭ್ಯವಿಲ್ಲದ ಕಾರಣ ಸಾವು ಅನಿವಾರ್ಯವಾಗಬಹುದು.ಇಲ್ಲದಿದ್ದರೂ ಜೀವಮಾನವಿಡೀ ಸಂಗಾತಿಯೊಡನೆಯೂ ಸಂಪರ್ಕ ಮಾಡಲಾಗದ ಪರಿಸ್ಥಿತಿ ಎದುರಾಗಬಹುದು.

ಪಾನಮತ್ತ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು

ಪಾನಮತ್ತ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು

ಇಂದಿನ ಯುವಜನತೆ ಧೂಮಪಾನಕ್ಕಿಂತಲೂ ಮದ್ಯಪಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಆತಂಕಕಾರಿಯಾಗಿದೆ. ಏಕೆಂದರೆ ಮದ್ಯ, ಬಿಯರ್ ಮೊದಲಾದವುಗಳನ್ನು ಕುಡಿಯುವುದು ಈಗ ನೋವು ಮರೆಸಲು ಅಲ್ಲ, ಬದಲಾಗಿ ಪ್ರತಿಷ್ಠೆ ಮೆರೆಯಲು ಬಳಕೆಯಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಾನಮತ್ತ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು

ಪಾನಮತ್ತ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು

ಅಮಲಿನಲ್ಲಿದ್ದರೂ ನಿಯಂತ್ರಣ ಮಾಡಿಕೊಳ್ಳಬಲ್ಲೆ ಎಂಬ ಹುಸಿನಂಬಿಕೆಯಿಂದ ಮುಂದಿನ ಕಾರ್ಯ ಕೈಗಿತ್ತಿಕೊಳ್ಳುವವರು ಆ ಕಾರ್ಯವನ್ನು ಸಾಮಾನ್ಯ ರೀತಿಯಲ್ಲಿ ಖಂಡಿತಾ ನಿಭಾಯಿಸಲಾರರು. ಅದರಲ್ಲೂ ಪಾನಮತ್ತ ಸ್ಥಿತಿಯಲ್ಲಿ ವಾಹನ ಚಲಾಯಿಸುವಾಗ ತಮ್ಮನ್ನು ಮಾತ್ರವಲ್ಲದೇ ದಾರಿಯಲ್ಲಿರುವ ಅಮಾಯಕರನ್ನೂ ಯಮಲೋಕಕ್ಕೆ ಅಟ್ಟಬಹುದು.

ಸಕ್ಕರೆಗೆ ದಾಸರಾಗಿರುವುದು

ಸಕ್ಕರೆಗೆ ದಾಸರಾಗಿರುವುದು

ಬಿಳಿಸಕ್ಕರೆ ನಿಧಾನವಾದ ವಿಷವಾಗಿದೆ. ನೋಡಲು ಚೆಂದ ಮತ್ತು ಅಗ್ಗ ಎಂಬ ಕಾರಣಕ್ಕೆ ಬೆಲ್ಲದ ಬದಲು ಹೆಚ್ಚಿನವರು ಸಕ್ಕರೆಯನ್ನೇ ಬಳಸುತ್ತಾರೆ. ಆದರೆ ಈ ಸಿಹಿ ಇನ್ನಷ್ಟು ಸಿಹಿ ತಿನ್ನಲು ಪ್ರೇರೇಪಿಸಿ ರಕ್ತದಲ್ಲಿ ಗ್ಲುಕೋಸ್ ಅಂಶ ವಿಪರೀತವಾಗಿ ಏರಲು ಕಾರಣವಾಗುತ್ತದೆ. ಇದು ನಿಧಾನವಾಗಿ ಹಲವು ತೊಂದರೆಗಳನ್ನು ಬಳಿತರುತ್ತದೆ.

