For Quick Alerts
ALLOW NOTIFICATIONS  
For Daily Alerts

ಹಕ್ಕಿಗಳ ಇಂಪಾದ ಕಲರವದ ನಡುವೆ ಮುಂಜಾನೆಯ ನಡಿಗೆ

By Super
|

ಇಂದು ಹೆಚ್ಚಿನ ಜನರು ಸಮಯದ ಅಭಾವದಿಂದಾಗಿ ಬೆಳಗ್ಗಿನ ಸಮಯದ ನಡಿಗೆಯನ್ನು ತ್ಯಜಿಸಿ ಸಂಜೆಯ ನಡಿಗೆಯನ್ನು ಆರಿಸಿಕೊಂಡಿದ್ದಾರೆ. ಸಂಜೆಯ ನಡಿಗೆ ಕೂಡ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಆದರೆ ಪ್ರಾತಃ ಕಾಲದಲ್ಲಿ ನೀವು ಮಾಡುವ ನಡಿಗೆಯ ಉಪಯೋಗ ನಿಮ್ಮ ದೇಹಕ್ಕೆ ಎಷ್ಟು ಮಹತ್ವಪೂರ್ಣವಾದುದು ಎಂಬುದನ್ನು ನೀವು ತಿಳಿದುಕೊಂಡಿರಲೇಬೇಕು.

ಬೆಳಗ್ಗಿನ ಜಾವದ ನಡಿಗೆಯು ಆರೋಗ್ಯಪೂರ್ಣವಾಗಿರುವುದು ಮಾತ್ರವಲ್ಲ ನಮ್ಮ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ಪೂರಣದಂತೆ. ಪ್ರಾತಃ ಕಾಲದಲ್ಲಿ ಪರಿಸರದಲ್ಲಿನ ಶುದ್ಧ ಗಾಳಿ ನಮ್ಮ ದೇಹದಲ್ಲಿನ ಆಯಾಸವನ್ನು ಪರಿಹರಿಸಿ ಉತ್ಸಾಹ, ಆಸಕ್ತಿಯನ್ನು ತುಂಬುತ್ತದೆ. ಅಲ್ಲದೆ, ನಿರಾಳವಾಗಿರುವ ಮನಸ್ಸು ದಿನದ ಯಾವುದೇ ಒತ್ತಡವನ್ನು ಎದುರಿಸಲು ಸಿದ್ಧವಾಗಿ ಖಿನ್ನತೆ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಬೆಳಗ್ಗಿನ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಮ್ಲಜನಕ ಉಸಿರಾಟವನ್ನು ಸರಾಗಗೊಳಿಸುತ್ತದೆ.

ಈ ನಡಿಗೆಗೆ ಯಾವುದೇ ಸಾಧನ, ಸಲಕರಣೆ ಬೇಕಾಗಿಲ್ಲ, ವೃದ್ಧರಿಗೆ ಮಾತ್ರ ಇತರ ಸಮಯದಂತೆ ಕೋಲು ಬೇಕಾಗಬಹುದೇ ವಿನಃ ಯಾವುದೇ ವಿಶೇಷ ಉಪಕರಣದ ಅಗತ್ಯವಿಲ್ಲ. ಇದರ ಸದುಪಯೋಗಗಳನ್ನು ಅರಿತರೆ ಮುಂಜಾನೆ ಹೊದ್ದು ಮಲಗುವುದರಿಂದ ಗಳಿಸಿಕೊಳ್ಳುವ ಸುಖಕ್ಕಿಂತ ಕಳೆದುಕೊಳ್ಳುವ ಆರೋಗ್ಯ ಆತಂಕ ಮೂಡಿಸುವುದರಿಂದ ನಾಳೆಯಿಂದಲೇ ನಡಿಗೆಗೆ ಮುಂದಾಗುವುದು ಖಚಿತ. ಇನ್ನೇಕೆ ತಡ ನಾಳೆಯಿಂದಲೇ ನಿಮ್ಮ ಮುಂಜಾವಿನ ನಡಿಗೆ ಪ್ರಾರಂಭಗೊಳ್ಳಲಿ. ಅದಕ್ಕೂ ಮುನ್ನ ಈ ಲೇಖನದಲ್ಲಿನ ಅಂಶಗಳನ್ನು ಮನದಟ್ಟು ಮಾಡಿಕೊಳ್ಳಿ.

ಮಹಿಳೆಯರಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ

ಮಹಿಳೆಯರಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ

ಮಹಿಳೆಯರಲ್ಲಿ ಸ್ತನಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಮುಂಜಾನೆಯ ನಡಿಗೆಯ ಮೂಲಕ ಲಭ್ಯವಾಗುವ ಶಕ್ತಿಯಿಂದ ನಾಶವಾಗುತ್ತವೆ. ಇದಕ್ಕೆ ಕಾರಣ ಈಸ್ಟ್ರೋಜನ್ ಎಂಬ ರಸದೂತ (ಹಾರ್ಮೋನು). ದಿನದ ಇತರ ಹೊತ್ತಿಗಿಂತಲೂ ಬೆಳಗ್ಗಿನ ನಡಿಗೆಯಿಂದ ಈಸ್ಟ್ರೋಜನ್ ಬಳಕೆಯ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯದ ಏರುಪೇರನ್ನು ಇತರ ಹೊತ್ತಿಗಿಂತಲೂ ಹೆಚ್ಚು ಸಮರ್ಥವಾಗಿ ಕಾಪಾಡುತ್ತದೆ.

ಮೂಳೆಗಳಲ್ಲಿ ಟೊಳ್ಳಾಗುವುದನ್ನು (Osteoporosis) ತಪ್ಪಿಸುತ್ತದೆ

ಮೂಳೆಗಳಲ್ಲಿ ಟೊಳ್ಳಾಗುವುದನ್ನು (Osteoporosis) ತಪ್ಪಿಸುತ್ತದೆ

ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಹಾಗೂ ಇತರ ಕಾರಣಗಳಿಂದ ಗಾಳಿಗುಳ್ಳೆಗಳು ತುಂಬುವುದು, ಕಿರಿದಾದ ಬಿರುಕುಗಳುಂಟಾಗುವುದು, ಟೊಳ್ಳಾಗುವ ಸಂಭವ ಹೆಚ್ಚುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಇದ್ದರೂ ಅದನ್ನು ಮೂಳೆಗಳು ಹೀರಿಕೊಳ್ಳಲು ಮೂಳೆಗಳವರೆಗೆ ರಕ್ತಸಂಚಾರದ ಮೂಲಕ ಹಲವು ಇತರ ಪೋಷಕಾಂಶಗಳು ಸಾಗುವುದು ಅಗತ್ಯವಾಗಿದೆ. ಬೆಳಗ್ಗಿನ ನಡೆಗೆಯ ಮೂಲಕ ಈ ಕಾರ್ಯ ಅತ್ಯುತ್ತಮವಾಗಿ ನೆರವೇರುವುದರಿಂದ ಮೂಳೆಗಳು ಶಿಥಿಲವಾಗುವ ಈ ಸ್ಥಿತಿಯಿಂದ ತಪ್ಪಿದಂತಾಗುತ್ತದೆ.