ಸಲಹೆಯಿಲ್ಲದೇ ಮಾತ್ರೆ ತೆಗೆದುಕೊಳ್ಳುವುದು

ಸಲಹೆಯಿಲ್ಲದೇ ಮಾತ್ರೆ ತೆಗೆದುಕೊಳ್ಳುವುದು

ಪಾಪಿಂಗ್ ಪಿಲ್ಸ್ (Popping Pills) ಎಂದು ಕರೆಯಲಾಗುವ ಈ ಅಭ್ಯಾಸ ತುಂಬಾ ಕೆಟ್ಟದಾಗಿದ್ದು ನಿಮಗೆ ಗೊತ್ತಿಲ್ಲದೇ ದೇಹದ ಬೇರಾವುದೋ ಅಂಗಕ್ಕೆ ಧಕ್ಕೆಯುಂಟುಮಾಡಬಹುದು. ತಲೆನೋವು, ಶೀತಕ್ಕೆಲ್ಲಾ ಹೆಚ್ಚಿನವರು ವೈದ್ಯರ ಅಥವಾ ಔಷಧಿ ಅಂಗಡಿಗಳಿಗೆ ಹೋಗದೇ ಹಿಂದೆಂದೋ ಇದೇ ತರಹದ ತೊಂದರೆಗಾಗಿ ನೀಡಿದ್ದ ಗುಳಿಗೆಗಳನ್ನೇ ಮತ್ತೆ ತೆಗೆದುಕೊಳ್ಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲಹೆಯಿಲ್ಲದೇ ಮಾತ್ರೆ ತೆಗೆದುಕೊಳ್ಳುವುದು

ಸಲಹೆಯಿಲ್ಲದೇ ಮಾತ್ರೆ ತೆಗೆದುಕೊಳ್ಳುವುದು

ಆದರೆ ಈ ಬಾರಿಯೂ ಈ ತೊಂದರೆ ಅದೇ ವೈರಸ್ಸಿನಿಂದಾಗಿರುವುದು ಅನುಮಾನ. ದೇಹ ಆ ವೈರಸ್ಸಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುತ್ತದೆ. ಆದ್ದರಿಂದ ಅದೇ ಮಾತ್ರೆಯನ್ನು ನುಂಗಿದರೆ ದೇಹದ ಬೇರಾವುದೋ ಅಂಗಕ್ಕೆ ಧಕ್ಕೆಯುಂಟುಮಾಡಬಹುದು. ಈ ಅಭ್ಯಾಸವನ್ನು ತಕ್ಷಣ ನಿಲ್ಲಿಸುವುದು ಉತ್ತಮ.

ಸೋಮಾರಿತನ

ಸೋಮಾರಿತನ

ಆಧುನಿಕ ಸೌಲಭ್ಯಗಳು ನೀಡಿದ ಭಯಂಕರ ಕೊಡುಗೆ ಎಂದರೆ ಆಲಸಿತನ. ಮೊದಲನೆಯ ಮಹಡಿಗೆ ಹೋಗಬೇಕಾದರೂ ಲಿಫ್ಟ್ ಎಲ್ಲಿದೆ ಎಂದೇ ನೋಡುವ ನಮಗೆ ಸೋಮಾರಿತನ ಅಭ್ಯಾಸವಾಗಿಬಿಟ್ಟಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೋಮಾರಿತನ

ಸೋಮಾರಿತನ

ಪ್ರತಿದಿನ ಕನಿಷ್ಠ ಮಟ್ಟದ ವ್ಯಾಯಾಮ ಅತಿ ಅಗತ್ಯ ಎಂದು ಆರೋಗ್ಯತಜ್ಞರು ಅಭಿಪ್ರಾಯಪಡುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ನಿತ್ಯದ ಚಟುವಟಿಕೆ ಅಗತ್ಯ, ನಿಮಗೆ ಅಗತ್ಯವಿಲ್ಲದಿದ್ದರೂ!

ಅತಿ ಹೆಚ್ಚು ಮಸಾಲೆ ಪದಾರ್ಥಗಳು

ಅತಿ ಹೆಚ್ಚು ಮಸಾಲೆ ಪದಾರ್ಥಗಳು

ಕೆಲವರಿಗೆ ಮಸಾಲೆಯಿಲ್ಲದ ಆಹಾರವೇ ಗಂಟಲಿನಿಂದ ಇಳಿಯುವುದಿಲ್ಲ. ವಾಸ್ತವವಾಗಿ ನಾಲಿಗೆಗೆ ಹಿತವಾಗಿರುವ ಯಾವುದೂ ಅತಿಹೆಚ್ಚು ತಿಂದರೆ ಆಯಸ್ಸು ಕಡಿಮೆಯಾಗುತ್ತದೆ ಎನ್ನುತ್ತಾರೆ ಹಿರಿಯರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿ ಹೆಚ್ಚು ಮಸಾಲೆ ಪದಾರ್ಥಗಳು

ಅತಿ ಹೆಚ್ಚು ಮಸಾಲೆ ಪದಾರ್ಥಗಳು

ಹೆಚ್ಚಿನ ಮಸಾಲೆಗಳಿಂದ ವಿಶೇಷವಾಗಿ ನಮ್ಮ ಜೀರ್ಣಾಂಗಗಳು ಬೇಗನೇ ಶಿಥಿಲವಾಗುತ್ತವೆ. ಕರುಳು ಹುಣ್ಣು, ಜಠರದ ಕ್ಯಾನ್ಸರ್ ಮೊದಲಾದ ತೊಂದರೆಗಳು ಬೇಗನೇ ಆವರಿಸುವ ಸಂಭವವಿದೆ.

ಧೂಮಪಾನ

ಧೂಮಪಾನ

ಕೆಟ್ಟದ್ದು ಎಂದು ಗೊತ್ತಿದ್ದರೂ ಜನರೇಕೆ ಧೂಮಪಾನ ಮಾಡುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಸರಳವಾಗಿ ಹೇಳಬೇಕೆಂದರೆ ಇನ್ನೊಬ್ಬರನ್ನು ನೋಡಿ ಅನುಕರಿಸಿ ಕಲಿಯುವ ಅಭ್ಯಾಸಗಳಲ್ಲಿ ಧೂಮಪಾನವೂ ಒಂದು. ಕೆಟ್ಟದ್ದು ಹೌದು, ಆದರೆ ಅವರೂ ಸೇದುತ್ತಿದ್ದಾರಲ್ಲಾ, ನಾನೇಕೆ ಸೇದಬಾರದು? ಇದು ಪ್ರತಿಯೊಬ್ಬ ಧೂಮಪಾನಿಯ ಚಿಂತನೆ. ಆ 'ಅವರು' ಧೂಮಪಾನಿಯ ನೆಚ್ಚಿನ ನಟನೇ ಆಗಿರಬಹುದು ಅಥವಾ ಪ್ರೀತಿಪಾತ್ರ, ಹತ್ತಿರದ ಸಂಬಂಧಿ, ಸ್ನೇಹಿತ ಯಾರೂ ಆಗಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಧೂಮಪಾನ

ಧೂಮಪಾನ

ಆದರೆ ಒಂದು ಸಿಗರೇಟಿನಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಹಾನಿಕಾರಕ ರಾಸಾಯನಿಕಗಳಿವೆ ಗೊತ್ತೇ? ಸಿಗರೇಟು ಸೇದುತ್ತಾ ದಶಕಗಳನ್ನೇ ಕಳೆದ ಅವರು ಗಟ್ಟಿಮುಟ್ಟಾಗಿದ್ದಂತೆ ನಿಮಗೆ ತೋರುತ್ತಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಧೂಮಪಾನ

ಧೂಮಪಾನ

ಆದರೆ ಅವರ ಒಳಗೆ ಏನಾಗುತ್ತಿದೆ ಎಂದು ನಿಮಗೆ ಗೊತ್ತೇ? ಅವರಿಗೆ ಒಗ್ಗಿ ಹೋಗಿರುವ ದೇಹ ನಿಮಗೂ ಒಗ್ಗಿಯೇ ಒಗ್ಗುತ್ತದೆಂದು ಯಾವ ಖಾತರಿ? ಬೆರಳು ಕುಯ್ದಾದ ಬಳಿಕ ಕತ್ತಿಯನ್ನು ಬೈದು ಫಲವಿದೆಯೇ?

ಮದ್ಯಪಾನ

ಮದ್ಯಪಾನ

ವಾಸ್ತವವಾಗಿ ಆಲ್ಕೋಹಾಲ್ ಒಂದು ಅಲ್ಪ ಪ್ರಮಾಣದಲ್ಲಿದ್ದರೆ ಮಾತ್ರ ದೇಹವನ್ನು ಬಿಸಿಯಾಗಿಸಲು ಮಂಜು ಬೀಳುವ ಪ್ರದೇಶದಲ್ಲಿ ಕುಡಿಯುತ್ತಾರೆಯೇ ಹೊರತು ಆಲ್ಕೋಹಾಲ್ ನಮಗೆ ಅಗತ್ಯವೇ ಇಲ್ಲದ ಪೇಯ. ಮದ್ಯಪಾನದಿಂದ ಯಕೃತ್‌ಗೆ ನೇರವಾಗಿ ಹಾನಿಯುಂಟಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮದ್ಯಪಾನ

ಮದ್ಯಪಾನ

ಇಂದು ಕೇವಲ ಪ್ರತಿಷ್ಠೆಯ ಸಂಕೇತವಾಗಿರುವ ಮದ್ಯಪಾನದ ತೆಕ್ಕೆಗೆ ಒಮ್ಮೆ ಬಿದ್ದರೆ ಹೊರಬರುವುದು ಕಷ್ಟಕರ. ಅಲ್ಲದೇ ಸಾವು ಸಹಾ ಸನ್ನಿಹಿತವಾಗುತ್ತಾ ಹೋಗುತ್ತದೆ.