ಆಯಸ್ಸು ಹೆಚ್ಚುತ್ತದೆ

ಆಯಸ್ಸು ಹೆಚ್ಚುತ್ತದೆ

ಹಿರಿಯರು ಆಶೀರ್ವಾದ ನೀಡುವಾಗ 'ದೇವರು ನಿಮಗೆ ಆಯುರಾರೋಗ್ಯ ನೀಡಲಿ' ಎಂದೇ ಹರಸುತ್ತಾರೆ. ಇದರರ್ಥ ಆರೋಗ್ಯ ಮತ್ತು ಆಯಸ್ಸು ಎರಡೂ ಸಿಗಲಿ ಎಂಬ ಹಾರೈಕೆ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಆರೋಗ್ಯವಿಲ್ಲದ ಆಯಸ್ಸು ಕೂಡ ಅನುಭವಿಸಲು ಸಾಧ್ಯವಾಗದ್ದು. ಉತ್ತಮ ಆರೋಗ್ಯದಿಂದ ಹೆಚ್ಚಿನ ಆಯಸ್ಸು ಮತ್ತು ಮುಂಜಾನೆಯ ನಡಿಗೆಯಿಂದ ಉತ್ತಮ ಆರೋಗ್ಯ ಸಾಧ್ಯ. ವೈದ್ಯಕೀಯ ಅಂಕಿಅಂಶಗಳ ಮೂಲಕ ಬೆಳಗ್ಗಿನ ನಡಿಗೆಯ ಅಭ್ಯಾಸವಿದ್ದವರು ಇತರರಿಗಿಂತ ಹೆಚ್ಚು ಆಯಸ್ಸು ಉಳ್ಳವರಾಗಿದ್ದಾರೆ.

ಮೆದುಳಿನ ತೊಂದರೆಗಳಿಂದ ರಕ್ಷಿಸುತ್ತದೆ

ಮೆದುಳಿನ ತೊಂದರೆಗಳಿಂದ ರಕ್ಷಿಸುತ್ತದೆ

ನಮ್ಮ ದೇಹಕ್ಕೆ ದಿನದ ಇತರ ಎಲ್ಲಾ ಊಟಗಳಿಗಿಂತ ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ನಿದ್ದೆಯ ಬಳಿಕ ಎದ್ದ ಶರೀರಕ್ಕೆ ಅದರಲ್ಲೂ ಮೆದುಳಿಗೆ ಹೆಚ್ಚಿನ ರಕ್ತಸಂಚಾರದ ಅಗತ್ಯವಿದೆ. ಮುಂಜಾನೆಯ ನಡೆಗೆಯ ಮೂಲಕ ಮೆದುಳಿಗೆ ಸಮರ್ಪಕ ಪ್ರಮಾಣದಲ್ಲಿ ರಕ್ತಸಂಚಾರ ಲಭ್ಯವಾಗುವುದರಿಂದ ಈ ಕೊರತೆಯ ಮೂಲಕ ಉದ್ಭವವಾಗಬಹುದಾಗಿದ್ದ ತೊಂದರೆಗಳು (ಉದಾಹರಣೆಗೆ ಬುದ್ದಿಮಾಂದ್ಯತೆ-dementia) ಬರುವುದರಿಂದ ತಡೆದಂತಾಗುತ್ತದೆ. ಖಿನ್ನತೆ, ತಲೆನೋವು ಮೊದಲಾದ ತೊಂದರೆಗಳು ಕಡಿಮೆಯಾಗುತ್ತವೆ.

ದೇಹದ ತ್ರಾಣ ಹೆಚ್ಚುತ್ತದೆ

ದೇಹದ ತ್ರಾಣ ಹೆಚ್ಚುತ್ತದೆ

ಬೆಳಗ್ಗಿನ ನಡಿಗೆಯಿಂದ ಇಡಿಯ ದೇಹಕ್ಕೆ ಉತ್ತಮ ರಕ್ತಸಂಚಾರದ ಮೂಲಕ ದಿನದ ಮುಖ್ಯ ಕೆಲಸಗಳು ಪ್ರಾರಂಭವಾಗುವ ಮೊದಲೇ ಉತ್ತಮ ಪ್ರಮಾಣದ ಪೋಷಕಾಂಶಗಳು ರವಾನಿಸಲ್ಪಟ್ಟಿರುವುದರಿಂದ ದಿನದ ಯಾವುದೇ ಕೆಲಸಕ್ಕೆ ದೇಹದ ಸ್ನಾಯು ಮತ್ತು ಮನಸ್ಸು ಸಿದ್ಧವಾಗಿರುತ್ತದೆ. ಇದು ಯಾವುದೇ ಕೆಲಸವನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ನೆರವಾಗುತ್ತದೆ.

English summary

Health Benefits Of Morning Walk

A pleasant morning walk can make you feel fresh and make the rest of your day energised. In fact it works like an anti-depressant. And when you take a look at the health benefits of morning walk, you will be convinced to make it your daily morning ritual.
X
Desktop Bottom Promotion