ತಡವಾಗಿ ಊಟ ಮಾಡುವುದು

ತಡವಾಗಿ ಊಟ ಮಾಡುವುದು

ದೇಹಕ್ಕೆ ದಿನದ ಚಟುವಟಿಕೆಗಳಲ್ಲಿ ಒಂದು ನಿಯಮವಿದೆ. ಅದರಲ್ಲಿ ಕೆಲವು ಎಚ್ಚರಾಗಿದ್ದಾಗ ಮತ್ತು ಕೆಲವು ರಾತ್ರಿ ಮಲಗಿದ ಬಳಿಕ ಪ್ರಾರಂಭವಾಗುತ್ತವೆ. ಒಂದು ಈ ಚಟುವಟಿಕೆ ಪ್ರಾರಂಭವಾಗುವ ವೇಳೆಯಲ್ಲಿ ಊಟ ಮಾಡಿದರೆ ದೇಹದ ನಿಯಮ ತಪ್ಪುತ್ತದೆ. ವಿಶ್ರಮಿಸಬೇಕಾದ ಜೀರ್ಣಾಂಗ ವ್ಯವಸ್ಥೆಯನ್ನು ಬಲವಂತವಾಗಿ ಎಬ್ಬಿಸಿ ರಾತ್ರಿಯ ಚಟುವಟಿಕೆಯನ್ನು ಬಲವಂತವಾಗಿ ಸ್ತಬ್ಧಗೊಳಿಸಬೇಕಾಗಿ ಬರುತ್ತದೆ.

ತಡವಾಗಿ ಊಟ ಮಾಡುವುದು

ತಡವಾಗಿ ಊಟ ಮಾಡುವುದು

ಇದು ದೇಹದ ಸಮತೋಲನವನ್ನೇ ಎರುಪೇರಾಗಿಸುತ್ತದೆ. ಈ ಊಟದ ಮೂಲಕ ಲಭ್ಯವಾದ ಕ್ಯಾಲೋರಿಗಳನ್ನು ಬಳಸದೇ ಹೋದರೆ ನಿಮ್ಮನ್ನೇ ಇವು ಕೊಲ್ಲಬಹುದು! ಇಲ್ಲದಿದ್ದರೆ ಸ್ಥೂಲಕಾಯ, ಹೃದಯಸಂಬಂಧಿ ಕಾಯಿಲೆಗಳು ಆವರಿಸಿಕೊಳ್ಳಬಹುದು.

ತಡವಾಗಿ ಮಲಗುವುದು

ತಡವಾಗಿ ಮಲಗುವುದು

ಮೆದುಳಿಗೆ ರಾತ್ರಿಯ ಸಮಯ ಸಾಕಷ್ಟು ವಿಶ್ರಾಂತಿ ಬೇಕು. ಈ ಸಮಯದಲ್ಲಿ ಬಲವಂತವಾಗಿ ಎಚ್ಚರಾಗಿದ್ದರೆ ಮೆದುಳು ಸಹಾ ಎಚ್ಚರಿರಬೇಕಾಗಿದ್ದು ವಿಶ್ರಾಂತಿಯ ಸಮಯದಲ್ಲಿ ನಡೆಯಬೇಕಾಗುವ ಹಲವು ಚಟುವಟಿಕೆಗಳು ನಡೆಯುವುದೇ ಇಲ್ಲ.

ತಡವಾಗಿ ಮಲಗುವುದು

ತಡವಾಗಿ ಮಲಗುವುದು

ಇದರಲ್ಲಿ ರೋಗನಿರೋಧಕ ವ್ಯವಸ್ಥೆ ಬಲಗೊಳ್ಳುವುದು ಸಹಾ ಪ್ರಮುಖವಾಗಿ ನಡೆಯುತ್ತದೆ. ಈ ಸಮಯದಲ್ಲಿ ಎಚ್ಚರಿದ್ದರೆ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುವುದಾದರೂ ಹೇಗೆ? ಶೀಘ್ರವೇ ಯಾವುದೇ ರೋಗಕ್ಕೆ ನೀವು ಸುಲಭವಾಗಿ ಬಲಿಯಾಗಬಹುದು.

English summary

Health Mistakes That Can Kill

If you make healthy lifestyle choices, you can enjoy a long life span. If you ignore your health, you may regret later as some health mistakes kill silently without our knowledge in the long run. In fact, following healthy lifestyle habits isn't so tough. You just need to carefully plan your life with a bit of discipline and awareness. Now, let us discuss about some common lifestyle mistakes.
X
Desktop Bottom Promotion